ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಅಮೆರಿಕಾ ಮೂಲದ Ford ಕಂಪನಿಯು ಇತ್ತೀಚಿಗಷ್ಟೇ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. Ford ಕಂಪನಿಯ ನಿರ್ಧಾರವು ಕಂಪನಿಯ ಡೀಲರ್ ಗಳಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಭಾರತದಲ್ಲಿ ಮಾರಾಟವಾಗುತ್ತಿದ್ದ Ford ಕಂಪನಿಯ ಬಹುತೇಕ ಕಾರುಗಳನ್ನು ಗುಜರಾತಿನಲ್ಲಿರುವ ಸನಂದ್ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿತ್ತು.

ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಆದರೆ Ford ಕಂಪನಿಯ ನಿರ್ಧಾರದಿಂದಾಗಿ ಈ ಉತ್ಪಾದನಾ ಘಟಕದಲ್ಲಿ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಉತ್ಪಾದನಾ ಘಟಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಇನ್ನು ಚೆನ್ನೈ ಉತ್ಪಾದನಾ ಘಟಕವನ್ನು ಮುಂದಿನ ವರ್ಷ ಮುಚ್ಚಲಾಗುವುದು ಎಂದು ತಿಳಿದು ಬಂದಿದೆ. Ford ಕಂಪನಿಯ ವಿತರಕರು ತಮ್ಮ ಬಳಿ ಕೆಲವೇ ಕೆಲವು Ford ಕಾರುಗಳನ್ನು ಹೊಂದಿದ್ದಾರೆ.

ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಮಾರಾಟದ ನಂತರದ ಸರ್ವೀಸ್ ಹಾಗೂ ಭವಿಷ್ಯದಲ್ಲಿ ಬಿಡಿ ಭಾಗಗಳು ಲಭ್ಯವಾಗುತ್ತವೆಯೇ ಎಂಬ ಪ್ರಶ್ನೆ ಮೂಡುತ್ತಿರುವುದರಿಂದ ಗ್ರಾಹಕರು ಈ ಕಾರುಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. Ford ಕಂಪನಿಯು ಪುನರ್ರಚನೆ ಯೋಜನೆಯನ್ನು ಹೊಂದಿದ್ದರೂ, ಎಷ್ಟು ಮಾರಾಟಗಾರರು ಕೇವಲ ಮಾರಾಟದ ನಂತರದ ಸರ್ವೀಸ್ ಹಾಗೂ ಬಿಡಿ ಭಾಗಗಳ ವ್ಯಾಪಾರಕ್ಕೆ ಸಿದ್ಧರಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಫಾಡಾ) ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ ಸದ್ಯಕ್ಕೆ ಭಾರತದಲ್ಲಿ ಸುಮಾರು 170 Ford ಡೀಲರ್ ಗಳಿದ್ದಾರೆ. ಇವುಗಳಲ್ಲಿ ಹಲವು ಡೀಲರ್‌ಶಿಪ್‌ಗಳನ್ನು ಹೊಸದಾಗಿ ತೆರೆಯಲಾಗಿದೆ. ಈ 170 ಡೀಲರ್‌ಗಳಲ್ಲಿ ಹಲವಾರು ಜನರು ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ. ಕೇವಲ ಸರ್ವೀಸ್ ಹಾಗೂ ಬಿಡಿ ಭಾಗಗಳ ಮಾರಾಟದಿಂದ ಇಷ್ಟು ದೊಡ್ಡ ಹೂಡಿಕೆಯನ್ನು ಹಿಂಪಡೆಯಲು ಸಾಧ್ಯವಿಲ್ಲ.

ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಇದರ ಜೊತೆಗೆ ಕಾರ್ ಸೇವೆಗಳಲ್ಲಿ ತೊಡಗಿರುವ ಉದ್ಯೋಗಿಗಳು ಹಾಗೂ ಡೀಲರ್‌ಶಿಪ್ ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ವೇತನವನ್ನು ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲವು Ford ವಿತರಕರು ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರು ತಮ್ಮ Ford ಡೀಲರ್‌ಶಿಪ್ ಅನ್ನು ಬೇರೆ ಕಂಪನಿಯ ಕಾರು ಡೀಲರ್‌ಶಿಪ್'ಗೆ ಬದಲಿಸುತ್ತಿದ್ದಾರೆ. ಇತ್ತೀಚಿಗೆ ಲಖ್ನೋದ Ford ಡೀಲರ್‌ಶಿಪ್ ಒಂದರಲ್ಲಿ Mahindra XUV 700 ಕಾರುಗಳನ್ನು ನಿಲ್ಲಿಸಿರುವ ಚಿತ್ರ ಬಹಿರಂಗವಾಗಿದೆ.

ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಈ ಚಿತ್ರವನ್ನು ರಶ್ ಲೇನ್ ಪತ್ರಿಕೆ ಪ್ರಕಟಿಸಿದೆ.ಅಸ್ಸಾಂ ರಾಜ್ಯದಿಂದ ಬಿಡುಗಡೆಯಾಗಿರುವ ಮತ್ತೊಂದು ಚಿತ್ರದಲ್ಲಿ Maruti Suzuki ಕಂಪನಿಯ Dzire, Alto ಹಾಗೂ Baleno ಕಾರುಗಳನ್ನು Ford ಡೀಲರ್‌ಶಿಪ್ ಶೋರೂಂನಲ್ಲಿ ನಿಲ್ಲಿಸಲಾಗಿದೆ. Toyota Fortuner ಕಾರುಗಳನ್ನು ಸಹ Ford ಶೋರೂಂನಲ್ಲಿ ನಿಲ್ಲಿಸಲಾಗಿತ್ತು.

ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಹೆಚ್ಚಿನ Ford ವಿತರಕರು Ford ಶೋರೂಂ ಒಳಗೆ ಇತರ ಕಂಪನಿಗಳ ಕಾರುಗಳನ್ನು ಪ್ರದರ್ಶಿಸುತ್ತಿದ್ದಾರೆ. ಈ ಶೋರೂಂಗಳ ಮಾಲೀಕರು Ford ಕಾರುಗಳ ಜೊತೆಗೆ ಬೇರೆ ಕಂಪನಿಯ ಕಾರುಗಳನ್ನು ಸಹ ಮಾರಾಟ ಮಾಡುತ್ತಿದ್ದ ಸಾಧ್ಯತೆಗಳಿವೆ. ಈ ಶೋರೂಂಗಳ ಮಾಲೀಕರು ಬೇರೆ ಕಾರು ತಯಾರಕ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಸಾಧ್ಯತೆಗಳೂ ಇವೆ.

ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಹಲವಾರು ಕಾರು ಯುನಿಟ್ ಗಳು ಇರುವುದರಿಂದ ಇದು ಡೀಲರ್ ಮಟ್ಟದ ನಿರ್ಧಾರವೂ ಆಗಿರಬಹುದು. ಕೆಲವು ಕಾರು ಡೀಲರ್‌ಗಳು ಹಲವು ಶೋರೂಂಗಳನ್ನು ಹೊಂದಿ ಅವುಗಳನ್ನು ನಿರ್ವಹಿಸುತ್ತಿರುವ ಉದಾಹರಣೆಗಳೂ ಇವೆ. ಕೆಲವು ದಿನಗಳ ನಂತರ ಈ ಡೀಲರ್‌ಶಿಪ್‌ಗಳು ಇತರ ಕಂಪನಿಗಳ ಕಾರು ಮಾರಾಟದ ಬಗ್ಗೆ ಘೋಷಿಸಬಹುದು. ಈಗ ಬಹಿರಂಗವಾಗಿರುವ ಚಿತ್ರದಲ್ಲಿ ಡೀಲರ್‌ಶಿಪ್‌ನ ಹೊರಗೆ Ford ನಾಮಫಲಕವನ್ನೇ ಕಾಣಬಹುದು.

ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಹೀಗಾಗಿ ಶೋರೂಂ ಒಳಗೆ ಪ್ರಮುಖ ಬದಲಾವಣೆಗಳಾಗಿರುವ ಸಾಧ್ಯತೆಗಳು ಕಡಿಮೆ. Ford ಕಂಪನಿಯು ತನ್ನ ನಿರ್ಧಾರವನ್ನು ಪ್ರಕಟಿಸಿದ ನಂತರ ಈ ಹೆಸರಿನಲ್ಲಿ ಸ್ವಲ್ಪ ಸಮಯದವರೆಗೆ ಕಾರ್ಯ ನಿರ್ವಹಿಸಲು ಡೀಲರ್‌ಶಿಪ್ ಗಳಿಗೆ ಅವಕಾಶ ನೀಡಿರಬಹುದು. Ford ಕಂಪನಿಯು ದೇಶಿಯ ಮಾರುಕಟ್ಟೆಯನ್ನು ತೊರೆದರೂ, ಮೊದಲಿನಂತೆಯೇ ಮಾರಾಟದ ನಂತರದ ಸೇವೆ ನೀಡುವುದನ್ನು ಮುಂದುವರಿಸುವುದಾಗಿ ಭರವಸೆ ನೀಡಿದೆ.

ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಅಮೆರಿಕಾ ಮೂಲದ ಕಾರು ತಯಾರಕ ಕಂಪನಿಯಾದ Ford ಭಾರತದಲ್ಲಿ ತನ್ನ ಐಷಾರಾಮಿ ಸ್ಪೋರ್ಟ್ಸ್ ಕಾರುಗಳನ್ನು ಮಾರಾಟ ಮಾಡುವುದನ್ನು ಮುಂದುವರಿಸುವುದಾಗಿ ಘೋಷಿಸಿದ್ದು, ಡೀಲರ್‌ಗಳು ತಮ್ಮ ವ್ಯವಹಾರಗಳಿಗೆ ಸೇವೆ ಹಾಗೂ ಬಿಡಿ ಭಾಗಗಳನ್ನು ಒದಗಿಸುವುದಕ್ಕಾಗಿ ಸೂಕ್ತ ಪರಿಹಾರವನ್ನು ನೀಡುವುದನ್ನು ಮುಂದುವರಿಸುವುದಾಗಿ ತಿಳಿಸಿದೆ.

ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಅದರ ಅನ್ವಯ Mustang ಕೂಪೆ ಹಾಗೂ Mustang ಮ್ಯಾಕ್ ಇ ಎಲೆಕ್ಟ್ರಿಕ್ ಸೇರಿದಂತೆ ಹಲವು ಕಾರುಗಳನ್ನು Ford ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಇವುಗಳನ್ನು ಸಿಬಿಯು (ಕಂಪ್ಲೀಟ್ಲಿ ಬಿಲ್ಟ್ ಯುನಿಟ್) ರೂಪದಲ್ಲಿ ಮಾರಾಟ ಮಾಡಲಾಗುವುದು.

ಬೇರೆ ಕಂಪನಿಗಳ ಕಾರುಗಳನ್ನು ಮಾರಾಟ ಮಾಡಲು ಮುಂದಾದ Ford ಶೋರೂಂ ಮಾಲೀಕರು

ಅಂದರೆ ಈ ಕಾರುಗಳನ್ನು ವಿದೇಶದಲ್ಲಿರುವ ಉತ್ಪಾದನಾ ಘಟಕಗಳಲ್ಲಿ ಉತ್ಪಾದಿಸಿ ಭಾರತಕ್ಕೆ ಆಮದು ಮಾಡಿ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ ಪ್ರೀಮಿಯಂ ಕಾರುಗಳನ್ನು ಮಾರಾಟ ಮಾಡಲು Ford ಕಂಪನಿಯು ಕೆಲವು ವಿತರಕರನ್ನು ಮೀಸಲಿರಿಸಿದೆ.

Most Read Articles

Kannada
Read more on ಫೋರ್ಡ್ ford
English summary
Ford dealers using ford showroom to display other company cars details
Story first published: Wednesday, October 6, 2021, 19:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X