ಕೋವಿಡ್ ಅಬ್ಬರದ ನಡುವೆಯೂ ಐಷಾರಾಮಿ ಕಾರು ಮಾರಾಟದಲ್ಲಿ ಮರ್ಸಿಡಿಸ್ ಬೆಂಝ್ ಹೊಸ ದಾಖಲೆ

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಸದ್ಯ ಮುಂಚೂಣಿ ಕಾರು ಉತ್ಪದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಕಂಪನಿಯು ಕೋವಿಡ್ ಅಬ್ಬರದ ನಡುವೆಯೂ ಭರ್ಜರಿ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಕಂಪನಿಯು 2021ರ ಮೊದಲಾರ್ಧದಲ್ಲಿ 4857 ಕಾರುಗಳನ್ನು ಮಾರಾಟ ಮಾಡುವ ಮೂಲಕ ಕಳೆದ ವರ್ಷದ ಮೊದಲಾರ್ಧದ ಕಾರು ಮಾರಾಟ ಪ್ರಮಾಣಕ್ಕಿಂತಲೂ ಶೇ. 65ರಷ್ಟು ಬೆಳವಣಿಗೆ ಕಂಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು ಕೇವಲ 2948 ಯುನಿಟ್ ಮಾತ್ರ ಮಾರಾಟ ಮಾಡಿತ್ತು.

ಮರ್ಸಿಡಿಸ್ ಬೆಂಝ್

ಕೋವಿಡ್ ಅಬ್ಬರದಿಂದಾಗಿ ಮಧ್ಯಂತರದಲ್ಲಿ ಕಾರು ಮಾರಾಟ ಕುಸಿತ ಕಂಡರೂ ಪರಿಸ್ಥಿತಿಗೆ ಅನುಗುಣವಾಗಿ ವಾಹನ ಮಾರಾಟವು ಸುಧಾರಣೆ ಕಂಡಿದ್ದು, ಐಷಾರಾಮಿ ಕಾರು ಮಾರಾಟ ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಹಲವು ವರ್ಷಗಳಿಂದ ಸತತವಾಗಿ ನಂ.1 ಸ್ಥಾನ ಕಾಯ್ದುಕೊಳ್ಳುತ್ತಿದೆ.

ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಕಂಪನಿಯು ಇತ್ತೀಚೆಗೆ ಎ-ಕ್ಲಾಸ್ ಲಿಮೋಸಿನ್, ಇ-ಕ್ಲಾಸ್ ಎಲ್‌ಡಬ್ಲ್ಯೂಬಿ ಫೇಸ್‌ಲಿಫ್ಟ್, ಎಎಂಜಿ ಎ35 4ಎಂ, ನ್ಯೂ ಜನರೇಷನ್ ಜಿಎಲ್ಎ, ಎಎಂಜಿ ಜಿಎಲ್ಎ 35 4ಎಂ, ಜಿಎಲ್ಎಸ್ ಮೇಬ್ಯಾಕ್ 600 ಮತ್ತು ಹೊಸ ಎ-ಕ್ಲಾಸ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಗಳಿಂದ ಹೆಚ್ಚಿನ ಮಟ್ಟದ ಬೇಡಿಕೆ ದಾಖಲಾಗಿದೆ.

ಮರ್ಸಿಡಿಸ್ ಬೆಂಝ್

ಇನ್ನು ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟವನ್ನು ಸರಳಗೊಳಿಸಲು ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಕಂಪನಿಯು ಹೊಸ ಮಾದರಿಯ ಮಾರಾಟ ವೈಶಿಷ್ಟ್ಯತೆಗಳನ್ನು ಒಳಗೊಂಡ ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

ಮರ್ಸಿಡಿಸ್ ಬೆಂಝ್

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ಕಾರ್ಯನಿರ್ವಹಣೆಯು ಈ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಗೆ ಅಧಿಕೃವಾಗಿ ಜಾರಿಗೆ ಬರಲಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಐಷಾರಾಮಿ ಕಾರು ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದೆ.

ಮರ್ಸಿಡಿಸ್ ಬೆಂಝ್

ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರು ಮತ್ತು ಕಂಪನಿಯ ನಡುವೆ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಹೊಸ ಕಾರು ಮಾರಾಟ ಪ್ರಕ್ರಿಯೆಯಲ್ಲಿ ಫ್ರ್ಯಾಂಚೈಸ್ ಪಾಲುದಾರರ ಕನಿಷ್ಠ ಹಸ್ತಕ್ಷೇಪದೊಂದಿಗೆ ನೇರವಾಗಿ ಕಂಪನಿಯೇ ಗ್ರಾಹಕರೊಂದಿಗೆ ವ್ಯವಹರಿಸಲಿದೆ.

ಮರ್ಸಿಡಿಸ್ ಬೆಂಝ್

ಹೊಸ ಯೋಜನೆಯಿಂದ ಫ್ರ್ಯಾಂಚೈಸ್ ಪಾಲುದಾರರು ಸ್ಟಾಕ್ ಪ್ರಮಾಣದಿಂದ ಅನುಭವಿಸುತ್ತಿದ್ದ ಆರ್ಥಿಕ ಸಂಕಷ್ಟವನ್ನು ತಡೆಯಲು ಹೊಸ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದ್ದು, ಇದು ಪ್ರಸ್ತುತ ಮಾರಾಟ ಮಾದರಿಗಿಂತಲೂ ಭಿನ್ನವಾಗಿರುತ್ತದೆ.

ಮರ್ಸಿಡಿಸ್ ಬೆಂಝ್

ಪ್ರಸ್ತುತ ಮಾರಾಟ ವಿಧಾನದಲ್ಲಿ ವಿತರಕರು ಮರ್ಸಿಡಿಸ್‌ನಿಂದ ಷೇರುಗಳನ್ನು ಖರೀದಿಸಿ ನಂತರ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಆದರೆ ಹೊಸ ವಿಧಾನದಲ್ಲಿ ಅಧಿಕೃತ ಮಾರಾಟಗಾರರಿಂದ ಕನಿಷ್ಠ ಹಸ್ತಕ್ಷೇಪದೊಂದಿಗೆ ಹೊಸ ಕಾರುಗಳು ಗ್ರಾಹಕರನ್ನುತಲುಪಲಿದ್ದು, ಈ ಮೂಲಕ ಕಾರು ತಯಾರಕರೇ ಇನ್ವಾಯ್ಸ್ ಮಾಡಲಿದ್ದಾರೆ.

ಮರ್ಸಿಡಿಸ್ ಬೆಂಝ್

ಅಂದರೆ ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಾದ್ಯಂತದ ಎಲ್ಲಾ ಗ್ರಾಹಕರಿಗೆ ಒಂದೇ ಬೆಲೆಗಳನ್ನು ನಿಗದಿಪಡಿಸಲಿದ್ದು, ಕಾರು ಮಾರಾಟವನ್ನೇ ಕಂಪನಿಯೇ ನಿರ್ವಹಿಸಿದರೂ ವಿತರಣೆಗಾಗಿ ಶೋರೂಂಗಳ ಮೂಲಕ ಪಡೆದುಕೊಳ್ಳಬೇಕಿರುತ್ತದೆ.

ಮರ್ಸಿಡಿಸ್ ಬೆಂಝ್

ಹೊಸ ಮಾರಾಟ ಸೌಲಭ್ಯದಿಂದ ವಿತರಕರು ದೊಡ್ಡ ಪ್ರಮಾಣದ ಸ್ಟಾಕ್ ಮಾದರಿಗಳಿಂದ ಅನುಭವಿಸುವ ನಷ್ಟ ತಡೆಯಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಗ್ರಾಹಕರಿಗೆ ಡೀಲರ್ಸ್‌ಗಳಿಂದಾಗುವ ಮೋಸ ಮತ್ತು ಸ್ಟಾಕ್ ಮಾರಾಟದಲ್ಲಾಗುವ ಒಳಸಂಚುಗಳನ್ನು ತಪ್ಪಿಸಲು ಸಹಕಾರಿಯಾಗಿದೆ.

Most Read Articles

Kannada
English summary
Mercedes Benz India Sold 4857 Units In 2021 First Half. Read in Kannada.
Story first published: Friday, July 9, 2021, 18:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X