ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

ದೇಶಾದ್ಯಂತ ಇಂಧನ ದರಗಳ ಇಳಿಕೆಗೆ ತೆರಿಗೆ ಕಡಿತ ನಂತರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ದುಬಾರಿ ಬೆಲೆಯಲ್ಲಿಯೇ ಮಾರಾಟಗೊಳ್ಳುತ್ತಿದ್ದು, ಇಂಧನ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿವೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

ಇಂಧನ ಚಾಲಿತ ವಾಹನಗಳ ಬಳಕೆ ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನ ನೋಂದಣಿ ಪ್ರಮಾಣದ ಕಳೆದ ತಿಂಗಳಿನಿಂದ ಸಾಕಷ್ಟು ಏರಿಕೆಯಾಗಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

ಇವಿ ವಾಹನಗಳ ನೋಂದಣಿ ಮೊದಲ ಸ್ಥಾನದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮೊದಲ ಸ್ಥಾನದಲ್ಲಿದ್ದು, ತದನಂತರ ಎಲೆಕ್ಟ್ರಿಕ್ ಕಾರುಗಳು ಮತ್ತು ಮೂರನೇ ಸ್ಥಾನ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳು ಹೆಚ್ಚಿನ ಬೇಡಿಕೆ ಹೊಂದಿದ್ದು, ಕಳೆದ ತಿಂಗಳು ಏಪ್ರಿಲ್‌ನಲ್ಲಿ ಮಾರಾಟ ಪ್ರಮುಖ ಹತ್ತು ಇವಿ ಕಾರುಗಳ ಮಾಹಿತಿಯಲಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

01. ಟಾಟಾ ಮೋಟಾರ್ಸ್

ದೇಶಿಯ ಮಾರುಕಟ್ಟೆಯಲ್ಲಿನ ಇವಿ ಕಾರುಗಳ ಮಾರಾಟದಲ್ಲಿ ಸದ್ಯ ಶೇ.80 ಕ್ಕಿಂತಲೂ ಹೆಚ್ಚು ಮಾರುಕಟ್ಟೆ ಪಾಲು ತನ್ನದಾಗಿಸಿಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಅಗ್ರಸ್ಥಾನ ಕಾಯ್ದುಕೊಂಡಿದ್ದು, ಕಂಪನಿಯು ಕಳೆದ ತಿಂಗಳು 1,802 ಯುನಿಟ್ ಮಾರಾಟದೊಂದಿಗೆ ಶೇ.320 ರಷ್ಟು ಮುನ್ನಡೆ ಸಾಧಿಸಿದೆ. ಟಾಟಾ ಮೋಟಾರ್ಸ್ ಕಂಪನಿಯು ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಜೊತೆ ನೆಕ್ಸಾನ್ ಇವಿ, ಟಿಗೋರ್ ಇವಿ, ಎಕ್ಸ್‌ಪ್ರೆಸ್-ಟಿ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

02. ಎಂಜಿ ಮೋಟಾರ್

ಜೆಡ್ಎಸ್ ಇವಿ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಕಳೆದ ಜೆಡ್ಎಸ್ ಇವಿ ಫೇಸ್‌ಲಿಫ್ಟ್ ಬಿಡುಗಡೆಯೊಂದಿಗೆ 245 ಯುನಿಟ್ ಮಾರಾಟ ಮಾಡಿದೆ. ಏಪ್ರಿಲ್ ತಿಂಗಳ ಇವಿ ಕಾರು ಮಾರಾಟದಲ್ಲಿ ಕಳೆದ ವರ್ಷದ ಏಪ್ರಿಲ್ ಅವಧಿಗಿಂತ ಶೇ. 65 ರಷ್ಟು ಮುನ್ನಡೆ ಸಾಧಿಸಿರುವ ಎಂಜಿ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

03. ಹ್ಯುಂಡೈ

ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಹ್ಯುಂಡೈ ಕಂಪನಿಯು ಕಳೆದ ತಿಂಗಳು 23 ಯುನಿಟ್ ಕೊನಾ ಇವಿ ವಿತರಿಸಿದೆ. ಇದು ಕಳೆದ ವರ್ಷದ ಏಪ್ರಿಲ್‌ಗಿಂತ ಶೇ. 130 ರಷ್ಟು ಹೆಚ್ಚಿನ ಬೆಳವಣಿಗೆಯಾಗಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

04. ಬಿವೈಡಿ

ಬಿವೈಡಿ ಹೊಸ ಕಾರು ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಅತ್ಯಧಿಕ ಮೈಲೇಜ್ ರೇಂಜ್ ಫೀಚರ್ಸ್ ಹೊಂದಿದ್ದು, ಹೊಸ ಕಾರು ಸದ್ಯ ದೇಶದ ಪ್ರಮುಖ ಎಂಟು ನಗರಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಎಲೆಕ್ಟ್ರಿಕ್ ಕಾರನ್ನು ಕಂಪನಿಯು ಸದ್ಯ ಬಿ2ಬಿ ಉದ್ದೇಶಗಳಿಗೆ ಮಾತ್ರ ಮಾರಾಟ ಮಾಡುತ್ತಿದ್ದು, ಕಳೆದ ತಿಂಗಳು 21 ಯುನಿಟ್ ಮಾರಾಟಗೊಂಡಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

05. ಬಿಎಂಡಬ್ಲ್ಯು

ಐಷಾರಾಮಿ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲಿ ಐಎಕ್ಸ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಕಂಪನಿಯು ದುಬಾರಿ ಬೆಲೆ ನಡುವೆಯೂ ಕಳೆದ ತಿಂಗಳು 17 ಯುನಿಟ್ ಮಾರಾಟದೊಂದಿಗೆ ಶೇ. 88 ರಷ್ಟು ಬೆಳವಣಿಗೆ ಸಾಧಿಸಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

06. ಮಹೀಂದ್ರಾ

ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ತಟಸ್ಥವಾಗಿರುವ ಮಹೀಂದ್ರಾ ಕಂಪನಿಯು ಇ-ವೆರಿಟೋ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಕಳೆದ ತಿಂಗಳು 13 ಯುನಿಟ್ ಮಾರಾಟದೊಂದಿಗೆ ಶೇ. 225 ರಷ್ಟು ಕುಸಿತ ಕಂಡಿದೆ. ಮಹೀಂದ್ರಾ ಕಂಪನಿಯು ಶೀಘ್ರದಲ್ಲಿಯೇ ತನ್ನ ಹೊಸ ತಲೆಮಾರಿನ ಇವಿ ಮಾದರಿಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗುತ್ತಿದ್ದು, ಬಜೆಟ್ ಕಾರುಗಳ ಮಾದರಿಗಳನ್ನು ಸಹ ಬಿಡುಗಡೆ ಮಾಡಲಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

07. ಮರ್ಸಿಡಿಸ್ ಬೆಂಝ್

ಇ-ಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯೊಂದಿಗೆ ಐಷಾರಾಮಿ ಇವಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಕಳೆದ ತಿಂಗಳು 10 ಯುನಿಟ್ ಮಾರಾಟದೊಂದಿಗೆ ಶೇ.150 ರಷ್ಟು ಬೆಳವಣಿಗೆ ಸಾಧಿಸಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

08. ಆಡಿ

ಆಡಿ ಕಂಪನಿಯು ತನ್ನ ಐಷಾರಾಮಿ ಇವಿ ಕಾರು ಮಾದರಿಯಾದ ಇ-ಟ್ರಾನ್ ಆವೃತ್ತಿಯೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಕಳೆದ ತಿಂಗಳು 8 ಯುನಿಟ್ ಮಾರಾಟದೊಂದಿಗೆ ತಿಂಗಳ ಕಾರು ಮಾರಾಟದಲ್ಲಿ ತುಸು ಹಿನ್ನಡೆ ಅನುಭವಿಸಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

09. ಪೋರ್ಷೆ

ಪೋರ್ಷೆ ಕಂಪನಿಯು ಭಾರತದಲ್ಲಿ ದುಬಾರಿ ಬೆಲೆಯ ಟೆಕಾನ್ ಎಲೆಕ್ಟ್ರಿಕ್ ಐಷಾರಾಮಿ ಸ್ಪೋರ್ಟ್ ಕಾರು ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಹೊಸ ಕಾರು ರೂ. 1.50 ಕೋಟಿ ಬೆಲೆಯೊಂದಿಗೆ ಕಳೆದ ತಿಂಗಳು 3 ಯುನಿಟ್ ಮಾರಾಟಗೊಂಡಿದೆ.

ದುಬಾರಿ ಇಂಧನ ಪರಿಣಾಮ ಏಪ್ರಿಲ್ ತಿಂಗಳ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಭಾರೀ ಏರಿಕೆ

10. ಜಾಗ್ವಾರ್

ಜಾಗ್ವಾರ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯಾದ ಐ-ಪೇಸ್ ಆವೃತ್ತಿಯನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿದ್ದು, ಹೊಸ ಕಾರು ಭಾರತದಲ್ಲಿ ಕಡಿಮೆ ಪ್ರಮಾಣದಲ್ಲಿ ಬೇಡಿಕೆ ಹೊಂದಿದ್ದರೂ ಮುಂಬರುವ ದಿನಗಳಲ್ಲಿ ಉತ್ತಮ ಬೇಡಿಕೆಯ ನೀರಿಕ್ಷೆಯಲ್ಲಿದೆ. ಕಳೆದ ತಿಂಗಳು 3 ಯುನಿಟ್ ಮಾರಾಟಗೊಂಡಿದ್ದು, ಫಾಸ್ಟ್ ಚಾರ್ಜಿಂಗ್‌ಗಳ ಸಂಖ್ಯೆ ಹೆಚ್ಚುತ್ತಿರುವಂತೆ ಇವಿ ಕಾರು ಮಾರಾಟವು ಸುಧಾರಿಸಲಿದೆ.

Most Read Articles

Kannada
English summary
Best selling electric car brands april india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X