Just In
- 1 hr ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 1 hr ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 2 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 3 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Sports
ಐಪಿಎಲ್ 2021: ಕಣಕ್ಕಿಳಿಯಲು ಪಡಿಕ್ಕಲ್ ಸಜ್ಜು, ಆರ್ಸಿಬಿ ಸಂಭಾವ್ಯ ತಂಡ ಹೀಗಿದೆ
- Movies
'ನೀವು ಬಸ್ ಡ್ರೈವರ್ ಮಗನೇ, ನಮ್ಮ ಮುಷ್ಕರ ಬೆಂಬಲಿಸಿ': ಯಶ್ಗೆ ಪತ್ರ ಬರೆದ ಸಾರಿಗೆ ನೌಕರರು?
- News
ಸರ್ಕಾರ v/s ಸಾರಿಗೆ ನೌಕರರು: 8ನೇ ದಿನಕ್ಕೆ ಕಾಲಿಟ್ಟ ಮುಷ್ಕರ
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೆಕ್ಸಾ ಕಾರುಗಳ ಖರೀದಿ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಿಸಿದ ಮಾರುತಿ ಸುಜುಕಿ
ಹೊಸ ಕಾರುಗಳ ಮಾರಾಟ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಮಾರುತಿ ಸುಜುಕಿ ಕಂಪನಿಯು 2021ರ ಏಪ್ರಿಲ್ ತಿಂಗಳಿನಲ್ಲಿ ಹೊಸ ಗ್ರಾಹಕರನ್ನು ಸೆಳೆಯಲು ತನ್ನ ವಿವಿಧ ಕಾರುಗಳ ಮೇಲೆ ಹಲವಾರು ಕೊಡುಗೆ ಹಾಗೂ ನಗದು ರಿಯಾಯಿತಿಗಳನ್ನು ನೀಡುತ್ತಿದ್ದು, ನೆಕ್ಸಾ ಕಾರು ಮಾದರಿಗಳ ವಿಶೇಷ ರಿಯಾಯ್ತಿ ಘೋಷಣೆ ಮಾಡಿದೆ.

ಮಾರುತಿ ಸುಜುಕಿ ಕಂಪನಿಯು ಹೊಸ ಕಾರುಗಳ ಬೆಲೆ ಏರಿಕೆಯ ನಡುವೆಯೂ ಗ್ರಾಹಕರಿಗೆ ಹೊಸ ಕೊಡುಗೆ ಹಾಗೂ ನಗದು ರಿಯಾಯಿತಿಗಳನ್ನು ಘೋಷಣೆ ಮಾಡಿದ್ದು, ಮಾರುತಿ ಸುಜುಕಿಯ ನೆಕ್ಸಾ ಪ್ಲಾಟ್‌ಫಾರಂ ಅಡಿಯಲ್ಲಿರುವ ಕಾರು ಮಾದರಿಗಳ ಮೇಲೆ ರಿಯಾಯಿತಿ ಹಾಗೂ ಕೊಡುಗೆಗಳ ಬಗೆಗೆ ಈ ಲೇಖನದಲ್ಲಿ ತಿಳಿಯೋಣ. ಹೊಸ ಆಫರ್‌ಗಳಲ್ಲಿ ನಗದು ರಿಯಾಯ್ತಿ, ವಿನಿಯಮ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಯುಗಾದಿ ಸಂಭ್ರಮಕ್ಕಾಗಿ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಉತ್ತಮ ಆಫರ್‌ಗಳು ಲಭ್ಯವಾಗಲಿವೆ.

ಕಾರು ಮಾರಾಟಕ್ಕಾಗಿ ನೆಕ್ಸಾ ಮತ್ತು ಅರೆನಾ ಪ್ಲಾಟ್‌ಫಾರ್ಮ್ ಹೊಂದಿರುವ ಮಾರುತಿ ಸುಜುಕಿ ಕಂಪನಿಯು ಸಾಮಾನ್ಯ ಕಾರು ಮಾದರಿಗಳನ್ನು ಅರೆನಾದಲ್ಲಿ ಮತ್ತು ಪ್ರೀಮಿಯಂ ಕಾರುಗಳನ್ನು ನೆಕ್ಸಾದಲ್ಲಿ ಮಾರಾಟ ಮಾಡುತ್ತಿದ್ದು, ಪ್ರತ್ಯೇಕ ಮಾರಾಟ ಸೌಲಭ್ಯದೊಂದಿಗೆ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ನೆಕ್ಸಾ ಕಾರು ಮಾದರಿಗಳಾದ ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್ಎಲ್6 ಮತ್ತು ಎಸ್-ಕ್ರಾಸ್ ಕಾರುಗಳ ಮೇಲೆ ವಿವಿಧ ಆಫರ್‌ಗಳು ಲಭ್ಯವಿದ್ದು, ಎಸ್-ಕ್ರಾಸ್ ಕಾರಿನ ಹೈ ಎಂಡ್ ಮಾದರಿಯ ಮೇಲೆ ಗರಿಷ್ಠ ಆಫರ್ ನೀಡಲಾಗುತ್ತಿದೆ.

ಹೊಸ ಆಫರ್‌ಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಕಾರಿನ ಆಯ್ದ ವೆರಿಯೆಂಟ್ ಖರೀದಿ ಮೇಲೆ ರೂ. 15 ಸಾವಿರದಿಂದ ರೂ. 25 ಸಾವಿರ ತನಕ ನಗದು ರಿಯಾಯ್ತಿ ನೀಡುತ್ತಿದ್ದು, ಎಲ್ಲಾ ವೆರಿಯೆಂಟ್‌ಗಳಿಗೂ ಅನ್ವಯವಾಗುವಂತೆ ರೂ. 15 ಸಾವಿರ ವಿನಿಮಯ ಬೋನಸ್ ಮತ್ತು ರೂ. 3 ಸಾವಿರ ಕಾರ್ಪೊರೇಟ್ ರಿಯಾಯಿತಿಯನ್ನು ಘೋಷಿಸಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಜನಪ್ರಿಯ ಮಾದರಿಯಾದ ಬಲೆನೊ ಸಿಗ್ಮಾ ವೆರಿಯೆಂಟ್ ಖರೀದಿಯ ಮೇಲೆ ರೂ. 20 ಸಾವಿರ ನಗದು ರಿಯಾಯಿತಿ ಮತ್ತು ಡೆಲ್ಟಾ ವೆರಿಯೆಂಟ್‌ಗೆ ರೂ. 15 ಸಾವಿರ ನಗದು ರಿಯಾಯ್ತಿ ಘೋಷಣೆ ಮಾಡಲಾಗಿದೆ.

ಇದಲ್ಲದೆ ಬಲೆನೊ ಕಾರು ಖರೀದಿದಾರರಿಗೆ ರೂ. 15 ಸಾವಿರ ವಿನಿಮಯ ಬೋನಸ್ ಮತ್ತು ರೂ. 3 ಸಾವಿರ ಕಾರ್ಪೊರೇಟ್ ರಿಯಾಯಿತಿಯನ್ನು ಘೋಷಿಸಿದ್ದು, ಆಯ್ದ ಡೀಲರ್ಸ್‌ಗಳಲ್ಲಿ ಇನ್ನು ಹೆಚ್ಚಿನ ಮಟ್ಟದ ಕೊಡುಗೆಗಳನ್ನು ಪಡೆದುಕೊಳ್ಳಬಹುದು.
MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಇನ್ನು ಎಕ್ಸ್‌ಎಲ್ 6 ಎಂಪಿವಿ ಕಾರು ಖರೀದಿ ಮೇಲೆ ಯಾವುದೇ ನಗದು ಕೊಡುಗೆಗಗಳು ಲಭ್ಯವಿಲ್ಲವಾದರೂ ಕಂಪನಿಯು ರೂ. 4 ಸಾವಿರ ಕಾರ್ಪೊರೇಟ್ ರಿಯಾಯಿತಿ ಮಾತ್ರ ಘೋಷಣೆ ಮಾಡಿದ್ದು, ಎಕ್ಸ್‌ಚೆಂಜ್ ಆಫರ್ ಕೂಡಾ ನೀಡುತ್ತಿಲ್ಲ.

ಮಾರುತಿ ಸುಜುಕಿ ಕಂಪನಿಯು ಅಗ್ರ ಶ್ರೇಣಿಯ ಮತ್ತೊಂದು ಕಾರು ಮಾದರಿಯಾದ ಎಸ್-ಕ್ರಾಸ್ ಮೇಲೆ ರೂ. 15 ಸಾವಿರ ನಗದು ರಿಯಾಯಿತಿ ಹಾಗೂ ರೂ. 15 ಸಾವಿರ ವಿನಿಮಯ ಬೋನಸ್ ಮತ್ತು ರೂ. 5 ಸಾವಿರ ಕಾರ್ಪೊರೇಟ್ ರಿಯಾಯಿತಿಯನ್ನು ಘೋಷಿಸಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಇದರ ಜೊತೆಗೆ ಎಸ್-ಕ್ರಾಸ್ ಕಾರು ಖರೀದಿಯ ಮೇಲೆ ಕಂಪನಿಯು ಸಿಗ್ಮಾ ಪ್ಲಸ್ ಆವೃತ್ತಿಗಾಗಿ ಮಾತ್ರವೇ ರೂ. 37 ಸಾವಿರ ಮೌಲ್ಯದ ಸ್ಪೆಷಲ್ ಆಕ್ಸೆಸರಿಸ್ ಕಿಟ್ ನೀಡುತ್ತಿದ್ದು, ಗ್ರಾಹಕರು ಅರೆನಾದಲ್ಲೂ ಕೂಡಾ ಹೊಸ ಕಾರುಗಳ ಮೇಲೆ ವಿವಿಧ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.