Just In
- 31 min ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 2 hrs ago
ಎಕ್ಸ್‌ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್‌ಯುವಿ500
- 2 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
- 3 hrs ago
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
Don't Miss!
- Sports
ಐಪಿಎಲ್ : ಈ ದಾಖಲೆ ಮಾಡಿದ್ದು ಕೊಹ್ಲಿ ಬಿಟ್ರೆ ಸಂಜು ಸ್ಯಾಮ್ಸನ್
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- News
ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಐಷಾರಾಮಿ 2021ರ ಬೆಂಟ್ಲಿ ಬೆಂಟಾಯ್ಗಾ ಎಸ್‍ಯುವಿ ಬಿಡುಗಡೆ
ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬೆಂಟ್ಲಿ ತನ್ನ 2021ರ ಬೆಂಟಾಯ್ಗಾ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಪರ್ಫಾರ್ಮೆನ್ಸ್-ಐಷಾರಾಮಿ ಎಸ್‌ಯುವಿಯಾದ 2021ರ ಬೆಂಟ್ಲಿ ಬೆಂಟಾಯ್ಗಾ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.4.10 ಕೋಟಿಯಾಗಿದೆ.

ಬೆಂಟ್ಲಿ ಕಂಪನಿಯು ಹೊಸ ಬೆಂಟಾಯ್ಗಾ ಎಸ್‍ಯುವಿಯನ್ನು ಜಾಗಾತಿಕ ಮಾರುಕಟ್ಟೆಯಲ್ಲಿ ಪರಿಚಯಿಸಿದ ಒಂದು ವರ್ಷದೊಳಗೆ ಭಾರತದಲ್ಲಿಯು ಬಿಡುಗಡೆಗೊಳಿಸಿದೆ. ಬೆಂಟಾಯ್ಗಾ ಎಸ್‍ಯುವಿಯು ಬೆಂಟ್ಲಿ ಕಂಪನಿಯು ಒಂದು ಪ್ರಮುಖ ಮಾದರಿಯಾಗಿದೆಪ್ರಸ್ತುತ ಖರೀದಿದಾರರು ಸೆಡಾನ್‌ಗಳಿಗಿಂತ ಎಸ್‌ಯುವಿಗಳನ್ನು ಆಯ್ಕೆ ಮಾಡುತ್ತಾರೆ. ಬೆಂಟಾಯ್ಗಾ ಎಸ್‍ಯುವಿಯು ವಿಶ್ವದಾದ್ಯಂತ ಬಹುಜನಪ್ರಿಯತೆ ಗಳಿಸಿದ ಮಾದರಿಯಾಗಿದೆ.

2021ರ ಬೆಂಟ್ಲಿ ಬೆಂಟಾಯ್ಗಾ ಹೊರಭಾಗದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಪಡೆದಿದೆ. ಬೆಂಟಾಯ್ಗಾ ಹೊಸ ವಿನ್ಯಾಸ ಬದಲಾವಣೆಗಳು ಬ್ರ್ಯಾಂಡ್‌ನ ಸರಣಿಯಲ್ಲಿರುವ ಪ್ರಸ್ತುತ ಕಾಂಟಿನೆಂಟಲ್ ಜಿಟಿ ಮತ್ತು ಫ್ಲೈಯಿಂಗ್ ಸ್ಪರ್ ಮಾದರಿಗಳಿಗೆ ಅನುಗುಣವಾವೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಇದರ ಮುಂಭಾಗದಲ್ಲಿ ವಿನ್ಯಾಸ ಬದಲಾವಣೆಗಳ ಬಗ್ಗೆ ಹೇಳುವುದಾದರೆ, ಹೊಸ ಗ್ರಿಲ್ ವಿನ್ಯಾಸ ಮತ್ತು ಹೊಸ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ. ಫೇಸ್‌ಲಿಫ್ಟ್ ಮಾದರಿಗೆ ಹೋಲಿಸಿದರೆ ಗ್ರಿಲ್ ಮತ್ತು ಹೆಡ್‌ಲ್ಯಾಂಪ್‌ಗಳ ಸ್ಥಾನವನ್ನು ಈಗ 30 ಎಂಎಂ ಎತ್ತರದಲ್ಲಿ ಇರಿಸಲಾಗಿದೆ.

ಹಿಂಭಾಗದಲ್ಲಿ ಈ ಹೊಸ ಎಸ್‍ಯುವಿ ಕಾಂಟಿನೆಂಟಲ್ ಜಿಟಿಯಲ್ಲಿರುವಂತೆಯೇ ಅನಿಮೇಟೆಡ್ ಎಲ್ಇಡಿಗಳೊಂದಿಗೆ ಹೊಸ 3ಡಿ ಎಲಿಪ್ಟಿಕಲ್ ಟೈಲ್-ಲೈಟ್ಗಳನ್ನು ಹೊಂದಿದೆ. ಎರಡೂ ತುದಿಗಳಲ್ಲಿನ ಬಂಪರ್‌ಗಳನ್ನು ಪರಿಷ್ಕರಿಸಲಾಗಿದೆ ಮತ್ತು ಹೊಸ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

2021ರ ಬೆಂಟ್ಲಿ ಬೆಂಟಾಯ್ಗಾ ಎಸ್‍ಯುವಿಯ ಒಟ್ಟಾರೆ ಸಿಲೂಯೆಟ್ ಸೈಡ್ ಪ್ರೊಫೈಲ್‌ನಲ್ಲಿ ಮಾಡಿದ ಕೆಲವು ಬದಲಾವಣೆಗಳೊಂದಿಗೆ ಒಂದೇ ಆಗಿರುತ್ತದೆ. ಇದು ಹೊಸ 22 ಇಂಚಿನ ವ್ಹೀಲ್ ವಿನ್ಯಾಸವನ್ನು ಪಡೆಯುತ್ತದೆ,

ಇನ್ನು ಈ ಹೊಸ ಎಸ್‍ಯುವಿಯಲ್ಲಿ ಅಂಡಾಕಾರದ ಆಕಾರದ ಸ್ಪ್ಲಿಟ್ ಎಕ್ಸಾಸ್ಟ್ ಪೈಪ್‌ಗಳು.ವಿಂಡ್‌ಸ್ಕ್ರೀನ್ ವೈಪರ್‌ಗಳು ಮತ್ತು 22 ವಾಷರ್ ಜೆಟ್‌ಗಳು ಸಹ ಹೊಂದಿವೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬೆಂಟ್ಲಿ ಬೆಂಟಾಯ್ಗಾ ಎಸ್‍ಯುವಿಯ ಒಳಭಾಗವು ಐಷಾರಾಮಿಯಾಗಿದೆ. ಇದರಲ್ಲಿ ವಿಂಟಿಲೆಟಡ್ ಸೀಟುಗಳನ್ನು ಒಳಗೊಂಡಿವೆ. ಇನ್ನು ಈ ಎಸ್‍ಯುವಿಯಲ್ಲಿ 5.0-ಇಂಚಿನ ಟಚ್‌ಸ್ಕ್ರೀನ್ ಟ್ಯಾಬ್ಲೆಟ್ ಅನ್ನು ಹೊಂದಿದೆ. ಎಸ್‍ಯುವಿ ಅನೇಕ ಸೀಟ್ ಗಳ ಸಂರಚನೆಗಳಲ್ಲಿ ಲಭ್ಯವಾಗುತ್ತಿದೆ.

ಇದರ ಕ್ಯಾಬಿನ್‌ನ ಮುಂಭಾಗದಲ್ಲಿ, ನವೀಕರಿಸಿದ ಹೈ-ರೆಸಲ್ಯೂಶನ್ 10.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಒಳಗೊಂಡಿದೆ.ಇನ್ನು ಇದರಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಇನ್ನು ಈ ಎಸ್‍ಯುವಿಯಲ್ಲಿ ಯುಎಸ್‌ಬಿ-ಸಿ ಪೋರ್ಟ್‌ಗಳು, ಏರ್ ಅಯಾನೈಸರ್‌ಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್, ಹೆಡ್-ಅಪ್ ಡಿಸ್ ಪ್ಲೇ ಮತ್ತು 12-ಸ್ಪೀಕರ್ ಪ್ರೀಮಿಯಂ ಆಡಿಯೊ ಸಿಸ್ಟಂ ಅನ್ನು ಹೊಂದಿದೆ.

2021ರ ಬೆಂಟ್ಲಿ ಬೆಂಟಾಯ್ಗಾ ಎಸ್‍ಯುವಿಯಲ್ಲಿ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 542 ಬಿಹೆಚ್‍ಪಿ ಪವರ್ ಮತ್ತು 770 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ ಮತ್ತು ಇದರಲ್ಲಿ ಎಲೆಕ್ಟ್ರಾನಿಕ್ ಲಾಕಿಂಗ್ ಡಿಫರೆನ್ಷಿಯಲ್ಗಳನ್ನು ಸಹ ಒಳಗೊಂಡಿದೆ.

2021ರ ಬೆಂಟ್ಲಿ ಬೆಂಟಾಯ್ಗಾ ಎಸ್‍ಯುವಿಯ ಹಲವಾರು ಫೀಚರ್ ಗಳು ಮತ್ತು ಉನ್ನತ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇನ್ನು ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್, ಲಂಬ್ಯೂರ್ಗಿನಿ ಉರುಸ್ ಮತ್ತು ರೋಲ್ಸ್ ರಾಯ್ಸ್ ಕುಲ್ಲಿನಾನ್ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.