ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಮುಂಬೈನ ಲ್ಯಾಂಬೊರ್ಗಿನಿ ಡೀಲರ್‌ಶಿಪ್‌ನಲ್ಲಿ ಈ ಸೂಪರ್ ಎಸ್‌ಯುವಿಯ ವಿಶೇಷ ಆವೃತ್ತಿಯನ್ನು ಪರಿಶೀಲಿಸಲು ನಮಗೆ ಅವಕಾಶ ದೊರೆತಿತ್ತು. ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿಯ ವಾಕ್ ಅರೌಂಡ್ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಈ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್‌ ಹೊಂದಿರುವ ಸ್ಲೀಕ್ ಆದ ಹೆಡ್‌ಲ್ಯಾಂಪ್‌ ಹಾಗೂ ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಈ ಎಸ್‌ಯುವಿಯ ಕೆಳಭಾಗದಲ್ಲಿ ವೆಂಟ್ ಗಳನ್ನು ನೀಡಲಾಗಿದೆ. ಈ ಎಸ್‌ಯುವಿಯು ಆಕರ್ಷಕವಾದ ಬಣ್ಣವನ್ನು ಹೊಂದಿದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಈ ಎಸ್‌ಯುವಿಯು ಮ್ಯಾಟ್ ಕಪ್ಪು ಬಣ್ಣದ ಲೋಗೋ ಹೊಂದಿದೆ. ಈ ಎಸ್‌ಯುವಿಯ ಕೆಳಭಾಗದಲ್ಲಿರುವ ಆರೆಂಜ್ ಕಲರ್ ಲಿಪ್ ಗ್ರ್ಯಾಫೈಟ್ ಕ್ಯಾಪ್ಸುಲ್ ಎಸ್‌ಯುವಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿಯು 23 ಇಂಚಿನ ಮಲ್ಟಿಸ್ಪೋಕ್ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ. ಈ ಎಸ್‌ಯುವಿಯ ಡೋರುಗಳ ಕೆಳಭಾಗದಲ್ಲಿ ಆಕರ್ಷಕವಾದ ಆರೆಂಜ್ ಸ್ಟ್ರೈಪ್ ನೀಡಲಾಗಿದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಇನ್ನು ಈ ಎಸ್‌ಯುವಿಯು ಹಿಂಭಾಗದಲ್ಲಿ ಎಲ್ಇಡಿ ಟೇಲ್ ಲ್ಯಾಂಪ್ ಯುನಿಟ್'ಗಳನ್ನು ಹೊಂದಿದ್ದು, ಮಧ್ಯದಲ್ಲಿ ಲ್ಯಾಂಬೊರ್ಗಿನಿ ಲೋಗೋ ಅದರ ಮೇಲೆ ಆರೆಂಜ್ ಶೇಡ್ ಫಿನಿಷಿಂಗ್ ಸ್ಪಾಯ್ಲರ್ ಹೊಂದಿದೆ. ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿಯು ಹಿಂಭಾಗದಲ್ಲಿ ಕ್ವಾಡ್ ಎಕ್ಸಾಸ್ಟ್ ಔಟ್ ಲೆಟ್ ಗಳನ್ನು ಹೊಂದಿದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಇದರ ಜೊತೆಗೆ ಈ ಎಸ್‌ಯುವಿಯಲ್ಲಿ ಎಲೆಕ್ಟ್ರಾನಿಕ್ ಟೇಲ್ ಗೇಟ್, 616 ಲೀಟರ್ ಸಾಮರ್ಥ್ಯದ ದೊಡ್ಡ ಬೂಟ್ ಹಾಗೂ ಹಿಂಭಾಗದಲ್ಲಿ ಸನ್ ಶೇಡ್ ನೀಡಲಾಗಿದೆ.ಲ್ಯಾಂಬೊರ್ಗಿನಿ ಉರುಸ್‌ ಗ್ರಾಫೈಟ್ ಕ್ಯಾಪ್ಸುಲ್ ಆಕರ್ಷಕವಾದ ಇಂಟಿರಿಯರ್ ಅನ್ನು ಹೊಂದಿದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ನಾವು ವೀಕ್ಷಿಸಿದ ಮಾದರಿಯು ಖರೀದಿದಾರರಿಗೆ ಸೇರಿದ ಕಾರಣ ಎಸ್‌ಯುವಿಯ ಒಳಗೆ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಈ ಎಸ್‌ಯುವಿಯ ಹೊರಭಾಗದಲ್ಲಿ ಕಾಣುವ ಅದೇ ಆರೆಂಜ್ ಬಣ್ಣದ ಅಂಶಗಳನ್ನು ಒಳಭಾಗದಲ್ಲಿಯೂ ಕಾಣಬಹುದು.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಸೀಟುಗಳ ಮೇಲೆ ಆರೆಂಜ್ ಬಣ್ಣದಲ್ಲಿ ಉರುಸ್ ಹೆಸರನ್ನು ಕೆತ್ತಲಾಗಿದೆ. ಸೀಟಿನ ಹಿಂಭಾಗದಲ್ಲಿರುವ ಸ್ಟಿಚಿಂಗ್ ಹಾಗೂ ವಿನ್ಯಾಸಗಳು ಸಹ ಆರೆಂಜ್‌ ಬಣ್ಣವನ್ನು ಹೊಂದಿವೆ. ಇನ್ನು ಇನ್ಸ್ ಟ್ರೂಮೆಂಟೆಷನ್ ಅನ್ನು ಪೂರ್ಣ ಬಣ್ಣದ ಟಿಎಫ್‌ಟಿ ಸ್ಕ್ರೀನ್ ಮೂಲಕ ನಿರ್ವಹಿಸಲಾಗುತ್ತದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿಯಲ್ಲಿ ಇನ್ನೂ ಎರಡು ಸ್ಕ್ರೀನ್ ಗಳಿವೆ. ಒಂದು ಸ್ಕ್ರೀನ್ ಮೀಡಿಯಾ ಹಾಗೂ ಎಂಟರ್ ಟೆನ್ ಮೆಂಟ್ ಅನ್ನು ನಿರ್ವಹಿಸಿದರೆ, ಕೆಳಭಾಗದಲ್ಲಿರುವ ಮತ್ತೊಂದು ಸ್ಕ್ರೀನ್ ವಾಹನದ ಬಗೆಗಿನ ಎಲ್ಲಾ ಮಾಹಿತಿ ಹಾಗೂ ಅಂಕಿ ಅಂಶಗಳನ್ನು ಪ್ರದರ್ಶಿಸುತ್ತದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಎರಡನೇ ಸ್ಕ್ರೀನ್ ಕೆಳಗೆ ಸ್ಟಾರ್ಟ್/ಸ್ಟಾಪ್ ಬಟನ್ ನೀಡಲಾಗಿದೆ. ಇದು ಡ್ರೈವಿಂಗ್ ಮೋಡ್‌, ಟೆರೆನ್ ಮೋಡ್‌ ಹಾಗೂ ಡಿಫರೆನ್ಷಿಯಲ್ ಲಾಕ್‌ ಕಂಟ್ರೋಲ್'ಗಳಿಂದ ಸುತ್ತುವರಿದಿದೆ. ಚಾಲಕ ಹಾಗೂ ಪ್ರಯಾಣಿಕರ ಸೀಟುಗಳನ್ನು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದು.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಹಿಂಭಾಗದ ಸೀಟುಗಳನ್ನು ಸಹ ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದು. ಈ ಎಸ್‌ಯುವಿ ಫೋರ್ ಝೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಈ ಎಸ್‌ಯುವಿಯ ಇಂಟಿರಿಯರ್ ನಾದ್ಯಂತ ಆರೆಂಜ್ ಅಸೆಂಟ್ ಅನ್ನು ನೀಡಲಾಗಿದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಪನೋರಾಮಿಕ್ ಸನ್ ರೂಫ್ ಹೊಂದಿರುವ ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿಯು ಆರೆಂಜ್ ಹಾಗೂ ಮ್ಯಾಟ್ ಬ್ಲಾಕ್ ಬಣ್ಣದಲ್ಲಿ ಆಕರ್ಷಕವಾಗಿ ಕಾಣುತ್ತದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿಯಲ್ಲಿ ಬೃಹತ್ ಗಾತ್ರದ 4.0 ಲೀಟರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 641 ಬಿ‌ಹೆಚ್‌ಪಿ ಪವರ್ ಹಾಗೂ 850 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಎಲ್ಲಾ ನಾಲ್ಕು ವ್ಹೀಲ್'ಗಳಿಗೆ ಪವರ್ ಕಳುಹಿಸುವ ಈ ಎಂಜಿನ್ ಅನ್ನು 8 ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಸ್‌ಯುವಿಯು 3.6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಈ ಎಸ್‌ಯುವಿಯು ಆಕರ್ಷಕವಾದ ವಿನ್ಯಾಸದ ಜೊತೆಗೆ ಹಲವಾರು ಫೀಚರ್ ಗಳನ್ನು ಹೊಂದಿದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ನಾವು ಆರೆಂಜ್ ಹಾಗೂ ಮ್ಯಾಟ್ ಬ್ಲಾಕ್ ಬಣ್ಣದಲ್ಲಿದ್ದ ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿಯನ್ನು ವೀಕ್ಷಿಸಿದೆವು. ಇದರ ಜೊತೆಗೆ ಈ ಎಸ್‌ಯುವಿಯು ಇನ್ನೂ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿ ವಾಕ್ ಅರೌಂಡ್

ಲ್ಯಾಂಬೊರ್ಗಿನಿ ಕಂಪನಿಯು ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಎಸ್‌ಯುವಿಯಲ್ಲಿ ಎಕ್ಸ್ ಟಿರಿಯರ್ ಅಸೆಂಟ್ ಗಳಿಗೆ ಹೊಂದಿಕೊಳ್ಳುವಂತೆ ನಾಲ್ಕು ಹೊಸ ಎಕ್ಸ್ ಟಿರಿಯರ್ ಮ್ಯಾಟ್ ಬಣ್ಣಗಳನ್ನು, ನಾಲ್ಕು ಹೊಸ ಎಕ್ಸ್ ಟಿರಿಯರ್ ಕಲರ್ ಅಸೆಂಟ್ ಗಳನ್ನು ಹಾಗೂ ನಾಲ್ಕು ಇಂಟಿರಿಯರ್ ಟ್ರಿಮ್ ಗಳನ್ನು ನೀಡುತ್ತದೆ.

Most Read Articles

Kannada
English summary
Lamborghini urus graphite capsule walk around design exterior engine and other details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X