ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಗುತ್ತಿದೆ. ಏರುತ್ತಿರುವ ಇಂಧನ ಬೆಲೆಗಳನ್ನು ನಿಭಾಯಿಸಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದ್ದಾರೆ. ಇದರ ಪರಿಣಾಮವಾಗಿ ಕೆಲವು ಜನರು ಈಗ ಎಲೆಕ್ಟ್ರಿಕ್ ಕಾರುಗಳನ್ನು ಸಹ ಪರಿಗಣಿಸುತ್ತಿದ್ದಾರೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ, ಇದರ ನಡುವೆ, ಸಿಟ್ರನ್ ಕಂಪನಿಯು ಕೂಡ ಇವಿ ಅಖಾಡಕ್ಕೆ ಕಾಲಿಡುತ್ತಿದೆ. ಸಿಟ್ರನ್ ತನ್ನ ಅತ್ಯಂತ ಕಾಂಪ್ಯಾಕ್ಟ್ ಮತ್ತು ಕೈಗೆಟುಕುವ ಮಾದರಿಯಾದ ಸಿ3 ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ವಾಹನ ಆವೃತ್ತಿಯನ್ನು ಸಿದ್ಧಪಡಿಸುತ್ತಿದೆ. ಟಾಟಾ ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಕಾರಿಗೆ ಪೈಪೋಟಿಯಾಗಿ ಹೊಸ ಸಿಟ್ರನ್ ಸಿ3 ಎಲೆಕ್ಟ್ರಿಕ್ ಕಾರು ಬರಲಿದೆ. ಶೀಘ್ರದಲ್ಲೇ ಈ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ಐಸಿಇ ಚಾಲಿತ ಸಿ3 ಮತ್ತು ಸಿ3 ಪ್ಲಸ್‌ನಂತೆ, ಸಿ3 ಎಲೆಕ್ಟ್ರಿಕ್ ತನ್ನ C-Cubed ಕಾರ್ಯಕ್ರಮದ ಭಾಗವಾಗಿ ಭಾರತದಲ್ಲಿ ಮೂರು ಹೊಸ ಮಾದರಿಗಳನ್ನು ತರಲು ಸಿಟ್ರನ್ ಯೋಜನೆಗೆ ಸೇರುತ್ತದೆ. ತಮಿಳುನಾಡಿನ ಚೆನ್ನೈ ಸಮೀಪದ ತಿರುವಳ್ಳೂರಿನಲ್ಲಿರುವ ಸಿಕೆ ಬಿರ್ಲಾ ಸೌಲಭ್ಯದಲ್ಲಿ ಉತ್ಪಾದನೆ ನಡೆಯಲಿದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ಸಿ3 ಮತ್ತು ಸಿ3 ಪ್ಲಸ್‌ನಂತೆ, ಸಿ3 ಎಲೆಕ್ಟ್ರಿಕ್ ಕೂಡ ಹೆಚ್ಚಿನ ಸ್ಥಳೀಕರಣದೊಂದಿಗೆ ಸಾಮಾನ್ಯ ಮಾಡ್ಯುಲರ್ ಪ್ಲಾಟ್‌ಫಾರ್ಮ್ (CMP) ಅನ್ನು ಆಧರಿಸಿರುತ್ತದೆ. ಸಿಟ್ರನ್ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ ಪೋಸ್ಟ್ ನಲ್ಲಿ "ಏನು ಸಾಕು?" ಎಂಬ ಪ್ರಶ್ನೆಯನ್ನು ಕೇಳುತ್ತದೆ. ಫ್ರೆಂಚ್ ಬ್ರ್ಯಾಂಡ್ ಎಲೆಕ್ಟ್ರಿಕ್ ವಾಹನ ಒಳ್ಳೆಯದು ಎಂದು ಹೇಳುತ್ತದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ಸಿಟ್ರನ್ ಕಂಪನಿಯು ಭಾರತಕ್ಕೆ ತನ್ನ ಮೊದಲ ಆಲ್-ಎಲೆಕ್ಟ್ರಿಕ್ ಕೊಡುಗೆಯೊಂದಿಗೆ ಗ್ರಾಹಕರ ಈ ಜನಪ್ರಿಯ ಆಯ್ಕೆಯನ್ನು ನೀಡಲು ಬಯಸುತ್ತಿದೆ, ಸಿಟ್ರನ್ ಸಿ3 ಎಲೆಕ್ಟ್ರಿಕ್‌ನ ವಿವರಗಳು ಸದ್ಯಕ್ಕೆ ವಿರಳವಾಗಿದ್ದರೂ, ಫ್ರೆಂಚ್ ಕಾರು ತಯಾರಕರು ಪ್ರಸ್ತುತ ಪೆಟ್ರೋಲ್-ಚಾಲಿತ ಮಾದರಿಯಂತೆಯೇ ಸಂಪೂರ್ಣ-ಲೋಡ್ ಮಾಡಲಾದ ರೂಪಾಂತರದಲ್ಲಿ ಅಥವಾ ಎರಡು ರೂಪಾಂತರದ ಆಯ್ಕೆಗಳೊಂದಿಗೆ ಲಭ್ಯವಾಗುವಂತೆ ನಿರೀಕ್ಷಿಸುತ್ತೇವೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ಈ ಹೊಸ ಸಿಟ್ರನ್ ಸಿ3 ಆಲ್-ಎಲೆಕ್ಟ್ರಿಕ್ ಕಾರು ಅದರ ಹುಡ್ ಅಡಿಯಲ್ಲಿ ಎಲ್ಲಾ-ಹೊಸ ಪವರ್‌ಟ್ರೇನ್ ಅನ್ನು ಹೊಂದಿರುತ್ತದೆ, ಮುಂಭಾಗದ ವ್ಹೀಲ್ ಗಳನ್ನು ಚಾಲನೆ ಮಾಡುವ ಎಲೆಕ್ಟ್ರಿಕ್ ಮೋಟಾರ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿ. ಸ್ಪರ್ಧೆಯನ್ನು ಪರಿಗಣಿಸಿ, ಸಿಟ್ರನ್ ಸಿ3 ಎಲೆಕ್ಟ್ರಿಕ್ ಒಂದೇ ಚಾರ್ಜ್‌ನಲ್ಲಿ 200-250 ಕಿಮೀ ರೇಂಜ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಅನ್ನು ಹಬ್ಬದ ಸೀಸನ್ ನಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಟಾಟಾ ಮತ್ತು ಮಹೀಂದ್ರಾ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‍ಯುವಿಗಳನ್ನು ಟಾಟಾ ಟಿಗೊರ್ ಇವಿ ರೂಪದಲ್ಲಿ ಎಲೆಕ್ಟ್ರಿಕ್ ಸೆಡಾನ್ ಆಯ್ಕೆಯೊಂದಿಗೆ ಮಾತ್ರ ನೀಡುತ್ತವೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ಹೊಸ ಸಿಟ್ರನ್ ಸಿ3 ಇವಿ ಹ್ಯಾಚ್‌ಬ್ಯಾಕ್ ಆಗಮನದೊಂದಿಗೆ, ಎಲೆಕ್ಟ್ರಿಕ್ ಕಾರುಗಳು ಖರೀದಿದಾರರಿಗೆ ಹೆಚ್ಚು ಸುಲಭವಾಗಿ ಸಿಗುವ ಸಾಧ್ಯತೆಯಿದೆ. ಸಿ3 ಕಾರಿನ ಪೆಟ್ರೋಲ್-ಚಾಲಿತ ಆವೃತ್ತಿಯಂತೆ, ಎಲ್ಲಾ-ಎಲೆಕ್ಟ್ರಿಕ್ ಆವೃತ್ತಿಯು ವೆಚ್ಚ-ಪರಿಣಾಮಕಾರಿ ಮಾದರಿಯಾಗಿದೆ ಎಂದು ನಿರೀಕ್ಷಿಸಲಾಗಿದೆ, ಎಲ್ಲಾ ನಾಲ್ಕು ಪವರ್ ವಿಂಡೋಗಳು, ಸ್ಟೀರಿಂಗ್-ಮೌಂಟೆಡ್ ಆಡಿಯೊ ಮತ್ತು ಬ್ಲೂಟೂತ್ ನಿಯಂತ್ರಣಗಳು ಮತ್ತು ಪವರ್ ಹೊಂದಾಣಿಕೆ ರಿಯರ್‌ವ್ಯೂ ಮಿರರ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ಸಿಟ್ರನ್ ಸಿ3 ಪೆಟ್ರೋಲ್ ಆವೃತ್ತಿಯಿಂದ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಎಲ್‌ಇಡಿಗ ಡೇ ಟೈಮ್ ರನ್ನಿಂಗ್ ಲೈಟ್, ಡಿಜಿಟಲ್ ಸ್ಪೀಡೋಮೀಟರ್ ಮತ್ತು 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ಸಿಟ್ರನ್ ಭಾರತದಲ್ಲಿ ಸಿ3 ಹ್ಯಾಚ್‌ಬ್ಯಾಕ್ ಅನ್ನು ಪೆಟ್ರೋಲ್-ಮಾತ್ರ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಿದ್ದರು. ಇದು 1.2-ಲೀಟರ್ 82 ಪಿಎಸ್ ಮೂರು-ಸಿಲಿಂಡರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್ ಮತ್ತು 1.2-ಲೀಟರ್ 110 ಪಿಎಸ್ ಮೂರು-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಎರಡೂ ಪವರ್‌ಟ್ರೇನ್‌ಗಳು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಹ್ಯಾಚ್‌ಬ್ಯಾಕ್ ಎಸ್‍ಯುವಿ-ಪ್ರೇರಿತ ವಿನ್ಯಾಸದ ಸೂಚನೆಗಳು ಮತ್ತು ನಿಲುವುಗಳನ್ನು ಪಡೆಯುತ್ತದೆ, ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ಸಿಟ್ರನ್ ಸಿ3 ಎಲೆಕ್ಟ್ರಿಕ್ ಕಾರು ಹೊರತಾಗಿ, ಸಿಟ್ರನ್ ತನ್ನ ಉತ್ಪನ್ನ ಶ್ರೇಣಿಯನ್ನು ಭಾರತದಲ್ಲಿ ಮಧ್ಯಮ ಗಾತ್ರದ ಎಸ್‍ಯುವಿಯೊಂದಿಗೆ ಬಲಪಡಿಸಲು ಯೋಜಿಸುತ್ತಿದೆ. ಈ ಹೊಸ ಎಸ್‍ಯುವಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ನಿಸ್ಸಾನ್ ಕಿಕ್ಸ್, ಎಂಜಿ ಆಸ್ಟರ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಸ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಮಾದರಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ಹೊಸ ಎಸ್‌ಯುವಿ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 36.67 ಲಕ್ಷ ಬೆಲೆ ಹೊಂದಿದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಮೊದಲ ಬಾರಿಗೆ 2020ರಲ್ಲಿ ಬಿಡುಗಡೆಯಾಗಿದ್ದಾಗ ವಿವಿಧ ತಾಂತ್ರಿಕ ಅಂಶಗಳೊಂದಿಗೆ ಫೀಲ್ ಮತ್ತು ಶೈನ್ ಎನ್ನುವ ಎರಡು ವೆರಿಯೆಂಟ್ ಹೊಂದಿದ್ದ ಸಿ5 ಏರ್‌ಕ್ರಾಸ್ ಕಾರು ಮಾದರಿಯು ಇದೀಗ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಕೇವಲ ಶೈನ್ ಟಾಪ್ ಎಂಡ್ ವೆರಿಯೆಂಟ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Citroen will launch a new electric car on 29th sep details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X