ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ

ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಬಿಡುಗಡೆಗೊಳಿಸುವ ಗುರಿಯನ್ನು ಹೊಂದಿದೆ. ಇತರ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಇಂಧನ ಚಾಲಿತ ವಾಹನಗಳನ್ನು ಕೈಬಿಟ್ಟು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖಮಾಡುತ್ತಿದ್ದಾರೆ.

ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಇಕ್ಯೂ ಎಲೆಕ್ಟ್ರಿಕ್ ಕಾರಿನ ಸರಣಿಯನ್ನು ವಿಸ್ತರಿಸುತ್ತಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಸಿ ಮತ್ತು ಇಕ್ಯೂಎಸ್ ನಂತರ ಹೊಸ ಇಕ್ಯೂಇ ಪೋರ್ಟ್ಫೋಲಿಯೊಗೆ ಸೇರುವ ಸಮಯ ಬಂದಿದೆ. ಇದೀಗ ಜರ್ಮನ್ ಕಾರು ತಯಾರಕರು ಇಕ್ಯೂಇ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಸ್ಟೈಲಿಂಗ್ ಅಂಶಗಳ ವಿಷಯದಲ್ಲಿ ಇದು ಹೆಚ್ಚು ಸಿಲೂಯೆಟ್ ಇಕ್ಯೂಎಸ್ ಮಾದರಿಯಂತಿದೆ.

ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ

ಟೀಸರ್ ಚಿತ್ರವು ಸೂಚಿಸುವಂತೆ ಇದು ನೋಡಲು ಹೆಚ್ಚು ಭಿನ್ನವಾಗಿರುವುದಿಲ್ಲ ಆದರೆ ಒಳಾಂಗಣವು ನಾವು ಇಕ್ಯೂಎಸ್ ನಲ್ಲಿ ನೋಡಿದಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಮುಂಬರುವ 2021ರ ಐಎಎ ಮ್ಯೂನಿಚ್ ಮೋಟಾರ್ ಶೋನಲ್ಲಿ ಫ್ರಾಂಕ್‌ಫರ್ಟ್ ಮೋಟಾರ್ ಶೋ ಬದಲಿಗೆ ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆ ಮಾಡಲಿದೆ.

ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ

ಆದರೆ ಅಭಿವೃದ್ಧಿಯು ಕೇವಲ ಇಕ್ಯೂಇಗೆ ಸೀಮಿತವಾಗಿಲ್ಲ. ಮರ್ಸಿಡಿಸ್ ಇಕ್ಯೂಎಸ್ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ಎಎಂಜಿನ್ ಎಡಿಷನ್ ಮತ್ತು ಎಲೆಕ್ಟ್ರಿಕ್ ಮರ್ಸಿಡಿಸ್-ಮೇಬ್ಯಾಕ್ ಎಸ್‍ಯುವಿಯು ಕಾನ್ಸೆಪ್ಟ್ ಅನ್ನು ಪ್ರದರ್ಶಿಸುವ ನಿರೀಕ್ಷೆಯಿದೆ.

ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ

ನಂತರ ಮರ್ಸಿಡಿಸ್ ಬೆಂಝ್ ಇಕ್ಯೂಬಿ ಸಹ ಸ್ಟ್ಯಾಂಡ್‌ನಲ್ಲಿರುವ ನಿರೀಕ್ಷೆಯಿದೆ, ಮ್ಯೂನಿಚ್ ಮೋಟಾರ್ ಶೋ "ಎಲೆಕ್ಟ್ರಿಫೈಡ್" ಆಗಲಿದೆ ಮತ್ತು ಕೆಲವು ಭವಿಷ್ಯದ ಮಾದರಿಗಳೊಂದಿಗೆ ಭರವಸೆ ನೀಡುತ್ತದೆ. ಟೀಸರ್ ಚಿತ್ರವು ಇಕ್ಯೂಇಯ ಮೂರು ಇನ್-ಡ್ಯಾಶ್ ಡಿಸ್ ಪ್ಲೇಗಳನ್ನು ಒಂದೇ ಗ್ಲಾಸ್ ಪೇನ್ ಅಡಿಯಲ್ಲಿ ಮುಚ್ಚಿರುವುದನ್ನು ತೋರಿಸುತ್ತದೆ,

ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ

ಟೀಸರ್ ಚಿತ್ರದಲ್ಲಿ ಇಕ್ಯೂಇಯ ಮೂರು ಇನ್-ಡ್ಯಾಶ್ ಡೀಸ್ ಪ್ಲೇಗಳನ್ನು ಒಂದೇ ಗ್ಲಾಸ್ ಪೇನ್ ಅಡಿಯಲ್ಲಿ ಮುಚ್ಚಿರುವುದನ್ನು ತೋರಿಸುತ್ತದೆ. ಇಕ್ಯೂಎಸ್ ನಂತೆಯೇ ಒಟ್ಟಾರೆ ವಿನ್ಯಾಸವನ್ನು ಹೊಂದಿರಲಿದೆ. ಆದರೆ ನಿಖರವಾಗಿ ಒಂದೇ ಆಗಿರುವುದಿಲ್ಲ

ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ

ಇದು ಸ್ವಲ್ಪ ನಯವಾದದ್ದು ಮತ್ತು ಬೂಟ್ ಲೈನ್‌ನಲ್ಲಿರುವ ಎಲ್ಇಡಿ ಬಾರ್ ಟೈಲ್‌ಲೈಟ್‌ಗಳಿಗೆ ಸಂಪರ್ಕ ಹೊಂದಿಲ್ಲ. ಇನ್ನು ಇಕ್ಯೂಎಸ್ ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿದ್ದು, ಇದು ಮೇಬ್ಯಾಕ್ ಮಾದರಿಗಳಲ್ಲಿ ಸಾಮಾನ್ಯವಾಗಿದೆ. ಇದು ಜರ್ಮನಿಯ ಆಟೋ ದೈತ್ಯದಿಂದ ಇಕ್ಯೂಎಸ್ ಐಷಾರಾಮಿ ಸೆಡಾನ್ ಎಲೆಕ್ಟ್ರಿಕ್ ಮಾದರಿಯಂತಹ ಹೆಡ್‌ಲೈಟ್‌ಗಳಿಂದ ಸುತ್ತುವರೆದಿರುವ ದೊಡ್ಡ ಗ್ರಿಲ್ ಅನ್ನು ನೀಡುವ ಸಾಧ್ಯತೆಯಿದೆ.

ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ

ಇದು ಇಕ್ಯೂಎಸ್ ಸೆಡಾನ್‌ಗೆ ಶಕ್ತಿ ತುಂಬುವ ಬ್ಯಾಟರಿ ಪ್ಯಾಕ್‌ಗಳ ಒಂದೇ ಗುಂಪನ್ನು ಪಡೆಯುವ ಸಾಧ್ಯತೆಯಿದೆ. ಇದು 90 ಕಿ.ವ್ಯಾಟ್ ಮತ್ತು 108 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಗಳಾಗಿರುತ್ತದೆ. ಇದು 200 ಕಿ.ವ್ಯಾಟ್ ವೇಗದ ಚಾರ್ಜರ್‌ಗೆ ಪ್ಲಗ್ ಮಾಡಿದರೆ 15 ನಿಮಿಷಗಳಲ್ಲಿ 300 ಕಿ.ಮೀ.ವರೆಗೆ ಚಲಿಸಿವಂತೆ ವಾಹನವನ್ನು ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿವೆ.

ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ

ಇನ್ನು ಮರ್ಸಿಡಿಸ್ ಬೆಂಝ್ ಕಂಪನಿಯು ಇಕ್ಯೂಇ ಎಲೆಕ್ಟ್ರಿಕ್ ಸೆಡಾನ್ ಪವರ್‌ಟ್ರೇನ್ ಬಗ್ಗೆ ಹೆಚ್ಚು ಬಹಿರಂಗಪಡಿಸಿಲ್ಲ, ಆದರೆ ಇದು ಎರಡೂ ಆಕ್ಸಲ್‌ಗಳಲ್ಲಿ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಅಳವಡಿಸಬಹುದೆಂದು ನಿರೀಕ್ಷಿಸಲಾಗಿದೆ ಮತ್ತು ಆದ್ದರಿಂದ ಇದು ಆಲ್-ವ್ಹೀಲ್-ಡ್ರೈವ್ ಸಿಸ್ಟಂನೊಂದಿಗೆ 4 ಮ್ಯಾಟಿಕ್ ಆಗಿರಬಹುದು.

Most Read Articles

Kannada
English summary
Mercedes-Benz EQE Teased. Read In Kannada.
Story first published: Saturday, July 31, 2021, 10:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X