ಕೋವಿಡ್ ಎಫೆಕ್ಟ್: ಎಸ್‌ಯುವಿ ವಿಭಾಗದಲ್ಲಿ ಗಮನಸೆಳೆಯುವಲ್ಲಿ ವಿಫಲವಾದ ಸಿಟ್ರನ್

ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ ಕಳೆದ 2 ವರ್ಷಗಳ ಸತತ ಪ್ರಯತ್ನದ ನಂತರ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಭಾರತದಲ್ಲಿ ತನ್ನ ಹೊಸ ಕಾರು ಉತ್ಪನ್ನ ಮಾರಾಟವನ್ನು ಆರಂಭಿಸಿದ್ದು, ಕೋವಿಡ್ 2ನೇ ಅಲೆ ಹೆಚ್ಚಳ ಸಂದರ್ಭದಲ್ಲೇ ಹೊಸ ಕಾರು ಮಾರಾಟ ಆರಂಭಿಸಿದ್ದು ದೊಡ್ಡ ಹಿನ್ನಡೆಗೆ ಕಾರಣವಾಯ್ತು.

ಕೋವಿಡ್ ಎಫೆಕ್ಟ್: ಎಸ್‌ಯುವಿ ವಿಭಾಗದಲ್ಲಿ ಗಮನಸೆಳೆಯುವಲ್ಲಿ ವಿಫಲವಾದ ಸಿಟ್ರನ್

ಕಳೆದ ಏಪ್ರಿಲ್ ಆರಂಭದಲ್ಲಿ ಹೊಸ ಸಿ5 ಏರ್‌ಕ್ರಾಸ್ ಕಾರು ಮಾದರಿಯ ಮಾರಾಟ ಆರಂಭಿಸಿದ ಸಿಟ್ರನ್ ಕಂಪನಿಯು ಮೊದಲ ತಿಂಗಳ ಅವಧಿಯಲ್ಲಿ 230 ಯುನಿಟ್ ವಿತರಣೆ ಮಾಡಿತು. ಆದರೆ ಮೇ ಮತ್ತು ಜೂನ್ ತಿಂಗಳಿನ ಕಾರು ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಸಿಟ್ರನ್ ಕಂಪನಿಯು ಕ್ರಮವಾಗಿ 40 ಯುನಿಟ್ ಮತ್ತು 41 ಯುನಿಟ್ ಮಾರಾಟ ಮಾಡಿದೆ.

ಕೋವಿಡ್ ಎಫೆಕ್ಟ್: ಎಸ್‌ಯುವಿ ವಿಭಾಗದಲ್ಲಿ ಗಮನಸೆಳೆಯುವಲ್ಲಿ ವಿಫಲವಾದ ಸಿಟ್ರನ್

ಮೇ ತಿಂಗಳಿನಲ್ಲಿ ಕೇವಲ 40 ಯುನಿಟ್ ಮತ್ತು ಜೂನ್ 41 ಯುನಿಟ್ ಮಾರಾಟದ ಮೂಲಕ ತಿಂಗಳ ಕಾರು ಮಾರಾಟದಲ್ಲಿ ಶೇ. 2 ರಷ್ಟು ಬೆಳವಣಿಗೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಯಲ್ಲಿದೆ.

ಕೋವಿಡ್ ಎಫೆಕ್ಟ್: ಎಸ್‌ಯುವಿ ವಿಭಾಗದಲ್ಲಿ ಗಮನಸೆಳೆಯುವಲ್ಲಿ ವಿಫಲವಾದ ಸಿಟ್ರನ್

ಹೊಸ ಬ್ರಾಂಡ್ ಮಾದರಿಯಾಗಿರುವುದರಿಂದ ಆರಂಭದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಹಿನ್ನಡೆ ಅನುಭವಿಸಿದಲ್ಲದೆ ಸೀಮಿತ ಸಂಖ್ಯೆಯ ಮಾರಾಟ ಮಳಿಗೆಯಿಂದಲೂ ಸಿಟ್ರನ್ ಕಂಪನಿಯು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದು, ಕನಿಷ್ಠ 500 ಯುನಿಟ್ ಕಾರುಗಳು ಮಾರಾಟವಾದರೂ ಕಂಪನಿಯ ಬೃಹತ್ ಯೋಜನೆಯು ಸಫಲವಾಗಲಿದೆ.

ಕೋವಿಡ್ ಎಫೆಕ್ಟ್: ಎಸ್‌ಯುವಿ ವಿಭಾಗದಲ್ಲಿ ಗಮನಸೆಳೆಯುವಲ್ಲಿ ವಿಫಲವಾದ ಸಿಟ್ರನ್

ಆದರೆ ಮಧ್ಯಮ ಕ್ರಮಾಂಕದ ಕಾರುಗಳಲ್ಲೇ ಅತಿ ಹೆಚ್ಚು ಪ್ರೀಮಿಯಂ ಅಂಶಗಳನ್ನು ಹೊಂದಿರುವ ಏ5 ಏರ್‌ಕ್ರಾಸ್ ಕಾರು ಮಾದರಿಯು ಬೆಲೆಯಲ್ಲೂ ತುಸು ದುಬಾರಿ ಎನ್ನಿಸಲಿದ್ದು, ಇದು ಹೊಸ ಎಸ್‌ಯುವಿ ಮಾರಾಟಕ್ಕೆ ಹಿನ್ನಡೆ ಉಂಟು ಮಾಡಿರಬಹುದು.

ಕೋವಿಡ್ ಎಫೆಕ್ಟ್: ಎಸ್‌ಯುವಿ ವಿಭಾಗದಲ್ಲಿ ಗಮನಸೆಳೆಯುವಲ್ಲಿ ವಿಫಲವಾದ ಸಿಟ್ರನ್

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 29.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 31.90 ಲಕ್ಷ ಬೆಲೆ ಹೊಂದಿದ್ದು, ದೇಶದ ಪ್ರಮುಖ 10 ನಗರಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಕೋವಿಡ್ ಎಫೆಕ್ಟ್: ಎಸ್‌ಯುವಿ ವಿಭಾಗದಲ್ಲಿ ಗಮನಸೆಳೆಯುವಲ್ಲಿ ವಿಫಲವಾದ ಸಿಟ್ರನ್

ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಫೀಲ್ ಮತ್ತು ಶೈನ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಕೋವಿಡ್ ಎಫೆಕ್ಟ್: ಎಸ್‌ಯುವಿ ವಿಭಾಗದಲ್ಲಿ ಗಮನಸೆಳೆಯುವಲ್ಲಿ ವಿಫಲವಾದ ಸಿಟ್ರನ್

ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಯಲ್ಲೇ ವಿನೂತನ ಫೀಚರ್ಸ್ ಹೊಂದಿರುವ ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ತುಸು ದುಬಾರಿ ಬೆಲೆ ಎನ್ನಿಸಿದರೂ ಹಲವು ಮಾದರಿಯ ಫೀಚರ್ಸ್‌ಗಳು ಈ ಕಾರಿನಲ್ಲಿವೆ.

ಕೋವಿಡ್ ಎಫೆಕ್ಟ್: ಎಸ್‌ಯುವಿ ವಿಭಾಗದಲ್ಲಿ ಗಮನಸೆಳೆಯುವಲ್ಲಿ ವಿಫಲವಾದ ಸಿಟ್ರನ್

ಸಿ5 ಏರ್‌ಕ್ರಾಸ್ ಕಾರು 4,500 ಎಂಎಂ ಉದ್ದ, 2,099 ಎಂಎಂ ಅಗಲ, 1,710 ಎಂಎಂ ಎತ್ತರ ಮತ್ತು 2,730 ಎಂಎಂ ವೀಲ್ಹ್‌ಬೆಸ್‌ನೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತ್ಯುತ್ತಮ ಒಳಾಂಗಣ ವಿನ್ಯಾಸ ಹೊಂದಿದೆ.

ಕೋವಿಡ್ ಎಫೆಕ್ಟ್: ಎಸ್‌ಯುವಿ ವಿಭಾಗದಲ್ಲಿ ಗಮನಸೆಳೆಯುವಲ್ಲಿ ವಿಫಲವಾದ ಸಿಟ್ರನ್

ಸಿಟ್ರನ್ ಕಂಪನಿಯು ಹೊಸ ಕಾರಿನಲ್ಲಿ 2.0-ಲೀಟರ್(1,997ಸಿಸಿ) ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 177-ಬಿಎಚ್‌ಪಿ ಮತ್ತು 400ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಹ್ಯುಂಡೈ ಟ್ಯುಸಾನ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡುವ ತವಕದಲ್ಲಿದೆ.

Most Read Articles

Kannada
English summary
Citroen C5 Aircross registers sales of 41 units in june 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X