India
YouTube

ನಟಿ ರಾಖಿ ಸಾವಂತ್‌ಗೆ ಸ್ನೇಹಿತರಿಂದ ದುಬಾರಿ ಉಡುಗೊರೆ

ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಬಾಲಿವುಡ್‌ ನಟಿ ಹಾಗೂ ಹಿಂದಿ ಬಿಗ್‌ ಬಾಸ್‌ ಖ್ಯಾತಿಯ ರಾಖಿ ಸಾವಂತ್ ಅವರಿಗೆ ಇತ್ತೀಚೆಗೆ 40 ಲಕ್ಷ ರೂಪಾಯಿ ಮೌಲ್ಯದ ಹೊಸ BMW X1 SUV ಅನ್ನು ತಮ್ಮ ಆಪ್ತ ಸ್ನೇಹಿತರು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ಇನ್‌ಷ್ಟಾಗ್ರಾಂ ನಲ್ಲಿ ತಮ್ಮ ಹೊಸ ಕಾರಿನ ಕುರಿತು ಪೋಸ್ಟ್‌ ಮಾಡುವ ಮೂಲಕ ರಾಖಿ ಸಾವಂತ್‌ ಹರ್ಷ ವ್ಯಕ್ತಪಡಿಸಿದ್ದಾರೆ.

 ಸ್ನೇಹಿತರಿಂದ BMW X1 SUV ಅನ್ನು ಉಡುಗೊರೆಯಾಗಿ ಸ್ವೀಕರಿಸಿದ ನಟಿ ರಾಖಿ ಸಾವಂತ್

ರಾಖಿ ಸಾವಂತ್ ತನ್ನ ದೈನಂದಿನ ಜೀವನದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮದ ಮೂಲಕ ಅಪ್‌ಡೇಟ್ ಮಾಡುತ್ತಿರುತ್ತಾರೆ. ಇದೀಗ ತಮ್ಮ ಜೀವನಕ್ಕೆ ಲಗ್ಗೆಯಿಟ್ಟಿರುವ ಹೊಸ ಬಂಧುವನ್ನು ರಾಖಿ ಸಾವಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಿಡಿಯೋದಲ್ಲಿ ಕಾರಿನ ಸಂಪೂರ್ಣ ನೋಟವನ್ನು ತೋರಿಸಿದ್ದಾರೆ.

ಸ್ನೇಹಿತರಿಂದ BMW X1 SUV ಅನ್ನು ಉಡುಗೊರೆಯಾಗಿ ಸ್ವೀಕರಿಸಿದ ನಟಿ ರಾಖಿ ಸಾವಂತ್

ವಿಡಿಯೋದಲ್ಲಿ ಅವರು 'ಬಿಎಂಡಬ್ಲ್ಯು' ಎಂದು ಬರೆದಿದ್ದ ಕೇಕ್ ಅನ್ನು ಕತ್ತರಿಸಿ ಅಭಿಮಾನಿಗಳಿಗೆ ತಮ್ಮ ಕಾರನ್ನು ಪರಿಚಯಿಸಿದರು. ತಮ್ಮ ಆಪ್ತರಾದ ಆದಿಲ್ ಖಾನ್ ದುರಾನಿ ಮತ್ತು ಚರ್ಮರೋಗ ತಜ್ಞ ಶೆಲ್ಲಿ ಲಾಥರ್ ಅವರೊಂದಿಗೆ ಪೋಸ್ ನೀಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಐಷಾರಾಮಿ ಎಸ್‌ಯುವಿಯನ್ನು ಆದಿಲ್ ಖಾನ್ ದುರಾನಿ ಮತ್ತು ಶೆಲ್ಲಿ ಲಾಥರ್ ರಾಖಿ ಸಾವಂತ್‌ಗೆ ಉಡುಗೊರೆಯಾಗಿ ನೀಡಿದ್ದಾರೆ.

ಸ್ನೇಹಿತರಿಂದ BMW X1 SUV ಅನ್ನು ಉಡುಗೊರೆಯಾಗಿ ಸ್ವೀಕರಿಸಿದ ನಟಿ ರಾಖಿ ಸಾವಂತ್

ವಾಸ್ತವವಾಗಿ ರಾಖಿ ಸಾವಂತ್ ಕೆಲವು ತಿಂಗಳ ಹಿಂದೆ ಇದೇ ಕಾರ್ ಶೋ ರೂಂನ ಹೊರಗೆ ಕಾಣಿಸಿಕೊಂಡಿದ್ದರು. ಇತರ ನಟರಂತೆ ಈ ದುಬಾರಿ ಕಾರುಗಳನ್ನು ನಾನು ಖರೀದಿಸಲು ಸಾಧ್ಯವಿಲ್ಲ ಎಂದು ರಾಖಿ ಸಾವಂತ್ ಈ ಹಿಂದೆ ಹೇಳಿಕೊಂಡಿದ್ದರು. ಈ ವಿಷಯ ತಿಳಿದ ಆದಿಲ್ ಖಾನ್ ದುರಾನಿ ಮತ್ತು ಶೆಲ್ಲಿ ಲಾಥರ್ ಬಿಎಂಡಬ್ಲ್ಯು ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸ್ನೇಹಿತರಿಂದ BMW X1 SUV ಅನ್ನು ಉಡುಗೊರೆಯಾಗಿ ಸ್ವೀಕರಿಸಿದ ನಟಿ ರಾಖಿ ಸಾವಂತ್

ಕಾರ್‌ ಗಿಫ್ಟ್‌ ನೀಡಿದ ಬಳಿಕ ಸ್ವತಃ ರಾಖಿ ಸಾವಂತ್ ಅವರೇ ಕಾರು ಚಾಲನೆ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. BMW X1 SUV ಕುರಿತು ಮಾತನಾಡುವುದಾದರೆ, BMW ಇಂಡಿಯಾ ಈ ಕಾರನ್ನು ಮಾರ್ಚ್ 2020 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈ ಕಾರನ್ನು ಭಾರತದಲ್ಲಿ ಸ್ಪೋರ್ಟ್‌ಎಕ್ಸ್, ಎಕ್ಸ್‌ಲೈನ್ ಮತ್ತು ಎಂಸ್ಪೋರ್ಟ್ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ.

ಸ್ನೇಹಿತರಿಂದ BMW X1 SUV ಅನ್ನು ಉಡುಗೊರೆಯಾಗಿ ಸ್ವೀಕರಿಸಿದ ನಟಿ ರಾಖಿ ಸಾವಂತ್

ಹೊಸ BMW X1 SUV ವಿನ್ಯಾಸದ ಕುರಿತು ಮಾತನಾಡುವುದಾದರೆ, ಕಂಪನಿಯ ಸಿಗ್ನೇಚರ್ ಕಿಡ್ನಿ ಗ್ರಿಲ್ ಅನ್ನು ಈ ಮಾದರಿಯಲ್ಲಿ ಅಳವಡಿಸಲಾಗಿದೆ, ಅಲ್ಲದೇ ಹೆಡ್‌ಲ್ಯಾಂಪ್‌ಗಳನ್ನು ಮರುವಿನ್ಯಾಸಗೊಳಿಸುವುದರ ಜೊತೆಗೆ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳೊಂದಿಗೆ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಹೊಂದಿಸಲಾಗಿದೆ.

ಸ್ನೇಹಿತರಿಂದ BMW X1 SUV ಅನ್ನು ಉಡುಗೊರೆಯಾಗಿ ಸ್ವೀಕರಿಸಿದ ನಟಿ ರಾಖಿ ಸಾವಂತ್

ಮುಂಭಾಗದ ಬಂಪರ್‌ಗೆ ಹೊಸ ನೋಟವನ್ನು ನೀಡಲಾಗಿದ್ದು, ಈಗ ಇದು ಹೊಸ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಸಹ ಪಡೆದುಕೊಂಡಿದೆ. ಹಿಂಭಾಗದ ಬಂಪರ್ ಅನ್ನು ಸಹ ಬದಲಾಯಿಸಲಾಗಿದ್ದು, ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಸಹ ನೀಡಲಾಗಿದೆ. ಮೇಲ್ಛಾವಣಿಯನ್ನು ಅಲ್ಯೂಮಿನಿಯಂ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ. BMW X1ನ ಒಳಾಂಗಣದ ಬಗ್ಗೆ ಮಾತನಾಡುವುದಾದರೆ, ಕ್ಯಾಬಿನ್‌ಗೆ ಫೇಸ್‌ಲಿಫ್ಟ್ ನೀಡಲಾಗಿದೆ.

ಸ್ನೇಹಿತರಿಂದ BMW X1 SUV ಅನ್ನು ಉಡುಗೊರೆಯಾಗಿ ಸ್ವೀಕರಿಸಿದ ನಟಿ ರಾಖಿ ಸಾವಂತ್

ಒಳಭಾಗದಲ್ಲಿ ಡ್ಯಾಶ್‌ಬೋರ್ಡ್, ಸೀಟ್ ಮತ್ತು ಇನ್ಸ್ಟ್ರುಮೆಂಟ್ ಕನ್ಸೋಲ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇದು 6.5 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ಇದು ಲೆದರ್ ಅಪ್ಹೋಲ್ಸ್ಟರಿಯನ್ನು ಪಡೆದುಕೊಂಡಿದೆ, ಜೊತೆಗೆ ಸ್ವಯಂಚಾಲಿತ ಸ್ಟಾರ್ಟ್/ಸ್ಟಾಪ್ ಬಟನ್, ರಿಯರ್ ವ್ಯೂ ಕ್ಯಾಮೆರಾವನ್ನು ನೀಡಲಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ, ಹೊಸ X1 ನಲ್ಲಿ 6 ಏರ್‌ಬ್ಯಾಗ್‌ಗಳು, ABS ಬ್ರೇಕ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ನೀಡಲಾಗಿದೆ.

ಸ್ನೇಹಿತರಿಂದ BMW X1 SUV ಅನ್ನು ಉಡುಗೊರೆಯಾಗಿ ಸ್ವೀಕರಿಸಿದ ನಟಿ ರಾಖಿ ಸಾವಂತ್

BMW X1 ನ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಇದನ್ನು 2.0-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಯೊಂದಿಗೆ ನೀಡಲಾಗಿದೆ. ಇದರ ಪೆಟ್ರೋಲ್ ಎಂಜಿನ್ 192 Bhp ಪವರ್ ಮತ್ತು 280 Nm ಟಾರ್ಕ್ ಅನ್ನು ಒದಗಿಸುತ್ತದೆ. ಅಲ್ಲದೇ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ, ಡೀಸೆಲ್ ಎಂಜಿನ್ 190 Bhp ಪವರ್ ಮತ್ತು 400 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ 8 ಸ್ಪೀಡ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ.

Most Read Articles

Kannada
English summary
Bollywood actress rakhi sawant gets new bmw x1 suv video details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X