ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಇಂಡಿಯಾ ತನ್ನ ವಿವಿಧ ಕಾರುಗಳ ಮಾರಾಟ ಹೆಚ್ಚಳಕ್ಕಾಗಿ ಮಾರ್ಚ್ ತಿಂಗಳಿನಲ್ಲಿ ಹಲವಾರು ಆಫರ್‌ಗಳನ್ನು ಘೋಷಿಸಿದ್ದು, ಹೊಸ ಆಫರ್‌ಗಳಲ್ಲಿ ಪ್ರಮುಖ ಕಾರುಗಳ ಖರೀದಿ ಮೇಲೆ ಗರಿಷ್ಠ ಉಳಿತಾಯ ಮಾಡಬಹುದಾಗಿದೆ.

ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ

ಹೊಸ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಹೆಚ್ಚಿನ ಮಟ್ಟದ ಆಫರ್‌ಗಳನ್ನು ಮುಂದುವರಿಸಿದ್ದು, ಟೊಯೊಟಾ ಇಂಡಿಯಾ ಕಂಪನಿಯು ಕೂಡಾ ಅರ್ಬನ್ ಕ್ರೂಸರ್ ಸೇರಿದಂತೆ ವಿವಿಧ ಕಾರು ಮಾದರಿಗಳ ಮೇಲೆ ಮಾರ್ಚ್ ಅವಧಿಗಾಗಿ ಆಕರ್ಷಕ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಯಾರಿಸ್ ಸೆಡಾನ್ ಮೇಲೆ ಗರಿಷ್ಠಉಳಿತಾಯ ಮಾಡಬಹುದಾಗಿದೆ.

ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ

ಲಾಕ್‌ಡೌನ್‌ ವಿಧಿಸಿದ್ದ ಅವಧಿಯಿಂದಲೂ ಹೊಸ ವಾಹನಗಳ ಮಾರಾಟದಲ್ಲಿ ನಷ್ಟ ಅನುಭವಿಸುತ್ತಲೇ ಬಂದಿದ್ದ ವಿವಿಧ ಆಟೋ ಉತ್ಪಾದನಾ ಕಂಪನಿಗಳಿಗೆ ದಸರಾ ಮತ್ತು ದೀಪಾವಳಿ ನಂತರ ನೀರಿಕ್ಷೆಗೂ ಮೀರಿ ಬೇಡಿಕೆ ಹರಿದುಬರುತ್ತಿದ್ದು, ಕಳೆದ ಮೂರ್ನಾಲ್ಕು ತಿಂಗಳಿನಿಂದ ಹೊಸ ವಾಹನಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ

ಟೊಯೊಟಾ ಕಂಪನಿಯು ಕೂಡಾ ಕಳೆದ ಕೆಲ ತಿಂಗಳಿನಿಂದ ಕಾರು ಮಾರಾಟದಲ್ಲಿ ಭಾರೀ ಪ್ರಮಾಣದ ಬೆಳವಣಿಗೆ ಸಾಧಿಸುತ್ತಿದ್ದು, ಮುಂಬರುವ ಹಬ್ಬದ ಋತುಗಳಲ್ಲಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ವಿವಿಧ ಆಫರ್‌ಗಳ ಮೂಲಕ ಗರಿಷ್ಠ ರೂ.65 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದೆ.

ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ

ಅರ್ಬನ್ ಕ್ರೂಸರ್, ಯಾರಿಸ್ ಮತ್ತು ಗ್ಲಾಂಝಾ ಕಾರುಗಳ ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ. ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಅರ್ಬನ್ ಕ್ರೂಸರ್, ಯಾರಿಸ್ ಮತ್ತು ಗ್ಲಾಂಝಾ ಹೊರತುಪಡಿಸಿ ಕಂಪನಿಯ ಇತರೆ ಯಾವುದೇ ಕಾರುಗಳ ಮೇಲೆ ಆಫರ್‌ಗಳು ಲಭ್ಯವಿರುವುದಿಲ್ಲ.

ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ

ಟೊಯೊಟಾ ಕಂಪನಿಯು ಅರ್ಬನ್ ಕ್ರೂಸರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿದಾರರಿಗೆ ರೂ.20 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದ್ದು, ಆಯ್ದ ಕಾರು ಮಾರಾಟಗಾರರಿಂದ ಹೆಚ್ಚುವರಿ ಆಕ್ಸೆಸರಿಸ್ ಪ್ಯಾಕೇಜ್ ಪಡೆದುಕೊಳ್ಳಬಹುದಾಗಿದೆ.

ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ

ಗ್ಲಾಂಝಾ ಹ್ಯಾಚ್‌ಬ್ಯಾಕ್ ಕಾರು ಆವೃತ್ತಿಯನ್ನು ಖರೀದಿಸುವ ಗ್ರಾಹಕರಿಗೆ ರೂ. 10 ಸಾವಿರ ಕ್ಯಾಶ್‌ಬ್ಯಾಕ್, ರೂ.10 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ರೂ. 4 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ

ಹಾಗೆಯೇ ಯಾರಿಸ್ ಸೆಡಾನ್ ಕಾರು ಖರೀದಿಯ ಮೇಲೆ ಟೊಯೊಟಾ ಕಂಪನಿಯು ರೂ. 20 ಸಾವಿರ ಕ್ಯಾಶ್‌ಬ್ಯಾಕ್, ರೂ.25 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ರೂ. 20 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿದೆ.

ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ

ಇನ್ನು ಟೊಯೊಟಾ ಕಂಪನಿಯು 2021ರ ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ್ದು, ಕಳೆದ ತಿಂಗಳು ಟೊಯೊಟಾ ಕಂಪನಿಯು 14,075 ಯುನಿಟ್ ಗಳನ್ನು ಮಾರಾಟಗೊಳಿಸಿದೆ.

MOST READ: ಗ್ರಾಹಕರ ದೂರು ಹಿನ್ನೆಲೆ...ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಸಬ್ಸಿಡಿ ರದ್ದು

ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ

ಕಳೆದ ವರ್ಷದ ಫೆಬ್ರವರಿ ಕಾರು ಮಾರಾಟಕ್ಕಿಂತಲೂ ಶೇ.36 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಿದ್ದು, ಮುಂಬರುವ ಯುಗಾದಿ ಸಂಭ್ರಮದಲ್ಲಿ ಹೊಸ ವಾಹನ ಖರೀದಿ ಹೆಚ್ಚಳವಾಗುವ ನೀರಿಕ್ಷೆಯೊಂದಿಗೆ ವಿವಿಧ ಆಫರ್‌ಗಳನ್ನು ಘೋಷಿಸಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Announced Discounts And Offers For Yaris, Urban Cruiser, Glanzan In March 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X