Just In
Don't Miss!
- Lifestyle
ಭಾನುವಾರದ ದಿನ ಭವಿಷ್ಯ: ಈ ದಿನ ನಿಮ್ಮ ರಾಶಿಫಲ ಹೇಗಿದೆ ನೋಡಿ
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಏಪ್ರಿಲ್ ಅವಧಿಯಲ್ಲಿ ವಿವಿಧ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಿಸಿದ ಮಹೀಂದ್ರಾ
2021ರ ಮಾರ್ಚ್ ಅವಧಿಯಲ್ಲಿ 16,700 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ವಾರ್ಷಿಕ ಬೆಳವಣಿಗೆಯಲ್ಲಿ ಶೇ.427 ರಷ್ಟು ಮುನ್ನಡೆ ಕಾಯ್ದುಕೊಂಡಿರುವ ಮಹೀಂದ್ರಾ ಕಂಪನಿಯು ವಿವಿಧ ಆಕರ್ಷಕ ಆಫರ್‌ಗಳೊಂದಿಗೆ ಏಪ್ರಿಲ್ ಅವಧಿಯಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕೋವಿಡ್ ಪರಿಣಾಮ ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಮಹೀಂದ್ರಾ ಕಂಪನಿಯು ಕಳೆದ ಕೆಲ ತಿಂಗಳಿನಿಂದ ಹೊಸ ಕಾರುಗಳ ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಹೊಸ ಆಫರ್‌ಗಳ ಮೂಲಕ ಕಾರು ಮಾರಾಟದಲ್ಲಿ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಹೀಗಾಗಿ ಮುಂಬರುವ ಯುಗಾದಿ ಸಂಭ್ರಮಕ್ಕಾಗಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದ ಕಂಪನಿಯು ಹೊಸ ಆಫರ್‌ಗಳನ್ನು ಏಪ್ರಿಲ್ ಪೂರ್ತಿ ಲಭ್ಯವಿರಲಿವೆ. ಹಾಗಾದ್ರೆ ಯಾವ ಕಾರಿನ ಖರೀದಿ ಮೇಲೆ ಎಷ್ಟು ಆಫರ್ ಲಭ್ಯವಿದೆ ಎಂಬುವುದನ್ನು ಇಲ್ಲಿ ತಿಳಿಯೋಣ.

ಕೆಯುವಿ100 ನೆಕ್ಸ್ಟ್
ಮಹೀಂದ್ರಾ ಕಂಪನಿಯು ಕೆಯುವಿ100 ನೆಕ್ಸ್ಟ್ ಕಾರು ಖರೀದಿಯ ಮೇಲೆ ಗರಿಷ್ಠ ರೂ. 38,055 ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದ್ದು, ಇನ್ನುಳಿದಂತೆ ರೂ.30 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ರೂ.3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.

ಬೊಲೆರೊ
ಎಸ್‌ಯುವಿ ಮಹೀಂದ್ರಾ ಜನಪ್ರಿಯ ಬೊಲೆರೊ ಕಾರು ಖರೀದಿ ಮೇಲೆ ಒಟ್ಟು ರೂ. 17,500 ಸಾವಿರ ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್‌ಗಳಲ್ಲಿ 3,500 ಕ್ಯಾಶ್ ಡಿಸ್ಕೌಂಟ್ ಜೊತೆ ವಿಸ್ತರಿತ ವಾರಂಟಿ, ಎಕ್ಸ್‌ಚೆಂಜ್ ಆಫರ್, ಕಾರ್ಪೊರೆಟ್ ಬೊನಸ್ ಸಹ ಲಭ್ಯವಿರಲಿವೆ.

ಎಕ್ಸ್‌ಯುವಿ300
ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಎಕ್ಸ್‌ಯುವಿ300 ಕಾರು ಖರೀದಿಯ ಮೇಲೆ ಗರಿಷ್ಠ ರೂ. 39 ಸಾವಿರ ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್‌ನಲ್ಲಿ ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿರುವುದಲ್ಲದೆ ಉಚಿತ ಆಕ್ಸೆಸರಿಸ್ ಪ್ಯಾಕೇಜ್ ದೊರೆಯಲಿದೆ. ಕ್ಯಾಶ್ ಆಫರ್‌ಗಳಲ್ಲಿ ರೂ.5 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ.5 ಸಾವಿರ ಮೌಲ್ಯದ ಆಕ್ಸೆಸರಿಸ್ ನೀಡಲಾಗುತ್ತಿದೆ.

ಸ್ಕಾರ್ಪಿಯೋ ಎಸ್‌ಯುವಿ
ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಕಾರು ಖರೀದಿಯ ಮೇಲೆ ರೂ.17 ಸಾವಿರ ಕ್ಯಾಶ್ ಡಿಸ್ಕೌಂಟ್‍ನೊಂದಿಗೆ ಒಟ್ಟು ರೂ.46 ಸಾವಿರ ಮೌಲ್ಯದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳು ಎಕ್ಸ್‌ಚೆಂಜ್ ಬೋನಸ್, ಕ್ಯಾಶ್ ಡಿಸ್ಕೌಂಟ್ ಸೇರಿ ವಿವಿಧ ಆಫರ್ ನೀಡುವುದರ ಜೊತೆಗೆ ಉಚಿತ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.

ಎಕ್ಸ್‌ಯುವಿ500 ಎಸ್‌ಯುವಿ
ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ500 ಕಾರು ಖರೀದಿಯ ಮೇಲೆ ರೂ.80,800 ಡಿಸ್ಕೌಂಟ್ ನೀಡುತ್ತಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಡಿಸ್ಕೌಂಟ್ ಲಭ್ಯವಿದೆ. ಹೊಸ ಆಫರ್‌ಗಳಲ್ಲಿ ರೂ. 36,800 ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಮರಾಜೋ ಎಂಪಿವಿ
ಮರಾಜೋ ಎಂಪಿವಿ ಕಾರು ಖರೀದಿಯ ಮೇಲೆ ಮಹೀಂದ್ರಾ ಕಂಪನಿಯು ರೂ. 4,200 ಸಾವಿರ ತನಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ರೂ. 20 ಸಾವಿರ ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಅಲ್ಟುರಾಸ್ ಜಿ4 ಎಸ್‌ಯುವಿ
ಮಹೀಂದ್ರಾ ಕಂಪನಿ ತನ್ನ ಹೈ ಎಂಡ್ ಎಸ್‌ಯುವಿ ಕಾರು ಮಾದರಿಯಾದ ಅಲ್ಟುರಾಸ್ ಜಿ4 ಕಾರು ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಹೊಸ ಕಾರು ಖರೀದಿಸುವ ಗ್ರಾಹಕರಿಗೆ ರೂ. 3 ಲಕ್ಷದಷ್ಟು ಆಫರ್ ನೀಡುತ್ತಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಆಫರ್‌ನಲ್ಲಿ 2.20 ಲಕ್ಷ ಕ್ಯಾಶ್ ಡಿಸ್ಕೌಂಟ್, ರೂ. 50 ಸಾವಿರ ಎಕ್ಸ್‌ಚೆಂಜ್ ಆಫರ್, ರೂ.10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಸೇರಿದಂತೆ ರೂ.20 ಸಾವಿರದಷ್ಟು ಆಕ್ಸೆಸರಿಸ್ ಕೊಡುಗೆಗಳನ್ನು ನೀಡಲಾಗುತ್ತಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.