ವಿಶ್ವ ಪರಿಸರ ದಿನದ ಸಂಭ್ರಮಕ್ಕಾಗಿ 2021ರ ನಿರೋ ಇವಿ ಕಾರು ಅನಾವರಣಗೊಳಿಸಿದ ಕಿಯಾ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಹೊಸ ಯೋಜನೆಗಳ ಪರಿಣಾಮ ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬರುತ್ತಿದೆ.

ವಿಶ್ವ ಪರಿಸರ ದಿನದ ಸಂಭ್ರಮಕ್ಕಾಗಿ 2021ರ ನಿರೋ ಇವಿ ಕಾರು ಅನಾವರಣ

ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳ ನಿರ್ಣಯಗಳಿಗೆ ಅನುಗುಣವಾಗಿ ಆಟೋ ಉತ್ಪಾದನಾ ಕಂಪನಿಗಳು ಪರಿಸರ ಸ್ನೇಹಿ ವಾಹನಗಳತ್ತ ಮಹತ್ವದ ಹೆಜ್ಜೆಯಿರಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ಹಲವಾರು ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿದಿವೆ. ದಕ್ಷಿಣ ಕೊರಿಯಾದ ಕಾರು ಕಂಪನಿ ಕಿಯಾ ಸಹ ಗ್ರಾಹಕರ ಬೇಡಿಕೆಯೆಂತೆ ಇವಿ ಆವೃತ್ತಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದು, ತನ್ನ ಜನಪ್ರಿಯ ನಿರೋ ಎಲೆಕ್ಟ್ರಿಕ್ ಮಾದರಿಯನ್ನು ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 2021ರ ಆವೃತ್ತಿಯನ್ನು ಅನಾವರಣಗೊಳಿಸಿತು.

ವಿಶ್ವ ಪರಿಸರ ದಿನದ ಸಂಭ್ರಮಕ್ಕಾಗಿ 2021ರ ನಿರೋ ಇವಿ ಕಾರು ಅನಾವರಣ

ದಕ್ಷಿಣ ಕೊರಿಯಾ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಈಗಾಗಲೇ ಮಾರಾಟಗೊಳ್ಳುತ್ತಿರುವ ನಿರೋ ಇವಿ ಕಾರು ಮಾದರಿಯನ್ನು ಕಂಪನಿಯು ಗ್ರಾಹಕರ ಬೇಡಿಕೆಯೆಂತೆ 2021ರ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಮಾದರಿಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸೇರಿಸಲಾಗಿದೆ.

ವಿಶ್ವ ಪರಿಸರ ದಿನದ ಸಂಭ್ರಮಕ್ಕಾಗಿ 2021ರ ನಿರೋ ಇವಿ ಕಾರು ಅನಾವರಣ

ನಿರೋ ಎಲೆಕ್ಟ್ರಿಕ್ ಮತ್ತು ಸೊಲ್ ಎಲೆಕ್ಟ್ರಿಕ್ ಈಗಾಗಲೇ ಚೀನಾ, ಕೊರಿಯಾ ಮತ್ತು ಯುರೋಪಿ ಪ್ರಮುಖ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲೂ ಹೊಸ ಕಾರು ಬಿಡುಗಡೆಯಾಗುತ್ತಿರುವುದು ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

ವಿಶ್ವ ಪರಿಸರ ದಿನದ ಸಂಭ್ರಮಕ್ಕಾಗಿ 2021ರ ನಿರೋ ಇವಿ ಕಾರು ಅನಾವರಣ

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಹೊಸ ನಿರೋ ಕಾರು ಪ್ರತಿ ಚಾರ್ಜ್‌ಗೆ 450 ಕಿ.ಮೀ ಮೈಲೇಜ್‌ನೊಂದಿಗೆ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದ್ದು, ಕೇವಲ 90 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಈ ಕಾರಿನಲ್ಲಿದೆ.

ವಿಶ್ವ ಪರಿಸರ ದಿನದ ಸಂಭ್ರಮಕ್ಕಾಗಿ 2021ರ ನಿರೋ ಇವಿ ಕಾರು ಅನಾವರಣ

ಹೊಸ ಕಾರಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳಿಂದಾಗಿ ನಿರೋ ಇವಿ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.25 ಲಕ್ಷದಿಂದ ರೂ.30 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಭಾರತೀಯ ಮಾರುಕಟ್ಟೆಗಾಗಿ ಕೆಲವು ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ವಿಶ್ವ ಪರಿಸರ ದಿನದ ಸಂಭ್ರಮಕ್ಕಾಗಿ 2021ರ ನಿರೋ ಇವಿ ಕಾರು ಅನಾವರಣ

ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗಾಗಿ ಹ್ಯುಂಡೈ ಜೊತೆಗೂಡಿರುವ ಕಿಯಾ ಕಂಪನಿಯು ಸ್ವತಂತ್ರವಾಗಿ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡಲಿದ್ದರೂ, ಕೆಲವು ತಂತ್ರಜ್ಞಾನಗಳನ್ನು ಎರವಲು ಪಡೆದುಕೊಳ್ಳಲಿವೆ.

ವಿಶ್ವ ಪರಿಸರ ದಿನದ ಸಂಭ್ರಮಕ್ಕಾಗಿ 2021ರ ನಿರೋ ಇವಿ ಕಾರು ಅನಾವರಣ

ಕಿಯಾ ಕಂಪನಿಯು ಹೊಸ ನಿರೋ ಕಾರು ಬಿಡುಗಡೆಗೂ ಮುನ್ನ ಮತ್ತೊಂದು ಬಹುನೀರಿಕ್ಷಿತ ಸೊಲ್ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದ್ದು, ಸೊಲ್ ಇವಿ 2022ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ವಿಶ್ವ ಪರಿಸರ ದಿನದ ಸಂಭ್ರಮಕ್ಕಾಗಿ 2021ರ ನಿರೋ ಇವಿ ಕಾರು ಅನಾವರಣ

ಇನ್ನು ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವುದು ಮಹತ್ವ ಪಡೆದುಕೊಳ್ಳುತ್ತಿದೆ.

Most Read Articles

Kannada
English summary
KIA Announced 2021 Niro EV On World Environment Day. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X