ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಕಿಯಾ ಮೋಟಾರ್ಸ್ ಕಂಪನಿಯು 2019ರಲ್ಲಿ ಸೆಲ್ಟೊಸ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಬಿಡುಗಡೆಯಾದಾಗಿನಿಂದ ಸೆಲ್ಟೊಸ್ ಎಸ್‌ಯುವಿಯು ಹೆಚ್ಚು ಜನಪ್ರಿಯವಾಗಿದೆ.

ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಮಾರಾಟದಲ್ಲಿ ಸೆಲ್ಟೊಸ್ ಎಸ್‌ಯುವಿಯು ಹ್ಯುಂಡೈ ಕ್ರೆಟಾ ಎಸ್‌ಯುವಿಗೆ ಪೈಪೋಟಿ ನೀಡುತ್ತಿದೆ. ಕಿಯಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಐಷಾರಾಮಿ ಎಂಪಿವಿ ಸೆಗ್ ಮೆಂಟಿನಲ್ಲಿ ಕಾರ್ನಿವಲ್ ಹಾಗೂ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ ಮೆಂಟಿನಲ್ಲಿ ಸೊನೆಟ್ ಎಸ್‌ಯುವಿಯನ್ನು ಮಾರಾಟ ಮಾಡುತ್ತಿದೆ.

ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಈ ಮೂಲಕ ಕಿಯಾ ಮೋಟಾರ್ಸ್ ದೇಶಿಯ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಕಂಪನಿಯು ಸೆಲ್ಟೊಸ್ ಎಸ್‌ಯುವಿಯನ್ನು ಕೆಲವು ಹೆಚ್ಚುವರಿ ಫೀಚರ್'ಗಳೊಂದಿಗೆ ಅಪ್ ಡೇಟ್ ಮಾಡಲು ಮುಂದಾಗಿದೆ.

ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಸೆಲ್ಟೊಸ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ ಎಸ್‌ಯುವಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಾರುಗಳಲ್ಲಿ ಮಾಡಿಫಿಕೇಶನ್ ಮಾಡಲು ಬಯಸುವವರಿಗೆ ಸೆಲ್ಟೊಸ್ ಸೂಕ್ತ ಆಯ್ಕೆಯಾಗಿದೆ.

ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಈಗಾಗಲೇ ನಾವು ಕಸ್ಟಮೈಸ್ ಮಾಡಲಾದ ಹಲವು ಸೆಲ್ಟೊಸ್ ಎಸ್‌ಯುವಿಗಳನ್ನು ನೋಡಿದ್ದೇವೆ. ಈಗ ರಕ್ತ ಚೆಲ್ಲಿದ ಶೈಲಿಯಲ್ಲಿ ಸೆಲ್ಟೊಸ್ ಎಸ್‌ಯುವಿಯನ್ನು ಕಸ್ಟಮೈಸ್ ಮಾಡಲಾಗಿದೆ.

ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಈ ಕಸ್ಟಮೈಸ್ ಮಾಡಲಾದ ವೀಡಿಯೊವನ್ನು ಎಫ್ಎಫ್ ಫಿಲ್ಮ್ಸ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ಸೆಲ್ಟೊಸ್ ಎಸ್‌ಯುವಿಯನ್ನು ನೋಡಿದ ತಕ್ಷಣ ಹಾರರ್ ಸಿನಿಮಾಗೆ ಸಿದ್ದಪಡಿಸಿರುವ ಕಾರಿನಂತೆ ಕಾಣುತ್ತದೆ.

ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಬಿಳಿ ಬಣ್ಣದ ಸೆಲ್ಟೊಸ್ ಎಸ್‌ಯುವಿಯನ್ನು ಬ್ಲಡ್ ಸ್ಪಾಟರ್ ವಿನ್ಯಾಸದಿಂದ ಸಿದ್ದಪಡಿಸಲಾಗಿದೆ. ಸಾಮಾನ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿರುವ ಕಾರುಗಳನ್ನು ಈ ರೀತಿ ಕಸ್ಟಮೈಸ್ ಮಾಡಲಾಗುತ್ತದೆ.

ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಆದರೆ ಇದೇ ಮೊದಲ ಬಾರಿಗೆ ಭಾರತದಲ್ಲಿರುವ ಎಸ್‌ಯುವಿಯನ್ನು ಈ ರೀತಿ ಕಸ್ಟಮೈಸ್ ಮಾಡಲಾಗಿದೆ. ಈ ಬ್ಲಡ್ ಸ್ಪ್ಯಾಟರ್ ವಿನ್ಯಾಸವನ್ನು ಬಂಪರ್, ರೂಫ್, ಡೋರ್ ಹಾಗೂ ಬಾನೆಟ್ ಮೇಲೆ ಕಾಣಬಹುದು.

ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಈ ಕಸ್ಟಮೈಸ್ ವಿನ್ಯಾಸವು ಎಲ್ಲರಿಗೂ ಇಷ್ಟವಾಗದಿದ್ದರೂ ಜನರ ಗಮನವನ್ನು ತನ್ನತ್ತ ಸೆಳೆಯುವುದು ಸುಳ್ಳಲ್ಲ. ಈ ರೀತಿ ಕಸ್ಟಮೈಸ್ ಮಾಡಲು ಸೆಲ್ಟೊಸ್ ಎಸ್‌ಯುವಿಯ ಟಾಪ್ ಎಂಡ್ ಮಾದರಿಯನ್ನು ಬಳಸಿರುವಂತೆ ಕಾಣುತ್ತದೆ.

ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಈ ಎಸ್‌ಯುವಿಯಲ್ಲಿ ಗ್ಲೋಸಿ ಬ್ಲಾಕ್ ಟೈಗರ್ ನೋಸ್ ಗ್ರಿಲ್, ಎಲ್ಇಡಿ ಡಿ‌ಆರ್‌ಎಲ್, ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಫಾಗ್ ಲ್ಯಾಂಪ್ ಹಾಗೂ ಎಲ್ಇಡಿ ಟೇಲ್ ಲ್ಯಾಂಪ್'ಗಳನ್ನು ನೀಡಲಾಗಿದೆ. ಈ ಎಸ್‌ಯುವಿಯಲ್ಲಿದ್ದ ಅಲಾಯ್ ವ್ಹೀಲ್‌ಗಳನ್ನು ಬದಲಿಸಿ ಆಫ್ಟರ್ ಮಾರ್ಕೆಟ್ ಅಲಾಯ್ ವ್ಹೀಲ್‌ಗಳೊಂದಿಗೆ ಅಳವಡಿಸಲಾಗಿದೆ.

ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಕಿಯಾ ಸೆಲ್ಟೊಸ್ ಎಸ್‌ಯುವಿಯನ್ನು ಭಾರತದಲ್ಲಿ - 1.5 ಲೀಟರ್ ಎನ್ಎ ಪೆಟ್ರೋಲ್, 1.5 ಲೀಟರ್ ಟರ್ಬೊ ಡೀಸೆಲ್ ಹಾಗೂ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಬ ಮೂರು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

ಕಿಯಾ ಸೆಲ್ಟೊಸ್ ಎಸ್‌ಯುವಿಯ ಬೆಲೆ ಭಾರತದ ಎಕ್ಸ್‌ಶೋರೂಂ ದರದಂತೆ ರೂ.9.95 ಲಕ್ಷಗಳಾಗಿದೆ. ಕಿಯಾ ಸೆಲ್ಟೊಸ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್, ಹ್ಯುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್ ಹಾಗೂ ಸ್ಕೋಡಾ ಕುಶಾಕ್ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಹಾರರ್ ಸಿನಿಮಾ ಶೈಲಿಯಲ್ಲಿ ಕಸ್ಟಮೈಸ್'ಗೊಂಡ ಕಿಯಾ ಸೆಲ್ಟೊಸ್ ಎಸ್‌ಯುವಿ

ಸೆಲ್ಟೊಸ್ ಎಸ್‌ಯುವಿಯ 7 ಸೀಟುಗಳ ಆವೃತ್ತಿಯು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯಾದ ನಂತರ ಈ ಆವೃತ್ತಿಯು ಹ್ಯುಂಡೈ ಅಲ್ಕಾಜರ್, ಎಂಜಿ ಹೆಕ್ಟರ್ ಪ್ಲಸ್ ಹಾಗೂ ಟಾಟಾ ಸಫಾರಿ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

ಚಿತ್ರ ಕೃಪೆ: ಎಫ್ಎಫ್ ಫಿಲ್ಮ್ಸ್

Most Read Articles

Kannada
English summary
Seltos SUV customized with blood spatter design. Read in Kannada.
Story first published: Saturday, July 3, 2021, 10:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X