ಆರಂಭಕ್ಕೂ ಮುನ್ನವೇ ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೈಬಿಟ್ಟ ಫೋರ್ಡ್

ಭಾರತದಲ್ಲಿ ಹೊಸ ಕಾರು ಮಾರಾಟದಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶದಿಂದ ಮಹೀಂದ್ರಾ ಜೊತೆಗೆ ಸಹಭಾಗಿತ್ವ ಯೋಜನೆಗೆ ಒಪ್ಪಂದ ಮಾಡಿಕೊಂಡಿದ್ದ ಫೋರ್ಡ್ ಕಂಪನಿಯು ಹೊಸ ಯೋಜನೆ ಆರಂಭಕ್ಕೆ ಮುನ್ನವೇ ಬೃಹತ್ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ.

ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೈಬಿಟ್ಟ ಫೋರ್ಡ್

ಹೊಸ ಕಾರುಗಳ ಮೇಲೆ ಹೂಡಿಕೆ, ಎಂಜಿನ್ ಎರವಲು ಮತ್ತು ಕಾರುಗಳ ಉತ್ಪಾದನೆಗೆ ಪರಸ್ಪರ ಸಹಕಾರ ನೀಡುವ ಸಹಭಾಗಿತ್ವ ಯೋಜನೆಗಾಗಿ 2019ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದ ಫೋರ್ಡ್ ಮತ್ತು ಮಹೀಂದ್ರಾ ಕಂಪನಿಗಳು ಹೊಸ ಯೋಜನೆಯ ಭಾಗವಾಗಿ 2021ರ ಆರಂಭದಲ್ಲಿ ಜಂಟಿ ಯೋಜನೆ ಅಡಿಯ ಮೊದಲ ಕಾರು ಮಾದರಿಯನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಕರೋನಾ ಸಂಕಷ್ಟದಿಂದ ಮಹತ್ವದ ಯೋಜನೆಯಿಂದ ಹಿಂದೆ ಸರಿದಿರುವ ಉಭಯ ಕಂಪನಿಗಳು ಸ್ವತಂತ್ರ ಕಾರ್ಯಾಚರಣೆಯನ್ನು ಮುಂದುವರಿಸಲಿವೆ.

ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೈಬಿಟ್ಟ ಫೋರ್ಡ್

ಒಪ್ಪಂದದ ಸಂದರ್ಭದಲ್ಲಿನ ಸನ್ನಿವೇಶಕ್ಕೂ ಪ್ರಸ್ತುತ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದಿರುವ ಅಮೆರಿಕದ ಫೋರ್ಡ್ ಕಂಪನಿಯು ಪರಿಸ್ಥಿತಿಗೆ ಅನುಗುಣವಾಗಿ ಸಹಭಾಗಿತ್ವ ಯೋಜನೆಯ ಮೇಲಿನ ಹೂಡಿಕೆ ನಿರ್ಧಾರ ಕೈಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೈಬಿಟ್ಟ ಫೋರ್ಡ್

ಸಹಭಾಗಿತ್ವ ಯೋಜನೆಗಾಗಿ ಮಹೀಂದ್ರಾ ಶೇ. 52 ರಷ್ಟು ಮತ್ತು ಫೋರ್ಡ್ ಶೇ. 48ರಷ್ಟು ಪ್ರಮಾಣದೊಂದಿಗೆ ರೂ. 4,200 ಕೋಟಿ ಹೂಡಿಕೆಗೆ ಸಿದ್ದವಾಗಿದ್ದವು. ಆದರೆ ಕರೋನಾ ವೈರಸ್ ಪರಿಣಾಮ ಅಮೆರಿಕಾದಲ್ಲಿ ಭಾರೀ ಪ್ರಮಾಣದ ನಷ್ಟ ಅನುಭವಿಸಿರುವ ಫೋರ್ಡ್ ಕಂಪನಿಯು ಸಾಗರೋತ್ತರ ವ್ಯವಹಾರಗಳಲ್ಲಿ ಮುಂದಿನ ಕೆಲ ವರ್ಷಗಳ ತನಕ ಹೊಸ ಹೂಡಿಕೆ ಮಾಡದಿರಲು ನಿರ್ಧರಿಸಿದೆ.

ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೈಬಿಟ್ಟ ಫೋರ್ಡ್

ಇದರಿಂದ ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಸಹ ಸ್ಥಗಿತಗೊಳಿಸಿರುವ ಫೋರ್ಡ್ ಕಂಪನಿಯು ಸ್ವತಂತ್ರ ಕಾರ್ಯಾಚರಣೆ ಮೂಲಕ ಹೊಸ ಕಾರುಗಳ ಮಾರಾಟವನ್ನ ಮುಂದುವರಿಸಲು ನಿರ್ಧರಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯೆಂತೆ ಕಾರು ಉತ್ಪನ್ನಗಳಲ್ಲಿ ಬದಲಾವಣೆಯನ್ನು ಕಾಲ ಕಾಲಕ್ಕೆ ಉನ್ನತೀಕರಿಸಲು ಬದ್ದವಾಗಿದೆ ಎಂದಿದೆ.

ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೈಬಿಟ್ಟ ಫೋರ್ಡ್

ಆದರೆ ಸಹಭಾಗಿತ್ವ ಯೋಜನೆಗಾಗಿ ಮಾಡಲಾಗುತ್ತಿದ್ದ ಹೂಡಿಕೆಯನ್ನು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಿಲ್ಲ ಎಂದಿರುವ ಫೋರ್ಡ್ ಕಂಪನಿಯು ಸ್ವತಂತ್ರ ಕಾರ್ಯಾಚರಣೆ ಅಡಿ ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರಗಳನ್ನು ಬಿಡುಗಡೆಯ ಸುಳಿವು ನೀಡಿದೆ.

ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೈಬಿಟ್ಟ ಫೋರ್ಡ್

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳನ್ನು ಹೊಸ ಕೆನೆಕ್ಟೆಡ್ ಫೀಚರ್ಸ್‌ಗಳೊಂದಿಗೆ ಉನ್ನತೀಕರಿಸುವುದಾಗಿ ಹೇಳಿಕೊಂಡಿರುವ ಫೋರ್ಡ್ ಕಂಪನಿಯು ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆ ಅಸಾಧ್ಯವೆಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೈಬಿಟ್ಟ ಫೋರ್ಡ್

ಇನ್ನು ಸಹಭಾಗಿತ್ವ ಯೋಜನೆ ಅಡಿ ವಿವಿಧ ಮಾದರಿಯ ಮತ್ತಷ್ಟು ಎಸ್‌ಯುವಿ ಕಾರುಗಳ ಅಭಿವೃದ್ದಿ ಯೋಜನೆಯಲ್ಲಿದ್ದ ಮಹೀಂದ್ರಾ ಕಂಪನಿಗೂ ಕರೋನಾ ವೈರಸ್ ಭಾರೀ ಹೊಡೆತ ನೀಡಿದ್ದು, ಹೊಸ ಬಂಡವಾಳ ಹೂಡಿಕೆಯ ಮೇಲೆ ಪರಿಣಾಮ ಬೀರಿದೆ.

ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೈಬಿಟ್ಟ ಫೋರ್ಡ್

ಮಹೀಂದ್ರಾ ಕಂಪನಿಯು ಫೋರ್ಡ್ ಜೊತೆಗಿನ ಸಹಭಾಗಿತ್ವದ ಕಡಿತ ಮಾತ್ರವಲ್ಲದೆ ದಕ್ಷಿಣ ಕೊರಿಯಾದ ಸ್ಯಾಂಗ್‌ಯಾಂಗ್ ಕಂಪನಿಯಲ್ಲಿನ ಹೂಡಿಕೆಯಲ್ಲೂ ಭಾರೀ ನಷ್ಟ ಅನುಭವಿಸಿದ್ದು, ಸ್ಯಾಂಗ್‌ಯ್ಯಾಂಗ್ ಕಂಪನಿಯಲ್ಲಿ ಶೇ.70 ರಷ್ಟು ಹೂಡಿಕೆಯ ಸ್ಟಾಕ್ ಕೂಡಾ ಮಾರಾಟ ಮಾಡಿದೆ.

MOST READ: 2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೈಬಿಟ್ಟ ಫೋರ್ಡ್

ಒಟ್ಟಿನಲ್ಲಿ ಕರೋನಾ ಪರಿಣಾಮ ಹೊಸ ಉದ್ಯಮ ಚಟುವಟಿಕೆಗಳ ಮೇಲೆ ಭಾರೀ ಪರಿಣಾಮ ಉಂಟುಮಾಡಿದ್ದು, ಕಳೆದ ವರ್ಷದಲ್ಲಿನ ನಷ್ಟವು ಸುಧಾರಿಸಿಕೊಳ್ಳಲು ಇನ್ನು ಕೆಲವು ವರ್ಷಗಳೆ ಬೇಕಾಗಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

Most Read Articles

Kannada
English summary
Ford and Mahindra have decided to end discussions for auto joint venture company. Read in Kannada.
Story first published: Friday, January 1, 2021, 12:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X