ಪ್ರೀಮಿಯಂ ಕಾರುಗಳಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಭಾರತೀಯ ಆಟೋ ಉದ್ಯಮದ ಆಸ್ಕರ್ ಪ್ರಶಸ್ತಿ ಎಂದೇ ಜನಪ್ರಿಯವಾಗಿರುವ ಇಂಡಿಯನ್ ಕಾರ್ ಆಫ್ ಇಯರ್ ಪ್ರತಿಷ್ಠಿತ ಪ್ರಶಸ್ತಿ ಪ್ರಕಟಗೊಂಡಿದ್ದು, ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಹ್ಯುಂಡೈ ಐ20 ಮೊದಲ ಸ್ಥಾನ ಪಡೆದರೆ ಐಷಾರಾಮಿ ಕಾರುಗಳ ವಿಭಾಗದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯು ಈ ವರ್ಷದ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿವೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಹೊಸ ವಾಹನಗಳ ತಾಂತ್ರಿಕ ಅಂಶಗಳು, ಕಾರ್ಯಕ್ಷಮತೆ ಮತ್ತು ಗ್ರಾಹಕರ ವಿಶ್ವಾಸ ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸಿ ಇಂಡಿಯನ್ ಕಾರ್ ಆಫ್ ಇಯರ್ (IMOTY) ಪ್ರಶಸ್ತಿ ಪ್ರಕಟಿಸಲಾಗುತ್ತಿದ್ದು, 16ನೇ ಆವೃತ್ತಿಯ ಐಷಾರಾಮಿ ಕಾರುಗಳ ವಿಭಾಗದಲ್ಲಿ ಲ್ಯಾಂಡ್ ರೋವರ್ ಡಿಫೆಡರ್ ಎಸ್‌ಯುವಿ ಕಾರು ಮಾದರಿಯು ಈ ವರ್ಷದ ಅತ್ಯತ್ತಮ ಕಾರು ಮಾದರಿಯಾಗಿ ಗುರುತಿಸಿಕೊಂಡಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಐಷಾರಾಮಿ ಕಾರುಗಳ ವಿಭಾಗದಲ್ಲಿ ಹಲವು ಪ್ರತಿಸ್ಪರ್ಧಿ ಕಾರು ಮಾದರಿಗಳ ನಡುವಿನ ಪೈಪೋಟಿಯಲ್ಲೂ ವಿಭಿನ್ನವಾಗಿ ಗುರುತಿಗೊಂಡ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಗರಿಷ್ಠ ಅಂಕದೊಂದಿಗೆ ಅತ್ಯುತ್ತಮ ಪ್ರೀಮಿಯಂ ಕಾರು ಮಾದರಿಯಾಗಿ ಗಮನಸೆಳೆಯಿತು.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಭಾರತದಲ್ಲಿ 2005ರಿಂದ ಆರಂಭವಾಗಿರುವ ಇಂಡಿಯನ್ ಕಾರ್ ಆಫ್ ಇಯರ್ ಪ್ರತಿಷ್ಠಿತ ಪ್ರಶಸ್ತಿಗೆ ಹಲವಾರು ಕಾರು ಮಾದರಿಗಳು ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡಿದ್ದು, ಕಾರುಗಳ ವಿಭಾಗದಲ್ಲಿ ಮಧ್ಯಮ, ಐಷಾರಾಮಿ ಮತ್ತು ಪ್ರಸ್ತುತ ವರ್ಷದಿಂದ ಗ್ರಿನ್ ಕಾರ್ ಅವಾರ್ಡ್ ಆರಂಭಿಸಲಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಐಷಾರಾಮಿ ಕಾರುಗಳ ವಿಭಾಗದಲ್ಲಿ ಲ್ಯಾಂಡ್ ರೋವರ್ ನಿರ್ಮಾಣದ ಹಲವು ಕಾರು ಮಾದರಿಗಳು ತಮ್ಮ ಭಿನ್ನವಾದ ಉತ್ಪಾದನಾ ಶೈಲಿಯೊಂದಿಗೆ ಇಂಡಿಯನ್ ಕಾರ್ ಆಫ್ ಇಯರ್ ಪ್ರಶಸ್ತಿಗೆ ಭಾಜನವಾಗಿದ್ದು, ಇದೀಗ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಡಿಫೆಂಡರ್ ಎಸ್‌ಯುವಿಯು ವಿವಿಧ ಹಂತಗಳಲ್ಲಿ ಗ್ರಾಹಕರ ನೆಚ್ಚಿನ ಮಾದರಿಯಾಗುವುದರೊಂದಿಗೆ 2021ರ ಇಂಡಿಯನ್ ಕಾರ್ ಆಫ್ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಐಷಾರಾಮಿ ಸೌಲಭ್ಯಗಳೊಂದಿಗೆ ಆಫ್ ರೋಡ್ ಚಾಲನೆಗಾಗಿಯೇ ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ಲ್ಯಾಂಡ್ ರೋವಲ್ ಡಿಫೆಂಡರ್ ಎಸ್‌ಯುವಿ ಸದ್ಯ ಐಷಾರಾಮಿ ಕಾರುಗಳ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 73.91 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.90.43 ಲಕ್ಷ ಬೆಲೆ ಹೊಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಡಿಫೆಂಡರ್ ಆಫ್-ರೋಡ್ ಕಾರು ಮಾದರಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯತೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಡಿಫೆಂಡರ್ 90(3 ಡೋರ್) ಹಾಗೂ ಡಿಫೆಂಡರ್ 110(5 ಡೋರ್) ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಕಾರು ಮಾದರಿಯು ಡಿ7ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಮೊನೊಕೊಕ್ ಚಾಸಿಸ್ ಅನ್ನು ಹೊಂದಿದೆ. ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಮತ್ತು ಫಸ್ಟ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದ್ದು, ಹೊಸ ಕಾರು ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮಾದರಿಯಲ್ಲಿ ಮಾರಾಟಗೊಳ್ಳುತ್ತಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಈ ಎಸ್‌ಯುವಿಯು ವಿಶಾಲವಾದ ಕ್ಯಾಬಿನ್, ದೊಡ್ಡದಾದ ಪನೋರಾಮಿಕ್ ಸನ್‌ರೂಫ್, ಸೈಡ್ ಆಲ್ಪೈನ್ ಲೈಟ್ ವಿಂಡೋಗಳನ್ನು ಹೊಂದಿದೆ. ಡಿಫೆಂಡರ್ ಎಸ್‌ಯುವಿ ಮೂರು ರೀತಿಯ ಇಂಟಿರಿಯರ್ ಬಣ್ಣಗಳನ್ನು ಹೊಂದಿದೆ. ಪ್ಯಾಂಗಿಯಾ ಗ್ರೀನ್ ಬಣ್ಣವು ಕಪ್ಪಾದ ಇಂಟಿರಿಯರ್ ಹೊಂದಿದ್ದರೆ, ಮತ್ತೊಂದು ಲೈಟ್ ಕ್ರೀಮ್ ಬಣ್ಣದ ಇಂಟಿರಿಯರ್ ಅನ್ನು ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಎಕ್ಸ್‌ಟಿರಿಯರ್ ನಲ್ಲಿ 360 ಡಿಗ್ರಿಯ ಆರು ಕ್ಯಾಮೆರಾ, ಸೆನ್ಸಾರ್ ಗಳಿವೆ. ಐಆರ್ ವಿಎಂ ಹಿಂದೆ ಒಂದು ಕ್ಯಾಮೆರಾ ಇದ್ದು, ಈ ಕ್ಯಾಮರಾ ಆಕ್ಟೀವ್ ಲೇನ್ ಅಸಿಸ್ಟ್ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಆಗಿ ಕಾರ್ಯ ನಿರ್ವಹಿಸಿದರೆ, ಐಆರ್ ವಿಎಂನಲ್ಲಿ (ಸ್ವಿಚ್ ಮೂಲಕ) ವೀಡಿಯೊವನ್ನು ಪ್ರದರ್ಶಿಸುವ ಶಾರ್ಕ್-ಫಿನ್ ಆಂಟೆನಾದಲ್ಲಿಯೂ ಕ್ಯಾಮೆರಾ ನೀಡಲಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಈ ಎಸ್‌ಯುವಿಯು ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ 10 ಇಂಚಿನ ಇನ್ಫೋಟೇನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲೆದರ್ ವ್ರಾಪ್ ಸ್ಟೀಯರಿಂಗ್ ವ್ಹೀಲ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 3 ಡಿ ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಮ್, ಆ ಸ್ಟ್ರೀಮ್ ಕ್ರಾಸಿಂಗ್‌ಗಳಿಗಾಗಿ ವೇಡ್-ಸೆನ್ಸಿಂಗ್ ಹಾಗೂ ಡ್ರೈವರ್ ಕಂಡಿಷನ್ ಮಾನಿಟರಿಂಗ್ ಫೀಚರ್ ಗಳನ್ನು ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್

ಇನ್ನು ಲ್ಯಾಂಡ್ ರೋವರ್ ಡಿಫೆಂಡರ್ ಕಾರು 5,018-ಎಂಎಂ ಉದ್ದ, 2,105-ಎಂಎಂ ಅಗಲ ಮತ್ತು 1,967-ಎಂಎಂ ಎತ್ತರವನ್ನು ಹೊಂದಿದ್ದು, ಈ ಎಸ್‍ಯುವಿಯು 3,022 ಎಂಎಂ ವ್ಹೀಲ್ ಬೇಸ್‌ನೊಂದಿಗೆ 218-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಈ ಮೂಲಕ ಆಫ್ ರೋಡ್ ಕೌಶಲ್ಯತೆಯಲ್ಲಿ ಎದುರಾಳಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ಹೊಸ ಕಾರು ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣ ಒದಗಿಸುವಲ್ಲಿ ಯಶಸ್ವಿಯಾಗಿದೆ.

Most Read Articles

Kannada
English summary
Land Rover Defender Car Gets Award 2021 Premium Car Of The Year. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X