Just In
- 31 min ago
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- 12 hrs ago
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- 13 hrs ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 14 hrs ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
Don't Miss!
- News
'ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ' ಕೊಡಿಶ್ರೀಗಳ ರಾಜಕೀಯ ಭವಿಷ್ಯ
- Sports
ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ಬಿಡುಗಡೆಯಾದ ಐಷಾರಾಮಿ ಮರ್ಸಿಡಿಸ್ EQBಯ ಬೆಲೆ ಎಷ್ಟು ಗೊತ್ತೇ?
ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳು ನಿಧಾನವಾಗಿ ಅಬ್ಬರಿಸುವುದನ್ನು ಶುರು ಮಾಡಿವೆ. ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ದೇಶೀಯ ಮಾರುಕಟ್ಟೆಯಲ್ಲಿ 'EQB' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದ್ದು, ಸದ್ಯ, ಈ ಎಸ್‌ಯುವಿ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. ಬೆಲೆ ಎಷ್ಟು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.
EQC ಮತ್ತು EQS ಸೆಡಾನ್ ನಂತರ ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ 'ಮರ್ಸಿಡಿಸ್' ಕಂಪನಿಯ ಮೂರನೇ ಎಲೆಕ್ಟ್ರಿಕ್ ಎಸ್‌ಯುವಿ 'EQB' ಆಗಿದೆ. ಪ್ರಸ್ತುತ 74.50 ಲಕ್ಷ ರೂ. (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಮರ್ಸಿಡಿಸ್ ಲಾಂಚ್ ಮಾಡಿರುವ ಏಳು-ಆಸನಗಳ ಮೊದಲ EV ಎಸ್‌ಯುವಿ ಈ EQB ಆಗಿದ್ದು, ಬಹುತೇಕ ICE ಚಾಲಿತವಾಗಿರವ 'GLB' ಕಾರಿನ ವಿನ್ಯಾಸವನ್ನು ಹೋಲುತ್ತದೆ ಎಂದು ಹೇಳಿದರೇ ತಪ್ಪಾಗುವುದಿಲ್ಲ.
ಮರ್ಸಿಡಿಸ್ EQB ಡ್ಯುಯಲ್-ಮೋಟಾರ್ ಆಲ್-ವೀಲ್ ಡ್ರೈವ್ ಸೆಟಪ್‌ನಿಂದ ಚಾಲಿತವಾಗಲಿದ್ದು, ಇದು 66.5kWh ಬ್ಯಾಟರಿಯನ್ನು ಹೊಂದಿದ್ದು, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 423km ದೂರದರೆಗೂ ಚಲಿಸುತ್ತದೆ. ಈ ಎಸ್‌ಯುವಿಯಲ್ಲಿ ಇರುವ ಬ್ಯಾಟರಿಯು ಕೇವಲ 32 ನಿಮಿಷಗಳಲ್ಲಿ 10-80 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ. ಡ್ಯುಯಲ್ ಮೋಟಾರ್ ಸೆಟಪ್ 225 bhp ಪವರ್, 390Nm ಟಾರ್ಕ್ ಉತ್ಪಾದಿಸುತ್ತದೆ. ಈ EQB ಎಸ್‌ಯುವಿ, ಟಾಪ್ ಸ್ಪೀಡ್ ಅನ್ನು 160km/h ತಲುಪಬಲ್ಲದು. ಕೇವಲ 7.7 ಸೆಕೆಂಡ್‌ಗಳಲ್ಲಿ 0-100km/h ತಲುಪುವ ಸಾಮರ್ಥ್ಯ ಹೊಂದಿದೆ.
ಹೊಸ ಮರ್ಸಿಡಿಸ್ EQB 4,684 ಎಂಎಂ ಉದ್ದ, 1,834 ಎಂಎಂ ಅಗಲ ಮತ್ತು 1,667 ಎಂಎಂ ಎತ್ತರವಿದೆ. ಮರ್ಸಿಡಿಸ್ EQBನ ವ್ಹೀಲ್‌ಬೇಸ್ 2,829 ಎಂಎಂ ಉದ್ದವಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ, ಏಳು ಆಸನಗಳನ್ನು ಹೊಂದಿದ್ದು, ಬರೋಬ್ಬರಿ 2,175 ಕೆಜಿ ತೂಕವಿದ್ದು, 495-ಲೀಟರ್ ಬೂಟ್ ಸ್ಪೇಸ್ ಅನ್ನು ಸಹ ಹೊಂದಿದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ ನೂತನ EQB ಎಸ್‌ಯುವಿ ಬಹುತೇಕ ICE-ಚಾಲಿತ 'GLB' ಕಾರನ್ನು ಹೋಲುತ್ತದೆ ಎಂದು ಹೇಳಬಹುದು. ಆದರೆ, ಈ EQB ಎಸ್‌ಯುವಿಯಲ್ಲಿಯೂ ಕೆಲವು ಮಾರ್ಪಾಡುಗಳಿವೆ.
ಹೊಸ ಎಲೆಕ್ಟ್ರಿಕ್ ಎಸ್‌ಯುವಿ EQB ಮುಂಭಾಗದ ಗ್ರಿಲ್‌ನಲ್ಲಿ ದೊಡ್ಡದಾದ 3-ಪಾಯಿಂಟ್ ಸ್ಟಾರ್ ಲೋಗೋದೊಂದಿಗೆ ವಿಭಿನ್ನವಾದ Mercedes-EQ ಬ್ಲ್ಯಾಕ್ ಪ್ಯಾನೆಲ್ ಇದೆ. ಇದು ಬ್ಲಾಕ್ಡ್ ಆಫ್ ಗ್ರಿಲ್‌ನ ಮೇಲೆ ಚಲಿಸುವ ಲೈಟ್‌ಬಾರ್‌ನಿಂದ ಸಂಪರ್ಕಗೊಂಡಿರುವ ಬ್ಲೂ ಹೈಲೈಟ್ ಸುತ್ತುವ ಹೆಡ್‌ಲೈಟ್‌ಗಳಿಂದ ಎರಡು ಬದಿಗಳಲ್ಲಿ ಸುತ್ತುವರಿಯಲ್ಪಟ್ಟಿದೆ. ಇಷ್ಟೇ ಅಲ್ಲದೆ, ಈ ಹೊಸ EQB ಎಸ್‌ಯುವಿ ಆಕರ್ಷಕ ಅಲಾಯ್ ವೀಲ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ,ಮರ್ಸಿಡಿಸ್ ಬ್ಯಾಡ್ಜ್ ದಪ್ಪನಾದ ಲೈಟ್‌ಬಾರ್ ಶೈಲಿಯ ಟೈಲ್‌ಲೈಟ್ ಕೆಳಗೆ ಇದೆ.
ಹೊಸ EQB ಎಸ್‌ಯುವಿಯ ಒಳಭಾಗವು ಹೆಚ್ಚಿನ ಪ್ರೀಮಿಯಂ ಲುಕ್ ಹೊಂದಿದ್ದು, ಇದು ಡ್ಯುಯಲ್ ಡಿಸ್ಪ್ಲೇ ಸೆಟಪ್ (ಚಾಲಕ ಮತ್ತು ಇನ್ಫೋಟೈನ್‌ಮೆಂಟ್) ಅನ್ನು ಹೊಂದಿದೆ ಎಂದು ಹೇಳಬಹುದು. ಸೆಕೆಂಡ್ ರೋ ಆಸನಗಳನ್ನು ಆರಾಮದಾಯವಾಗಿ ಕುಳಿತುಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ಹಿಂಭಾಗದಲ್ಲಿರುವವರಿಗೆ ಹೆಚ್ಚಿನ ಸ್ಥಳಾವಕಾಶ ಬೇಕೆಂದರೆ ಥರ್ಡ್ ರೋನಲ್ಲಿ ಖಾಲಿ ಇರುವಾಗ ಲೆಗ್‌ರೂಮ್ ಅನ್ನು ಹೆಚ್ಚಿಸಿಕೊಳ್ಳಬಹುದು. ಥರ್ಡ್ ರೋ ಆಸನಗಳು ಮಕ್ಕಳು ಅಥವಾ ಸಾಮಾನ್ಯ ಎತ್ತರಕ್ಕಿಂತ ಕಡಿಮೆ ಇರುವವರಿಗೆ ಉತ್ತಮವಾಗಿವೆ.
'EQB' ಮರ್ಸಿಡಿಸ್ ತಯಾರಿಸಿರುವ ಐಷಾರಾಮಿ ಎಸ್‌ಯುವಿಯಾಗಿದೆ. ಈ ಕಾರನ್ನು ಭಾರತಕ್ಕೆ ಆಮದು ಮಾಡಿಕೊಳ್ಳಬೇಕು. ಕಿಯಾ ಮತ್ತು ವೋಲ್ವೋ ಕಂಪನಿ ಕಾರುಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಹೆಚ್ಚಿನ ಬೆಲೆ ಹೊಂದಿದೆ. ಆದಾಗ್ಯೂ, ಏಳು ಸೀಟುಗಳ ಈ ಎಸ್‌ಯು, ಭಾರತದಲ್ಲಿ EV ಮಾರುಕಟ್ಟೆಯಲ್ಲಿ ವಿಶಿಷ್ಟವಾಗಿದ್ದು, ಖರೀದಿದಾರರನ್ನು ಸೆಳೆಯುತ್ತಿದೆ. ಅದೇ ರೀತಿಯಲ್ಲಿ ದೇಶೀಯ ಕಾರು ಕಂಪನಿಗಳು ಸಹ ಎಲೆಕ್ಟ್ರಿಕ್ ಎಸ್‌ಯುವಿ ತಯಾರಿಕೆಯಲ್ಲಿ ಹಿಂದೆ ಸರಿದೆ ಪ್ರಬಲವಾದ ಪೈಪೋಟಿ ನೀಡುತ್ತೇವೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.