Just In
Don't Miss!
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- News
ಏಪ್ರಿಲ್ 22ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೊಲೀಸ್ ಪಡೆಗಳಿಗಾಗಿ ಹೊಸ ತಂತ್ರಜ್ಞಾನಗಳನ್ನು ಒಳಗೊಂಡ ಪಿಕ್ಅಪ್ ಟ್ರಕ್ ಪರಿಚಯಿಸಿದ ಫೋರ್ಡ್
ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಫೋರ್ಡ್ 2021ರ ಎಫ್ -150 ಪೋಲಿಸ್ ರೆಸ್ಪಾಂಡರ್ ಪಿಕ್ಅಪ್ ಟ್ರಕ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಫೋರ್ಡ್ ಎಫ್ -150 ಪೋಲಿಸ್ ರೆಸ್ಪಾಂಡರ್ ಪಿಕ್ಅಪ್ ಟ್ರಕ್ ಆಫ್-ರೋಡ್ ಸಾಮರ್ಥ್ಯ, ಸುಧಾರಿತ ತಂತ್ರಜ್ಙಾನ ಮತ್ತು ಮುಂತಾದ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

ಹೊಸ ಫೋರ್ಡ್ ಎಫ್ -150 ಪೋಲಿಸ್ ರೆಸ್ಪಾಂಡರ್ ಪಿಕ್ಅಪ್ ಟ್ರಕ್ ನಲ್ಲಿ ಟಾರ್ಕ್-ಆನ್-ಡಿಮಾಂಡ್ ಟ್ರಾನ್ಸ್‌ಫರ್ ಕೇಸ್‌ನೊಂದಿಗೆ ಆಟೋಮ್ಯಾಟಿಕ್ ಫೋರ್-ವ್ಹೀಲ್-ಡ್ರೈವ್ ಮೋಡ್ ಅನ್ನು ಒಳಗೊಂಡಿದೆ. ಪೆಟ್ರೋಲಿಂಗ್ ಅಧಿಕಾರಿಗಳಿಗೆ ಆನ್-ರೋಡ್ ಮತ್ತು ಆಫ್-ರೋಡ್ ಮಾರ್ಗಗಳಿಯು ಸುಲಭವಾಗಿ ತೆರಳಬಹುದು. ಇನ್ನು ಈ ಹೊಸ ಪೊಲೀಸ್ ಪಿಕ್ಅಪ್ ಟ್ರಕ್ ಸೂಪರ್‌ಕ್ರ್ಯೂ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಇನ್ನು ಪೊಲೀಸ್ ಪಡೆಗೆ ಅಗತ್ಯವಿರುವ ಎಮರ್ಜರ್ನಿ ರೆಸ್ಪಾನ್ಸ್ ಮತ್ತು ಮೊಬೈಲ್ ಕಮಾಂಡ್ ಸಿಸ್ಟಂ ಅನ್ನು ಅಳವಡಿಸುವ ವಿನ್ಯಾಸಗೊಳಿಸಲಾಗಿದೆ. ಪಿಕಪ್ ಉತ್ತಮ ಟ್ರ್ಯಾಕ್ಷನ್ ಕಂಟ್ರೋಲ್, ಪೇಲೋಡ್ ಸಾಮರ್ಥ್ಯ ಮತ್ತು ಆಂತರಿಕ ಪ್ರಯಾಣಿಕರ ಉತಮ ಕಂಫರ್ಟ್ ಸಹ ನೀಡುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಎಫ್ -150 ಪೋಲಿಸ್ ರೆಸ್ಪಾಂಡರ್ ಉತ್ತಮಾ ಆಫ್-ರೋಡ್ ಕಾರ್ಯಕ್ಷಮತೆಯನ್ನು ಹೊಂದಿದೆ. ಇನ್ನು ಈ ಫೋರ್ಡ್ ರೆಸ್ಪಾಂಡರ್ ಪಿಕ್ಅಪ್ ಟ್ರಕ್ ನಲ್ಲಿ ಸ್ಟ್ಯಾಂಡರ್ಡ್ 3.5-ಲೀಟರ್ ಇಕೋಬೂಸ್ಟ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 400 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 10-ಸ್ಪೀಡ್ ಸೆಲೆಕ್ಟ್ಶಿಫ್ಟ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ದು ಸ್ಟಾಕ್ ಎಫ್ -150 ಗಿಂತ ಗಮನಾರ್ಹವಾಗಿ ವೇಗವನ್ನು ಹೆಚ್ಚಿಸುತ್ತದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಎಫ್ -150 ಪೋಲಿಸ್ ರೆಸ್ಪಾಂಡರ್ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇದರಲ್ಲಿ ನಾಲ್ಕು ಫ್ಲೀಟ್ ಕೀಗಳು ಲಭ್ಯವಿದೆ ಅಥವಾ ಟ್ರಕ್‌ಗೆ ಕೀ ಲೆಸ್ ಎಂಟ್ರಿಯ ನಾಲ್ಕು ಫೋಬ್‌ಗಳು ಲಭ್ಯವಿದೆ.

ಇನ್ನು ಈ ಹೊಸ ಫೋರ್ಡ್ ಎಫ್ -150 ಪೋಲಿಸ್ ರೆಸ್ಪಾಂಡರ್ ಪಿಕ್ಅಪ್ ಟ್ರಕ್ ಕ್ಯಾಬಿನ್ ಒಳಗೆ, ಕ್ಲೌಡ್ ಕನೆಕ್ಟಿವಿಟಿಯೊಂದಿಗೆ ಎಸ್‌ವೈಎನ್‌ಸಿ 4 ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಇದು ಸೆಂಟರ್ ಸ್ಟ್ಯಾಕ್‌ನಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಮತ್ತು ವೈರ್‌ಲೆಸ್ ಅಪ್‌ಡೇಟ್‌ಗಳೊಂದಿಗೆ ಎಂಬೆಡೆಡ್ ಮೋಡೆಮ್‌ನೊಂದಿಗೆ ಬರುತ್ತದೆ.
MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಇನ್ನು ಇದು ಸಾಫ್ಟ್‌ವೇರ್ ನವೀಕರಣಗಳನ್ನು ಸ್ವೀಕರಿಸಲು ಏಜೆನ್ಸಿಗಳಿಗೆ ಅನುವು ಮಾಡಿಕೊಡುತ್ತದೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ನವೀಕರಿಸಿದ 4-ಇಂಚಿನ ಡಿಸ್ ಪ್ಲೇಯನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಇನ್ನು ಇದರ ಕ್ಯಾಬಿನ್ ನಲ್ಲಿ ಆಕರ್ಷಕ ಸೀಟ್ ಗಳನ್ನು ಒಳಗೊಂಡಿದೆ. ಇನ್ನು ಫೋರ್ಡ್ ಎಫ್ -150 ಪೋಲಿಸ್ ರೆಸ್ಪಾಂಡರ್ ಪಿಕ್ಅಪ್ ಟ್ರಕ್ ನಲ್ಲಿ ಎಲ್ಇಡಿ ಪೊಲೀಸ್ ಬೀಕನ್ಗಳನ್ನು ಕೆಂಪು ಮತ್ತು ನೀಲಿ, ಅಂಬರ್, ಅಥವಾ ಅಂಬರ್ ಮತ್ತು ಬಿಳಿ ಬಣ್ಣಗಳಲ್ಲಿ ಮೊದಲೇ ಕಂಪನಿ ಅಳವಡಿಸಲಾಗಿದೆ.

ಸ್ಟ್ಯಾಂಡರ್ಡ್ ಆಗಿರುವ ಹೊಸ ಡ್ರೈವರ್-ಅಸಿಸ್ಟ್ ಫೀಚರ್ ಗಳಾದ ರಿವರ್ಸ್ ಸೆನ್ಸಿಂಗ್ ಸಿಸ್ಟಂ, ಪ್ರಿ ಕುಲಿಷನ್ ಅಸಿಸ್ಟ್, ಫಾರ್ವರ್ಡ್ ಕುಲಿಷನ್ ವಾರ್ನಿಂಗ್ ಮತ್ತು ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಕ್ರಾಸ್-ಟ್ರಾಫಿಕ್ ಅಲರ್ಟ್ ಹೊಂದಿರುವ ಬ್ಲೈಂಡ್ ಸ್ಪಾಟ್ ಮಾಹಿತಿ ನೀಡುವ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.

ಇನ್ನು ಫೋರ್ಡ್ ಕಂಪನಿಯು ತನ್ನ ಹೊಸ ಎಫ್-150 ರಾಪ್ಟರ್ಸ್ ಸ್ಟ್ಯಾಂಡರ್ಡ್ ಪಿಕ್ಅಪ್ ಟ್ರಕ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತು. ಈ ಹೊಸ ಫೋರ್ಡ್ ಎಫ್-150 ರಾಪ್ಟರ್ ಪರ್ಫಾಮೆನ್ಸ್ ಮತ್ತ್ ಆಫ್-ರೋಡ್ ಆಧಾರಿತ ಪಿಕಪ್ ಟ್ರಕ್ ಆಗಿದೆ.

2021ರ ಫೋರ್ಡ್ ಎಫ್-150 ರಾಪ್ಟರ್ ಮುಂಭಾಗದಲ್ಲಿ ಕೆಲವು ಮಹತ್ವದ ನವೀಕರಣಗಳನ್ನು ಪಡೆದುಕೊಂಡಿದೆ. ಅದರ ಕೋರ್ ಆಫ್-ರೋಡಿಂಗ್ ಡಿಎನ್‌ಎಯನ್ನು ಹಾಗೇ ಇರಿಸಲು ಕಂಪನಿಯು ನಿರ್ಧರಿಸಿದೆ. ಹೊಸ ರಾಪ್ಟರ್ ಹಿಂದಿನ ಮಾದರಿಗಿಂತ ಅತ್ಯಂತ ಕನೆಕ್ಟಿವಿಟಿ ಮತ್ತು ಆಫ್-ರೋಡ್ ಆಧಾರಿತ ಪಿಕ್ಅಪ್ ಟ್ರಕ್ ಆಗಿದೆ.