ಬಹುನಿರೀಕ್ಷಿತ 2021ರ ಫೋರ್ಡ್ ಬ್ರೊಂಕೊ ಎಸ್‍ಯುವಿ ಉತ್ಪಾದನೆ ಆರಂಭ

ದಶಕಗಳ ಬಳಿಕ ಅಮೆರಿಕ ಮಾರುಕಟ್ಟೆಯಲ್ಲಿ ಹೊಸ ಐಕಾನಿಕ್ ಫೋರ್ಡ್ ಬ್ರೊಂಕೊ ಎಸ್‍ಯುವಿಯನ್ನು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಅನಾವರಣಗೊಳಿಸಿತ್ತು. ಇದು 1996 ರಲ್ಲಿ ಈ ಐಕಾನಿಕ್ ಆಫ್-ರೋಡರ್ ಸ್ಥಗಿತಗೊಂಡ ಬಳಿಕ ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಬಹುನಿರೀಕ್ಷಿತ 2021ರ ಫೋರ್ಡ್ ಬ್ರೊಂಕೊ ಎಸ್‍ಯುವಿ ಉತ್ಪಾದನೆ ಆರಂಭ

ಫೋರ್ಡ್ ಮೋಟಾರ್ ಅಮೆರಿಕದ ಮಿಚಿಗನ್ ಘಟಕದಲ್ಲಿ ಈ ಹೊಸ ಬ್ರೊಂಕೊ ಎಸ್‍ಯುವಿಯ ಉತ್ಪಾದನೆಯನ್ನು ಪ್ರಾರಂಭಿಸಿದೆ. ಈ ಎಸ್‍ಯುವಿಯನ್ನು ಕಳೆದ ವರ್ಷ ಪರಿಚಯಿಸಿ ಸುಮಾರು ಒಂದು ವರ್ಷದ ಬಳಿಕ ಉತ್ಪಾದನೆಯನ್ನು ಪ್ರಾರಂಭಿಸಿದೆ. ಫೋರ್ಡ್ ಕಂಪನಿಯು ಬ್ರೊಂಕೊ ಎಸ್‍ಯುವಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದರು. ಈಗಾಗಲೇ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಬ್ರೊಂಕೊ ಎಸ್‍ಯುವಿ ಖರೀದಿಗಾಗಿ 190,000 ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ದಾಖಲಿಸಿದೆ.

ಬಹುನಿರೀಕ್ಷಿತ 2021ರ ಫೋರ್ಡ್ ಬ್ರೊಂಕೊ ಎಸ್‍ಯುವಿ ಉತ್ಪಾದನೆ ಆರಂಭ

ಫೋರ್ಡ್ ಮೋಟಾರ್‌ನ ಚೀಪ್ ಮಾರ್ಕೆಟಿಂಗ್ ಆಫೀಸರ್ ಅವರು ಸುಜಿ ಡೀರಿಂಗ್ ಮಾತನಾಡಿ, ಬ್ರೊಂಕೊ ಎಸ್‍ಯುವಿಗಾಗಿ ಅಭಿಮಾನಿಗಳು ನಮಗೆ ತಿಳಿದಿದೆ. ಅದನ್ನು ಮರಳಿ ತರಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಈ ಬ್ರೊಂಕೊ ಎಂದಿಗಿಂತಲೂ ಉತ್ತಮವಾಗಿದೆ.

ಬಹುನಿರೀಕ್ಷಿತ 2021ರ ಫೋರ್ಡ್ ಬ್ರೊಂಕೊ ಎಸ್‍ಯುವಿ ಉತ್ಪಾದನೆ ಆರಂಭ

ಈ ಹೊಸ ಬ್ರೊಂಕೊ ಎಸ್‍ಯುವಿಯನ್ನು ವಿವಿಧ ಭೂಪ್ರದೇಶಗಳಲ್ಲಿ ಟೆಸ್ಟ್ ಮಾಡಿದ್ದೇವೆ. ಈ ಆಫ್-ರೋಡ್ ಎಸ್‍ಯುವಿಯು ಬ್ರ್ಯಾಂಡ್‌ನ ಬಿಲ್ಟ್ ವೈಲ್ಡ್ ನವೀನ ವಿನ್ಯಾಸ ಮತ್ತು ಸುಧಾರಿತ ಆಫ್-ರೋಡ್ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಹೇಳಿದರು.

ಬಹುನಿರೀಕ್ಷಿತ 2021ರ ಫೋರ್ಡ್ ಬ್ರೊಂಕೊ ಎಸ್‍ಯುವಿ ಉತ್ಪಾದನೆ ಆರಂಭ

2021ರ ಫೋರ್ಡ್ ಬ್ರೊಂಕೊ ಇನ್ನು ಈ ಹೊಸ ಫೋರ್ಡ್ ಬ್ರೊಂಕೊ ಎಸ್‍ಯುವಿಯ 1.5-ಲೀಟರ್ ಮೂರು ಸಿಲಿಂಡರ್‌ನಿಂದ ಎಂಜಿನ್ ಅನ್ನು ಬದಲಾಯಿಸಿ 2.7-ಲೀಟರ್ ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 310 ಬಿಹೆಚ್‌ಪಿ ಪವರ್ ಮತ್ತು 542 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಹುನಿರೀಕ್ಷಿತ 2021ರ ಫೋರ್ಡ್ ಬ್ರೊಂಕೊ ಎಸ್‍ಯುವಿ ಉತ್ಪಾದನೆ ಆರಂಭ

ಇದರೊಂದಿಗೆ ಈ ಐಕಾನಿಕ್ ಆಫ್-ರೋಡ್ ಎಸ್‍ಯುವಿಯಲ್ಲಿ 2.3-ಲೀಟರ್ ಇಕೋಬೂಸ್ಟ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಈ ಎಂಜಿನ್ 270 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಹುನಿರೀಕ್ಷಿತ 2021ರ ಫೋರ್ಡ್ ಬ್ರೊಂಕೊ ಎಸ್‍ಯುವಿ ಉತ್ಪಾದನೆ ಆರಂಭ

ಜೀಪ್ ರ‍್ಯಾಂಗ್ಲರ್ ಅಮೆರಿಕ ಮಾರುಕಟ್ಟೆಯಲ್ಲಿ ಆಫ್-ರೋಡ್ ವಿಭಾಗದಲ್ಲಿ ಪಾರುಪತ್ಯ ಸಾಧಿಸುತ್ತಿರುವ ಮಾದರಿಯಾಗಿದೆ. ಇದರಿಂದ ಎಫ್‌ಸಿಎ ಗ್ರೂಪ್‌ನ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಗೆ ಪೈಪೋಟಿ ನೀಡಲು ಫೋರ್ಡ್ ತನ್ನ ಐಕಾನಿಕ್ ಬ್ರೊಂಕೊ ಆಫ್-ರೋಡರ್ ಎಸ್‍ಯುವಿಯನ್ನು ಮತ್ತೊಮ್ಮೆ ಪರಿಚಯಿಸಿದೆ.

ಬಹುನಿರೀಕ್ಷಿತ 2021ರ ಫೋರ್ಡ್ ಬ್ರೊಂಕೊ ಎಸ್‍ಯುವಿ ಉತ್ಪಾದನೆ ಆರಂಭ

ಇನ್ನು ಈ ಫೋರ್ಡ್ ಬ್ರೊಂಕೊ ಎಸ್‍ಯುವಿಯು ಟ್ರಯಲ್ ಕಂಟ್ರೋಲ್(ಆಫ್ರೋಡ್ ಕ್ರೂಸ್ ಕಂಟ್ರೋಲ್), ಟ್ರಯಲ್ ಟರ್ನ್ ಅಸಿಸ್ಟ್, ಟ್ರಯಲ್ 1-ಪೆಡಲ್ ಡ್ರೈವ್ ಮತ್ತು 4×4 ಸಿಸ್ಟಮ್ ಪ್ಯಾಕ್‌ಗಳು 2-ಸ್ಪೀಡ್ ಎಲೆಕ್ಟ್ರೋಮೆಕಾನಿಕಲ್ ಟ್ರಾನ್ಸ್ಫರ್ ಕೇಸ್(ಇಎಂಟಿಸಿ) ನಂತಹ ಹಲವು ಆಫ್ ರೋಡ್ ಫೀಚರುಗಳನ್ನು ಈ ಎಸ್‍ಯುವಿಯು ಹೊಂದಿದೆ.

ಬಹುನಿರೀಕ್ಷಿತ 2021ರ ಫೋರ್ಡ್ ಬ್ರೊಂಕೊ ಎಸ್‍ಯುವಿ ಉತ್ಪಾದನೆ ಆರಂಭ

ಫೋರ್ಡ್ ಕಂಪನಿಯು ಬ್ರೊಂಕೊ ಎಸ್‍ಯುವಿ ತಯಾರಿಕೆಗೆ 750 ಮಿಲಿಯನ್ ಹೂಡಿಕೆ ಮಾಡಿದ್ದಾರೆ, ಮಿಚಿಗನ್ ಘಟಕದಲ್ಲಿ ಸುಮಾರು 2,700 ಉದ್ಯೋಗಿಗಳನ್ನು ಬ್ರೊಂಕೊ ಎಸ್‍ಯುವಿಯ ಉತ್ಪಾದನೆಗಾಗಿ ಹೊಸದಾಗಿ ಸೇರಿಸಿದ್ದಾರೆ.

ಬಹುನಿರೀಕ್ಷಿತ 2021ರ ಫೋರ್ಡ್ ಬ್ರೊಂಕೊ ಎಸ್‍ಯುವಿ ಉತ್ಪಾದನೆ ಆರಂಭ

ಹೊಸ ಬ್ರೊಂಕೊ ಉತ್ತಮ-ಗುಣಮಟ್ಟದ ಮತ್ತು ಸುಧಾರಿತ ತಂತ್ರಜ್ಙಾನವನ್ನು ಒಳಗೊಂಡಿರುತ್ತದೆ ಎಂದು ಫೋರ್ಡ್ ಕಂಪನಿಯು ಹೇಳಿಕೊಂಡಿದೆ. ಈ ಐಕಾನಿಕ್ ಫೋರ್ಡ್ ಬ್ರೊಂಕೊ ಎಸ್‍ಯುವಿಯು ಮತ್ತೊಮ್ಮೆ ಅಮೆರಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲು ಸಜ್ಜಾಗುತ್ತಿದೆ.

Most Read Articles

Kannada
Read more on ಫೋರ್ಡ್ ford
English summary
Ford Motor begins production of Bronco Suv. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X