ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌ ಸ್ಥಗಿತಗೊಳಿಸಿದ ಫೋರ್ಡ್

ಫೋರ್ಡ್ ಇಂಡಿಯಾ ಕಂಪನಿಯು ತನ್ನ ವಿವಿಧ ಕಾರು ಮಾದರಿಗಳ ಮಾರಾಟದಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌‌ಗಳನ್ನು ಸ್ಥಗಿತಗೊಳಿಸಲಾಗಿದೆ.

ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌ ಸ್ಥಗಿತಗೊಳಿಸಿದ ಫೋರ್ಡ್

ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌ಗಳನ್ನು ಸ್ಥಗಿತಗೊಳಸಿರುವ ಫೋರ್ಡ್ ಕಂಪನಿಯು ಸ್ಟ್ಯಾಂಡರ್ಡ್, ಹೈ ಎಂಡ್ ಮತ್ತು ಸ್ಪೆಷಲ್ ಎಡಿಷನ್ ಮಾದರಿಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು, ತಾಂತ್ರಿಕವಾಗಿ ಸನೀಹದಲ್ಲಿರುವ ಪ್ರಮುಖ ವೆರಿಯೆಂಟ್‌ಗಳನ್ನು ಹೈ ಎಂಡ್ ಮಾದರಿಗಳಲ್ಲಿ ವಿಲೀನಗೊಳಿಸಿ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಆದರೆ ಎಂಜಿನ್ ಆಯ್ಕೆಯಲ್ಲಿ ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಹೆಚ್ಚುವರಿಯಾಗಿದ್ದ ವೆರಿಯೆಂಟ್‌ಗಳನ್ನು ಮಾತ್ರ ತೆಗದುಹಾಕಲಾಗಿದೆ.

ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌ ಸ್ಥಗಿತಗೊಳಿಸಿದ ಫೋರ್ಡ್

ವೆರಿಯೆಂಟ್ ಬದಲಾವಣೆ ನಂತರ ಫಿಗೊ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಪೆಟ್ರೋಲ್ ಆವೃತ್ತಿಯನ್ನು ಆ್ಯಂಬಿಯೆಂಟ್, ಟೈಟಾನಿಯಂ ಮತ್ತು ಟೈಟಾನಿಯಂ ಬ್ಲ್ಯೂ ವೆರಿಯೆಂಟ್‌ನಲ್ಲಿ ಮತ್ತು ಡೀಸೆಲ್ ಆವೃತ್ತಿಯನ್ನು ಟೈಟಾನಿಯಂ ಮತ್ತು ಟೈಟಾನಿಯಂ ಬ್ಲ್ಯೂ ವೆರಿಯೆಂಟ್‌ಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.

ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌ ಸ್ಥಗಿತಗೊಳಿಸಿದ ಫೋರ್ಡ್

ಫಿಗೊ ಕಾರು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಆವೃತ್ತಿಗೆ ಆರಂಭಿಕವಾಗಿ ರೂ. 5.64 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ 7.09 ಲಕ್ಷ ಮತ್ತು ಫಿಗೊ ಡೀಸೆಲ್ ಆವೃತ್ತಿಗೆ ಆರಂಭಿಕವಾಗಿ ರೂ. 7.74 ಲಕ್ಷ ಮತ್ತು ಹೈ ಎಂಡ್ ಮಾದರಿಯು ರೂ.8.19 ಲಕ್ಷ ಬೆಲೆ ಹೊಂದಿದೆ.

ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌ ಸ್ಥಗಿತಗೊಳಿಸಿದ ಫೋರ್ಡ್

ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲಿ ವೆರಿಯೆಂಟ್ ಬದಲಾವಣೆಯ ನಂತರ ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್ ವೆರಿಯೆಂಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.24 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 8.69 ಲಕ್ಷ ಬೆಲೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ.

ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌ ಸ್ಥಗಿತಗೊಳಿಸಿದ ಫೋರ್ಡ್

ಇನ್ನು ಕೊನೆಯದಾಗಿ ಫ್ರೀಸ್ಟೈಲ್ ಕ್ರಾಸ್ ಓವರ್ ಕಾರು ಮಾದರಿಯಲ್ಲಿ ವೆರಿಯೆಂಟ್ ಬದಲಾವಣೆಯ ನಂತರ ಟೈಟಾನಿಯಂ, ಟೈಟಾನಿಯಂ ಪ್ಲಸ್ ಮತ್ತು ಫ್ಲೈರ್ ವೆರಿಯೆಂಟ್‌ಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಮಧ್ಯಂತರ ವೆರಿಯೆಂಟ್‌ಗಳನ್ನು ಟಾಪ್ ಎಂಡ್‌ನೊಂದಿಗೆ ವಿಲೀನ ಮಾಡಲಾಗಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌ ಸ್ಥಗಿತಗೊಳಿಸಿದ ಫೋರ್ಡ್

ವೆರಿಯೆಂಟ್ ಬದಲಾವಣೆಯ ನಂತರ ಫ್ರೀಸ್ಟೈಲ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.09 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.89 ಲಕ್ಷ ಬೆಲೆ ಹೊಂದಿದ್ದು, ಅನಾವಶ್ಯಕ ಎನ್ನಿಸುವ ವೆರಿಯೆಂಟ್ ಬದಲಾಣೆಗೊಳಿಸಿ ಗ್ರಾಹಕರ ಆಯ್ಕೆಯನ್ನು ಸರಳಗೊಳಿಸಲಾಗಿದೆ.

ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌ ಸ್ಥಗಿತಗೊಳಿಸಿದ ಫೋರ್ಡ್

ಫೋರ್ಡ್ ಕಂಪನಿಯು ಮೇಲಿನ ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿ ಒಂದೇ ಮಾದರಿಯ ಎಂಜಿನ್ ಆಯ್ಕೆ ನೀಡಿದ್ದು, ಗ್ರಾಹಕರ ಬೇಡಿಕೆಯೆಂತೆ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿವೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌ ಸ್ಥಗಿತಗೊಳಿಸಿದ ಫೋರ್ಡ್

ಪ್ರತಿ ಕಾರು ಮಾದರಿಯಲ್ಲೂ 5-ಸ್ಪೀಡ್ ಮ್ಯಾನುವಲ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿರುವ ಫೋರ್ಡ್ ಕಂಪನಿಯು ಈ ಮೂರು ಕಾರುಗಳಲ್ಲಿ ಆಟೋಮ್ಯಾಟಿಕ್ ವೆರಿಯೆಂಟ್ ಪರಿಚಯಿಸಿಲ್ಲ. ಆದರೆ ಒಂದೇ ಮಾದರಿಯಲ್ಲಿ ಐದಾರು ವೆರಿಯೆಂಟ್‌ಗಳಿಂದ ಗೊಂದಕ್ಕೆ ಈಡಾಗುತ್ತಿದ್ದ ಗ್ರಾಹರಕರ ಆಯ್ಕೆಯನ್ನು ಸರಳಗೊಳಿಸಲಾಗಿದ್ದು, ಹೊಸ ವೆರಿಯೆಂಟ್‍ಗಳು ಮತ್ತಷ್ಟು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯಲಿವೆ.

Most Read Articles

Kannada
English summary
Ford Revises Variant Lineup Of Figo, Aspire & Freestyle Models. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X