Just In
- 1 hr ago
ಅನಾವರಣವಾಯ್ತು ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 3 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 15 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್‌ವ್ಯಾಗನ್
Don't Miss!
- News
ಪಶ್ಚಿಮ ಬಂಗಾಳ ಕಾಶ್ಮೀರವಾದರೆ ತಪ್ಪೇನು ಹೇಳಿ; ಸುವೇಂದುಗೆ ಒಮರ್ ತಿರುಗೇಟು
- Movies
ದೀದಿ ಸಾಮ್ರಾಜ್ಯದಲ್ಲಿ ಕಮಲದ ಕೈ ಹಿಡಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಲವು ಹೊಸ ಬದಲಾವಣೆಗಳೊಂದಿಗೆ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಬಿಡುಗಡೆ
ಜೀಪ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಕಾರು ಮಾದರಿಯಾದ ಕಂಪಾಸ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಆವೃತ್ತಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಉನ್ನತೀಕರಣಗೊಂಡಿದೆ.

ಕಂಪಾಸ್ ಫೇಸ್‌ಲಿಫ್ಟ್ ಮಾದರಿಯಲ್ಲಿನ ತಾಂತ್ರಿಕ ಅಂಶಗಳಲ್ಲಿ ಹೊರಭಾಗದ ಫೀಚರ್ಸ್‌ಗಳಿಂತಲೂ ಒಳಭಾಗದ ಫೀಚರ್ಸ್‌ಗಳು ಹೆಚ್ಚಿನ ಬದಲಾವಣೆ ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 24.49 ಲಕ್ಷ ಬೆಲೆ ಪಡೆದುಕೊಂಡಿದೆ. ಕಂಪಾಸ್ ಫೇಸ್‌ಲಿಫ್ಟ್ ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಫೆಬ್ರುವರಿ 2ರಿಂದ ಹೊಸ ಕಾರಿನ ವಿತರಣೆಯು ಆರಂಭವಾಗಲಿದೆ.

ಜೀಪ್ ಕಂಪನಿಯು ಹೊಸ ಕಂಪಾಸ್ ಕಾರನ್ನು ಸ್ಪೋರ್ಟ್ಸ್, ಲ್ಯಾಂಗಿಟ್ಯೂಡ್, ಲ್ಯಾಂಗಿಟ್ಯೂಡ್ ಆಪ್ಷನ್ ಮತ್ತು ಮಾಡೆಲ್ ಎಸ್ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದ್ದು, ಕಂಪನಿಯು ಹೊಸ ಕಾರಿನಲ್ಲಿ 80ನೇ ವರ್ಷದ ವಿಶೇಷತೆಗಾಗಿ ಆ್ಯನಿವರ್ಸರಿ ಎಡಿಷನ್ ಅನ್ನು ಸಹ ಸೀಮಿತ ಅವಧಿಗೆ ಬಿಡುಗಡೆ ಮಾಡಿದೆ.

ಆ್ಯನಿವರ್ಸರಿ ಎಡಿಷನ್ ಮಾದರಿಯು ಕಂಪಾಸ್ ಕಾರಿನ ಲಿಮಿಟೆಡ್ ಎಡಿಷನ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಒಂದೇ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿರುವ ಸ್ಪೆಷಲ್ ಎಡಿಷನ್ ಎಕ್ಸ್‌ಶೋರೂಂ ಪ್ರಕಾರ ರೂ.22.29 ಲಕ್ಷ ಬೆಲೆ ಹೊಂದಿದೆ.

ಇನ್ನು ಹೊಸ ಕಂಪಾಸ್ ಹೊಸ ಕಾರಿನ ಬಹುತೇಕ ವೆರಿಯೆಂಟ್‌ಗಳು ಹಲವಾರು ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ಸಿಗ್ನಿಚೆರ್ ಗ್ರಿಲ್, ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಫಾಗ್ ಲ್ಯಾಂಪ್ಸ್, ಏರ್ ಇನ್‌ಟೆಕ್, ಮರುವಿನ್ಯಾಸಗೊಳಿಸಿದ 18-ಇಂಚಿನ ಅಲಾಯ್ ವೀಲ್ಹ್, ಪನೊರಮಿಕ್ ಸನ್‌ರೂಫ್, ಎಲ್ಇಡಿ ಟೈಲ್‌ಲೈಟ್ಸ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ನೀಡಲಾಗಿದೆ.

ಹಾಗೆಯೇ ಕಾರಿನ ಒಳಭಾಗದ ವಿನ್ಯಾಸಗಳಲ್ಲಿ ಆಕರ್ಷಕವಾದ ಡ್ಯಾಶ್‌ಬೋರ್ಡ್, ಸಾಫ್ಟ್ ಟಚ್ ಮಟಿರಿಯಲ್ ಹೊಂದಿರುವ ಕ್ಯಾಬಿನ್, ಹೊಸದಾಗಿ ವಿನ್ಯಾಸಗೊಳಿಸಿದ ಸ್ಟೀರಿಂಗ್ ವೀಲ್ಹ್, ಮೌಂಟೆಡ್ ಕಂಟ್ರೋಲ್ಸ್, 10.25 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ.

ಹೊಸ ಕಾರಿನಲ್ಲಿ ಕಂಪನಿಯು ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸರ್ಪೋಟ್ ಮಾಡುವ ಬ್ರಾಂಡ್‍ನ ಹೊಸ ಯುಕನೆಕ್ಟ್5 ಟೆಕ್ನಾಲಜಿ ಜೋಡಿಸಿದ್ದು, ಹೊಸ ಕಾರ್ ಕನೆಕ್ಟ್ ಟೆಕ್ನಾಲಜಿಯು ಕಾರಿಗೆ ಗರಿಷ್ಠ ಭದ್ರತೆ ನೀಡುವುದರ ಜೊತೆಗೆ ಕಾರು ಚಾಲನೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುತ್ತದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಜೀಪ್ ಕಂಪನಿಯು ವೆಂಟೆಲೆಟೆಡ್ ಆಸನಗಳನ್ನು, ವೈರ್‌ಲೆಸ್ ಚಾರ್ಜಿಂಗ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೈಡ್ ಸೀಟು, 60:40 ಅನುಪಾತದಲ್ಲಿ ಮಡಿಕೆ ಮಾಡಬಹುದಾದ ಹಿಂಬದಿಯ ಆಸನ ಮತ್ತು ಕಾರಿನ ಸ್ಪೋರ್ಟಿ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡುವ ವಿವಿಧ ತಾಂತ್ರಿಕ ಅಂಶಗಳು ಗ್ರಾಹಕರನ್ನು ಸೆಳೆಯಲಿವೆ.
MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಎಂಜಿನ್ ಮತ್ತು ಪರ್ಫಾಮೆನ್ಸ್
ಕಂಪಾಸ್ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಜೀಪ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಪೆಟ್ರೋಲ್ ಆವೃತ್ತಿಯು 163-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಮಾದರಿಯು 173-ಬಿಎಚ್‌ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಹೊಸ ಕಾರಿನ ಆರಂಭಿಕ ಆವೃತ್ತಿಗಳಲ್ಲಿ 4x2 ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿರುವ ಜೀಪ್ ಕಂಪನಿಯು ಹೈ ಎಂಡ್ ಮಾದರಿಗಳಾದ ಲಿಮಿಟೆಡ್, ಮಾಡೆಲ್ ಎಸ್ ಮತ್ತು ಆ್ಯನಿವರ್ಸರಿ ಎಡಿಷನ್‌ಗಳಲ್ಲಿ 4x4 ಡ್ರೈವ್ ಸಿಸ್ಟಂ ಸೌಲಭ್ಯವನ್ನು ಜೋಡಣೆ ಮಾಡಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕಂಪಾಸ್ ಫೇಸ್‌ಲಿಫ್ಟ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್, 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಮತ್ತು 9-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಒಟ್ಟು 7 ಬಣ್ಣಗಳ ಆಯ್ಕೆ ಹೊಂದಿದ್ದು, ಹೊಸ ಕಾರು ಮಾರುಕಟ್ಟೆಯಲ್ಲಿರುವ ಎಂಜಿ ಹೆಕ್ಟರ್, ಕಿಯಾ ಸೆಲ್ಟೊಸ್, ಹ್ಯುಂಡೈ ಕ್ರೆಟಾ, ಫೋಕ್ಸ್‌ವ್ಯಾಗನ್ ಟಿ ರಾಕ್ ಮತ್ತು ಟಾಟಾ ಹ್ಯಾರಿಯರ್ ಕಾರುಗಳಿಗೆ ಪೈಪೋಟಿ ನೀಡುವ ತವಕದಲ್ಲಿದೆ.