Just In
- 1 hr ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 3 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 15 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Movies
ದೀದಿ ಸಾಮ್ರಾಜ್ಯದಲ್ಲಿ ಕಮಲದ ಕೈ ಹಿಡಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- News
ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; 48 ಲಕ್ಷ ವಾಚ್ ಒಡೆದ ಅಧಿಕಾರಿಗಳು!
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಎಂಡಬ್ಲ್ಯು ಇಂಡಿಯಾ ಅಧಿಕೃತ ವೆಬ್‌ಸೈಟ್‌ನಿಂದ ಕಣ್ಮರೆಯಾದ ಎಂ 5 ಕಾರು
ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಇಂಡಿಯಾ ದೇಶಿಯ ಮಾರುಕಟ್ಟೆಗಾಗಿ ತನ್ನ ಪೋರ್ಟ್ ಫೊಲಿಯೋವನ್ನು ಅಪ್ ಡೇಟ್ ಮಾಡಿದೆ. ಕಂಪನಿಯು ಭಾರತದ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಬಿಎಂಡಬ್ಲ್ಯು ಎಂ 5 ಸೆಡಾನ್ ಕಾರ್ ಅನ್ನು ತೆಗೆದುಹಾಕಿದೆ.

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಇನ್ನು ಮುಂದೆ ಈ ಕಾರನ್ನು ಭಾರತದಲ್ಲಿ ಮಾರಾಟ ಮಾಡುವುದಿಲ್ಲ. ಮಾಹಿತಿಗಳ ಪ್ರಕಾರ ಕಂಪನಿಯು ಬಿಎಂಡಬ್ಲ್ಯು ಎಂ 5 ಫೇಸ್‌ಲಿಫ್ಟ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಬಿಎಂಡಬ್ಲ್ಯು ಎಂ 5 ಫೇಸ್‌ಲಿಫ್ಟ್ ಕಾರ್ ಅನ್ನು ಬಿಡುಗಡೆಗೊಳಿಸುವ ಮುನ್ನ ಮಾರುಕಟ್ಟೆಯಲ್ಲಿರುವ ಬಿಎಂಡಬ್ಲ್ಯು ಎಂ 5 ಕಾರಿನ ಮಾರಾಟವನ್ನು ನಿಲ್ಲಿಸಲಾಗಿದೆ.

2019ರ ಅಕ್ಟೋಬರ್ ತಿಂಗಳಿನಲ್ಲಿ ಬಿಎಂಡಬ್ಲ್ಯು ಎಂ 5 ಫೇಸ್‌ಲಿಫ್ಟ್ ಕಾರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. 2020ರ ಅಕ್ಟೋಬರ್'ನಲ್ಲಿ ಕಂಪನಿಯು ಈ ಕಾರ್ ಅನ್ನು ಪುಣೆಯಲ್ಲಿ ಪ್ರದರ್ಶಿಸಿತು. ಬಿಎಂಡಬ್ಲ್ಯು ಭಾರತದಲ್ಲಿ ಎಂ 5 ಫೇಸ್‌ಲಿಫ್ಟ್ ಕಾರ್ ಅನ್ನು ಕೆಲವು ಸಮಯದಿಂದ ಪರೀಕ್ಷಿಸುತ್ತಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬಿಎಂಡಬ್ಲ್ಯು ಎಂ 5 ಕಾರಿನಲ್ಲಿ 4.4-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್ ವಿ 8 ಎಂಜಿನ್ ಅಳವಡಿಸಲಾಗಿದೆ. ಕಂಪನಿಯು 2021ರ ಬಿಎಂಡಬ್ಲ್ಯು ಎಂ 5 ಫೇಸ್ ಲಿಫ್ಟ್ ಕಾರಿನಲ್ಲಿಯೂ ಅದೇ ಎಂಜಿನ್ ಅಳವಡಿಸಲಿದೆ. ಈ ಎಂಜಿನ್ 592 ಬಿಹೆಚ್‌ಪಿ ಪವರ್ ಹಾಗೂ 750 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ರಿ ಟ್ಯೂನ್ ಮಾಡಲಾಗಿರುವ ಈ ಎಂಜಿನ್ ಅನ್ನು ಬಿಎಂಡಬ್ಲ್ಯು ಎಂ 5 ಕಾಂಪಿಟಿಷನ್ ನಲ್ಲಿಯೂ ಬಳಸಲಾಗುತ್ತದೆ. ಎಂ 5 ಸ್ಪೋರ್ಟ್ಸ್ ಕಾರಿನಲ್ಲಿ ಅಳವಡಿಸಿರುವ ಎಂಜಿನ್ 609 ಬಿಹೆಚ್‌ಪಿ ಪವರ್ ಹಾಗೂ 750 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

2021ರ ಹೊಸ ಬಿಎಂಡಬ್ಲ್ಯು ಎಂ 5 ಕಾರಿನಲ್ಲಿ ಕಂಪನಿಯು ಪರ್ಫಾಮೆನ್ಸ್'ಗೆ ಸಂಬಂಧಿಸಿದಂತೆ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಮೂಲಕ ಕಂಪನಿಯು ಈ ಕಾರನ್ನು ಕೈಗೆಟುಕುವಂತೆ ಮಾಡಲು ಪ್ರಯತ್ನಿಸಿದೆ. ಈ ಪರ್ಫಾಮೆನ್ಸ್ ಸೆಡಾನ್ ಅಂದರೆ ಸೂಪರ್ ಸಲೂನ್ ಕಾರನ್ನು ಸ್ಟ್ಯಾಂಡರ್ಡ್ ಹಾಗೂ ಕಾಂಪಿಟಿಷನ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು.

ಈ ಕಾರಿನ ಆರಂಭಿಕ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.1.04 ಕೋಟಿಗಳಾಗಲಿದೆ. ಈ ಕಾರು ಎಲ್-ಶೇಪಿನ ಅಡಾಪ್ಟಿವ್ ಲೇಸರ್ ಹೆಡ್‌ಲ್ಯಾಂಪ್, ಸಿಂಗಲ್ ಪೀಸ್ ಡಬಲ್-ಸ್ಲೇಟ್ ಕಿಡ್ನಿ ಗ್ರಿಲ್, ಸುಧಾರಿತ ಬಂಪರ್ ಏರೋ ಹಾಗೂ 3 ಡಿ ಎಲ್ಇಡಿ ಟೇಲ್‌ಲೈಟ್‌ಗಳನ್ನು ಹೊಂದಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇದರ ಜೊತೆಗೆ ಈ ಕಾರಿನಲ್ಲಿ ಹೊಸ ಡ್ಯಾಂಪರ್, 20 ಇಂಚಿನ ಅಲಾಯ್ ವ್ಹೀಲ್, ಕಂಪನಿಯ ರೇಂಜ್-ಟಾಪಿಂಗ್ ಪರ್ಫಾರ್ಮೆನ್ಸ್ ಜಿಟಿ, ಹಾಗೂ ಎಂ 8 ಕಾರಿನ ಕೆಲವು ಅಂಶಗಳನ್ನು ಅಳವಡಿಸಲಾಗಿದೆ. ಕಂಪನಿಯು ಈ ಕಾರನ್ನು ಎರಡು ರೆಗ್ಯುಲರ್ ಹಾಗೂ ಮೂರು ಬಿಎಂಡಬ್ಲ್ಯು ಇಂಡಿವಿಜುವಲ್ ಚಾಯ್ಸ್ ಸೇರಿದಂತೆ 5 ಹೊಸ ಬಣ್ಣಗಳಲ್ಲಿ ಮಾರಾಟ ಮಾಡಲಿದೆ.

ಈ ಕಾರಿನ ಇಂಟಿರಿಯರ್'ನಲ್ಲಿರುವ 12.3-ಇಂಚಿನ ಟಚ್-ಸ್ಕ್ರೀನ್ ಇನ್ಫೋಟೇನ್ ಮೆಂಟ್ ಸಿಸ್ಟಂ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇಗಳನ್ನು ಬೆಂಬಲಿಸುತ್ತದೆ. ಬಿಎಂಡಬ್ಲ್ಯು ಎಂ 5 ಕಾರು ಕಂಪನಿಯ ಬಿಎಂಡಬ್ಲ್ಯು ಐಡ್ರೈವ್ 7.0 ಸಾಫ್ಟ್‌ವೇರ್ ಹೊಂದಿರುವ ಲೈವ್ ಕಾಕ್‌ಪಿಟ್ ಹೊಂದಿದೆ.