ಹೊಸ ತಂತ್ರಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ವಾಣಿಜ್ಯ ವಾಹನ ಬಿಡುಗಡೆ

ದೇಶದ ಎರಡನೇ ಅತಿ ದೊಡ್ಡ ವಾಣಿಜ್ಯ ವಾಹನ ಉತ್ಪಾದನಾ ಕಂಪನಿಯಾಗಿರುವ ಮಹೀಂದ್ರಾ ಟ್ರಕ್ ಮತ್ತು ಬಸ್ ವಿಭಾಗ(ಎಂಟಿಬಿ) ಇಂದು ಹೊಸ ಮಹೀಂದ್ರಾ ಫ್ಯೂರಿಯೊ 7(Mahindra Furio 7) ಸರಣಿಯ ವಾಣಿಜ್ಯ ವಾಹನಗಳ ಮಾರಾಟವನ್ನು ಅಧಿಕೃತವಾಗಿ ಆರಂಭಿಸಿತು. ವಾಣಿಜ್ಯ ವಾಹನಗಳ ಬಳಕೆದಾರರ ಪೂರೈಕೆಗಳ ಅಗತ್ಯತೆಯನ್ನು ಆಧರಿಸಿ ಹೊಸ ಶ್ರೇಣಿ ವಾಹನಗಳನ್ನು ವಿನ್ಯಾಸಗೊಳಿಸಲಾಗಿದ್ದು, ಫ್ಯೂರಿಯೊ 7 ವಾಣಿಜ್ಯ ವಾಹನವು ಕಳೆದ ಮೂರು ವರ್ಷಗಳಿಂದ ಮಾರುಕಟ್ಟೆಯಲ್ಲಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಹೊಸ ತಂತ್ರ ಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ಸರಣಿ ವಾಣಿಜ್ಯ ವಾಹನ ಬಿಡುಗಡೆ

ಹೊಸ ತಂತ್ರಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ವಾಣಿಜ್ಯ ವಾಹನಗಳು ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ವಾಣಿಜ್ಯ ವಾಹನದ ಬೆಲೆಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.14.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.16.82 ಲಕ್ಷ ಬೆಲೆ ಹೊಂದಿದೆ.

ಹೊಸ ತಂತ್ರ ಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ಸರಣಿ ವಾಣಿಜ್ಯ ವಾಹನ ಬಿಡುಗಡೆ

* ಮಹೀಂದ್ರಾ ಫ್ಯೂರಿಯೊ 7 (4-ಟೈರ್ ಕಾರ್ಗೋ) 10.5 ಅಡಿ ಎತ್ತರದ ಸೈಡ್ ಡೆಕ್ ವೆರಿಯೆಂಟ್- ಬೆಲೆ ರೂ. 14.79 ಲಕ್ಷ

* ಮಹೀಂದ್ರಾ ಫ್ಯೂರಿಯೊ 7 (4-ಟೈರ್ ಕಾರ್ಗೋ) 14 ಅಡಿ ಎತ್ತರದ ಸೈಡ್ ಡೆಕ್ ವೆರಿಯೆಂಟ್- ಬೆಲೆ ರೂ. 15.32 ಲಕ್ಷ

* ಮಹೀಂದ್ರಾ ಫ್ಯೂರಿಯೊ 7 (6-ಟೈರ್ ಕಾರ್ಗೋ) 10.5 ಅಡಿ ಎತ್ತರದ ಸೈಡ್ ಡೆಕ್ ವೆರಿಯೆಂಟ್- ಬೆಲೆ ರೂ. 15.18 ಲಕ್ಷ

* ಮಹೀಂದ್ರಾ ಫ್ಯೂರಿಯೊ 7 (6-ಟೈರ್ ಕಾರ್ಗೋ) 10.5 ಅಡಿ ಎತ್ತರದ ಸೈಡ್ ಡೆಕ್ ಟಾಪ್ ಎಂಡ್ ವೆರಿಯೆಂಟ್- ರೂ. 16.82 ಲಕ್ಷ

ಹೊಸ ತಂತ್ರ ಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ಸರಣಿ ವಾಣಿಜ್ಯ ವಾಹನ ಬಿಡುಗಡೆ

2019 ರಲ್ಲಿ ಮಹೀಂದ್ರಾ ಕಂಪನಿಯು ಫ್ಯೂರಿಯೊನ ಮೊದಲ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದುವರೆಗೆ ಫ್ಯೂರಿಯೊ ಮಾದರಿಯು 2,000ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟಗೊಂಡಿದ್ದು, ಅಪ್ಲಿಕೇಷನ್ ಆಧರಿಸಿ ಹೊಸ ವಾಣಿಜ್ಯವನ್ನು ವಿವಿಧ ಮಾದರಿಯ ಬಾಡಿ ವಿನ್ಯಾಸಗಳನ್ನು ಕಂಪನಿಯೇ ನಿರ್ಮಾಣ ಮಾಡಿಕೊಡಲಿದೆ.

ಹೊಸ ತಂತ್ರ ಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ಸರಣಿ ವಾಣಿಜ್ಯ ವಾಹನ ಬಿಡುಗಡೆ

ಗ್ರಾಹಕರು ತಮ್ಮ ವಾಣಿಜ್ಯ ಚಟುವಟಿಕೆಗಳಿಗೆ ಅನುಸಾರವಾಗಿ ಹೊಸ ವಾಣಿಜ್ಯ ವಾಹನಗಳ ಬಾಡಿ ವಿನ್ಯಾಸವನ್ನು ಬದಲಾಯಿಸಿಕೊಳ್ಳಬಹುದಾಗಿದ್ದು, ಅತ್ಯುತ್ತಮ ಲೋಡಿಂಗ್ ಸಾಮರ್ಥ್ಯದೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಕಡಿಮೆ ನಿರ್ವಹಣಾ ವೆಚ್ಚ ಹೊಂದಿವೆ.

ಹೊಸ ತಂತ್ರ ಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ಸರಣಿ ವಾಣಿಜ್ಯ ವಾಹನ ಬಿಡುಗಡೆ

ಲಘು ವಾಣಿಜ್ಯ ವಾಹನ ವಿಭಾಗದಲ್ಲಿ ಬಿಡುಗಡೆಯಾಗಿರುವ ಫ್ಯೂರಿಯೊ 7 ವಾಣಿಜ್ಯ ವಾಹನವು ಮಹೀಂದ್ರಾ ಕಂಪನಿಯ 2016ರ ಲಘು ವಾಣಿಜ್ಯ ವಾಹನಗಳ ಅಭಿವೃದ್ದಿ ಯೋಜನೆ ಅಡಿಯಲ್ಲಿ ಬಿಡುಗಡೆಗೊಂಡಿದ್ದು, ಲಘು ವಾಣಿಜ್ಯ ವಾಹನಗಳ ಅಭಿವೃದ್ದಿಗಾಗಿ ಮಹೀಂದ್ರಾ ಕಂಪನಿಯು ಸುಮಾರು ರೂ.650 ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

ಹೊಸ ತಂತ್ರ ಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ಸರಣಿ ವಾಣಿಜ್ಯ ವಾಹನ ಬಿಡುಗಡೆ

ವಾಣಿಜ್ಯ ವಾಹನಗಳ ವಿಭಾಗದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ವಾಹನಗಳಿಗೆ ಪೈಪೋಟಿಯಾಗಿ ಫ್ಯೂರಿಯೊ 7 ಸರಣಿ ಆರಂಭಿಸಿರುವ ಮಹೀಂದ್ರಾ ಕಂಪನಿಯು ಹೊಸ ವಾಣಿಜ್ಯ ವಾಹನದಲ್ಲಿ ಹೊಸ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಿದೆ.

ಹೊಸ ತಂತ್ರ ಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ಸರಣಿ ವಾಣಿಜ್ಯ ವಾಹನ ಬಿಡುಗಡೆ

ಗ್ರಾಹಕರ ಬೇಡಿಕೆ ಅರಿತ ಹೊಸ ವಾಣಿಜ್ಯ ಉತ್ಪನ್ನಗಳಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸಿರುವ ಮಹೀಂದ್ರಾ ಕಂಪನಿಯು ಕಡಿಮೆ ಮಾಲೀಕತ್ವ ವೆಚ್ಚ (TCO), ಅತ್ಯುತ್ತಮ ಖಾತರಿ ಕೊಡುಗೆ, ಕಡಿಮೆ ನಿರ್ವಹಣೆ, ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಹೊಸ ಫ್ಯೂರಿಯೊ 7 ವಾಣಿಜ್ಯ ವಾಹನ ಸರಣಿಗಳು ಅತ್ಯುತ್ತಮ ದರ್ಜೆಯ ಮೈಲೇಜ್‌ ಹೊಂದಿದ್ದು, ಈ ಟ್ರಕ್ ಸೆಗ್ಮೆಂಟ್ ಬೆಸ್ಟ್ ಹೈ ಪೇಲೋಡ್, ಬೆಸ್ಟ್-ಇನ್-ಕ್ಲಾಸ್ ಕ್ಯಾಬಿನ್ ಆರಾಮ, ಉತ್ತಮ ಸುರಕ್ಷತೆ ಮತ್ತು ಅನುಕೂಲತೆ ಹೊಂದಿದೆ.

ಹೊಸ ತಂತ್ರ ಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ಸರಣಿ ವಾಣಿಜ್ಯ ವಾಹನ ಬಿಡುಗಡೆ

ಮಾಹಿತಿಯ ಪ್ರಕಾರ, ಮಹೀಂದ್ರಾ ಫ್ಯೂರಿಯೊ 7 (10.55 ಅಡಿ, 14 ಅಡಿ) ಯ ಮಾದರಿಯ ಒಟ್ಟು ತೂಕವನ್ನು 6,950 ಕೆಜಿಗಳಲ್ಲಿ ಇರಿಸಲಾಗಿದ್ದು, ಮಹೀಂದ್ರಾ ಫ್ಯೂರಿಯೊ 7 ಎಚ್‌ಡಿ (10.55 ಅಡಿ, 14 ಅಡಿ) ಒಟ್ಟು ತೂಕವು 6,950 ಕೆಜಿ ಮತ್ತು ಮಹೀಂದ್ರಾ ಫ್ಯೂರಿಯೊ 7 ಟ್ರಿಪ್ಪರ್ (ಒಟ್ಟು ತೂಕ 2.8 ಕ್ಯೂಬಿಕ್ ಮೀಟರ್) ಅನ್ನು 6,950 ಕೆಜಿಗಳಷ್ಟು ಇರಿಸಲಾಗಿದೆ.

ಹೊಸ ತಂತ್ರ ಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ಸರಣಿ ವಾಣಿಜ್ಯ ವಾಹನ ಬಿಡುಗಡೆ

ಹೊಸ ಟ್ರಕ್‌ನಲ್ಲಿ ಇಂಧನ ಸ್ಮಾರ್ಟ್ ತಂತ್ರಜ್ಞಾನ ಬಳಕೆ ಮಾಡಿರುವುದಾಗಿ ಹೇಳಿಕೊಂಡಿದ್ದು, ಈ ಕಾರಣದಿಂದಾಗಿ ಅದರ ಮೈಲೇಜ್ ಪ್ರಮಾಣವು ಉತ್ತಮವಾಗಿದೆ. ಇದರ ಹೊರತಾಗಿ, ಕಂಪನಿಯು ಈ ಟ್ರಕ್‌ನಲ್ಲಿ ವಿವಿಧ ಮಾದರಿಗಳಿಗೆ ಅನುಗುಣವಾಗಿ 2.5-ಲೀಟರ್ ಮತ್ತು 3.5-ಲೀಟರ್ ಎರಡು ಎಂಜಿನ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿದೆ.

ಹೊಸ ತಂತ್ರ ಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ಸರಣಿ ವಾಣಿಜ್ಯ ವಾಹನ ಬಿಡುಗಡೆ

ಇದರೊಂದಿಗೆ, ಹೊಸ ಟ್ರಕ್‌ನಲ್ಲಿ ಅತ್ಯುತ್ತಮ ಕ್ಲಚ್ ಅನ್ನು ನೀಡಲಾಗಿದ್ದು, ಇದು ದೂರದ ಪ್ರಮಾಣದಲ್ಲೂ ಆರಾಮದಾಯಕವಾಗಿವೆ. ಜೊತೆಗೆ ಹೊಸ ವಾಹನದಲ್ಲಿ ಹೈಡ್ರಾಲಿಕ್ ಲ್ಯಾಶ್ ಅಡ್ಜಸ್ಟರ್, ಆಟೋ ಬೆಲ್ಟ್ ಟೆನ್ಷನರ್, ಕ್ಲಚ್ ಬೂಸ್ಟರ್, 5 ಡಿಗ್ರಿ ಹೆಚ್ಚು ಕೂಲ್ ಕ್ಯಾಬಿನ್, ಸ್ಲೀಪಿಂಗ್ ಪ್ರೊವಿಜನ್, 8 ಪಾಯಿಂಟ್ ಏರ್ ಔಟ್ಲೆಟ್ ವೆಂಟಿಲೇಷನ್ ನೀಡಲಾಗಿದೆ.

ಹೊಸ ತಂತ್ರ ಜ್ಞಾನ ಪ್ರೇರಿತ ಮಹೀಂದ್ರಾ ಫ್ಯೂರಿಯೊ 7 ಸರಣಿ ವಾಣಿಜ್ಯ ವಾಹನ ಬಿಡುಗಡೆ

ಜೊತೆಗೆ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್, ಕ್ಯಾಬಿನ್ ನಲ್ಲಿ ಹೆಚ್ಚಿನ ಹೆಡ್ ರೂಂ, ಡ್ಯುಯಲ್ ಚೇಂಬರ್ ಹೆಡ್‌ಲ್ಯಾಂಪ್ ಮತ್ತು ಅಗಲದಲ್ಲಿ ಹರಡಿರುವ ಫಾಗ್‌ಲ್ಯಾಂಪ್‌ಗಳಿದ್ದು, ಟೆಲಿಮ್ಯಾಟಿಕ್ಸ್ ಸಲ್ಯೂಷನ್‌ಗಾಗಿ ಕಂಪನಿಯು(ಮಹೀಂದ್ರಾ ಐಮ್ಯಾಕ್ಸ್) Mahindra iMAXX ಕಂಟ್ರೊಲ್ ಯುನಿಟ್ ಜೋಡಣೆ ಮಾಡಿದೆ.

Most Read Articles

Kannada
English summary
Mahindra furio 7 lcv launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X