ಆಟೋಮ್ಯಾಟಿಕ್ ಟೇಲ್‌ಗೇಟ್ ಹೊಂದಿರುವ ಭಾರತದ ಮೊದಲ ಕ್ರೆಟಾ ಎಸ್‌ಯುವಿಯಿದು

ಕ್ರೆಟಾ ಎಸ್‌ಯುವಿ ಹ್ಯುಂಡೈ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದು. ಜೊತೆಗೆ ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದು. ಈ ಮಧ್ಯಮ ಗಾತ್ರದ ಎಸ್‌ಯುವಿಯು ಭಾರತದಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್'ಗಳ ರೀತಿಯಲ್ಲಿ ಹಾಟ್ ಕೇಕ್'ನಂತೆ ಮಾರಾಟವಾಗುತ್ತದೆ.

ಆಟೋಮ್ಯಾಟಿಕ್ ಟೇಲ್‌ಗೇಟ್ ಹೊಂದಿರುವ ಭಾರತದ ಮೊದಲ ಕ್ರೆಟಾ ಎಸ್‌ಯುವಿಯಿದು

ಹ್ಯುಂಡೈ ಕ್ರೆಟಾ ಎಸ್‌ಯುವಿಯು ಹಲವಾರು ಫೀಚರ್'ಗಳನ್ನು ಹೊಂದಿದೆ. ಆದರೆ ಈ ಎಸ್‌ಯುವಿಯಲ್ಲಿ ಕೆಲವು ಫೀಚರ್'ಗಳನ್ನು ನೀಡಲಾಗಿಲ್ಲ. ಅದರಂತೆ ಈ ಎಸ್‌ಯುವಿಯು ಆಟೋಮ್ಯಾಟಿಕ್ ಟೇಲ್‌ಗೇಟ್ ಫೀಚರ್ ಅನ್ನು ಹೊಂದಿರುವುದಿಲ್ಲ ಎಂಬುದು ಗಮನಾರ್ಹ.

ಆಟೋಮ್ಯಾಟಿಕ್ ಟೇಲ್‌ಗೇಟ್ ಹೊಂದಿರುವ ಭಾರತದ ಮೊದಲ ಕ್ರೆಟಾ ಎಸ್‌ಯುವಿಯಿದು

ಈ ಎಸ್‌ಯುವಿಯನ್ನು ಮಾಡಿಫೈ ಮಾಡುವ ಮೂಲಕ ಆಟೋಮ್ಯಾಟಿಕ್ ಟೇಲ್‌ಗೇಟ್ ಅಳವಡಿಸಲಾಗಿದೆ. ಈ ಮೂಲಕ ಮಾಡಿಫೈಗೊಂಡಿರುವ ಕ್ರೆಟಾ ಎಸ್‌ಯುವಿಯು ಆಟೋಮ್ಯಾಟಿಕ್ ಟೇಲ್‌ಗೇಟ್ ಫೀಚರ್ ಹೊಂದಿರುವ ಭಾರತದ ಮೊದಲ ಕ್ರೆಟಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆಟೋಮ್ಯಾಟಿಕ್ ಟೇಲ್‌ಗೇಟ್ ಹೊಂದಿರುವ ಭಾರತದ ಮೊದಲ ಕ್ರೆಟಾ ಎಸ್‌ಯುವಿಯಿದು

ಮಾಡಿಫೈಗೊಂಡಿರುವ ಕಾರು ಹ್ಯುಂಡೈ ಕ್ರೆಟಾದ ಮೂಲ ಮಾದರಿಯಾಗಿದೆ. ಆಟೋಮ್ಯಾಟಿಕ್ ಟೇಲ್‌ಗೇಟ್ ಫೀಚರ್ ಪಡೆದ ನಂತರ ಈ ಎಸ್‌ಯುವಿಯು ಹೈ ಎಂಡ್ ಮಾದರಿಯಂತೆ ಬದಲಾಗಿದೆ.

ಆಟೋಮ್ಯಾಟಿಕ್ ಟೇಲ್‌ಗೇಟ್ ಹೊಂದಿರುವ ಭಾರತದ ಮೊದಲ ಕ್ರೆಟಾ ಎಸ್‌ಯುವಿಯಿದು

ಮಾಡಿಫೈಗೊಂಡಿರುವ ಕ್ರೆಟಾ ಎಸ್‌ಯುವಿಯ ವೀಡಿಯೊವನ್ನು ವಿಕ್ ಆಟೋ ಆಕ್ಸೆಸರೀಸ್ ಎಂಬ ಯೂಟ್ಯೂಬ್ ಚಾನೆಲ್ ಬಿಡುಗಡೆಗೊಳಿಸಿದೆ. ಈ ವೀಡಿಯೊದಿಂದಾಗಿ ಭಾರತದಲ್ಲಿ ಮೊದಲ ಬಾರಿಗೆ ಆಟೋಮ್ಯಾಟಿಕ್ ಟೇಲ್‌ಗೇಟ್ ಫೀಚರ್ ಹೊಂದಿರುವ ಹ್ಯುಂಡೈ ಕ್ರೆಟಾ ಕಾರಿನ ಬಗ್ಗೆ ಮಾಹಿತಿ ಹೊರ ಬಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆಟೋಮ್ಯಾಟಿಕ್ ಟೇಲ್‌ಗೇಟ್ ಹೊಂದಿರುವ ಭಾರತದ ಮೊದಲ ಕ್ರೆಟಾ ಎಸ್‌ಯುವಿಯಿದು

ಆಟೋಮ್ಯಾಟಿಕ್ ಟೇಲ್‌ಗೇಟ್ ಜೊತೆಗೆ ಈ ಎಸ್‌ಯುವಿಯಲ್ಲಿ ಟ್ರೈ-ಬೀಮ್ ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲ್ಯಾಂಪ್ , ಹೈ ವಿಷನ್ ಫಾಗ್ ಲೈಟ್ ಬಲ್ಬ್, 17 ಇಂಚಿನ ಸ್ಪೋಕ್ ಅಲಾಯ್ ವ್ಹೀಲ್, ಮ್ಯಾಟ್ರಿಕ್ಸ್ ಟೈಪ್ ಒಆರ್ ವಿಎಂ, ಆಫ್ಟರ್ ಮಾರ್ಕೆಟ್ ಬಂಪರ್ ಸೇರಿದಂತೆ ಕೆಲವು ವಿಶೇಷ ಫೀಚರ್'ಗಳನ್ನು ಸೇರಿಸಲಾಗಿದೆ.

ಆಟೋಮ್ಯಾಟಿಕ್ ಟೇಲ್‌ಗೇಟ್ ಹೊಂದಿರುವ ಭಾರತದ ಮೊದಲ ಕ್ರೆಟಾ ಎಸ್‌ಯುವಿಯಿದು

ಜೊತೆಗೆ ಇಂಟಿರಿಯರ್'ನಲ್ಲಿ ಆಂಬಿಯೆಂಟ್ ಎಲೆಕ್ಟ್ರಿಕ್ ಲೈಟ್, ಸ್ಕಫ್ ಪ್ಲೇಟ್, ಸ್ಟೀರಿಂಗ್ ವ್ಹೀಲ್‌ನಲ್ಲಿ ಆಡಿಯೊ ಕಂಟ್ರೋಲ್, ಐಷಾರಾಮಿ ಸೀಟುಗಳಂತಹ ವಿಶೇಷ ಫೀಚರ್'ಗಳನ್ನು ಸೇರಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಎಸ್‌ಯುವಿಯಲ್ಲಿ ಮಾಡಲಾಗಿರುವ ಎಲ್ಲಾ ಮಾಡಿಫಿಕೇಶನ್'ಗಳು ಕೇವಲ ಲುಕ್'ಗೆ ಸಂಬಂಧಿಸಿವೆ. ಈ ಎಸ್‌ಯುವಿಯಲ್ಲಿರುವ ಎಂಜಿನ್'ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಎಸ್‌ಯುವಿಯಲ್ಲಿರುವ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಆಟೋಮ್ಯಾಟಿಕ್ ಟೇಲ್‌ಗೇಟ್ ಹೊಂದಿರುವ ಭಾರತದ ಮೊದಲ ಕ್ರೆಟಾ ಎಸ್‌ಯುವಿಯಿದು

ಹ್ಯುಂಡೈ ಕಂಪನಿಯು ಕ್ರೆಟಾ ಎಸ್‌ಯುವಿಯನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತದೆ. 1.5 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್'ನೊಂದಿಗೆ ಸಿವಿಟಿ ಹಾಗೂ ಮ್ಯಾನುಯಲ್ ಗೇರ್ ಬಾಕ್ಸ್ ನೀಡಲಾದರೆ, 1.5 ಲೀಟರಿನ ಡೀಸೆಲ್ ಎಂಜಿನ್'ನೊಂದಿಗೆ ಮ್ಯಾನ್ಯುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗುತ್ತದೆ. 1.4 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್'ನೊಂದಿಗೆ 7 ಸ್ಪೀಡಿನ ಡಿಸಿಟಿ ಗೇರ್ ಬಾಕ್ಸ್ ನೀಡಲಾಗಿದೆ.

Most Read Articles

Kannada
English summary
Hyundai Creta SUV modified with automatic tailgate. Read in Kannada.
Story first published: Monday, January 25, 2021, 9:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X