2ನೇ ಬ್ಯಾಚ್‌ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಮರ್ಸಿಡಿಸ್ ಬೆಂಝ್

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಐಷಾರಾಮಿ ವಾಹನ ತಯಾರಿಕಾ ಕಂಪನಿಯಾದ ಮರ್ಸಿಡಿಸ್ ಬೆಂಝ್ ಕೂಡಾ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮಾರಾಟ ಬೇಡಿಕೆ ಪಡೆದುಕೊಂಡಿದೆ.

2ನೇ ಬ್ಯಾಚ್‌ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಮರ್ಸಿಡಿಸ್ ಬೆಂಝ್

2020ರ ಅಕ್ಟೋಬರ್‌ನಲ್ಲಿ ದೇಶಿಯ ಮಾರುಕಟ್ಟೆಗೆ ಪ್ರವೇಶಿಸಿದ್ದ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯುನ್ನು ಮರ್ಸಿಡಿಸ್ ಕಂಪನಿಯು ಇದುವರೆಗೆ 50 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದುಗೊಳ್ಳುವ ಹೊಸ ಎಲೆಕ್ಟ್ರಿಕ್ ಕಾರು ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಮೊದಲ ಬ್ಯಾಚ್‌ನಲ್ಲಿದ್ದ 50 ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿರುವ ಮರ್ಸಿಡಿಸ್ ಕಂಪನಿಯು ಇದೀಗ 2ನೇ ಬ್ಯಾಚ್ ಆಮದು ಮಾಡಿಕೊಂಡು ಸೆಪ್ಟೆಂಬರ್‌ನಿಂದ ವಿತರಣೆಗೆ ಸಿದ್ದವಾಗಿದ್ದು, 2ನೇ ಬ್ಯಾಚ್ ವಿತರಣೆಗೂ ಮುನ್ನ ಹೊಸ ಕಾರಿನ ಬೆಲೆ ಏರಿಕೆ ಮಾಡಿದೆ.

2ನೇ ಬ್ಯಾಚ್‌ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಮರ್ಸಿಡಿಸ್ ಬೆಂಝ್

ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಯ ಸಂದರ್ಭದಲ್ಲಿ ನಿಗದಿತ 50 ಯುನಿಟ್ ಮಾರಾಟ ಪೂರ್ಣಗೊಂಡ ನಂತರ ಬೆಲೆ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ದ ಮರ್ಸಿಡಿಸ್ ಬೆಂಝ್ ಕಂಪನಿಯು ಇದೀಗ ಬೆಲೆ ಏರಿಕೆ ಮಾಡಿದ್ದು, ಹೊಸ ಕಾರಿನ ಬೆಲೆಯು ಹೆಚ್ಚುವರಿಯಾಗಿ ರೂ. 4.70 ಲಕ್ಷ ಬೆಲೆ ಪಡೆದುಕೊಂಡಿದೆ.

2ನೇ ಬ್ಯಾಚ್‌ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಮರ್ಸಿಡಿಸ್ ಬೆಂಝ್

ಆರಂಭದಲ್ಲಿ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯನ್ನು ರೂ. 99.30 ಲಕ್ಷಕ್ಕೆ ಬಿಡುಗಡೆ ಮಾಡಿದ್ದ ಮರ್ಸಿಡಿಸ್ ಬೆಂಝ್ ಕಂಪನಿಯು ಇದೀಗ ಹೊಸ ಕಾರಿನ ಬೆಲೆಯನ್ನು ರೂ. 1.04 ಕೋಟಿಗೆ ನಿಗದಿ ಮಾಡಿದ್ದು, 2ನೇ ಬ್ಯಾಚ್‌ನಲ್ಲಿ ಆಮದುಗೊಳ್ಳುವ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಪ್ರಮುಖ ತಂತ್ರಜ್ಞಾನಗಳ ಬದಲಾವಣೆಗಳೇ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

2ನೇ ಬ್ಯಾಚ್‌ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯಾಗಿ ಗುರುತಿಸಿಕೊಂಡಿರುವ ಇಕ್ಯೂಸಿ 400 ಆವೃತ್ತಿಯ ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿಯು ಒಂದು ಬಾರಿ ಚಾರ್ಜ್ ಮಾಡಿದಲ್ಲಿ ಗರಿಷ್ಠ 470 ಕಿ.ಮೀ ಮೈಲೇಜ್ ಹಿಂದಿರುಗಿಸುವ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತದೆ.

2ನೇ ಬ್ಯಾಚ್‌ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಮರ್ಸಿಡಿಸ್ ಬೆಂಝ್

ಇಕ್ಯೂಸಿಯಲ್ಲಿನ ಫುಲ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಮಾದರಿಯು 405-ಬಿಹೆಚ್‌ಪಿ ಪವರ್ ಮತ್ತು 765-ಎನ್ಎ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 5.1 ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗದಲ್ಲಿ ಕ್ರಮಿಸುತ್ತದೆ.

2ನೇ ಬ್ಯಾಚ್‌ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಮರ್ಸಿಡಿಸ್ ಬೆಂಝ್

ಜೊತೆಗೆ 4x4 ಡ್ರೈವ್ ಸಿಸ್ಟಂ ಹೊಂದಿರುವ ಹೊಸ ಕಾರು ಮಾದರಿಯು ಇಕೋ, ಕಂಫರ್ಟ್, ಡೈನಾಮಿಕ್ ಮತ್ತು ಇಂಡಿವಿಚ್ಯೂಲ್ ಎಂಬ ಡ್ರೈವಿಂಗ್ ಮೋಡ್ ಗಳನ್ನು ಒಳಗೊಂಡಿದ್ದು, ಚಾರ್ಜಿಂಗ್ ಸೌಲಭ್ಯಕ್ಕಾಗಿ ಇಕ್ಯೂಸಿ 400 ಮಲ್ಟಿಪಲ್ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ.

2ನೇ ಬ್ಯಾಚ್‌ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಮರ್ಸಿಡಿಸ್ ಬೆಂಝ್

ವಾಲ್ ಸಾಕೆಟ್ ಚಾರ್ಜರ್ ಮಾಡಬಹುದಾದರೆ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 20 ಗಂಟೆಗಳನ್ನು ತೆಗೆದುಕೊಳ್ಳಲಿದ್ದು, ಎಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದಲ್ಲಿ ಕನಿಷ್ಠ 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ ಹೈ ಸ್ಪೀಡ್ ಚಾರ್ಜರ್ ಮೂಲಕ ಚಾರ್ಜ್ ಮಾಡಿದ್ದಲ್ಲಿ ಕನಿಷ್ಠ 90 ನಿಮಿಷ ತೆಗೆದುಕೊಳ್ಳಲಿದ್ದು, ಹೈಸ್ಪೀಡ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಹೆವಿ ಡ್ಯೂಟಿ ಲೈನ್ಸ್ ಪಡೆಯಬೇಕಾಗುತ್ತದೆ.

2ನೇ ಬ್ಯಾಚ್‌ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಮರ್ಸಿಡಿಸ್ ಬೆಂಝ್

ಈ ಮೂಲಕ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳಲ್ಲೇ ಹಲವಾರು ಐಷಾರಾಮಿ ಫೀಚರ್ಸ್ ಹೊಂದಿರುವ ಹೊಸ ಕಾರು ವಿದೇಶಿ ಮಾರುಕಟ್ಟೆಗಳಲ್ಲಿ 2021ರ ಆವೃತ್ತಿಯನ್ನು ನವೀಕರಿಸಲಾಗಿದ್ದು, ಭಾರತಕ್ಕೆ 2ನೇ ಬ್ಯಾಚ್ ಆಮದು ಮಾಡಿಕೊಳ್ಳಲಿರುವ ಮರ್ಸಿಡಿಸ್ ಬೆಂಝ್ ಕಂಪನಿಯು 2021ರ ಮಾದರಿಯನ್ನು ಮಾರಾಟ ಮಾಡಲಿದೆ.

2ನೇ ಬ್ಯಾಚ್‌ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಮರ್ಸಿಡಿಸ್ ಬೆಂಝ್

ಯುರೋಪ್ ಮಾರುಕಟ್ಟೆಗಳಲ್ಲಿ ಸದ್ಯ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಹೊರಹೊಮ್ಮಿರುವ ಇಕ್ಯೂಸಿ 400 ಕಾರು ಮಾದರಿಯು ಆಡಿ ಇ-ಟ್ರಾನ್ ಮಾದರಿಯೊಂದಿಗೆ ಉತ್ತಮ ಪೈಪೋಟಿ ಹೊಂದಿದ್ದು, ದುಬಾರಿ ಬೆಲೆ ನಡುವೆಯೂ ಕಳೆದ ವರ್ಷ ಪ್ರಮುಖ ಪೆಟ್ರೋಲ್ ಕಾರುಗಳ ಮಾರಾಟ ಸಂಖ್ಯೆಯನ್ನೇ ಹಿಂದಿಕ್ಕಿ ಗ್ರಾಹಕರನ್ನು ಸೆಳೆಯುತ್ತಿದೆ.

Most Read Articles

Kannada
English summary
Mercedes-Benz EQC Price Increase By Rs 4.7 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X