ಫೋರ್ಡ್ ವೆಬ್‌ಸೈಟ್‌ನಿಂದ ಮರೆಯಾಯ್ತು ಜನಪ್ರಿಯ ಮಸ್ಟಾಂಗ್ ಕಾರಿನ ಹೆಸರು

ಅಮೆರಿಕಾ ಮೂಲದ ವಾಹನ ತಯಾರಕ ಕಂಪನಿಯಾದ ಪೋರ್ಡ್ ತನ್ನ ಜನಪ್ರಿಯ ಮಸ್ಟಾಂಗ್ ಕಾರನ್ನು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ ಫೋರ್ಡ್ ಇಂಡಿಯಾ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಮಸ್ಟಾಂಗ್ ಹೆಸರನ್ನು ತೆಗೆದುಹಕಲಾಗಿದೆ.

ಫೋರ್ಡ್ ವೆಬ್‌ಸೈಟ್‌ನಿಂದ ಮರೆಯಾಯ್ತು ಜನಪ್ರಿಯ ಮಸ್ಟಾಂಗ್ ಕಾರಿನ ಹೆಸರು

ಆದರೆ ಫೋರ್ಡ್ ಕಂಪನಿಯು 2021ರ ಮಸ್ಟಾಂಗ್ ಕಾರನ್ನು ಭಾರತದಲ್ಲಿ ಇದೇ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ವೆಬ್‌ಸೈಟ್‌ನಿಂದ ಮಸ್ಟಾಂಗ್ ಹೆಸರನ್ನು ತೆಗೆದುಹಾಕಿರುವುದರ ಕಾರಣ ಬಹಿರಂಗವಾಗಿಲ್ಲ. ಹೊಸ ಫೋರ್ಡ್ ಮಸ್ಟಾಂಗ್ ಕಾರು ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಫೋರ್ಡ್ ಕಂಪನಿಯು ಮಸ್ಟಾಂಗ್ ಕಾರನ್ನು ಭಾರತದಲ್ಲಿ ಮೊದಲ ಬಾರಿಗೆ 2016ರಲ್ಲಿ ಬಿಡುಗಡೆಗೊಳಿಸಿದ್ದರು.

ಫೋರ್ಡ್ ವೆಬ್‌ಸೈಟ್‌ನಿಂದ ಮರೆಯಾಯ್ತು ಜನಪ್ರಿಯ ಮಸ್ಟಾಂಗ್ ಕಾರಿನ ಹೆಸರು

ಹಿಂದಿನ ಮಸ್ಟಾಂಗ್ ಮಾದರಿಯ 450 ಯುನಿಟ್ ಗಳು ಭಾರತದಲ್ಲಿ ಮಾರಾಟವಾಗಿತ್ತು. ಇನ್ನು ಹೊಸ ಫೋರ್ಡ್ ಮಸ್ಟಾಂಗ್ ಕಾರನ್ನು ಹಿಂದಿನ ಮಾದರಿಗಿಂತ ಸ್ವಲ್ಪ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ. ಇದರಲ್ಲಿ ಬೋನೆಟ್, ಎಸಿ ವೆಂಟ್ಸ್ ಗಳನ್ನು ನವೀಕರಿಸಲಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಫೋರ್ಡ್ ವೆಬ್‌ಸೈಟ್‌ನಿಂದ ಮರೆಯಾಯ್ತು ಜನಪ್ರಿಯ ಮಸ್ಟಾಂಗ್ ಕಾರಿನ ಹೆಸರು

ಹೊಸ ಮಸ್ಟಾಂಗ್ ಕಾರು ಸಣ್ಣ ಮಟ್ಟದ ನವೀಕರಸಿದ ಫ್ರಂಟ್ ಗ್ರಿಲ್‍ ಅನ್ನು ಹೊಂದಿದೆ. ಹಳೆಯ ಮಾದರಿಗಿಂತ ಹೊಸ ಮಾದರಿಯು ಸ್ಲೀಕರ್ ಆಗಿರಲಿದೆ. ಹೊಸ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ನವೀಕರಿಸಿದ ಬಂಪರ್‍‍ಗಳನ್ನು ಅಳವಡಿಸಲಾಗಿದೆ. ಮರು ವಿನ್ಯಾಸಗೊಳಿಸಿದ ಹೆಡ್‍‍ಲ್ಯಾಂಪ್‍ಗಳನ್ನು ಹೊಂದಿದೆ.

ಫೋರ್ಡ್ ವೆಬ್‌ಸೈಟ್‌ನಿಂದ ಮರೆಯಾಯ್ತು ಜನಪ್ರಿಯ ಮಸ್ಟಾಂಗ್ ಕಾರಿನ ಹೆಸರು

ಇನ್ನು ಹೊಸ ಫೋರ್ಡ್ ಮಸ್ಟಾಂಗ್ ಕಾರಿನ ಇಂಟಿರಿಯರ್‍‍ನಲ್ಲಿ 12 ಇಂಚಿನ ಎಲ್‍‍ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍ ಅನ್ನು ಹೊಂದಿದೆ. ಕ್ಯಾಬಿನ್ ಸುತ್ತಲೂ ಸ್ಪಾಟ್ ಟಚ್ ಮ್ಯಾಟಿರಿಯಲ್ ಅನ್ನು ಹೊಂದಿದ್ದು, ವಿಶೇಷವಾಗಿ ಸೆಂಟರ್ ಕನ್ಸೋಲ್ ಮತ್ತು ಡೋರ್‍‍ಗಳಲ್ಲಿ ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಫೋರ್ಡ್ ವೆಬ್‌ಸೈಟ್‌ನಿಂದ ಮರೆಯಾಯ್ತು ಜನಪ್ರಿಯ ಮಸ್ಟಾಂಗ್ ಕಾರಿನ ಹೆಸರು

ಹೊಸ ಮಸ್ಟಾಂಗ್‍‍ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಎಲ್‍ಇಡಿ ಲೈಟಿಂಗ್, ಫ್ಲ್ಯಾಟ್ ಬಾಂಟಮ್ ಸ್ಟೀಯರಿಂಗ್ ವ್ಹೀಲ್ ಹಾಗೂ ಇತರ ಕೆಲವು ಸ್ಟ್ಯಾಂಡರ್ಡ್ ಫೀಚರ್ಸ್‍‍ಗಳನ್ನು ಒಳಗೊಂಡಿರುತ್ತದೆ.

ಫೋರ್ಡ್ ವೆಬ್‌ಸೈಟ್‌ನಿಂದ ಮರೆಯಾಯ್ತು ಜನಪ್ರಿಯ ಮಸ್ಟಾಂಗ್ ಕಾರಿನ ಹೆಸರು

ಮಸ್ಟಾಂಗ್ ಫೇಸ್‌ಲಿಫ್ಟ್ ಕಾರಿನಲ್ಲಿ 5.0-ಲೀಟರ್, ವಿ8 ಎಂಜಿನ್‌ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 453 ಬಿಹೆಚ್‍ಪಿ ಪವರ್ ಮತ್ತು 569 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗುವುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಫೋರ್ಡ್ ವೆಬ್‌ಸೈಟ್‌ನಿಂದ ಮರೆಯಾಯ್ತು ಜನಪ್ರಿಯ ಮಸ್ಟಾಂಗ್ ಕಾರಿನ ಹೆಸರು

ಇನ್ನು ಟಾಪ್-ಸ್ಪೆಕ್ ಮಾದರಿಯಲ್ಲಿ 525 ಬಿಹೆಚ್‌ಪಿ ಉತ್ಪಾದಿಸುವ ಜಿಟಿ350 ವಿ8 ಅನ್ನು ಹೊಂದಿರಲಿದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 10-ಸ್ಫೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಬಹುದು.

ಫೋರ್ಡ್ ವೆಬ್‌ಸೈಟ್‌ನಿಂದ ಮರೆಯಾಯ್ತು ಜನಪ್ರಿಯ ಮಸ್ಟಾಂಗ್ ಕಾರಿನ ಹೆಸರು

ಹೊಸ ಫೋರ್ಡ್ ಮುಸ್ಟಾಂಗ್‍‍ ಕಾರಿನಲ್ಲಿ ಫೀಚರ್ಸ್‍ ಮತ್ತು ವಿನ್ಯಾಸವನ್ನು ನವೀಕರಿಸಲಾಗಿದೆ. ಹೊಸ ರಿ-ಟ್ಯೂನ್ ಎಂಜಿನ್ ಅನ್ನು ಹೊರತುಪಡಿಸಿ ಹೊಸ ಮುಸ್ಟಾಂಗ್‍‍ನಲ್ಲಿ ಮೂರು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ ಬ್ಲೂ, ಆರೇಂಜ್ ಮತ್ತು ರೆಡ್ ಬಣ್ಣಗಳಾಗಿದೆ. ಹೊಸ ಮಸ್ಟಾಂಗ್‍‍‍ನಲ್ಲಿ 19 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿರಲಿದೆ. ಫೋರ್ಡ್ ಮಸ್ಟಾಂಗ್ ವಿಶ್ವದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

Most Read Articles

Kannada
Read more on ಫೋರ್ಡ್ ford
English summary
Ford Mustang Removed From Website. Read In Kannada.
Story first published: Monday, February 22, 2021, 20:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X