2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಕಿಯಾ ಇಂಡಿಯಾ ಕಂಪನಿಯು ಕಳೆದ ವಾರವಷ್ಟೇ ತನ್ನ ಜನಪ್ರಿಯ ಸೆಲ್ಟೊಸ್ ಕಾರಿನ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಕಿಯಾ ಕಂಪನಿಯು ಹೊಸ ಕಾರಿನ ಪ್ರೀಮಿಯಂ ಸೌಲಭ್ಯಗಳನ್ನು ಹೆಚ್ಚಿಸಲು ಗ್ರಾಹಕರ ಬೇಡಿಕೆಯೆಂತೆ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಪ್ರಕಟಿಸಿದೆ.

2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಹೊಸ ಕಾರು ಮಾದರಿಯು ಬ್ರಾಂಡ್ ನ್ಯೂ ಲೊಗೊ ಸೇರಿದಂತೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಮಾಡಲಾಗಿದೆ. ಇದರ ಜೊತೆಗೆ ಆಸಕ್ತ ಗ್ರಾಹಕರಿಗಾಗಿ ಕಿಯಾ ಕಂಪನಿಯು ವಿವಿಧ ಸೌಲಭ್ಯಗಳನ್ನು ಹೊಂದಿರುವ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ಆಕ್ಸೆಸರಿಸ್ ಪ್ಯಾಕೇಜ್ ಖರೀದಿಗಾಗಿ ಪ್ರತ್ಯೇಕ ದರ ನಿಗದಿಪಡಿಸಲಾಗುತ್ತದೆ.

2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಸೆಲ್ಟೊಸ್ ಹೊಸ ಆವೃತ್ತಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.95 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.84 ಲಕ್ಷ ಬೆಲೆ ಹೊಂದಿದ್ದು, ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿರುವ ಫೀಚರ್ಸ್‌ಗಳು ಹೊಸ ಕಾರಿಗೆ ಮತ್ತಷ್ಟು ಬಲಿಷ್ಠ ವಿನ್ಯಾಸ ನೀಡಲಿವೆ.

2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಕಿಯಾ ಇಂಡಿಯಾ ಕಂಪನಿಯು ಹೊಸ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಸ್ಟ್ಯಾಂಡರ್ಡ್ ಫೀಚರ್ಸ್ ಜೊತೆಗೆ ಹೆಡ್‌ಲೈಟ್ ಕ್ರೊಮ್, ಫ್ರಂಟ್ ಫಾಗ್ ಲ್ಯಾಂಪ್ ಕವರ್ ಗಾರ್ನಿಶ್, ರಿಯರ್ ವ್ಯೂ ಮಿರರ್ ಕವರ್ ಗಾರ್ನಿಶ್, ಬಂಪರ್ ಕಾರ್ನರ್ ಪ್ರೊಟೆಕ್ಟರ್, ಟೈಲ್ ಲೈಟ್ ಕ್ರೋಮ್, ರಿಯರ್ ರಿಫ್ಲೆಕ್ಟರ್ ಕವರ್ ಗಾರ್ನಿಶ್, ಬೂಟ್ ಕ್ರೊಮ್ ಆಕ್ಸೆಂಟ್, ಮಡ್ ಫ್ಲಾಪ್ಸ್, ವಿಂಡೋ ಕ್ರೋಮ್ ಬೀಡಿಂಗ್ ಸೌಲಭ್ಯಗಳಿವೆ.

2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ತದನಂತರ ಡೋರ್ ವಿಸರ್ ಜೊತೆ ಕ್ರೋಮ್ ಇನ್‌ಸರ್ಟ್, ಡೋರ್ ಹ್ಯಾಂಡಲ್ ಕ್ರೋಮ್, ಸೈಡ್ ಸ್ಟೆಪ್, ಬಾಡಿ ಸೈಡ್ ಮೊಲ್ಡಿಂಗ್, ಬಾಡಿ ಕವರ್, ಜಂಪರ್ ಕೇಬಲ್, ಟೋವ್ ರೋಫ್, ಟೈರ್ ಇನ್‌ಫ್ಲೆಕ್ಟರ್, ಕಿಯಾ ಅಂಬ್ರೆಲಾ, ರೂಫ್ ವ್ಯಾರ್ಪ್ ಮ್ಯಾಟೆ ಬ್ಲ್ಯಾಕ್, ಮೈಕ್ರೊ ಫೈಬರ್ ಕ್ಲಾಥ್ ಮತ್ತು ಬಯೋ ಶಾಂಪೊ ಕಿಟ್ ನೀಡಲಾಗುತ್ತದೆ.

2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಕಾರಿನ ಒಳಭಾಗದಲ್ಲಿನ ಆಕ್ಸೆಸರಿಸ್‌ನಲ್ಲಿ ವಿವಿಧ ಬಗೆಗೆಯ ಒಂಬತ್ತು ಮಾದರಿಯ ಸೀಟ್‌ಗಳ ಆಯ್ಕೆ ನೀಡಲಾಗಿದ್ದು, ಫ್ಲೋರ್ ಮ್ಯಾಟ್ಸ್, ಸಿಲ್ ಪ್ಲೇಟ್, ಬ್ಲ್ಯಾಕ್ ಸೀಟ್ ಆರ್ಗನೈಸರ್, ಪ್ರೀಮಿಯಂ ಕುಷನ್, ಲ್ಯುಂಬರ್ ಸರ್ಪೊಟ್, ಪ್ರೀಮಿಯಂ ನೆಕ್ ರೆಸ್ಟ್, ಕೋಟ್ ಹ್ಯಾಂಗರ್, ರಿಯರ್ ಎಂಟರ್‌ಟೈನ್‌ಮೆಂಟ್ ಸಿಸ್ಟಂ, ಟ್ಯೂಷ್ ಪೇಪರ್, ಕಾರ್ ಡಸ್ಟಬಿನ್, ಟಾಯ್ಸ್, ಡ್ಯುಯಲ್ ಫೋರ್ಟ್ ಮೊಬೈಲ್ ಚಾರ್ಜರ್ ಸೇರಿದಂತೆ ಹಲವಾರು ಆಕ್ಸೆಸರಿಸ್‌ಗಳಿವೆ.

2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಇನ್ನು ಕಿಯಾ ಕಂಪನಿಯು ಹೊಸ ಕಾರಿನ ಈ ಬಾರಿ ತುಸು ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಕಾರಿನ ಬ್ಯಾನೆಟ್, ಟೈಲ್‌ಗೆಟ್, ಅಲಾಯ್ ವೀಲ್ಹ್ ಮತ್ತು ಸ್ಟೀರಿಂಗ್ ವೀಲ್ಹ್ ಮೇಲೆ ಹೊಸ ಲೊಗೊ ವಿನ್ಯಾಸವು ಗಮನಸೆಳೆಯುತ್ತಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಹೊಸ ಲೊಗೊದೊಂದಿಗೆ ಸೆಲ್ಟೊಸ್ ಮಾದರಿಯ ಫೇಸ್‌ಲಿಫ್ಟ್ ಆವೃತ್ತಿಯ ಬಿಡುಗಡೆಯ ಯೋಜನೆಯಲ್ಲಿದ್ದ ಕಿಯಾ ಕಂಪನಿಗೆ ಕೋವಿಡ್ ಹಿನ್ನಡೆ ಉಂಟು ಮಾಡಿದ್ದು, ಸದ್ಯ ಈ ಹಿಂದಿನ ಮಾದರಿಯ ಎಂಜಿನ್ ಆಯ್ಕೆಯಲ್ಲಿಯೇ ತುಸು ಬದಲಾವಣೆಯೊಂದಿಗೆ ಮಾರಾಟ ಆರಂಭಿಸಿದೆ.

2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

2021ರ ಸೆಲ್ಟೊಸ್ ಕಾರು ಮಾದರಿಯು ಹಳೆಯ ಆವೃತ್ತಿಗಿಂತಲೂ ರೂ. 6 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಬೇಡಿಕೆಯ ಆಧಾರದ ಮೇಲೆ ಸೆಲ್ಟೊಸ್ ಹೆಚ್‌ಟಿಎಕ್ಸ್ ಪ್ಲಸ್ 1.5 ಡೀಸೆಲ್ ಆವೃತ್ತಿಯ ಮಾರಾಟವನ್ನು ಸ್ಥಗಿತಗೊಳಿಸಿದೆ.

2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಹಾಗೆಯೇ ಕಂಪನಿಯು ಹೆಚ್‌ಟಿಕೆ ಪ್ಲಸ್ 1.5-ಲೀಟರ್ ಪೆಟ್ರೋಲ್ ಮಾದರಿಯಲ್ಲಿ ಹೊಸದಾಗಿ ಐಎಂಟಿ(ಇಂಟಲಿಜೆನ್ಸ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಆಯ್ಕೆ ನೀಡಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೊಸದಾಗಿ ಕಂಪನಿಯು ಜಿಟಿಎಕ್ಸ್ ಆಪ್ಷನ್ ಆವೃತ್ತಿಯಲ್ಲಿ ಪೆಟ್ರೋಲ್ ಮ್ಯಾನುವಲ್ ಹೊಂದಿರುವ 1.4-ಲೀಟರ್ ಟರ್ಬೊ ಎಂಜಿನ್ ಆಯ್ಕೆ ನೀಡಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಜೊತೆಗೆ ಸೆಲ್ಟೊಸ್ ಹೊಸ ಕಾರಿನಲ್ಲಿ ಕಂಪನಿಯು ಸ್ಯಾಂಡ್, ಮಡ್, ಸ್ನೋ ಎನ್ನುವ ಮೂರು ಟ್ರಾಕ್ಷನ್ ಸೌಲಭ್ಯದೊಂದಿಗೆ ನಾರ್ಮಲ್, ಇಕೋ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ಜೋಡಣೆ ಮಾಡಿದ್ದು, ಹೆಚ್‌ಟಿಕೆ ಪ್ಲಸ್ ಮಾದರಿಯಲ್ಲಿ ಫ್ರ್ಯಾಬಿಕ್ ಆಸನ, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯಗಳನ್ನು ಪಡೆದುಕೊಂಡಿದೆ.

2021ರ ಸೆಲ್ಟೊಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಇನ್ನುಳಿದ ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಎಇ, ಹೆಚ್‌ಟಿಎಕ್ಸ್ ಪ್ಲಸ್, ಜಿಟಿಎಕ್ಸ್ ಆಪ್ಷನ್ ಮತ್ತು ಜಿಟಿಎಕ್ಸ್ ಪ್ಲಸ್ ಮಾದರಿಗಳಲ್ಲಿ ಹೆಚ್ಚುವರಿಯಾಗಿ ಎಲೆಕ್ಟ್ರಾನಿಕ್ ಅಸಿಸ್ಟ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ವೆಹಿಕಲ್ ಸ್ಟ್ಯಾಬಿಲಿಟಿ ಮ್ಯಾನೆಜ್‌ಮೆಂಟ್, ಬ್ರೇಕ್ ಅಸಿಸ್ಟ್, ಆಟೋಮ್ಯಾಟಿಕ್ ಮಾದರಿಗಳಿಗಾಗಿ ಪ್ಯಾಡಲ್ ಶಿಫ್ಟರ್, ವಾಯ್ಸ್ ಕಮಾಂಡರ್, ಏರ್ ಪ್ಯೂರಿಫೈರ್ ಫೀಚರ್ಸ್‌ಗಳನ್ನು ನೀಡಲಾಗಿದೆ.

Most Read Articles

Kannada
English summary
2021 Kia Seltos Accessories and Parts. Read in Kannada.
Story first published: Saturday, May 22, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X