ಈ ಹೊಸ ಕಾರನ್ನು ಖರೀದಿ ಮಾಡಿದ ಒಂದು ತಿಂಗಳ ನಂತರ ಇಷ್ಟವಿಲ್ಲವಾದ್ರೆ ವಾಪಸ್ ನೀಡಿ..

ಕಿಯಾ ಮೋಟಾರ್ಸ್ ಕಂಪನಿಯು ತನ್ನ ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾದ ಕಾರ್ನಿವಾಲ್ ಕಾರು ಖರೀದಿಯ ಮೇಲೆ ವಿನೂತನ ಆಫರ್ ಘೋಷಣೆ ಮಾಡಿದ್ದು, ಕಾರು ಖರೀದಿ ಮೌಲ್ಯ ಹೆಚ್ಚಿಸಲು ಗ್ಯಾರಂಟಿ ಬೈ ಬ್ಯಾಕ್ ಸ್ಕೀಮ್ ಪ್ರಕಟಿಸಿದೆ.

ಈ ಹೊಸ ಕಾರನ್ನು ಖರೀದಿ ಮಾಡಿದ ಒಂದು ತಿಂಗಳ ನಂತರ ಇಷ್ಟವಿಲ್ಲವಾದ್ರೆ ವಾಪಸ್ ನೀಡಿ..

ಹೌದು, ಕಾರು ಖರೀದಿದಾರರ ವಿಶ್ವಾಸ ಹೆಚ್ಚಿಸಲು ವಿನೂತನ ಮಾರುಕಟ್ಟೆ ತಂತ್ರ ಅನುಸರಿಸಲು ಮುಂದಾಗಿರುವ ಕಿಯಾ ಮೋಟಾರ್ಸ್ ಕಂಪನಿಯು ಕಾರ್ನಿವಾಲ್ ಎಂಪಿವಿ ಖರೀದಿ ಮೇಲೆ ಗ್ಯಾರಂಟಿ ಬೈ ಬ್ಯಾಕ್ ಸ್ಕೀಮ್ ಪ್ರಕಟಿಸಿದ್ದು, ಹೊಸ ಸ್ಕೀಮ್ ಮೂಲಕ ಕಾರು ಖರೀದಿಸುವ ಗ್ರಾಹಕರು ನಿಗದಿ ಅವಧಿಯಲ್ಲಿ ಕಾರಿನ ಬಗೆಗೆ ತೃಪ್ತಿ ಇಲ್ಲವಾದರೆ ಕಂಪನಿಗೆ ವಾಪಸ್ ನೀಡಬಹುದಾಗಿದೆ.

ಈ ಹೊಸ ಕಾರನ್ನು ಖರೀದಿ ಮಾಡಿದ ಒಂದು ತಿಂಗಳ ನಂತರ ಇಷ್ಟವಿಲ್ಲವಾದ್ರೆ ವಾಪಸ್ ನೀಡಿ..

ಹೊಸ ಕಾರನ್ನು ಖರೀದಿಸಿದ ಒಂದು ತಿಂಗಳ ನಂತರ ಕಾರು ಮಾಲೀಕತ್ವ ಮುಂದುವರಿಸಬಹುದಾಗಿದ್ದು, ಒಂದು ವೇಳೆ ಹೊಸ ಕಾರಿನ ತಾಂತ್ರಿಕ ಅಂಶಗಳು ಇಷ್ಟವಾಗದೆ ಹೊದಲ್ಲಿ ಅಥವಾ ಕಾರು ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎನ್ನುವ ಗ್ರಾಹಕರು ಶೇ.95 ರಷ್ಟು ಹಣ ಮರುಪಾವತಿಯೊಂದಿಗೆ ಕಾರನ್ನು ಶೋರೂಂಗೆ ಹಿಂದಿರುಗಿಸಬಹುದು.

ಈ ಹೊಸ ಕಾರನ್ನು ಖರೀದಿ ಮಾಡಿದ ಒಂದು ತಿಂಗಳ ನಂತರ ಇಷ್ಟವಿಲ್ಲವಾದ್ರೆ ವಾಪಸ್ ನೀಡಿ..

ಗ್ಯಾರಂಟಿ ಬೈ ಬ್ಯಾಕ್ ಸ್ಕೀಮ್ ಅಡಿಯಲ್ಲಿ ಕಾರು ಖರೀದಿಸುವ ಗ್ರಾಹಕರು ಕಂಪನಿಯ ಕೆಲವು ಷರತ್ತುಗಳಿಗೆ ಒಪ್ಪಿದ್ದಲ್ಲಿ ಮಾತ್ರ ಕಾರು ಹಿಂಪಡೆಯಲಿದ್ದು, ಹೊಸ ಕಾರು ಖರೀದಿಸುವ ಗ್ರಾಹಕರು ಒಂದು ತಿಂಗಳ ಅವಧಿಯಲ್ಲಿ 1,500 ಕಿ.ಮೀ ಗಿಂತಲೂ ಹೆಚ್ಚು ದೂರ ಕಾರು ಪ್ರಯಾಣ ಮಾಡದೆ ನಿಗದಿ ಕಿ.ಮೀ ನಲ್ಲಿಯೇ ನಿಮ್ಮ ಬೇಡಿಕೆಯನ್ನ ನಿರ್ಧರಿಸಬೇಕಾಗುತ್ತದೆ.

ಈ ಹೊಸ ಕಾರನ್ನು ಖರೀದಿ ಮಾಡಿದ ಒಂದು ತಿಂಗಳ ನಂತರ ಇಷ್ಟವಿಲ್ಲವಾದ್ರೆ ವಾಪಸ್ ನೀಡಿ..

ಜೊತೆಗೆ ಕಾರು ಖರೀದಿಸುವ ಗ್ರಾಹಕರು ಸಾಲದ ಮೇಲೆ ಕಾರು ಖರೀದಿ ಮಾಡುವ ಯೋಜನೆಯಿದ್ದಲ್ಲಿ ಗ್ಯಾರಂಟಿ ಬೈ ಬ್ಯಾಕ್ ಸ್ಕೀಮ್ ಕುರಿತು ಮೊದಲೇ ಬ್ಯಾಂಕ್ ಜೊತೆಗೆ ಮಾತುಕತೆ ನಡೆಸಿ ಎಒಸಿ ಮೂಲಕ ಖರೀದಿ ಪ್ರಕ್ರಿಯೆ ನಡೆಸಬೇಕಿದ್ದು, ಕಾರು ಖರೀದಿಸಿ ನಂತರ ಕಾರು ಇಷ್ಟವಾದದೆ ಹೊದಲ್ಲಿ ನೋಂದಣಿ ಶುಲ್ಕ ಸೇರಿದಂತೆ ಶೇ.95ರಷ್ಟು ಎಕ್ಸ್‌ಶೋರೂಂ ದರವನ್ನು ಮರು ಪಾವತಿ ಮಾಡುತ್ತದೆ.

ಈ ಹೊಸ ಕಾರನ್ನು ಖರೀದಿ ಮಾಡಿದ ಒಂದು ತಿಂಗಳ ನಂತರ ಇಷ್ಟವಿಲ್ಲವಾದ್ರೆ ವಾಪಸ್ ನೀಡಿ..

ಗ್ಯಾರಂಟಿ ಬೈ ಬ್ಯಾಕ್ ಸ್ಕೀಮ್ ನೀಡಲಾಗುತ್ತಿದ್ದರೂ ಹೊಸ ಕಾರು ಗ್ರಾಹಕರಿಗೆ ಶೇ.100 ರಷ್ಟು ಇಷ್ಟವಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಕಿಯಾ ಮೋಟಾರ್ಸ್ ಕಂಪನಿಯು ಕಾರಿಗೆ ಹೆಚ್ಚಿನ ಮೌಲ್ಯವನ್ನು ನೀಡಲು ಈ ನವೀನ ಯೋಜನೆಯು ಸಾಕಷ್ಟು ಸಹಕಾರಿಯಾಗಿದೆ ಎಂದಿದೆ.

ಈ ಹೊಸ ಕಾರನ್ನು ಖರೀದಿ ಮಾಡಿದ ಒಂದು ತಿಂಗಳ ನಂತರ ಇಷ್ಟವಿಲ್ಲವಾದ್ರೆ ವಾಪಸ್ ನೀಡಿ..

ಇನ್ನು ಕಾರ್ನಿವಾಲ್ ಕಾರು ಮಾದರಿಯು ಅತ್ಯುತ್ತಮ ಫೀಚರ್ಸ್ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಎಂಪಿವಿ ಕಾರುಗಳ ಮಾರಾಟದಲ್ಲಿ ಉತ್ತಮ ಬೇಡಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.24.95 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 33.95 ಲಕ್ಷ ಬೆಲೆ ಹೊಂದಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಈ ಹೊಸ ಕಾರನ್ನು ಖರೀದಿ ಮಾಡಿದ ಒಂದು ತಿಂಗಳ ನಂತರ ಇಷ್ಟವಿಲ್ಲವಾದ್ರೆ ವಾಪಸ್ ನೀಡಿ..

ಕಾರ್ನಿವಾಲ್ ಕಾರಿನಲ್ಲಿ ಸದ್ಯಕ್ಕೆ ಒಂದೇ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಪ್ರತಿ ವೆರಿಯೆಂಟ್‌ನಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 200-ಬಿಎಚ್‌ಪಿ, 440-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಈ ಹೊಸ ಕಾರನ್ನು ಖರೀದಿ ಮಾಡಿದ ಒಂದು ತಿಂಗಳ ನಂತರ ಇಷ್ಟವಿಲ್ಲವಾದ್ರೆ ವಾಪಸ್ ನೀಡಿ..

ಹೊಸ ಕಾರಿನಲ್ಲಿರುವ ಪ್ರೀಮಿಯಂ ತಾಂತ್ರಿಕ ಸೌಲಭ್ಯಗಳು ಮತ್ತು ಐಷಾರಾಮಿ ವಿನ್ಯಾಸದಿಂದಾಗಿ ಕಾರ್ನಿವಾಲ್ ಕಾರು ಆವೃತ್ತಿಯನ್ನು 'ಲಗ್ಷುರಿ ಎಂಪಿವಿ' ವಿಭಾಗದಲ್ಲಿ ಗುರುತಿಸಲಾಗಿದ್ದು, ಸಿಗ್ನೆಚರ್ ಟೈಗರ್ ನೋಸ್ ಗ್ರಿಲ್ ಮತ್ತು ಸ್ವೆಪ್ಟ್ ಆಫ್ ಕ್ರೋಮ್ , ಸ್ವೆಪ್ಟ್‌ಬ್ಯಾಕ್ ಎಲ್‌ಇಡಿ ಪ್ರೋಜೆಕ್ಟರ್, ಬಂಪರ್ ರಕ್ಷಣೆಗಾಗಿ ಸಿಲ್ವರ್ ಸ್ಕಫ್ ಪ್ಲೇಟ್ ಜೋಡಣೆ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಈ ಹೊಸ ಕಾರನ್ನು ಖರೀದಿ ಮಾಡಿದ ಒಂದು ತಿಂಗಳ ನಂತರ ಇಷ್ಟವಿಲ್ಲವಾದ್ರೆ ವಾಪಸ್ ನೀಡಿ..

ಗ್ರಾಹಕರ ಬೇಡಿಕೆಯೆಂತೆ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಯೊಂದಿಗೆ ಭಾರತದಲ್ಲಿ ಮಾರಾಟವಾಗುವ ಕಾರ್ನಿವಾಲ್ ಕಾರು ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಎಸ್‍‌ಯುವಿ ಮತ್ತು ಎಂಪಿವಿ ಎರಡು ವಿಭಾಗದಲ್ಲೂ ಗಮನಸೆಳೆಯುತ್ತಿದೆ.

Most Read Articles

Kannada
English summary
Kia is offering a special scheme for Carnival MPV. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X