ಭಾರತದಲ್ಲಿ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿನ ಖರೀದಿಗೆ ಬುಕ್ಕಿಂಗ್ ಆರಂಭ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ತನ್ನ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಬುಕ್ಕಿಂಗ್ ಪ್ರಾರಂಭಿಸಿದ್ದಾರೆ. ಈ ಹೊಸ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿನ ವಿತರಣೆಯನ್ನು ಮುಂದಿನ ತಿಂಗಳು ಪ್ರಾರಂಭಿಸಲಿದೆ.

ಭಾರತದಲ್ಲಿ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿನ ಖರೀದಿಗೆ ಬುಕ್ಕಿಂಗ್ ಆರಂಭ

ಈ ಹೊಸ ಜಾಗ್ವಾರ್ ಎಫ್-ಪೇಸ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ನ್‌ಗಳೆರಡರಲ್ಲೂ ಆರ್-ಡೈನಾಮಿಕ್ ಎಸ್ ಟ್ರಿಮ್‌ನಲ್ಲಿ ಲಭ್ಯವಾಗಲಿದೆ. ಈ ಹೊಸ 2021ರ ಜಾಗ್ವಾರ್ ಎಫ್-ಪೇಸ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ನವೀಕರಿಸಿದ ಫ್ರಂಟ್ ಗ್ರಿಲ್ ಅನ್ನು ಡೈಮಂಡ್ ಮೆಶ್ ಪ್ಯಾಟರ್ನ್, ಹೊಸದಾಗಿ ವಿನ್ಯಾಸಗೊಳಿಸಿದ ಬಂಪರ್‌ಗಳು, ಗ್ರಿಲ್ ತನಕ ವಿಸ್ತರಿಸುವ ಹೊಸ ಮಸ್ಕ್ಲರ್ ಬಾನೆಟ್ ರಚನೆಯನ್ನು ಮಾಡಲಾಗಿದೆ.

ಭಾರತದಲ್ಲಿ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿನ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಈ ಐಷಾರಾಮಿ ಕಾರಿನಲ್ಲಿ ಅಗ್ರೇಸಿವ್ ಎಲ್ಇಡಿ ಟೈಲ್ ಲ್ಯಾಂಪ್, ಪರಿಷ್ಕೃತ ಎಲ್-ಆಕಾರದ ಟ್ವಿನ್ ಎಲ್ಇಡಿ ಲೈಟಿಂಗ್ ಅನ್ನು ಹೊಂದಿದೆ. ಒಟ್ಟಾರೆ ಈ ಕಾರಿನ ವಿನ್ಯಾಸದಲ್ಲಿ ಕೆಲವು ನವೀಕರಣಗಳನ್ನು ನಡೆಸಿದ್ದಾರೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿನ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಜಾಗ್ವಾರ್ ಎಫ್-ಪೇಸ್ ಕಾರಿನ ಇಂಟಿರಿಯರ್ ನಲ್ಲಿ ಹೊಸ 11.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಇತ್ತೀಚಿನ ಪಿವಿ ಪ್ರೊ ಟೆಕ್ ಆಫರಿಂಗ್ ಒಟಿಆರ್ ಅಪ್‌ಡೇಟ್‌ಗಳು ಮತ್ತು ಆಟೋ ಎಸಿಗೆ ಹೊಸ ಕಂಟ್ರೋಲ್ ಗಳನ್ನು ಹೊಂದಿವೆ.

ಭಾರತದಲ್ಲಿ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿನ ಖರೀದಿಗೆ ಬುಕ್ಕಿಂಗ್ ಆರಂಭ

ಈ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿನಲ್ಲಿ ಹೊಸ ಗೇರ್ ಸೆಲೆಕ್ಟರ್, ಸುಧಾರಿತ ಸ್ಟ್ರೋರೇಜ್ ಸ್ಪೇಸ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಕ್ಯಾಬಿನ್ ಏರ್ ಅಯಾನೈಸರ್ ನಿಂದ ಎರವಲು ಪಡೆದ ಹೊಸ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿನ ಖರೀದಿಗೆ ಬುಕ್ಕಿಂಗ್ ಆರಂಭ

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 2021ರ ಜಾಗ್ವಾರ್ ಎಫ್-ಪೇಸ್ ಮೈಲ್ಡ್ ಹೈಬ್ರಿಡ್ ಮತ್ತು ಹೊಸ ಪಿಹೆಚ್‌ಇವಿ ಸಿಸ್ಟಂನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಎಡಬ್ಲ್ಯೂಡಿ ಯೊಂದಿಗೆ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿನ ಖರೀದಿಗೆ ಬುಕ್ಕಿಂಗ್ ಆರಂಭ

ಭಾರತಕ್ಕೆ ಸಂಬಂಧಿಸಿದಂತೆ, ಇನ್-ಲೈನ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಬಹುದು. ಇದರಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿನ ಖರೀದಿಗೆ ಬುಕ್ಕಿಂಗ್ ಆರಂಭ

ಈ ಪೆಟ್ರೋಲ್ ಎಂಜಿನ್ 250 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಇದರೊಂದಿಗೆ ಮೈಲ್ಡ್-ಹೈಬ್ರಿಡ್ ಲೀಟರ್ ನಾಲ್ಕು-ಪಾಟ್ ಆಯಿಲ್-ಬರ್ನರ್ ಅನ್ನು ಕೂಡ ಒಳಗೊಂಡಿರುತ್ತದೆ. ಇದು 300 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಕಾರಿನ ಖರೀದಿಗೆ ಬುಕ್ಕಿಂಗ್ ಆರಂಭ

ಈ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟೆಡ್ ಆವೃತ್ತಿಯಲ್ಲಿ ಉತ್ತಮ ಸವಾರಿ ಗುಣಮಟ್ಟಕ್ಕಾಗಿ ಬ್ರಿಟಿಷ್ ಐಷಾರಾಮಿ ಕಾರು ತಯಾರಕವು ಚಾಸಿಸ್ ಮತ್ತು ಸಸ್ಪೆಂಕ್ಷನ್ ಅನ್ನು ಕೂಡ ನವೀಕರಿಸಲಾಗಿದೆ. ಅಲ್ಲದೇ ಈ ಹೊಸ ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಕಾರು ಐಷಾರಾಮಿ ಹಾಗೂ ಆಕರ್ಷಕ ಲುಕ್ ಅನ್ನು ಹೊಂದಿದೆ.

Most Read Articles

Kannada
English summary
2021 Jaguar F-Pace Facelift Bookings Open. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X