ಕೂಪರ್ ಸೀರಿಸ್‌ನ 60ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಮಿನಿ

ಮಿನಿ ಕಂಪನಿಯು ತನ್ನ ಕೂಪರ್ ಸೀರಿಸ್‌ನ 60ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಭಾಗವಾಗಿ 3-ಡೋರಿನ ಆನಿವರ್ಸರಿ ಎಡಿಷನ್ ಅನ್ನು ಪರಿಚಯಿಸಿದೆ. ಇದನ್ನು ವಿಶ್ವಾದ್ಯಂತ 740 ಯುನಿಟ್‌ಗಳಿಗೆ ಸೀಮಿತವಾಗಲಿರುವ ಮೂರು-ಡೋರಿನ ಮಾದರಿಯಾಗಿದೆ.

ಕೂಪರ್ ಸೀರಿಸ್‌ನ 60ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಮಿನಿ

60ನೇ ಕೂಪರ್ ಆನಿವರ್ಸರಿ ಎಡಿಷನ್ ಮೂಲಕ 2000 ರಲ್ಲಿ ನಿಧನರಾದ ಜಾನ್ ಕೂಪರ್‌ಗೆ ಗೌರವ ಸಲ್ಲಿಸಲಿದೆ. ಕೂಪರ್ ಸೀರಿಸ್ ನಲ್ಲಿ ಮಿನಿ ಕೂಪರ್, ಮಿನಿ ಕೂಪರ್ ಎಸ್ ಮತ್ತು ಮಿನಿ ಜಾನ್ ಕೂಪರ್ ವರ್ಕ್ಸ್ ಮಾದರಿಗಳನ್ನು ಒಳಗೊಂಡಿದೆ. ಆನಿವರ್ಸರಿ ಎಡಿಷನ್ ಬ್ರಿಟಿಷ್ ರೇಸಿಂಗ್ ಗ್ರೀನ್, ಮಿಡ್ನೈಟ್ ಬ್ಲ್ಯಾಕ್ ಮತ್ತು ರೆಬೆಲ್ ಗ್ರೀನ್ ಜೊತೆ ಪಿಯಾನೋಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಕೂಪರ್ ಸೀರಿಸ್‌ನ 60ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಮಿನಿ

ಕೂಪರ್ ಆನಿವರ್ಸರಿ ಎಡಿಷನ್ ಹುಡ್ ಸ್ಟ್ರೈಪ್ಸ್ ಮತ್ತು ಅದರ ಡೋರುಗಳಲ್ಲಿ '74' ಸಂಖ್ಯೆಯನ್ನು ಸಹ ಹೊಂದಿರುತ್ತದೆ. ಇದು ತನ್ನ ಮೊದಲ ರೇಸ್ ನಲ್ಲಿ ಗೆದ್ದಾಗ ಕಾಣಿಸಿಕೊಂಡ ಮೂಲ ಮಾದರಿಯ ಸಂಖ್ಯೆಯಾಗಿದೆ.

ಕೂಪರ್ ಸೀರಿಸ್‌ನ 60ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಮಿನಿ

ಇನ್ನು ಈ ಹೊಸ ಕೂಪರ್ ಆನಿವರ್ಸರಿ ಎಡಿಷನ್ ಮುಖ್ಯಾಂಶಗಳು, ಆಕರ್ಷಕವಾದ 18-ಇಂಚಿನ ಅಲಾಯ್ ವ್ಹೀಲ್ ಗಳು, ಸೈಡ್ ಸ್ಕಟಲ್ಸ್ ಮತ್ತು ಸಿ-ಪಿಲ್ಲರ್‌ಗಳಲ್ಲಿ 'ಕೂಪರ್' ಬ್ಯಾಡ್ಜಿಂಗ್ ಅನ್ನು ಒಳಗೊಂಡಿದೆ.

ಕೂಪರ್ ಸೀರಿಸ್‌ನ 60ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಮಿನಿ

ಈ ಕಾರಿನ ಒಳಭಾಗದಲ್ಲಿ, ಜಾನ್ ಕೂಪರ್ ವರ್ಕ್ಸ್ ಸ್ಪೋರ್ಟ್ಸ್ ಸೀಟುಗಳು ಡೈನಾಮಿಕಾ/ಲೆದರ್ ಕಾರ್ಬನ್ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್ ನಪ್ಪಾ ಲೆದರ್‌ನಲ್ಲಿ ಧರಿಸಲಾಗಿದೆ. ಇನ್ನು ಪಿಯಾನೋ ಬ್ಲ್ಯಾಕ್ ಹೈ-ಗ್ಲೋಸ್‌ನಲ್ಲಿ ಆಂಥ್ರಾಸೈಟ್ ಬಣ್ಣದ ಹೆಡ್‌ಲೈನರ್, ಸ್ಟೇನ್‌ಲೆಸ್ ಸ್ಟೀಲ್ ಪೆಡಲ್ ಸೆಟ್ ಮತ್ತು ಇಂಟಿರಿಯರ್ ಟ್ರಿಮ್ ಹೊಂದಿದೆ.

ಕೂಪರ್ ಸೀರಿಸ್‌ನ 60ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಮಿನಿ

ಇದರ ಇಂಟಿರಿಯರ್ ನಲ್ಲಿ ಜಾನ್, ಮೈಕ್ ಮತ್ತು ಚಾರ್ಲಿ ಕೂಪರ್ ಅವರ ಸಹಿಯನ್ನು ಒಳಗೊಂಡಿದೆ. ಇದಲ್ಲದೆ ಡ್ರೈವರ್ ಡೋರ್ ಒಳಭಾಗದಲ್ಲಿ ಜಾನ್ ಕೂಪರ್ ಅವರ ಸಹಿ, 1 ಆಫ್ 740 ಎಂದು ಬರೆಯಲಾಗಿದೆ.

ಕೂಪರ್ ಸೀರಿಸ್‌ನ 60ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಮಿನಿ

ಇನ್ನು ಮಿನಿ ಕಂಪನಿಯು ತನ್ನ 2022ರ ಜಾನ್ ಕೂಪರ್ ವರ್ಕ್ಸ್‌ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿದೆ. ಈ 2022ರ ಮಿನಿ ಜಾನ್ ಕೂಪರ್ ವರ್ಕ್ಸ್‌ ಕಾರು ವಿನ್ಯಾಸ ಬದಲಾವಣೆಗಳೊಂದಿಗೆ ಹೊಸ ಸಸ್ಪೆಂಕ್ಷನ್ ಸೆಟಪ್ ಅನ್ನು ಪಡೆದುಕೊಂಡಿದೆ.

ಕೂಪರ್ ಸೀರಿಸ್‌ನ 60ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಮಿನಿ

2022ರ ಮಿನಿ ಜಾನ್ ಕೂಪರ್ ವರ್ಕ್ಸ್ ಫೇಸ್‌ಲಿಫ್ಟ್ ಕಾರಿನಲ್ಲಿ ದೇ 2.0-ಲೀಟರ್, ನಾಲ್ಕು-ಸಿಲಿಂಡರ್, ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 231 ಬಿಹೆಚ್‍ಪಿ ಪವರ್ ಮತ್ತು 320 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಹೊಸದಾಗಿ ಈ ಕಾರಿನಲ್ಲಿ 8-ಸ್ಫೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಯ್ಕೆಯಾಗಿ ನೀಡಲಾಗಿದೆ.

ಕೂಪರ್ ಸೀರಿಸ್‌ನ 60ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಮಿನಿ

ಇನ್ನು ಕೂಪರ್ ಆನಿವರ್ಸರಿ ಎಡಿಷನ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಕಾರಿನಲ್ಲಿರುವ ಪಿಯಾನೋ ಬ್ಲ್ಯಾಕ್‌ ಇದರ ಆಕರ್ಷಕಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೊರಭಾಗದಲ್ಲಿರುವ ಬ್ಲ್ಯಾಕ್ ಮತ್ತು ಬೈಕ್ ಬಣ್ಣಗಳ ಅಂಶಗಳೊಂದಿಗೆ ಅಗ್ರೇಸಿವ್ ಮತ್ತು ಸ್ಪೋರ್ಟಿಯಾಗಿದೆ.

Most Read Articles

Kannada
English summary
BMW MINI introduces Anniversary Edition Of Cooper Model Range. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X