ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ

ಕರೋನಾ ವೈರಸ್ ಕಾರಣದಿಂದಾಗಿ ವಾಹನ ತಯಾರಕ ಕಂಪನಿಗಳು ಸಂಕಷ್ಟಕ್ಕೀಡಾಗಿವೆ. 2019ರ ಮಧ್ಯ ಭಾಗದಲ್ಲಿ ಕಾರು ತಯಾರಕ ಕಂಪನಿಗಳ ವ್ಯವಹಾರವು ನಿಧಾನಗತಿಯಲ್ಲಿತ್ತು. 2020ರ ಆರಂಭದಲ್ಲಿ ವ್ಯವಹಾರವು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ

ಕಳೆದ ಕೆಲವು ತಿಂಗಳುಗಳಿಂದೀಚಿಗೆ ಮಾರಾಟ ಪ್ರಮಾಣವು ಏರಿಕೆಯಾಗಿದೆ. ಆದರೆ ಕಾರು ತಯಾರಕ ಕಂಪನಿಗಳು ಪ್ರಮುಖ ಬಿಡಿಭಾಗಗಳ ಕೊರತೆಯನ್ನು ಎದುರಿಸುತ್ತಿವೆ. ಇದರ ಪರಿಣಾಮವು ವಾಹನ ತಯಾರಿಕೆಯ ಮೇಲಾಗುತ್ತಿದೆ. ವಾಹನ ತಯಾರಿಕೆಗೆ ಪ್ರಮುಖವಾಗಿ ಸೆಮಿ ಕಂಡಕ್ಟರ್‌ಗಳ ಕೊರತೆ ಎದುರಾಗಿದೆ.

ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ

ಈ ಕಾರಣದಿಂದಾಗಿ ಫೋರ್ಡ್ ಇಂಡಿಯಾ ಕಂಪನಿಯು ತನ್ನ ಚೆನ್ನೈನಲ್ಲಿರುವ ಉತ್ಪಾದನಾ ಘಟಕವನ್ನು ಒಂದು ವಾರ ಮುಚ್ಚಬೇಕಾಗಿದೆ. ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ಜನವರಿ14 ರಂದು 3 ದಿನಗಳ ಕಾಲ ಘಟಕವನ್ನು ಮುಚ್ಚಲಾಗಿತ್ತು. ಈಗ ಘಟಕವನ್ನು ಜನವರಿ 24ರವರೆಗೆ ಮುಚ್ಚುವುದಾಗಿ ಕಂಪನಿಯು ತಿಳಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ

ಗಮನಿಸಬೇಕಾದ ಸಂಗತಿಯೆಂದರೆ ಸದ್ಯಕ್ಕೆ ಚೆನ್ನೈನಲ್ಲಿರುವ ಉತ್ಪಾದನಾ ಘಟಕವನ್ನು ಮುಚ್ಚಲಾಗಿದೆ. ಆದರೆ ಇದರ ಪರಿಣಾಮವು ಮುಂದಿನ 2ರಿಂದ 3 ತಿಂಗಳಲ್ಲಿ ಗುಜರಾತ್'ನಲ್ಲಿರುವ ಸನಂದ್ ಉತ್ಪಾದನಾ ಘಟಕದ ಮೇಲೆಯೂ ಉಂಟಾಗಲಿದೆ ಎಂದು ಹೇಳಲಾಗಿದೆ.

ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ

ಮಾಹಿತಿಗಳ ಪ್ರಕಾರ, ಮುಂದಿನ ಮೂರು ತಿಂಗಳವರೆಗೆ ಸೆಮಿ ಕಂಡಕ್ಟರ್‌ಗಳ ಕೊರತೆ ಎದುರಾಗಲಿದೆ. ಆದರೆ ಕಂಪನಿಯು ಸೆಮಿ ಕಂಡಕ್ಟರ್'ಗಳ ಸರಬರಾಜನ್ನು ಪಡೆಯಲು ಪ್ರಯತ್ನಿಸುತ್ತಿದೆ. ಆದರೆ ಜಾಗತಿಕ ಪರಿಸ್ಥಿತಿಗಳು ಕಂಪನಿಗೆ ಅನುಕೂಲಕರವಾಗಿಲ್ಲ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ

ಸೆಮಿ ಕಂಡಕ್ಟರ್‌ಗಳು ಮೊಬೈಲ್ ಫೋನ್, ಗೇಮಿಂಗ್ ಕನ್ಸೋಲ್ ಹಾಗೂ ಇನ್ನಿತರ ಗ್ಯಾಜೆಟ್‌ಗಳ ಪ್ರಮುಖ ಎಲೆಕ್ಟ್ರಾನಿಕ್ ಬಿಡಿಭಾಗವಾಗಿರುವ ಕಾರಣ ಅವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಕರೋನಾ ವೈರಸ್ ಕಾರಣದಿಂದಾಗಿ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಂಗೆ ಆದ್ಯತೆ ನೀಡುತ್ತಿವೆ.

ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ

ಈ ಕಾರಣಕ್ಕೆ ಗ್ಯಾಜೆಟ್‌ಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಕಾರು ತಯಾರಕ ಕಂಪನಿಗಳಿಗೆ ಈ ಬಿಡಿಭಾಗ ಬಹು ಮುಖ್ಯ. ಈ ಬಿಡಿಭಾಗವನ್ನು ಟಯರ್ ಪ್ರೆಶರ್ ಗೇಜ್‌, ರೇನ್ ಸೆನ್ಸಿಂಗ್ ವೈಪರ್‌, ಪಾರ್ಕಿಂಗ್ ಸೆನ್ಸಾರ್‌ ಹಾಗೂ ಇನ್ಫೋಟೇನ್‌ಮೆಂಟ್ ಸಿಸ್ಟಂಗಳಲ್ಲಿ ಬಳಸಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ

ಈ ಬಿಡಿಭಾಗದ ಕೊರತೆಯು ಅಮೆರಿಕಾದಲ್ಲಿರುವ ಫೋರ್ಡ್ ಕಂಪನಿಯ ಉತ್ಪಾದನಾ ಘಟಕ, ಜರ್ಮನಿಯ ಆಡಿ, ಫೋಕ್ಸ್'ವ್ಯಾಗನ್ ಘಟಕ ಹಾಗೂ ಇಂಗ್ಲೆಂಡಿನಲ್ಲಿರುವ ಹೋಂಡಾ ಕಂಪನಿಯ ಉತ್ಪಾದನಾ ಘಟಕಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಇತರ ವಾಹನ ತಯಾರಕ ಕಂಪನಿಗಳು ಸಹ ಇದೇ ರೀತಿಯ ತೊಂದರೆಗಳನ್ನು ಎದುರಿಸುತ್ತಿವೆ.

ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ

ಫೋರ್ಡ್ ಕಂಪನಿಯು ತನ್ನ ಚೆನ್ನೈ ಉತ್ಪಾದನಾ ಘಟಕದಿಂದ ರಫ್ತು ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುವುದರಿಂದ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಈ ಹಿನ್ನೆಲೆಯಲ್ಲಿ ಫೋರ್ಡ್ ಇಂಡಿಯಾ ಕಂಪನಿಯು ತನ್ನ ಘಟಕವನ್ನು 10 ದಿನಗಳವರೆಗೆ ಮುಚ್ಚಬೇಕಾಗಿದೆ.

Most Read Articles

Kannada
Read more on ಫೋರ್ಡ್ ford
English summary
Ford India closes Chennai production plant know the reason. Read in Kannada.
Story first published: Monday, January 18, 2021, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X