ಇತಿಹಾಸದ ಪುಟ ಸೇರಲಿದೆ ಮಿಟ್ಸುಬಿಷಿ ಪಜೆರೊ ಐಕಾನಿಕ್ ಆಫ್-ರೋಡ್ ಎಸ್‍ಯುವಿ

ಜಪಾನ್ ಮೂಲದ ಮಿಟ್ಸುಬಿಷಿ ಕಂಪನಿಯು ತನ್ನ ನಾಲ್ಕನೇ ತಲೆಮಾರಿನ ಪಜೆರೊವನ್ನು ಮೊದಲ ಬಾರಿಗೆ 2006ರಲ್ಲಿ ಪರಿಚಯಿಸಲಾಯಿತು. ಈ ಮಿಟ್ಸುಬಿಷಿ ಪಜೆರೊ ಅಂತರರಾಷ್ಟ್ರೀಯ ಮರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡ್ ಎಸ್‍ಯುವಿಗಳಲ್ಲಿ ಒಂದಾಗಿದೆ.

ಇತಿಹಾಸದ ಪುಟ ಸೇರಲಿದೆ ಮಿಟ್ಸುಬಿಷಿ ಪಜೆರೊ ಐಕಾನಿಕ್ ಆಫ್-ರೋಡ್ ಎಸ್‍ಯುವಿ

ಪಜೆರೊ ಎಸ್‍ಯುವಿಯನ್ನು ಶೋಗನ್ ಎಂದೂ ಕರೆಯುತ್ತಾರೆ, ಈ ಆಫ್-ರೋಡ್ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಹಳೆಯ ಮಾದರಿಗಳಲ್ಲಿ ಒಂದಾಗಿದೆ. ಇದೀಗ ಮಿಟ್ಸುಬಿಷಿ ಕಂಪನಿಯು ತನ್ನ ಪಜೆರೊ ಎಸ್‍ಯುವಿಯ ಫೈನಲ್ ಎಡಿಷನ್ ಅನ್ನು ಬಿಡುಗಡೆಗೊಳಿಸುವ ಮೂಲಕ ಈ ಐಕಾನಿಕ್ ಎಸ್‍ಯುವಿಯನ್ನು ಸ್ಥಗಿತಗೊಳಿಸಲಿದೆ. 2022ರ ಮಿಟ್ಸುಬಿಷಿ ಪಜೆರೋ ಎಸ್‍ಯುವಿಯ ಫೈನಲ್ ಎಡಿಷನ್ ಅನ್ನು ಆಸ್ಟ್ರೇಲಿಯಾದಲ್ಲಿ ಬಿಡುಗಡೆಗೊಳಿಸಲಿದೆ.

ಇತಿಹಾಸದ ಪುಟ ಸೇರಲಿದೆ ಮಿಟ್ಸುಬಿಷಿ ಪಜೆರೊ ಐಕಾನಿಕ್ ಆಫ್-ರೋಡ್ ಎಸ್‍ಯುವಿ

ಇದನ್ನು ಕೇವಲ 800 ಯುನಿಟ್ ಗಳಾಗಿ ಬಿಡುಗಡೆಗೊಳಿಸಲಾಗುತ್ತದೆ. ಈ ಮಿಟ್ಸುಬಿಷಿ ಪಜೆರೊ ಜಿಎಲ್‌ಎಕ್ಸ್, ಜಿಎಲ್‌ಎಸ್ ಮತ್ತು ಎಕ್ಸೆಡ್ ರೂಪಾಂತರಗಳಲ್ಲಿ ಲಭ್ಯವಿರುತ್ತವೆ. ಈ ಎಲ್ಲಾ ಮಾದರಿಗಳಲ್ಲಿ ಫೈನಲ್ ಎಡಿಷನ್ ಎಂಬ ಬ್ಯಾಡ್ಜಿಂಗ್ ಅನ್ನು ಪಡೆಯುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇತಿಹಾಸದ ಪುಟ ಸೇರಲಿದೆ ಮಿಟ್ಸುಬಿಷಿ ಪಜೆರೊ ಐಕಾನಿಕ್ ಆಫ್-ರೋಡ್ ಎಸ್‍ಯುವಿ

ಮಿಟ್ಸುಬಿಷಿ ಪಜೆರೊ ಹಿಂಭಾಗದಲ್ಲಿ ಕಾರ್ಗೋ ಲೈನರ್, ರಿಯರ್ ಬೂಟ್ ಡಿಲ್ಯಾಪ್, ಕಾರ್ಪೆಟ್ ಮ್ಯಾಟ್ಸ್ ಮತ್ತು ಬಣ್ಣದ ಹುಡ್ ಪ್ರೊಟೆಕ್ಟರ್ ಸೇರಿವೆ. ಈ ಎಸ್‍ಯುವಿಯ ಬೇಸ್ ರೂಪಾಂತರದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ರಿವರ್ಸ್ ಕ್ಯಾಮೆರಾವನ್ನು ಒಳಗೊಂಡಿದೆ

ಇತಿಹಾಸದ ಪುಟ ಸೇರಲಿದೆ ಮಿಟ್ಸುಬಿಷಿ ಪಜೆರೊ ಐಕಾನಿಕ್ ಆಫ್-ರೋಡ್ ಎಸ್‍ಯುವಿ

ಮಿಟ್ಸುಬಿಷಿ ಪಜೆರೊ ಫೈನಲ್ ಎಡಿಷನ್ ಮಿಡ್-ಸ್ಪೆಕ್ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, 18 ಇಂಚಿನ ಅಲಾಯ್ ವ್ಹೀಲ್ ಗಳು, ಡಸ್ಕ್ ಸೆನ್ಸಿಂಗ್ ಹೆಡ್‌ಲ್ಯಾಂಪ್‌ಗಳು, ರೈನ್ ಸೆನ್ಸಿಂಗ್ ವೈಪರ್‌ಗಳು, ಕ್ಲೈಮೆಂಟ್ ಕಂಟ್ರೋಲ್ ನೊಂದಿಗೆ ಪವರ್ ಎಡೆಜೆಸ್ಟ್ ಮೆಂಟ್ ಮುಂಭಾಗದ ಸೀಟುಗಳು ಮತ್ತು ಇತರ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇತಿಹಾಸದ ಪುಟ ಸೇರಲಿದೆ ಮಿಟ್ಸುಬಿಷಿ ಪಜೆರೊ ಐಕಾನಿಕ್ ಆಫ್-ರೋಡ್ ಎಸ್‍ಯುವಿ

ಟಾಪ್-ಸ್ಪೆಕ್ ರೂಪಾಂತರದಲ್ಲಿ ಅಲ್ಯೂಮಿನಿಯಂ ಪೆಡಲ್ಗಳು, ಕ್ರೋಮ್ಡ್ ವಿಂಡ್‌ಸ್ಕ್ರೀನ್ ಸರೌಂಡ್, ಸೈಡ್ ಪ್ರೊಟೆಕ್ಷನ್ ಸ್ಟ್ರಿಪ್, ಅಲಾರ್ಮ್, ಲೆದರ್ ಸೀಟುಗಳು, ಎಲೆಕ್ಟ್ರಿಕ್ ಸನ್‌ರೂಫ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಆಟೋಮ್ಯಾಟಿಕ್ ಕಂಟ್ರೊಲ್ ಮತ್ತು ಇತ್ಯಾದಿ ಫೀಚರ್ಸ್ ಗಳನ್ನು ಒಳಗೊಂಡಿವೆ.

ಇತಿಹಾಸದ ಪುಟ ಸೇರಲಿದೆ ಮಿಟ್ಸುಬಿಷಿ ಪಜೆರೊ ಐಕಾನಿಕ್ ಆಫ್-ರೋಡ್ ಎಸ್‍ಯುವಿ

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಮಿಟ್ಸುಬಿಷಿ ಪಜೆರೋ ಎಸ್‍ಯುವಿಯಲ್ಲಿ ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಜಪಾನ್‌ನಲ್ಲಿ ಬಳಸಲಾಗುತ್ತದೆ.ಈ ಎಂಜಿನ್ 189 ಬಿಹೆಚ್‍ಪಿ ಪವರ್ ಮತ್ತು 441 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಇತಿಹಾಸದ ಪುಟ ಸೇರಲಿದೆ ಮಿಟ್ಸುಬಿಷಿ ಪಜೆರೊ ಐಕಾನಿಕ್ ಆಫ್-ರೋಡ್ ಎಸ್‍ಯುವಿ

ಇನ್ನು ಈ ಎಸ್‍ಯುವಿಯಲ್ಲಿ ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ ಮತ್ತು ಲಾಕಿಂಗ್ ಡಿಫರೆನ್ಷಿಯಲ್ ಸಿಸ್ಟಂ ಅನ್ನು ಹೊಂದಿದೆ. ಈ ಪಜೆರೊ ಎಸ್‍ಯುವಿಯು 9.1 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.

ಇತಿಹಾಸದ ಪುಟ ಸೇರಲಿದೆ ಮಿಟ್ಸುಬಿಷಿ ಪಜೆರೊ ಐಕಾನಿಕ್ ಆಫ್-ರೋಡ್ ಎಸ್‍ಯುವಿ

ಪಜೆರೊ ಎಸ್‍ಯುವಿಯು ಹಲವಾರು ವರ್ಷಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಈ ಪಜೆರೊ ಎಸ್‍ಯುವಿಯನ್ನು 2016ರಲ್ಲಿ ಭಾರತದಲ್ಲಿ ಮರುಪ್ರಾರಂಭಿಸಲಾಯಿತು. ಇದನ್ನು ಸಿಬಿಯು ಮಾರ್ಗದ ಮೂಲಕ ದೇಶಕ್ಕೆ ತರಲಾಗಿತ್ತು.

ಇತಿಹಾಸದ ಪುಟ ಸೇರಲಿದೆ ಮಿಟ್ಸುಬಿಷಿ ಪಜೆರೊ ಐಕಾನಿಕ್ ಆಫ್-ರೋಡ್ ಎಸ್‍ಯುವಿ

ಈ ಎಸ್‍ಯುವಿಯು ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್‌ನ ಐಷಾರಾಮಿ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತಿತ್ತು. ಕಳೆದ ವರ್ಷ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾದ ಬಳಿಕ ಮಿಟ್ಸುಬಿಷಿ ಪಜೆರೊ ಸ್ಪೋರ್ಟ್ ಮತ್ತು ಔಟ್‌ಲ್ಯಾಂಡರ್ ಅನ್ನು ನವೀಕರಿಸಲಾಗಿಲ್ಲ.

Most Read Articles

Kannada
English summary
Mitsubishi Pajero Final Edition Says Goodbye To The Iconic Off-Road SUV. Read In Kannada.
Story first published: Monday, May 17, 2021, 12:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X