ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಮುಂದಾಗುತ್ತಿವೆ. ಈಗ ಐಷಾರಾಮಿ ಕಾರು ತಯಾರಕ ಕಂಪನಿಯಾದ Rolls Royce ಸಹ ಎಲೆಕ್ಟ್ರಿಕ್ ಕಾರ್ ಅನ್ನು ಉತ್ಪಾದಿಸಲು ಮುಂದಾಗಿದೆ. ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಐಷಾರಾಮಿ ಕಾರ್ ಅನ್ನು ಪ್ರಸ್ತುತಪಡಿಸಲು ಹೊರಟಿದೆ.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

Rolls Royce ಕೆಲವು ವರ್ಷಗಳ ಹಿಂದೆ ಈ ಎಲೆಕ್ಟ್ರಿಕ್ ಐಷಾರಾಮಿ ಕಾರನ್ನು ಕಾನ್ಸೆಪ್ಟ್ ರೂಪದಲ್ಲಿ ಪರಿಚಯಿಸಿತ್ತು. ಕಂಪನಿಯು ಸೆಪ್ಟೆಂಬರ್ 29 ರಂದು ಈ ಎಲೆಕ್ಟ್ರಿಕ್ ಕಾರ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಸ್ತುತ ಪಡಿಸಲಿದೆ. ಈ ಐಷಾರಾಮಿ ಎಲೆಕ್ಟ್ರಿಕ್ ಕಾರು ಅತಿ ಶ್ರೀಮಂತ ಗ್ರಾಹಕರಿಗೆ ಮಾತ್ರ ಎಂಬುದು ಗಮನಾರ್ಹ.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

ಈ ಕಾರಿನ ಚೊಚ್ಚಲ ಪ್ರದರ್ಶನಕ್ಕೂ ಮುನ್ನ Rolls Royce ಕಂಪನಿಯು ಈ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಐಷಾರಾಮಿ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 500 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. Rolls Royce ಮೋಟಾರ್ಸ್ ಕಾರ್ಸ್ ಸಿಇಒ ಟಾರ್ಸ್ಟನ್ ಮುಲ್ಲರ್-ಒಟ್ವೋಸ್ ಸೋಮವಾರ ತಡರಾತ್ರಿ ಈ ಕಾರಿನ ಟೀಸರ್ ಅನ್ನು ಶೇರ್ ಮಾಡಿದ್ದಾರೆ.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

ಅವರು ಈ ಕಾರಿನ ಚಿತ್ರವನ್ನು ಲಿಂಕ್ಡ್‌ಇನ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿರುವ ಈ ಕಾರಿನ ಹುಡ್‌ನಲ್ಲಿ ದಿ ಸ್ಪಿರಿಟ್ ಆಫ್ ಎಕ್ಸ್‌ಟಸಿಎಂಬುದನ್ನು ಕಾಣಬಹುದು. ಈ ದಶಕದಲ್ಲಿ ಮೊದಲ ಸಂಪೂರ್ಣ ಎಲೆಕ್ಟ್ರಿಕ್ Rolls Royce ಕಾರ್ ಅನ್ನು ಮಾರುಕಟ್ಟೆಗೆ ತರುತ್ತೇವೆ ಎಂದು ನಾವು ಭರವಸೆ ನೀಡಿದ್ದೆವು ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

ಈಗ ನಮ್ಮ ಕಂಪನಿಯು ಐತಿಹಾಸಿಕ ಸಾಹಸವನ್ನು ಆರಂಭಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಎಲೆಕ್ಟ್ರಿಕ್ ಕಾರುಗಳ ಜಗತ್ತಿನಲ್ಲಿ Rolls Royce ಕಂಪನಿಯ ಪ್ರಯತ್ನವು ಅಚ್ಚರಿಯೇನಲ್ಲ. Rolls Royce ಕಂಪನಿಯು ಮುಂದಿನ 20 ವರ್ಷಗಳಲ್ಲಿ ಪೂರ್ತಿಯಾಗಿ ಎಲೆಕ್ಟ್ರಿಕ್ ಕಾರುಗಳನ್ನು ಹೊಂದುವುದಾಗಿ ಘೋಷಿಸಿದೆ.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

ಗಮನಿಸಬೇಕಾದ ಸಂಗತಿಯೆಂದರೆ, 2011 ರಲ್ಲಿಯೇ Rolls Royce ಕಂಪನಿಯು ತನ್ನ Phantom ಕಾರಿನ ಕಾನ್ಸೆಪ್ಟ್ ಎಲೆಕ್ಟ್ರಿಕ್ ಮಾದರಿಯನ್ನು ಪ್ರದರ್ಶಿಸಿತ್ತು.. 2016 ರಲ್ಲಿ Rolls Royce ಕಂಪನಿಯು ವಿಷನ್ ನೆಕ್ಸ್ಟ್ 100 ಎಂಬ ಕಾನ್ಸೆಪ್ಟ್ ಕಾರ್ ಅನ್ನು ಪ್ರದರ್ಶಿಸಿತ್ತು. ಈ ಕಾರು ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿದ್ದು, ಅಟಾನಾಮಸ್ ಫೀಚರ್ ಗಳನ್ನು ನೀಡಲಾಗಿದೆ.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

ಹೋಮ್ ಆಫ್ Rolls Royce‌ನಲ್ಲಿ ನಮ್ಮ ಎಂಜಿನಿಯರ್‌ಗಳು, ವಿನ್ಯಾಸಕಾರರು ಹಾಗೂ ತಜ್ಞರ ನಂಬಲಾಗದ ಕೌಶಲ್ಯ, ಪರಿಣತಿ, ದೂರದೃಷ್ಟಿ ಮತ್ತು ಸಮರ್ಪಣೆಯ ಮೂಲಕ ಆದಷ್ಟು ಬೇಗ ಸಾಧಿಸಲು ಸಾಧ್ಯವಿದೆ ಎಂದು ಮುಲ್ಲರ್-ಒಟ್ವೋಸ್ ಹೇಳಿದ್ದಾರೆ. Rolls Royce ಕಂಪನಿಯು ಈ ಎಲೆಕ್ಟ್ರಿಕ್ ಕಾರಿನ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

ಆದರೆ ಐಷಾರಾಮಿ ಕಾರು ತಯಾರಕ ಕಂಪನಿಯಾದ Rolls Royce ಹಲವು ವರ್ಷಗಳಿಂದ ಕಾನ್ಸೆಪ್ಟ್ ಮೂಲಕ ತೋರಿಸಿರುವುದರಿಂದ ಈ ಕಾರು ಐಷಾರಾಮಿ ಫೀಚರ್ ಗಳನ್ನು ಹೊಂದುವುದು ಖಚಿತ. ಈ ವರ್ಷದ ಆರಂಭದಲ್ಲಿ Rolls Royce ಕಂಪನಿಯು ಸೈಲೆಂಟ್ ಶ್ಯಾಡೋ ಎಂಬ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ತಿಳಿಸಿತ್ತು. ಕಂಪನಿಯು ಮೇ ತಿಂಗಳಲ್ಲಿ ಜರ್ಮನಿಯಲ್ಲಿರುವ ಪೇಟೆಂಟ್ ಕಚೇರಿಗೆ ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿತ್ತು.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

ಬ್ರಿಟಿಷ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ Rolls Royce ತನ್ನ ಎಲೆಕ್ಟ್ರಿಕ್ ಕಾರಿಗೆ ಸೈಲೆಂಟ್ ಶ್ಯಾಡೋ ಎಂಬ ಹೆಸರನ್ನಿಟ್ಟಿರುವುದು ವಿಶೇಷ.ವರದಿಗಳ ಪ್ರಕಾರ Rolls Royce ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರಿನಲ್ಲಿ 100 ಕಿ.ವ್ಯಾ ಬ್ಯಾಟರಿ ಪ್ಯಾಕ್ ಬಳಸಲಾಗುವುದು. ಈ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 500 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

Rolls Royce ಕಂಪನಿಯು ಈಗಾಗಲೇ ತನ್ನ ಹಲವು ಕಾರುಗಳಲ್ಲಿ ಶ್ಯಾಡೋ ಹೆಸರನ್ನು ಬಳಸಿದೆ. ಇವುಗಳಲ್ಲಿ Rolls Royce ಸಿಲ್ವರ್ ಶ್ಯಾಡೋ ಪ್ರಮುಖ ಕಾರು. ಶೀಘ್ರದಲ್ಲೇ ಸಿಲ್ವರ್ ಶ್ಯಾಡೋವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ಕಂಪನಿ ಹೇಳಿದೆ. ಆದರೆ ಈ ಕಾರನ್ನು ಯಾವಾಗ ಬಿಡುಗಡೆಗೊಳಿಸಲಾಗುವುದು ಎಂಬ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

ಮಾಧ್ಯಮ ವರದಿಗಳ ಪ್ರಕಾರ ಜರ್ಮನಿಯ ಮ್ಯೂನಿಚ್'ನಲ್ಲಿರುವ ಕಂಪನಿಯ ಉತ್ಪನ್ನ ಅಭಿವೃದ್ಧಿ ಕೇಂದ್ರದಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್‌ ಕಾರಿನ ಎಲೆಕ್ಟ್ರಿಕ್ ಮೂಲ ಮಾದರಿಯನ್ನು ಪರೀಕ್ಷಿಸಲಾಗುತ್ತಿದೆ. ರೋಲ್ಸ್ ರಾಯ್ಸ್ ಕಂಪನಿಯು ತನ್ನ ಪ್ರಮುಖ ಪ್ರತಿಸ್ಪರ್ಧಿ ಕಂಪನಿಯಾದ ಬೆಂಟ್ಲಿಯ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳಿಗೆ ಪೈಪೋಟಿ ನೀಡಲು ನಿರ್ಧರಿಸಿದೆ.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

Rolls Royce ಕಂಪನಿಯು 2040ರಿಂದ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಉತ್ಪಾದಿಸುವುದಾಗಿ ಈಗಾಗಲೇ ಘೋಷಿಸಿದೆ. ನಂತರ ಕಂಪನಿಯು ಪೆಟ್ರೋಲ್, ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.

ಚೊಚ್ಚಲ ಎಲೆಕ್ಟ್ರಿಕ್ ಕಾರಿನ ಪ್ರದರ್ಶನಕ್ಕೆ ಮುಂದಾದ Rolls Royce

Rolls Royce ಕಂಪನಿಯು ಶಕ್ತಿಶಾಲಿಯಾದ ಹಾಗೂ ವೇಗದ ಎಂಜಿನ್‌ಗಳಿಗೆ ಹೆಸರುವಾಸಿಯಾಗಿದೆ. ಈಗ ಕಂಪನಿಯು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳತ್ತ ಸಾಗುತ್ತಿದೆ. ಇನ್ನು ಮುಂದೆ ರೋಲ್ಸ್ ರಾಯ್ಸ್ ಕಾರು ಗ್ರಾಹಕರಿಗೆ ಎಂಜಿನ್‌ ಶಬ್ದವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.

Most Read Articles

Kannada
English summary
Rolls royce company to show its first electric luxury car on 29th september details
Story first published: Tuesday, September 28, 2021, 14:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X