ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ಕೊರಿಯಾ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ Kia India 2021ರ ಆಗಸ್ಟ್ ತಿಂಗಳ ಮಾಸಿಕ ಮಾರಾಟ ವರದಿಯನ್ನು ಪ್ರಕಟಿಸಿದೆ. ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ 16,750 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ಇನ್ನು 2020ರ ಆಗಸ್ಟ್ ತಿಂಗಳಿನಲ್ಲಿ ಕಿಯಾ ಇಂಡಿಯಾ ಕಂಪನಿಯು 10,824 ಯುನಿಟ್‌ಗಳನ್ನು ಮಾರಾಟಗೊಳಿಸಿವೆ, ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.54.4 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು ಈ ವರ್ಷದ ಜುಲೈ ತಿಂಗಳಿನಲ್ಲಿ 15,016 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕಿಯಾ ಇಂಡಿಯಾ ಕಂಪನಿಯು ಶೇ.11.5 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ಕಳೆದ ತಿಂಗಳು ಸೆಲ್ಟೋಸ್ ಮಾದರಿಯ 8,619 ಯೂನಿಟ್‌ಗಳನ್ನು ಮಾರಾಟಗೊಳಿಸಿವೆ, ಇದು ಕಳೆದ ತಿಂಗಳು ಕಿಯಾದಲ್ಲಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ.ನಂತರ ಸೊನೆಟ್ 7,752 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು ಕಂಪನಿಯು ಕಾರ್ನೀವಲ್ ಪ್ರೀಮಿಯಂ ಎಂಪಿವಿಯ 379 ಯುನಿಟ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಿದೆ.

ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ಮಾರಾಟದ ಬಗ್ಗೆ ಪ್ರತಿಕ್ರಿಯಿಸಿದ ಕಿಯಾ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾದ ಟೇ-ಜಿನ್ ಪಾರ್ಕ್, ಆಗಸ್ಟ್ ನಮಗೆ ಬಹು ಮೈಲಿಗಲ್ಲುಗಳ ತಿಂಗಳು ಮತ್ತು ಆರೋಗ್ಯಕರ ಮಾರಾಟ ಸಂಖ್ಯೆಯನ್ನು ನೀಡಿದೆ. ನಮ್ಮ ಉತ್ಪನ್ನಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತದಲ್ಲಿ ನಮ್ಮ ಮಾರ್ಕ್ಯೂ ಉತ್ಪನ್ನವಾದ ಕಾರ್ನಿವಲ್ ತನ್ನ 2021ರ ಅತ್ಯಧಿಕ ಚಿಲ್ಲರೆ ಮಾರಾಟವನ್ನು ಈ ತಿಂಗಳು 537 ಯುನಿಟ್‌ಗಳಿಗೆ ನೋಂದಾಯಿಸಿದೆ.

ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ಇದು ಮಾರುಕಟ್ಟೆಯಲ್ಲಿ ಗ್ರಾಹಕರ ಭಾವನೆಯನ್ನು ಸುಧಾರಿಸುವ ಪ್ರತಿಬಿಂಬವಾಗಿದೆ. 2021ರಲ್ಲಿ ಸರಾಸರಿ 1.3 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದೇವೆ. ಹಬ್ಬದ ಸೀಸನ್ ನಲ್ಲಿ ಈ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ನಮ್ಮ ವಾಹನಗಳ ಮುಂಬರುವ ಬೇಡಿಕೆಯನ್ನು ಪೂರೈಸಲು, ಉತ್ಪಾದನೆಯ ಹೆಚ್ಚಿಸಲು ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ಕಿಯಾ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಮಾದರಿಗಳನ್ನು ಮಾರಾಟ ಮಾಡುತ್ತಿದೆ, ಈ ಕಿಯಾ ಕಾರುಗಳಿಗೆ ಭಾರತದಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ, ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ.

ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ಭಾರತೀಯ ಮಾರುಕಟ್ಟೆಯಲ್ಲಿ 3 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. ಕಿಯಾ ಇಂಡಿಯಾ 3 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದ ಭಾರತದ ಅತಿ ವೇಗದ ಕಾರು ತಯಾರಕವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್‌ ಆಗಿರುವ ಕಿಯಾ ಸೆಲ್ಟೋಸ್ ಮತ್ತು ಸೊನೆಟ್ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ಕಿಯಾ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‌ಯುವಿಯು ಅದರ ಒಟ್ಟಾರೆ ಮಾರಾಟದ ಶೇಕಡಾ 66 ರಷ್ಟಿದೆ. ಶೇಕಡಾ 32 ರಷ್ಟು ಮಾರಾಟವು ಕಿಯಾ ಸೋನೆಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟವಾಗಿದೆ. ಬ್ರ್ಯಾಂಡ್ ಇದುವರೆಗೆ ಕಿಯಾ ಕಾರ್ನಿವಲ್ ಎಂಪಿವಿಯ 7310 ಯುನಿಟ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ಮಾರಾಟದಲ್ಲಿ Kia Seltos ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಇದೀಗ Kia Seltos ಎಸ್‍ಯುವಿಯ ಎರಡು ಲಕ್ಷ ಯೂನಿಟ್‌ಗಳನ್ನು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಕೇವಲ ಎರಡು ವರ್ಷದಲ್ಲಿ Kia Seltos ಮಾದರಿಯ ಎರಡು ಲಕ್ಷ ಯೂನಿಟ್‌ಗಳು ಮಾರಾಟವಾಗಿವೆ.

ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ಇಂತಹ ಕಠಿಣವಾದ ಸಮಯದಲ್ಲಿಯು ಕಿಯಾ ಕಾರುಗಳು ಉತ್ತಮವಾದ ಬೇಡಿಕೆಯನ್ನು ಪಡೆದುಕೊಂಡಿದೆ. Kia ಡಿಜಿಟಲ್ ಮಾರಾಟವು ಹೆಚ್ಚಿನ ಗ್ರಾಹಕರನು ತಲುಪುತ್ತಿದೆ. ಜನಪ್ರಿಯ ಕಾರು ತಯಾರಕರಾದ Kia ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ Seltos ಎಸ್‍ಯುವಿಯಾಗಿದೆ. ಈ Seltos ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು.

ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ Seltos ಎಸ್‍ಯುವಿಯು ಯಶ್ವಸಿಯಾಗಿದೆ. ಭಾರತದ ಗ್ರಾಹಕರು ಈ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ. ಬಿಡುಗಡೆಯಾದಾಗಿನಿಂದ Seltos ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಮಾರಾಟದಲ್ಲಿ Kia Seltos ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಇದರಿಂದ ಕಿಯಾ ಕಂಪನಿಯು ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು Seltos ಎಸ್‍ಯುವಿಯ ಹೊಸ X Line ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಆಗಸ್ಟ್ ತಿಂಗಳಿನಲ್ಲಿ 16,750 ಕಾರುಗಳನ್ನು ಮಾರಾಟ ಮಾಡಿದ Kia India

ಈ ಹೊಸ Kia Seltos X Line ವೆರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.17.79 ಲಕ್ಷಗಳಾಗಿದೆ. Seltos ಎಸ್‍ಯುವಿಯ ಲೈನ್‌ಅಪ್‌ನಲ್ಲಿ ಹೊಸ ಟಾಪ್-ಆಫ್-ಲೈನ್ ವೆರಿಯೆಂಟ್ ಆಗಿದೆ. ಇದು ಟಾಪ್-ಸ್ಪೆಕ್ ಜಿಟಿ ಲೈನ್ ರೂಪಾಂತರವನ್ನು ಆಧರಿಸಿದೆ. ಹೊಸ ಟಾಪ್-ಆಫ್-ಲೈನ್ X Line ರೂಪಾಂತರವು ಕಾಸ್ಮೆಟಿಕ್ ವಿನ್ಯಾಸ ಮತ್ತು ಆಂತರಿಕ ಬದಲಾವಣೆಗಳನ್ನು ಪಡೆದುಕೊಂಡಿದೆ, ಈ ಹೊಸ ವೆರಿಯೆಂಟ್ ಮಾರಾಟದಲ್ಲಿ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು.

Most Read Articles

Kannada
English summary
Kia india sold 16750 units in domestic market august 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X