ಮೇ ತಿಂಗಳಿನಲ್ಲಿ 11,050 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಕಂಪನಿಯು ಲಾಕ್‌ಡೌನ್ ಅವಧಿಯಲ್ಲೇ ಸುಮಾರು ಸುಮಾರು 11,050 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಕಂಪನಿಯು ಕೋವಿಡ್ ಸಂಕಷ್ಟದ ವೇಳೆ ಗ್ರಾಹಕರ ಸುರಕ್ಷತೆಗಾಗಿ ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಮೇ ತಿಂಗಳಿನಲ್ಲಿ 11,050 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಕೋವಿಡ್ 2ನೇ ಅಲೆಯ ಪರಿಣಾಮ ಆರ್ಥಿಕ ಚಟುವಟಿಕೆಗಳು ನೆಲಕಚ್ಚಿರುವ ಪರಿಣಾಮ ಹೊಸ ವಾಹನ ಮಾರಾಟ ಕುಸಿತ ಕಂಡಿದೆ. ಬಹುತೇಕ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕಿಯಾ ಮೋಟಾರ್ಸ್ ಕಂಪನಿಯು ಸಹ ಲಾಕ್‌ಡೌನ್ ನಡುವೆಯೂ 11,050 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೂ ಏಪ್ರಿಲ್ ಅವಧಿಗಿಂತ ಶೇ.30 ರಷ್ಟು ಹಿನ್ನಡೆ ಅನುಭವಿಸಿದೆ.

ಮೇ ತಿಂಗಳಿನಲ್ಲಿ 11,050 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಕಠಿಣ ಕ್ರಮಗಳೊಂದಿಗೆ ಲಾಕ್‌ಡೌನ್ ವಿಧಿಸಿದ್ದರೂ ಡಿಜಿಟಲ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಮಾರಾಟ ಪ್ರಕ್ರಿಯೆಯನ್ನು ಕೈಗೊಳ್ಳುತ್ತಿರುವ ಕಾರು ಕಂಪನಿಗಳು ಶೋರೂಂ ತೆರೆಯಲಿದ್ದರೂ ನಿಗದಿತ ಅವಧಿಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಹೊಸ ವಾಹನಗಳ ವಿತರಣೆ ಮಾಡುತ್ತಿವೆ.

ಮೇ ತಿಂಗಳಿನಲ್ಲಿ 11,050 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವ ವಿವಿಧ ಆಟೋ ಕಂಪನಿಗಳು ಮೇ ತಿಂಗಳ ಅವಧಿಯಲ್ಲಿ ಹೆಚ್ಚಿನ ಪ್ರಮಾಣವನ್ನು ಡಿಜಿಟಲ್ ಪ್ಲ್ಯಾಟ್‌ಗಳನ್ನೇ ಬಳಕೆ ಮಾಡಿದ್ದು, ಕಿಯಾ ಮೋಟಾರ್ಸ್ ಸಹ ಈ ಮೂಲಕವೇ 11,050 ಕಾರುಗಳನ್ನು ಮಾರಾಟ ಮಾಡಿದೆ.

ಮೇ ತಿಂಗಳಿನಲ್ಲಿ 11,050 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಇನ್ನು ಕಿಯಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಸೆಲ್ಟೊಸ್ ಮತ್ತು ಸೊನೆಟ್ ಆವೃತ್ತಿಯ 2021ರ ಮಾದರಿಗಳನ್ನು ಮೇ ಅವಧಿಯಲ್ಲೇ ಬಿಡುಗಡೆಗೊಳಿಸಿದ್ದು, ಹೊಸ ಕಾರುಗಳು ಬ್ರಾಂಡ್ ನ್ಯೂ ಲೊಗೊ ಸೇರಿದಂತೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಮೇ ತಿಂಗಳಿನಲ್ಲಿ 11,050 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾರು ಮಾರಾಟ ಜಾಲ ಹೊಂದಿರುವ ಕಿಯಾ ಕಂಪನಿಯು ತನ್ನ ಹೊಸ ಕಾರು ಮಾದರಿಗಳಲ್ಲಿ ಬದಲಾವಣೆ ತರುವ ಉದ್ದೇಶದಿಂದ ವಿನೂತನ ಲೊಗೊ ಸೇರ್ಪಡೆಗೊಳಿಸಿದ್ದು, ಆರಂಭಿಕವಾಗಿ ಭಾರತದಲ್ಲಿ ಹೊಸ ಲೊಗೊ ಹೊಂದಿರುವ ಸೆಲ್ಟೊಸ್ ಮತ್ತು ಸೊನೆಟ್ ಮಾದರಿಗಳನ್ನು ಅನಾವರಣಗೊಳಿಸಿ ಇದೀಗ ಬಿಡುಗಡೆ ಮಾಡಿದೆ.

ಮೇ ತಿಂಗಳಿನಲ್ಲಿ 11,050 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

2021ರ ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳಲ್ಲಿ ಹೊಸ ಲೊಗೊ ವಿನ್ಯಾಸವು ಕಾರುಗಳಿಗೆ ಮತ್ತಷ್ಟು ಮೆರಗು ನೀಡುತ್ತಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷ(ಸೊನೆಟ್) ಮತ್ತು ರೂ. 9.95 ಲಕ್ಷ(ಸೆಲ್ಟೊಸ್) ಬೆಲೆ ಹೊಂದಿವೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಮೇ ತಿಂಗಳಿನಲ್ಲಿ 11,050 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಹೊಸ ಕಾರುಗಳ ಬ್ಯಾನೆಟ್, ಟೈಲ್‌ಗೆಟ್, ಅಲಾಯ್ ವೀಲ್ಹ್ ಮತ್ತು ಸ್ಟೀರಿಂಗ್ ವೀಲ್ಹ್ ಮೇಲೆ ಹೊಸ ಲೊಗೊ ವಿನ್ಯಾಸವು ಗಮನಸೆಳೆಯುತ್ತಿದ್ದು, ಹೊಸ ಲೊಗೊದೊಂದಿಗೆ ಸೆಲ್ಟೊಸ್ ಮಾದರಿಯ ಫೇಸ್‌ಲಿಫ್ಟ್ ಆವೃತ್ತಿಯ ಬಿಡುಗಡೆಯ ಯೋಜನೆಯಲ್ಲಿದ್ದ ಕಿಯಾ ಕಂಪನಿಗೆ ಕೋವಿಡ್ ಹಿನ್ನಡೆ ಉಂಟು ಮಾಡಿದೆ.

ಮೇ ತಿಂಗಳಿನಲ್ಲಿ 11,050 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಕೋವಿಡ್ ಹಿನ್ನಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಕಂಪನಿಯು ಸದ್ಯಕ್ಕೆ ಕೆಲವೇ ಕೆಲವು ತಾಂತ್ರಿಕ ಅಂಶಗಳ ಬದಲಾವಣೆಯೊಂದಿಗೆ 2021ರ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಡಿಸೈನ್ ಹೊಂದಿರುವ ಸೆಲ್ಟೊಸ್ ಫೇಸ್‌ಲಿಫ್ಟ್ ಮಾದರಿಯ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಮೇ ತಿಂಗಳಿನಲ್ಲಿ 11,050 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

2021ರ ಸೊನೆಟ್ ಮಾದರಿಯಲ್ಲಿ ಕಂಪನಿಯು ಹೊಸ ಲೊಗೊ ಹೊರತುಪಡಿಸಿ ಯಾವುದೇ ಹೊಸ ಬದಲಾವಣೆ ಪರಿಚಯಿಸಿಲ್ಲವಾದರೂ ಸೆಲ್ಟೊಸ್ ಕಾರಿನಲ್ಲಿ ಕೆಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಉನ್ನತೀಕರಿಸಿದೆ.

Most Read Articles

Kannada
English summary
Kia India May Sales 11,050 Units In Domestic Market. Read in Kannada.
Story first published: Wednesday, June 2, 2021, 22:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X