ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಮಹೀಂದ್ರಾ ಫರ್ಮ್ ಎಕ್ವಿಪ್ಮೆಂಟ್ ತನ್ನ ಏಪ್ರಿಲ್ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಷೇರು ಮಾರುಕಟ್ಟೆಗೆ ಕಳುಹಿಸಲಾದ ಪಟ್ಟಿಯಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಒಟ್ಟು 27,523 ಯುನಿಟ್ ಟ್ರಾಕ್ಟರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಕಂಪನಿಯು ಮಾರ್ಚ್ ತಿಂಗಳಿನಲ್ಲಿ ಒಟ್ಟು 30,970 ಯುನಿಟ್ ಟ್ರಾಕ್ಟರುಗಳನ್ನು ಮಾರಾಟ ಮಾಡಿತ್ತು. ಮಾರ್ಚ್ ತಿಂಗಳಿಗೆ ಹೋಲಿಸಿದರೆ ಮಹೀಂದ್ರಾ ಟ್ರಾಕ್ಟರುಗಳ ಮಾರಾಟ ಪ್ರಮಾಣವು ಏಪ್ರಿಲ್ ತಿಂಗಳಿನಲ್ಲಿ 11.13%ನಷ್ಟು ಕುಸಿದಿದೆ. 2020ರ ಏಪ್ರಿಲ್‌ ತಿಂಗಳಿನಲ್ಲಿ ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಒಂದೇ ಒಂದು ಯುನಿಟ್ ಟ್ರಾಕ್ಟರ್ ಕೂಡ ಮಾರಾಟವಾಗಿರಲಿಲ್ಲ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಮಹೀಂದ್ರಾ ಕಂಪನಿಯು ಏಪ್ರಿಲ್ ತಿಂಗಳಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 26,130 ಯುನಿಟ್ ಟ್ರಾಕ್ಟರುಗಳನ್ನು ಮಾರಾಟ ಮಾಡಿದೆ. ಮಾರ್ಚ್ ತಿಂಗಳಿನಲ್ಲಿ ಕಂಪನಿಯು ಒಟ್ಟು 29,817 ಯುನಿಟ್ ಟ್ರಾಕ್ಟರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಟ್ರಾಕ್ಟರ್ ಮಾರಾಟ ಪ್ರಮಾಣವು ಮಾರ್ಚ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಏಪ್ರಿಲ್ ತಿಂಗಳಿನಲ್ಲಿ 12.36%ನಷ್ಟು ಕಡಿಮೆಯಾಗಿದೆ. ಕರೋನಾ ಎರಡನೇ ಅಲೆಯಿಂದಾಗಿ ಟ್ರಾಕ್ಟರುಗಳ ಮಾರಾಟವು ಕುಸಿದಿದೆ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಭಾರತದಲ್ಲಿ ಮಹೀಂದ್ರಾ ಟ್ರಾಕ್ಟರುಗಳ ಮಾರಾಟ ಪ್ರಮಾಣವು ಕಡಿಮೆಯಾಗಿದ್ದರೂ, ಭಾರತದ ಹೊರಗೆ ಕಂಪನಿಯ ಟ್ರಾಕ್ಟರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಕಂಪನಿಯು 1,393 ಯುನಿಟ್ ಟ್ರಾಕ್ಟರುಗಳನ್ನು ರಫ್ತು ಮಾಡಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಕಂಪನಿಯು ಮಾರ್ಚ್ ತಿಂಗಳಿನಲ್ಲಿ ಒಟ್ಟು 1,153 ಯುನಿಟ್ ಟ್ರಾಕ್ಟರ್'ಗಳನ್ನು ರಫ್ತು ಮಾಡಿತ್ತು. ಅಂದರೆ ಮಾರ್ಚ್ ತಿಂಗಳಿಗೆ ಹೋಲಿಸಿದರೆ ಕಂಪನಿಯ ರಫ್ತು ಪ್ರಮಾಣವು ಏಪ್ರಿಲ್ ತಿಂಗಳಿನಲ್ಲಿ 20.81%ನಷ್ಟು ಹೆಚ್ಚಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಏಪ್ರಿಲ್ ತಿಂಗಳಿನಲ್ಲಿ ಸೋನಾಲಿಕಾ ಕಂಪನಿಯು ಒಟ್ಟು 9,130 ಯುನಿಟ್ ​​ಟ್ರಾಕ್ಟರುಗಳನ್ನು ಮಾರಾಟ ಮಾಡಿದೆ. ಕಂಪನಿಯು ಮಾರ್ಚ್ ತಿಂಗಳಿನಲ್ಲಿ ಒಟ್ಟು 13,093 ಯುನಿಟ್ ಟ್ರಾಕ್ಟರುಗಳನ್ನು ಮಾರಾಟ ಮಾಡಿತ್ತು.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್ ತಿಂಗಳಿನಲ್ಲಿ ಸೋನಾಲಿಕಾ ಟ್ರಾಕ್ಟರುಗಳ ಮಾರಾಟ ಪ್ರಮಾಣವು 30.26%ನಷ್ಟು ಕುಸಿದಿದೆ. 2020ರ ಏಪ್ರಿಲ್ ತಿಂಗಳಿನಲ್ಲಿ ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾಗಿದ್ದರಿಂದ ಸೋನಾಲಿಕಾ ಕಂಪನಿಯು ಸಹ ಒಂದೇ ಒಂದು ಟ್ರಾಕ್ಟರ್ ಮಾರಾಟ ಮಾಡಿರಲಿಲ್ಲ.

ಏಪ್ರಿಲ್ ತಿಂಗಳಿನಲ್ಲಿ ಕುಸಿತ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಈ ವರ್ಷದ ಏಪ್ರಿಲ್‌ ತಿಂಗಳಿನಲ್ಲಿ ಸೋನಾಲಿಕಾ ಕಂಪನಿಯ ಟ್ರಾಕ್ಟರುಗಳ ಮಾರಾಟ ಪ್ರಮಾಣವು ಕುಸಿಯಲು ಕರೋನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವುದೇ ಪ್ರಮುಖ ಕಾರಣವಾಗಿದೆ.

Most Read Articles

Kannada
English summary
Mahindra tractor sales declines in April 2021. Read in Kannada.
Story first published: Saturday, May 8, 2021, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X