ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಮಾರುತಿ ಸುಜುಕಿ ಸಿಯಾಜ್ ಕಾರು

ಮಾರುತಿ ಸುಜುಕಿ ಸಿಯಾಜ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಜನಪ್ರಿಯ ಮಿಡ್ ಸೆಡಾನ್‌ಗಳಲ್ಲಿ ಒಂದಾಗಿದೆ. ಮಾರುತಿ ಸಿಯಾಜ್ ಕಾರು ಸಿ ಸೆಗ್‍‍ಮೆಂಟ್‍‍ನಲ್ಲಿ ಹ್ಯುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಸ್ಕೋಡಾ ರ್ಯಾಪಿಡ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಮಾರುತಿ ಸುಜುಕಿ ಸಿಯಾಜ್ ಕಾರು

ಈ ಜನಪ್ರಿಯ ಮಾರುತಿ ಸಿಯಾಜ್ ಕಾರನ್ನು ಹಲವರು ಮಾಡಿಫೈಗೊಳಿಸಲು ಆಯ್ಕೆ ಮಾಡುತ್ತಾರೆ. ಇದೇ ರೀತಿ ಮೋಡ್ಸ್ಟರ್ಸ್ ಆಟೋಮೋಟಿವ್ ಕಸ್ಟಮೈಸ್ ಅವರು ಈ ಸಿಯಾಜ್ ಕಾರನ್ನು ಆಕರ್ಷಕವಾಗಿ ಮಾಡಿಫೈಗೊಳಿಸಿದ್ದಾರೆ. ಮಾಡಿಫೈಗೊಂಡ ಮಾರುತಿ ಸಿಯಾಜ್ ಕಾರಿಗೆ "ಟೂತ್‌ಲೆಸ್" ಎಂದು ಹೆಸರಿಡಲಾಗಿದೆ. ಈ ಸಿಯಾಜ್‌ನ ಹೊರಭಾಗವನ್ನು ಸಾಕಷ್ಟು ಸ್ಫೋರ್ಟಿ ಲುಕ್ ನಲ್ಲಿ ಕಾಣುವಂತೆ ಮಾಡಿಫೈಮಾಡಿದ್ದಾರೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಮಾರುತಿ ಸುಜುಕಿ ಸಿಯಾಜ್ ಕಾರು

ಈ ಕಾರಿಗೆ ಮ್ಯಾಟ್ ಮೆಟಾಲಿಕ್ ಚಾರ್ಕೋಲ್ ಬಣ್ಣವನ್ನು ನೀಡಿದ್ದಾರೆ. ಮುಂಭಾಗದಲ್ಲಿ ಫಾಗ್ ಲ್ಯಾಂಪ್, ಮುಂಭಾಗದ ಫೆಂಡರ್, ಹೊರಗಿನ ರಿಯರ್‌ವ್ಯೂ ಮೀರರ್ ಮತ್ತು ಹಿಂಭಾಗದ ಡೋರಿನ ಮೇಲೆ ಕೆಂಪು ಬಣ್ಣದ ಅಸ್ಸೆಂಟ್ ಗಳನ್ನು ಹೊಂದಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಮಾರುತಿ ಸುಜುಕಿ ಸಿಯಾಜ್ ಕಾರು

ಮುಂಭಾಗದ ಬಂಪರ್ ಅನ್ನು ಬದಲಾಯಿಸಿ ಆಫ್ಟರ್ ಮಾರ್ಕೆಂಟ್ ಬಂಪರ್ ಅನ್ನು ನೀಡಲಾಗಿದೆ, ಈ ಬಂಪರ್ ಆಡಿಯಿಂದ ಸ್ಫೂರ್ತಿ ಪಡೆದಿದೆ, ಇನ್ನು ಮುಂಭಾಗದಲ್ಲಿ ಆಡಿ ಶೈಲಿಯ ಗ್ರಿಲ್ ಅನ್ನು ಅಳವಡಿಸಲಾಗಿದೆ. ಹೆಡ್‌ಲ್ಯಾಂಪ್‌ಗಳನ್ನು ಎಚ್‌ಐಡಿ ಪ್ರೊಜೆಕ್ಟರ್‌ಗಳೊಂದಿಗೆ ಹೊಸ ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಬದಲಾಯಿಸಲಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಮಾರುತಿ ಸುಜುಕಿ ಸಿಯಾಜ್ ಕಾರು

ಹೆಡ್‌ಲೈಟ್‌ಗಳು ಕೆಂಪು ಬಲ್ಬ್ ಅನ್ನು ಹೊಂದಿದ್ದು ಅದು ಕೆಂಪು ಡೆಕಲ್‌ಗಳಿಂದ ಕೂಡಿದೆ, ಇದು ಸ್ವೈಪಿಂಗ್ ಟರ್ನ್ ಇಂಡೀಕೆಟರ್ ಅನ್ನು ಹೊಂದಿದೆ. ನವೀಕರಿಸಿದ ಪ್ರೊಜೆಕ್ಟರ್ ಹೈ-ಲೋ ಫಾಗ್‌ಲ್ಯಾಂಪ್‌ಗಳು ಸಹ ಇವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಮಾರುತಿ ಸುಜುಕಿ ಸಿಯಾಜ್ ಕಾರು

ಈ ಕಾರಿನಲ್ಲಿ ಲೆನ್ಸೊ ಮೂಲದ 15 ಇಂಚಿನ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಸಿಯಾಜ್ ಮೀರರ್ ಕೆಂಪು ಬಣ್ಣದಿಂದ ಕೂಡಿದೆ. ಕಾರಿನ ಹಿಂಭಾಗದಲ್ಲಿ ಟೈಪ್ ‘ಆರ್' ಸ್ಪಾಯ್ಲರ್ ಮತ್ತು ಹಿಂಭಾಗದ ಡಿಫ್ಯೂಸರ್ ಅನ್ನು ನೀಡಲಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಮಾರುತಿ ಸುಜುಕಿ ಸಿಯಾಜ್ ಕಾರು

ಸ್ಟಾಕ್ ಟೈಲ್ ಲ್ಯಾಂಪ್‌ಗಳನ್ನು ಎಲ್ಇಡಿ ಸೆಟಪ್ ನೊಂದಿಗೆ ಇರಿಸಲಾಗುತ್ತದೆ ಮತ್ತು ಎಲ್ಇಡಿ ರಿಫ್ಲೆಕ್ಟರ್ ಸ್ಟ್ರಿಪ್ ಗನ್ನು ಬಂಪರ್ ನಲ್ಲಿ ಜೋಡಿಸಲಾಗಿದೆ.ಕಾರಿನ ಒಳಭಾಗದಲ್ಲಿ ಸ್ಟಾಕ್ ಸೀಟುಗಳನ್ನು ಫೋಮ್ಡ್ ಸೀಟುಗಳೊಂದಿಗೆ ಕಸ್ಟಮ್ ಪ್ಯಾಡಿಂಗ್ ನೊಂದಿಗೆ ನವೀಕರಿಸಲಾಗಿದೆ ಅದು ಹೆಚ್ಚು ಆರಾಮದಾಯಕವಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಮಾರುತಿ ಸುಜುಕಿ ಸಿಯಾಜ್ ಕಾರು

ಸಿಯಾಜ್ ಎನ್‌ವಿಹೆಚ್ ಸಿಸ್ಟಂ ಅನ್ನು ಹೊಂದಿದೆ. ಸೌಂಡ್‌ಪ್ರೂಫಿಂಗ್ ಸಿಸ್ಟಂ ಆಗಿರುವುದರಿಂದ ಒಳಭಾಗಕ್ಕೆ ಹೊರಭಾಗದ ಶಬ್ಧ ಕೇಳಿಸುವುದಿಲ್ಲ. ಆಂಡ್ರಾಯ್ಡ್ ಕನೆಕ್ಟಿವಿಟಿ ಇರುವ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಮಾರುತಿ ಸುಜುಕಿ ಸಿಯಾಜ್ ಕಾರು

ಮಾಡಿಫೈಗೊಂಡ ಸಿಯಾಜ್ ನಲ್ಲಿ ಫಿಯೆಟ್ ಮಾದರಿಯ 1.3-ಲೀಟರ್ ಡೀಸೆಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 88 ಬಿಹೆಚ್‌ಪಿ ಪವರ್ ಮತ್ತು 200 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
This Modified Maruti Suzuki Ciaz Looks Absolutely Wild. Read In Kannada.
Story first published: Saturday, May 22, 2021, 21:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X