ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೋಜ್ ಡಾರ್ಕ್ ಎಡಿಷನ್ ಬಿಡುಗಡೆಗೆ ಸಜ್ಜಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೊಜ್ ಕಾರು ಮಾದರಿಗಳಲ್ಲಿ ಡಾರ್ಕ್ ಎಡಿಷನ್ ಬಿಡುಗಡೆ ಮಾಡುತ್ತಿದ್ದು, ಹೊಸ ಬಣ್ಣದ ಆಯ್ಕೆಯ ಕಾರು ಮಾದರಿಗಳಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭವಾಗಿದೆ.

ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೋಜ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೆ ಸಜ್ಜಾದ ಟಾಟಾ ಮೋಟಾರ್ಸ್

ಕಳೆದ ವರ್ಷ ಮೊದಲ ಬಾರಿಗೆ ಹ್ಯಾರಿಯರ್ ಕಾರು ಮಾದರಿಯಲ್ಲಿ ಡಾರ್ಕ್ ಎಡಿಷನ್ ಪರಿಚಯಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಹ್ಯಾರಿಯರ್ 2021ರ ಮಾದರಿಯ ಡಾರ್ಕ್ ಎಡಿಷನ್‌ನೊಂದಗೆ ನೆಕ್ಸಾನ್ ಮತ್ತು ಆಲ್‌ಟ್ರೊಜ್ ಮಾದರಿಗಳಲ್ಲೂ ಹೊಸ ಬಣ್ಣದ ಆಯ್ಕೆ ಪರಿಚಯಿಸುವ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೋಜ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೆ ಸಜ್ಜಾದ ಟಾಟಾ ಮೋಟಾರ್ಸ್

ಹೊಸ ಕಾರು ಮಾದರಿಗಳ ಟೀಸರ್ ಚಿತ್ರವನ್ನು ಸಹ ಈಗಾಗಲೇ ಬಿಡುಗಡೆ ಮಾಡಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರುಗಳು ಡಾರ್ಕ್(ಕಡುಗಪ್ಪು) ಬಣ್ಣದ ಆಯ್ಕೆಯೊಂದಿಗೆ ಸ್ಟ್ಯಾಂಡರ್ಡ್ ಮಾದರಗಳಿಂತಲೂ ಆಕರ್ಷಕ ನೋಟ ಹೊಂದಿರಲಿವೆ.

ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೋಜ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೆ ಸಜ್ಜಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ತನ್ನ ಪ್ರಮುಖ ಕಾರು ಉತ್ಪನ್ನಗಳಲ್ಲಿ ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಹೊಸ ಬದಲಾವಣೆಗಳನ್ನು ಪರಿಚಯಿಸುವ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗುತ್ತಿರುವುದಲ್ಲದೆ ಬೇಡಿಕೆ ಕಾಯ್ದುಕೊಳ್ಳಲು ನೆರವಾಗುತ್ತಿದೆ.

ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೋಜ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೆ ಸಜ್ಜಾದ ಟಾಟಾ ಮೋಟಾರ್ಸ್

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಬದಲಾವಣೆಗಳೊಂದಿಗೆ ಕಾರು ಉತ್ಪನ್ನಗಳನ್ನು ಉನ್ನತೀಕರಿಸುತ್ತಿರುವ ಟಾಟಾ ಕಂಪನಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದು, ಆಲ್‌ಟ್ರೊಜ್ ಮತ್ತು ನೆಕ್ಸಾನ್ ಕಾರು ಮಾದರಿಗಳ ಹೊಸ ಬಣ್ಣದ ಆಯ್ಕೆ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗುವ ನೀರಿಕ್ಷೆಗಳಿವೆ.

ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೋಜ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೆ ಸಜ್ಜಾದ ಟಾಟಾ ಮೋಟಾರ್ಸ್

ಹ್ಯಾರಿಯರ್ ಮಾದರಿಯ ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ಮಾದರಿಗಳಲ್ಲಿ ಈಗಾಗಲೇ ಡಾರ್ಕ್ ಎಡಿಷನ್ ಮಾದರಿಯು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಮಾದರಿಯ ಮೂಲಕ ಕೆಲವು ಬದಲಾವಣೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೋಜ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೆ ಸಜ್ಜಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಡಾರ್ಕ್ ಎಡಿಷನ್ ಮಾದರಿಗಳನ್ನು ಹ್ಯಾರಿಯರ್ ಮಾದರಿಯ ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದು, ನೆಕ್ಸಾನ್ ಮತ್ತು ಆಲ್‌ಟ್ರೊಜ್ ಮಾದರಿಗಳಲ್ಲೂ ಡಾರ್ಕ್ ಎಡಿಷನ್ ಹೈ ಎಂಡ್ ಮಾದರಿಗಳಲ್ಲಿ ಮಾತ್ರವೇ ಮಾರಾಟಗೊಳ್ಳಬಹುದಾಗಿದೆ.

ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೋಜ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೆ ಸಜ್ಜಾದ ಟಾಟಾ ಮೋಟಾರ್ಸ್

ಡಾರ್ಕ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದರೂ ಹೊಸ ಬಣ್ಣದ ಆಯ್ಕೆಗಾಗಿ ತುಸು ದುಬಾರಿಯಾಗಿರಲಿದ್ದು, ಹೊಸ ಬಣ್ಣದ ಆಯ್ಕೆಯೊಂದಿಗೆ ಹೊಸ ಕಾರುಗಳು ಐಷಾರಾಮಿ ಅನುಭವ ನೀಡುತ್ತವೆ.

ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೋಜ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೆ ಸಜ್ಜಾದ ಟಾಟಾ ಮೋಟಾರ್ಸ್

ಹೊಸ ಕಾರು ಮಾದರಿಗಳಲ್ಲಿ ಕೇವಲ ಹೊರಭಾಗದಲ್ಲಿ ಮಾತ್ರವಲ್ಲ ಕ್ಯಾಬಿನ್ ಸಹ ಸಂಪೂರ್ಣವಾಗಿ ಕಪ್ಪುಬಣ್ಣದೊಂದಿಗೆ ಕೂಡಿರಲಿದ್ದು, ಹೊಸ ಕಾರುಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ. 20 ಸಾವಿರದಿಂದ ರೂ. 35 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿವೆ.

Most Read Articles

Kannada
English summary
Tata Nexon, Altroz & Harrier Dark Edition Launching Soon. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X