ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರು ಟೆಸ್ಟ್ ಡ್ರೈವ್ ಮಾಡಿದ ನಟ

ಎಕ್ಸ್ 7 ಬಿಎಂಡಬ್ಲ್ಯು ಕಂಪನಿಯ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ ಒಂದು. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.93 ಲಕ್ಷಗಳಾಗಿದೆ. ಜನಪ್ರಿಯ ನಟರೊಬ್ಬರು ಈ ದುಬಾರಿ ಕಾರು ಖರೀದಿಸಲು ಮುಂದಾಗಿರುವ ಬಗ್ಗೆ ವರದಿಯಾಗಿದೆ.

ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರು ಟೆಸ್ಟ್ ಡ್ರೈವ್ ಮಾಡಿದ ನಟ

ಹೊಸ ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರನ್ನು ಬಾಲಿವುಡ್ ನಟ ಶಾಹಿದ್ ಕಪೂರ್ ಟೆಸ್ಟ್ ಡ್ರೈವ್ ಮಾಡಿದ್ದಾರೆ. ಅವರು ಕಾರ್ ಅನ್ನು ಟೆಸ್ಟ್ ಡ್ರೈವ್ ಮಾಡುವ ಸಮಯದಲ್ಲಿ ತೆಗೆದ ಫೋಟೋಗಳು ಈಗ ವೈರಲ್ ಆಗುತ್ತಿವೆ.

ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರು ಟೆಸ್ಟ್ ಡ್ರೈವ್ ಮಾಡಿದ ನಟ

ಅವರು ಬಿಎಂಡಬ್ಲ್ಯು ಎಕ್ಸ್ 7 ಕಾರ್ ಅನ್ನು ಟೆಸ್ಟ್ ಡ್ರೈವ್ ಮಾಡುತ್ತಿರುವ ಬಗ್ಗೆ ಬಾಲಿವುಡ್ ಹಂಗಮಾ ಸೈಟ್ ವರದಿ ಮಾಡಿ ಅದರ ಫೋಟೋಗಳನ್ನು ಪ್ರಕಟಿಸಿದೆ. ಶಾಹಿದ್ ಕಪೂರ್ ಈಗಾಗಲೇ ಹಲವಾರು ದುಬಾರಿ ಕಾರುಗಳನ್ನು ಹೊಂದಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರು ಟೆಸ್ಟ್ ಡ್ರೈವ್ ಮಾಡಿದ ನಟ

ಶಾಹಿದ್ ಕಪೂರ್ ಮರ್ಸಿಡಿಸ್ ಬೆಂಝ್ ಎಎಂಜಿ ಎಸ್ 400, ರೇಂಜ್ ರೋವರ್ ವೋಗ್, ಜಾಗ್ವಾರ್ ಎಕ್ಸ್‌ಕೆಆರ್-ಎಸ್'ನಂತಹ ಕಾರುಗಳನ್ನು ಹಾಗೂ ಹಾರ್ಲೆ ಡೇವಿಡ್ಸನ್ ಫ್ಯಾಟ್, ಯಮಹಾ ಎಂಟಿ 01ನಂತಹ ಬೈಕುಗಳನ್ನು ಹೊಂದಿದ್ದಾರೆ.

ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರು ಟೆಸ್ಟ್ ಡ್ರೈವ್ ಮಾಡಿದ ನಟ

ಈಗ ಶಾಹಿದ್ ಕಪೂರ್ ಮತ್ತೊಂದು ಐಷಾರಾಮಿ ಕಾರು ಖರೀದಿಸಲು ಮುಂದಾಗಿದ್ದಾರೆ. ಈ ಕಾರಣಕ್ಕೆ ಬಿಎಂಡಬ್ಲ್ಯು ಕಂಪನಿಯ ಐಷಾರಾಮಿ ಕಾರುಗಳಲ್ಲಿ ಒಂದಾದ ಎಕ್ಸ್ 7 ಕಾರ್ ಅನ್ನು ಟೆಸ್ಟ್ ಡ್ರೈವ್ ಮಾಡಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರು ಟೆಸ್ಟ್ ಡ್ರೈವ್ ಮಾಡಿದ ನಟ

ಈ ಐಷಾರಾಮಿ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಡಿಪಿಇ, ಡಿಪಿಇ ಸಿಗ್ನೇಚರ್, 40 ಐಎಂ ಸ್ಪೋರ್ಟ್ ಹಾಗೂ ಎಂ 50 ಡಿ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರು ಟೆಸ್ಟ್ ಡ್ರೈವ್ ಮಾಡಿದ ನಟ

ಇವುಗಳಲ್ಲಿ ಎಂ 50 ಡಿ ಹೈ-ಎಂಡ್ ಮಾದರಿಯಾಗಿದೆ. ಈ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.65 ಕೋಟಿಗಳಾಗಿದೆ. ಇದು ಕೇವಲ ಎಕ್ಸ್‌ಶೋರೂಂ ದರವಾಗಿದ್ದು, ಆನ್ ರೋಡ್ ದರ ಇನ್ನಷ್ಟು ಹೆಚ್ಚಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರು ಟೆಸ್ಟ್ ಡ್ರೈವ್ ಮಾಡಿದ ನಟ

ಡಿಪಿಇ ಹಾಗೂ ಡಿಪಿಇ ಸಿಗ್ನೇಚರ್ ಮಾದರಿಗಳಲ್ಲಿ 3.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 262 ಬಿ‌ಹೆಚ್‌ಪಿ ಪವರ್ ಹಾಗೂ 620 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರು ಟೆಸ್ಟ್ ಡ್ರೈವ್ ಮಾಡಿದ ನಟ

40 ಐಎಂ ಸ್ಪೋರ್ಟ್ ಮಾದರಿಯಲ್ಲಿ 3.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದರೆ, ಎಂ 50 ಡಿ ಮಾದರಿಯಲ್ಲಿ 3.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರು ಟೆಸ್ಟ್ ಡ್ರೈವ್ ಮಾಡಿದ ನಟ

ಈ ಎಲ್ಲಾ ಎಂಜಿನ್‌ಗಳು ಬ್ಯಾಟಲ್ ಶಿಫ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ಹೊಂದಿವೆ. ಈ ಐಷಾರಾಮಿ ಕಾರು ಇಕೋ ಪ್ರೊ, ಕಂಫರ್ಟ್, ಸ್ಪೋರ್ಟ್ ಹಾಗೂ ಅಡಾಪ್ಟಿವ್ ಎಂಬ ನಾಲ್ಕು ವಿಭಿನ್ನ ರೈಡಿಂಗ್ ಮೋಡ್'ಗಳನ್ನು ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್ 7 ಐಷಾರಾಮಿ ಕಾರು ಟೆಸ್ಟ್ ಡ್ರೈವ್ ಮಾಡಿದ ನಟ

ಈ ಕಾರಿನಲ್ಲಿ 5 ವೇ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವಾರು ಐಷಾರಾಮಿ ಫೀಚರ್'ಗಳನ್ನು ನೀಡಲಾಗಿದೆ. ಈ ಕಾರಣಕ್ಕೆ ಈ ಕಾರುಚಿತ್ರ ತಾರೆಯರು ಹಾಗೂ ಉದ್ಯಮಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಶಾಹಿದ್ ಕಪೂರ್ ಅವರ ಟೆಸ್ಟ್ ಡ್ರೈವ್ ಇದನ್ನು ಖಚಿತಪಡಿಸಿದೆ.

Most Read Articles

Kannada
English summary
Shahid Kapoor takes test drive of BMW X 7 luxury car. Read in Kannada.
Story first published: Saturday, March 13, 2021, 12:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X