Just In
Don't Miss!
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Sports
ಭಾರತೀಯರ ನಿಂದಿಸಿದ ಕಿಡಿಗೇಡಿಗಳ ಕಂಡುಹಿಡಿಯುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿಫಲ
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹೀಂದ್ರಾ ಎಕ್ಸ್‌ಯುವಿ500 ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಫೋರ್ಡ್ ಹೊಸ ಎಸ್‌ಯುವಿ
ಭಾರತದಲ್ಲಿ ಸಹಭಾಗಿತ್ವದ ಯೋಜನೆಗಾಗಿ ಸಿದ್ದವಾಗಿದ್ದ ಮಹೀಂದ್ರಾ ಮತ್ತು ಫೋರ್ಡ್ ಕಂಪನಿಗಳು ಕಾರಣಾಂತರಗಳಿಂದ ಹೊಸ ಯೋಜನೆಯಿಂದ ಹಿಂದೆ ಸರಿದಿದ್ದು, ಈ ಹಿಂದಿನಂತೆಯೇ ಸ್ವತಂತ್ರ ಉದ್ಯಮ ಕಾರ್ಯಾಚರಣೆಯನ್ನು ಮುಂದುವರಿಸಲು ನಿರ್ಧರಿಸಿವೆ.

ಮಹೀಂದ್ರಾ ಕಂಪನಿ ಜೊತೆಗೂತಿ ಸಹಭಾಗಿತ್ವ ಯೋಜನೆಯನ್ನು ಕೈಬಿಟ್ಟಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿರುವ ಫೋರ್ಡ್ ಕಂಪನಿಯು ಸ್ವತಂತ್ರ ಕಾರ್ಯಾಚರಣೆ ಅಡಿಯಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ. ಫೋರ್ಡ್ ಕಂಪನಿಯು ಮುಂದಿನ ಎರಡು ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಹಲವು ಹೊಸ ಕಾರುಗಳನ್ನು ಸ್ವತಂತ್ರವಾಗಿ ಉತ್ಪಾದನೆ ಕೈಗೊಳ್ಳಲಿದ್ದು, ಹೊಸ ಕಾರುಗಳ ಪೈಕಿ ಸಿ ಸೆಗ್ಮೆಂಟ್ ಎಸ್‌ಯುವಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಸಿ ಸೆಗ್ಮೆಂಟ್ ಎಸ್‌ಯುವಿ ಮಾದರಿಯು ಎಂಡೀವರ್ ಮಾದರಿಗಿಂತ ಕೆಳದರ್ಜೆಯಲ್ಲಿ ಮಾರಾಟಗೊಳ್ಳಲಿದ್ದು, ಸಿ ಸೆಗ್ಮೆಂಟ್‌ನಲ್ಲಿರುವ ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಫೋರ್ಡ್ ಹೊಸ ಕಾರು ಪ್ರತಿಸ್ಪರ್ಧಿಯಾಗಲಿದೆ.

ಕೆಲವು ಮಾಹಿತಿಗಳ ಪ್ರಕಾರ, ಫೋರ್ಡ್ ಕಂಪನಿಯು ಈ ಹಿಂದಿನ ನಿರ್ಧಾರದಂತೆ ಸಿ ಸೆಗ್ಮೆಂಟ್ ಎಸ್‌ಯುವಿ ಕಾರು ಮಾದರಿಯನ್ನು ಮಹೀಂದ್ರಾ ಜೊತೆಯಲ್ಲೇ ನಿರ್ಮಾಣ ಮಾಡಲಿದ್ದು, ಸಿ ಸೆಗ್ಮೆಂಟ್ ಹೊರತುಪಡಿಸಿ ಹೊಸ ಯೋಜನೆಗಳನ್ನು ಕೈಗೊಳ್ಳದಿರಲು ನಿರ್ಧರಿಸಿವೆ ಎನ್ನಲಾಗಿದೆ.

ಇದರಿಂದ ಫೋರ್ಡ್ ಕಂಪನಿಯು ತನ್ನ ಸಿ ಸೆಗ್ಮೆಂಟ್ ಮಾದರಿಯನ್ನು ಮಹೀಂದ್ರಾ ಹೊಸ ತಲೆಮಾರಿನ ಎಕ್ಸ್‌ಯುವಿ500 ಕಾರಿನ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಬಹುದೆಂಬ ಮಾಹಿತಿಗಳಿದ್ದು, ಹೊಸ ಕಾರು ಮಾದರಿಗಾಗಿ ಫೋರ್ಡ್ ಕಂಪನಿಯು ಮಹೀಂದ್ರಾ ಕಂಪನಿಯ ಚಾಕನ್(ಪುಣೆ)ನಲ್ಲಿರುವ ಕಾರು ಉತ್ಪಾದನಾ ಘಟಕವನ್ನು ಗುತ್ತಿಗೆಗೆ ಪಡೆದುಕೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಲಿದೆ.

ಹೊಸ ಯೋಜನೆಯು ಪ್ರತ್ಯೇಕ ಕಾರ್ಯಾಚರಣೆಯಾಗಿದ್ದರೂ ಕೂಡಾ ಹೊಸ ಕಾರಿನಿಂದ ಎರಡು ಕಂಪನಿಗಳು ಲಾಭದಾಯಕವಾಗಲಿದ್ದು, ಫೋರ್ಡ್ ಹೊಸ ಕಾರು ಮಹೀಂದ್ರಾ ಎಕ್ಸ್‌ಯುವಿ500 ಮಾದರಿಯಿಂದ ಎಂಜಿನ್ ಎರವಲು ಪಡೆದುಕೊಳ್ಳಲಿದೆ.

ಫೋರ್ಡ್ ಕಂಪನಿಯು ಮಹೀಂದ್ರಾ ಕಂಪನಿಯ ಪ್ಲ್ಯಾಟ್‌ಫಾರ್ಮ್ ಬಳಕೆ ಮತ್ತು ಎಂಜಿನ್ ಎರವಲು ಪಡೆದುಕೊಂಡರು ಕಾರು ಮಾರಾಟ ಕಾರ್ಯಾಚರಣೆಯಲ್ಲಿ ಅಂತರಕಾಯ್ದುಕೊಳ್ಳಲಿದ್ದು, ಒಳಒಪ್ಪಂದವು ಕೇವಲ ಸಿ ಸೆಗ್ಮೆಂಟ್ ಕಾರು ಮಾದರಿಗಾಗಿ ಮಾತ್ರ ಸೀಮಿತವಾಗಿರಲಿದೆ.
MOST READ: 2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಫೋರ್ಡ್ ಸಿ ಸೆಗ್ಮೆಂಟ್ ಕಾರು ಮಾದರಿಯು ಮಹೀಂದ್ರಾ ಕಂಪನಿಯ ಪ್ಲ್ಯಾಟ್‌ಫಾರ್ಮ್ ಮತ್ತು ಎಂಜಿನ್ ಎರವಲು ಪಡೆದುಕೊಂಡರೂ ವಿಭಿನ್ನ ತಾಂತ್ರಿಕ ಅಂಶಗಳ ಮೂಲಕ ವಿವಿಧ ಗ್ರಾಹಕರನ್ನು ಸೆಳೆಯಲಿದ್ದು, ಪ್ರತ್ಯೇಕ ಕಾರ್ಯಾಚರಣೆಯ ಮೂಲಕ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸಲಿವೆ.

ಫೋರ್ಡ್ ಹೊಸ ಸಿ ಸೆಗ್ಮೆಂಟ್ ಕಾರು ಮಾದರಿಯು 2.2-ಲೀಟರ್ ಡೀಸೆಲ್ ಮತ್ತು 2.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಪಡೆದುಕೊಳ್ಳುವ ನೀರಿಕ್ಷೆಯಿದ್ದು, ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.18 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮುಂದಿನ ಎರಡು ವರ್ಷಗಳಲ್ಲಿ ಸುಮಾರು ಐದು ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ದವಾಗಿರುವ ಫೋರ್ಡ್ ಕಂಪನಿಯು ಹೊಸ ಕಾರುಗಳಲ್ಲಿ ಒಂದು ಎಲೆಕ್ಟ್ರಿಕ್ ಮಾದರಿಯನ್ನು ಸಹ ರಸ್ತೆಗಿಳಿಸಲಿದ್ದು, ಸಿ ಸೆಗ್ಮೆಂಟ್ ಹೊರತುಪಡಿಸಿ ಇನ್ನುಳಿದ ಕಾರು ಮಾದರಿಗಳನ್ನು ಪ್ರತ್ಯೇಕವಾಗಿ ಅಭಿವೃದ್ದಿಗೊಳಿಸಿ ಮಾರಾಟ ಮಾಡಲಿದೆ.