2021ರ ಪೊಲೊ ಫೇಸ್‌ಲಿಫ್ಟ್ ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಫೇಸ್‌ಲಿಫ್ಟೆಡ್ ಪೊಲೊ ಕಾರನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಸದ್ಯ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಆರನೇ ತಲೆಮಾರಿನ ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.

2021ರ ಪೊಲೊ ಫೇಸ್‌ಲಿಫ್ಟ್ ಕಾರಿನ ಟಿವಿಸಿ ಬಿಡುಗಡೆಳಿಸಿದ ಫೋಕ್ಸ್‌ವ್ಯಾಗನ್

ಇದು ಆರನೇ ತಲೆಮಾರಿನ ಪೊಲೊ ಕಾರಿನ ಫೇಸ್‌ಲಿಫ್ಟ್ ಮಾದರಿಯಾಗಿದೆ. ಇದೀಗ ಫೋಕ್ಸ್‌ವ್ಯಾಗನ್ ಈ ಹೊಸ ಪೊಲೊ ಫೇಸ್‌ಲಿಫ್ಟ್ ಕಾರಿನ ಆಕರ್ಷಕ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಕಾರಿನ ಹೊರ ಭಾಗದಲ್ಲಿ ಮತ್ತು ಒಳಭಾಗದಲ್ಲಿ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಹೊಸ ಪೊಲೊ ಎಂಕ್ಯೂಬಿ ಎಒ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಇದೇ ಪ್ಲಾಟ್ ಫಾರ್ಮ್ ಅಡಿಯಲ್ಲಿ ನ್ಯೂ ಜನರೇಷನ್ ಸ್ಕೋಡಾ ಫ್ಯಾಬಿಯಾ ಕಾರನ್ನು ಉತ್ಪಾದಿಸಲಾಗುತ್ತದೆ.

2021ರ ಪೊಲೊ ಫೇಸ್‌ಲಿಫ್ಟ್ ಕಾರಿನ ಟಿವಿಸಿ ಬಿಡುಗಡೆಳಿಸಿದ ಫೋಕ್ಸ್‌ವ್ಯಾಗನ್

2021ರ ಫೋಕ್ಸ್‌ವ್ಯಾಗನ್ ಪೊಲೊ ಫೇಸ್‌ಲಿಫ್ಟ್ ದೊಡ್ಡ ಗಾಲ್ಫ್ ಮಾದರಿಯ ವಿನ್ಯಾಸದೊಂದಿಗೆ ಹೋಲುವಂತಿದೆ. ಫೇಸ್‌ಲಿಫ್ಟೆಡ್ ಟಿಗ್ವಾನ್ ಮತ್ತು ಗಾಲ್ಫ್‌ನಂತೆ ಇದು ಹೊಸ ಎಲ್‌ಇಡಿ ಲೈಟಿಂಗ್ ಬಾರ್ ಅನ್ನು ಪಡೆಯುತ್ತದೆ ಮತ್ತು ಸ್ಟ್ಯಾಂಡರ್ಡ್ ಎಲ್ಇಡಿ ಕಿರಣಗಳೊಂದಿಗೆ ಹೆಡ್‌ಲ್ಯಾಂಪ್‌ಗಳು ಮೊದಲಿಗಿಂತ ತೀಕ್ಷ್ಣವಾಗಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

2021ರ ಪೊಲೊ ಫೇಸ್‌ಲಿಫ್ಟ್ ಕಾರಿನ ಟಿವಿಸಿ ಬಿಡುಗಡೆಳಿಸಿದ ಫೋಕ್ಸ್‌ವ್ಯಾಗನ್

ಹೈ-ಎಂಡ್ ರೂಪಾಂತರಗಳು ಮೊದಲ ಬಾರಿಗೆ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್‌ಗಳು ಈ ಪ್ಯಾಕೇಜಿನ ಭಾಗವಾಗಿದೆ. ಹಿಂಭಾಗದಲ್ಲಿ, ನವೀಕರಿಸಿದ ವಿಡಬ್ಲ್ಯೂ ಗಾಲ್ಫ್‌ ಮಾದರಿಯಲ್ಲಿರುವಂತೆ ಸಿ-ಆಕಾರದ ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಮರುವಿನ್ಯಾಸಗೊಳಿಸಲಾಗಿದೆ.

2021ರ ಪೊಲೊ ಫೇಸ್‌ಲಿಫ್ಟ್ ಕಾರಿನ ಟಿವಿಸಿ ಬಿಡುಗಡೆಳಿಸಿದ ಫೋಕ್ಸ್‌ವ್ಯಾಗನ್

ಹೊಸ ಫೋಕ್ಸ್‌ವ್ಯಾಗನ್ ಪೊಲೊ ಕಾರಿನಲ್ಲಿ ಪೋಲೊ ಬ್ಯಾಡ್ಜ್ ಅನ್ನು ಟೈಲ್‌ಗೇಟ್‌ನ ಮಧ್ಯದಲ್ಲಿ ಇರಿಸಲಾಗಿದೆ. ಆರ್-ಲೈನ್ ಟ್ರಿಮ್ 16 ಇಂಚಿನ ವ್ಹೀಲ್ ಗಳು ಮತ್ತು ಎಕ್ಸಾಸ್ಟ್ ಪೈಪ್ ಗಳನ್ನು ಒಳಗೊಂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2021ರ ಪೊಲೊ ಫೇಸ್‌ಲಿಫ್ಟ್ ಕಾರಿನ ಟಿವಿಸಿ ಬಿಡುಗಡೆಳಿಸಿದ ಫೋಕ್ಸ್‌ವ್ಯಾಗನ್

ಪೊಲೊ ಕಾರಿನ ಕ್ಯಾಬಿನ್‌ನಲ್ಲಿ 9.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಲ್-ಡಿಜಿಟಲ್ 10.25-ಇಂಚಿನ ಡ್ರೈವರ್ ಡಿಸ್ ಪ್ಲೇ ಮತ್ತು ಆರ್ಟಿಯಾನ್‌ನಲ್ಲಿರುವಂತೆ ಟಚ್ ಕ್ಲೈಮೇಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.

2021ರ ಪೊಲೊ ಫೇಸ್‌ಲಿಫ್ಟ್ ಕಾರಿನ ಟಿವಿಸಿ ಬಿಡುಗಡೆಳಿಸಿದ ಫೋಕ್ಸ್‌ವ್ಯಾಗನ್

ಇನ್ನು ಪ್ರಮುಖವಾಗಿ ಹೊಸ ಕಾರಿನಲ್ಲಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 80 ಬಿಹೆಚ್‍ಪಿ ಪವರ್ ಮತ್ತು 93 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಎಂಟಿ ಜೊತೆ ಜೋಡಿಸಲ್ಪಟ್ಟಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

2021ರ ಪೊಲೊ ಫೇಸ್‌ಲಿಫ್ಟ್ ಕಾರಿನ ಟಿವಿಸಿ ಬಿಡುಗಡೆಳಿಸಿದ ಫೋಕ್ಸ್‌ವ್ಯಾಗನ್

ಇದರೊಂದಿಗೆ 1.0-ಲೀಟರ್ ಟಿಎಸ್ಐ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 95 ಅಥವಾ 110 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಹೊಸ ಪೊಲೊ ಕಾರಿನಲ್ಲಿ ಡೀಸೆಲ್ ಎಂಜಿನ್ ಅನ್ನು ನೀಡಲಾಗಿಲ್ಲ.

ಇನ್ನು ಸಿಎನ್‌ಜಿ ಚಾಲಿತ 1.0 ಟಿಜಿಐ 90 ಬಿಹೆಚ್‍ಪಿ ಪವರ್ ಮತ್ತು 160 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರ್ಯಕ್ಷಮತೆ-ಸ್ಪೆಕ್ ಜಿಟಿಐ ಮಾದರಿಯ ಮಾಹಿತಿಗಳನ್ನು ನಂತರ ಘೋಷಿಸಬಹುದು. ಆದರೆ ಜಿಟಿಐ ಮಾದರಿಯಲ್ಲಿ 2.0 ಲೀಟರ್ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

2021ರ ಪೊಲೊ ಫೇಸ್‌ಲಿಫ್ಟ್ ಕಾರಿನ ಟಿವಿಸಿ ಬಿಡುಗಡೆಳಿಸಿದ ಫೋಕ್ಸ್‌ವ್ಯಾಗನ್

ಈ ಎಂಜಿನ್ 200 ಬಿಹೆಚ್‍ಪಿ ಪವರ್ ಉತ್ಪಾದನೆ ಮುಂದುವರೆತ್ತದೆ ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್ ಅಥವಾ ಏಳು-ಸ್ಪೀಡ್ ಡಿಎಸ್‌ಜಿಯನ್ನು ಜೋಡಿಸಬಹುದು.

2021ರ ಪೊಲೊ ಫೇಸ್‌ಲಿಫ್ಟ್ ಕಾರಿನ ಟಿವಿಸಿ ಬಿಡುಗಡೆಳಿಸಿದ ಫೋಕ್ಸ್‌ವ್ಯಾಗನ್

ವಿಡಬ್ಲ್ಯೂ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ಪೊಲೊವನ್ನು ಈ ಹೊಸ ಮಾದರಿಯೊಂದಿಗೆ ಬದಲಾಯಿಸಲು ಯೋಜಿಸುತ್ತಿದೆ. ಇದು ಎಂಡಬ್ಲ್ಯೂಬಿ-ಎ0-ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಲಿದೆ. ದಶಕಗಳಷ್ಟು ಹಳೆಯದಾದ ಪೊಲೊ ಗಮನಾರ್ಹವಾದ ನವೀಕರಣವನ್ನು ಪಡೆದುಕೊಂಡು ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
New Volkswagen Polo Facelift Detailed In Official TVC Video. Read In Kannada.
Story first published: Monday, April 26, 2021, 14:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X