ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

80-90 ರ ದಶಕದಲ್ಲಿ ಅಂಬಾಸಿಡರ್‌ನಷ್ಟೇ ಜನಪ್ರಯತೆ ಪಡೆದುಕೊಂಡು ಮನೆ ಮಾತಾಗಿದ್ದ ಮಾರುತಿ ಓಮ್ನಿ, ಕಂಪನಿಯ ಉತ್ತಮ ಮಾರಾಟ ವಾಹನವಾಗಿ ಗುರ್ತಿಸಿಕೊಂಡಿತ್ತು. ಈ ಲೇಖನವನ್ನು ಓದುತ್ತಿರುವ ಬಹುಪಾಲು ಜನರು ಕೂಡ ಒಮ್ಮೆಯಾದ್ರು ಓಮ್ನಿಯೊಳಗೆ ಕುಳಿತು ಪ್ರಯಾಣಿಸಿರುತ್ತಾರೆ. ನಿಮ್ಮಲ್ಲಿ ಕೆಲವರು ಹಲವು ವರ್ಷಗಳವರೆಗೆ ಈ ಕಾರನ್ನು ಹೊಂದಿದ್ದಿರಬಹುದು.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಇದನ್ನು ಜನರ ಸಾಗಣೆಗಾಗಿ ಮತ್ತು ಸಣ್ಣ ವ್ಯಾಪಾರಗಳಿಗೆ ಸರಕು ವಾಹಕವಾಗಿಯೂ ಬಳಸಲಾಗುತ್ತಿತ್ತು. ಮಾರುತಿ ಓಮ್ನಿಯು ಅನೇಕ ಚಲನಚಿತ್ರಗಳಲ್ಲಿ ಕಿಡ್ನಾಪ್ ದೃಷ್ಯಗಳಿಗೆ ಬಳಸಿದ ವಾಹನವಾಗಿಯೂ ಜನಪ್ರಿಯವಾಗಿತ್ತು. ಕಟ್ಟುನಿಟ್ಟಾದ ಹೊರಸೂಸುವಿಕೆ ಮತ್ತು ಸುರಕ್ಷತಾ ಮಾನದಂಡಗಳ ಕಾರಣ ಮಾರುತಿ ಓಮ್ನಿಯನ್ನು ಮಾರುಕಟ್ಟೆಯಲ್ಲಿ ನಿಲ್ಲಿಸಬೇಕಾಯಿತು.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಭಾರತದಲ್ಲಿ ಸುಸ್ಥಿತಿಯಲ್ಲಿರುವ ಮಾರುತಿ ಓಮ್ನಿ ವ್ಯಾನ್‌ಗಳನ್ನು ಇಂದಿಗೂ ಕಾಣಬಹುದು. ಇದನ್ನು ಹೊರತುಪಡಿಸಿ ಮಾಡಿಫೈಗೊಳಿಸಿದ ಓಮ್ನಿಯನ್ನು ಖರೀದಿಸಲು ಪ್ರತ್ಯೇಕ ಖರೀದಿದಾದರ ವಿಭಾಗವೇ ಇದೆ. ಈ ಲೇಖನದಲ್ಲಿ ಅಂತಹ ಒಂದು ಮಾರುತಿ ಓಮ್ನಿಯ ಬಗ್ಗೆ ಪರಿಚಯಿಸಲಾಗಿದೆ. ಇದರ ಪ್ರಾಮುಖ್ಯತೆಯೆಂದರೆ ಡ್ರಿಫ್ಟ್ ಟ್ರಕ್ ಆಗಿ ಮಾರ್ಪಡಿಸಿರುವುದಾಗಿದೆ.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಈ ಕುರಿತ ವೀಡಿಯೊವನ್ನು GOKZ MOTOGRAPHY ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಈ ವಿಡಿಯೋದಲ್ಲಿ ಮಾರುತಿ ಓಮ್ನಿ ಮಾಲೀಕರು ಕಾರಿಗೆ ಮಾಡಿರುವ ಎಲ್ಲಾ ಮಾರ್ಪಾಡುಗಳ ಬಗ್ಗೆ ವಿವರಿಸಿದ್ದಾರೆ. ಮಾಲೀಕರು ಸೆಕೆಂಡ್ ಹ್ಯಾಂಡ್ 2000 ಮಾಡಲ್ ಮಾರುತಿ ಓಮ್ನಿಯನ್ನು ಖರೀದಿಸಿ ಮಾಡಿಫೈಗೊಳಿಸಿದ್ದಾರೆ.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಈ ಓಮ್ನಿಯಲ್ಲಿ ಹೆಚ್ಚಿನ ಮಾರ್ಪಾಡುಗಳನ್ನು ಮಾಲೀಕರೇ ಮಾಡಿದ್ದಾರೆ. ಯಾವಾಗಲೂ ತಮ್ಮ ಗ್ಯಾರೇಜ್‌ನಲ್ಲಿ ಕಾರನ್ನು ಮಾಡಿಫೈಗೊಳಿಸಿಲು ಬಯಸುವುದಾಗಿ ಹೇಳಿಕೊಂಡಿದ್ದಾರೆ. ಅವರು ಈ ಹಿಂದೆ ಕೇರಳದಲ್ಲಿ ಅನೇಕ ಮಾಡಿಫೈಗೊಳಿಸಿದ ಮಾರುತಿ ಓಮ್ನಿಗಳನ್ನು ನೋಡಿದ್ದು, ಅವೆಲ್ಲವುಗಳಿಗಿಂತಲೂ ಭಿನ್ನವಾಗಿ ತಮ್ಮ ಓಮ್ನಿಯನ್ನು ಮಾಡಿಫೈಗೊಳಿಸಲು ಯೋಜಿಸಿದ್ದರು.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಅಂತೆಯೇ ಡ್ರಿಫ್ಟ್ ಟ್ರಕ್ ಪರಿಕಲ್ಪನೆಯೊಂದಿಗೆ ತಮ್ಮ ಕಾರನ್ನು ಇದೀಗ ಮಾಡಿಫೈಗೊಳಿಸಿದ್ದಾರೆ. ಮಾರುತಿ ಓಮ್ನಿ ಬ್ಯಾಕ್ ವೀಲ್ ಡ್ರೈವ್ ಆಗಿರುವುದರಿಂದ ಈ ಯೋಜನೆಗೆ ಸೂಕ್ತವಾದ ವಾಹನವಾಗಿದೆ. ಮಾಲೀಕರು ಈ ಓಮ್ನಿಯ ಮೇಲಿನ ಸಸ್ಪೆನ್ಷನ್ ಕಡಿಮೆ ಮಾಡಿ ಹಿಂಭಾಗದ ಬಾಗಿಲುಗಳು ಮತ್ತು ಟೈಲ್ ಗೇಟ್ ಅನ್ನು ತೆರವುಗೊಳಿಸಿದ್ದಾರೆ.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಅವರು ಅಷ್ಟು ಸುಲಭವಾಗಿ ಹಿಂದಿನ ಭಾಗವನ್ನು ತೆರವುಗೊಳಿಸಿಲ್ಲ. ಬದಲಾಗಿ ಓಮ್ನಿಗೆ ಟ್ರಕ್‌ನಂತಹ ಆಕಾರವನ್ನು ನೀಡಲು ಹಿಂಭಾಗವನ್ನು ಕತ್ತರಿಸಿ ಬಾಡಿಯನ್ನು ಬಲಪಡಿಸಲು ಲೋಹದ ಬಾರ್‌ಗಳು ಮತ್ತು ಗಟ್ಟಿಯಾದ ಶೀಟ್‌ಗಳನ್ನು ಜೋಡಿಸಿದ್ದಾರೆ. ಅಂತಿಮವಾಗಿ ಇದನ್ನು ಪ್ರಾಜೆಕ್ಟ್ ಕಾರ್ ಎಂದು ಉಲ್ಲೇಖಿಸಿ ಡ್ರಿಫ್ಟ್ ಟ್ರಕ್‌ನಂತೆ ಮಾಡಿಫೈಗೊಳಿಸಿದ್ದಾರೆ.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಮುಂಭಾಗದಲ್ಲಿ ಓಮ್ನಿ ವ್ಯಾನ್‌ನ ವಿನ್ಯಾಸವು ಒಂದೇ ರೀತಿ ಕಾಣುತ್ತದೆ. ಆದರೆ ಮುಂಭಾಗದಲ್ಲಿ ಕಡಿಮೆ ನಿಲುವನ್ನು ಸಾಧಿಸಲು ಅವರು ಟಾಟಾ ನ್ಯಾನೊದ ಹಿಂಭಾಗದ ಬಂಪರ್ ಅನ್ನು ಅಳವಡಿಸಿದ್ದಾರೆ. ಎಬಿಎಸ್ ಪ್ಲ್ಯಾಸ್ಟಿಕ್ ಬಂಪರ್ ಡ್ರೈವಿಬಿಲಿಟಿಯಲ್ಲಿ ರಾಜಿ ಮಾಡಿಕೊಳ್ಳದೆ ಅಪೇಕ್ಷಿತ ನೋಟವನ್ನು ನೀಡುತ್ತಿದೆ.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಹಿಂಭಾಗದ ಬೆಡ್ ಸಂಪೂರ್ಣವಾಗಿ ಸಮತಟ್ಟಾಗಿದ್ದು, ಅದರ ಕೊನೆಯಲ್ಲಿ ಒಂದು ದೊಡ್ಡ ಸ್ಪಾಯ್ಲರ್ ಅನ್ನು ಇರಿಸಲಾಗಿದೆ. ಇದು ಸರಿಯಾದ ಡ್ರಿಫ್ಟ್ ಟ್ರಕ್ ನೋಟವನ್ನು ನೀಡುತ್ತದೆ. ಕಾರಿನ ನೋಟದಲ್ಲಿ ಚಕ್ರವು ಮತ್ತೊಮ್ಮೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮುಂಭಾಗವು 12 ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದರೆ ಹಿಂಭಾಗವು ಅಗಲವಾದ ಸ್ಟೀಲ್ ರಿಮ್‌ಗಳನ್ನು ಪಡೆಯುತ್ತದೆ. ಎರಡೂ ಚಕ್ರಗಳಿಗೆ ಬಿಳಿ ಬಣ್ಣ ನೀಡಲಾಗಿದೆ.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಉಳಿದಂತೆ ಈ ಓಮ್ನಿಯಲ್ಲಿ ನೀವು ಗಮನಿಸಬೇಕಾದ ಮೊದಲ ವಿಷಯವೆಂದರೆ ಅದರ ಪೇಂಟ್ ಕೆಲಸ. ಇಡೀ ಕಾರಿಗೆ ಮಾಲೀಕರು ತಮ್ಮ ಮನೆಯ ಸಮೀಪವಿರುವ ವರ್ಕ್‌ಶಾಪ್‌ನಲ್ಲಿ ಪೇಂಟ್ ಮಾಡಿಸಿದ್ದಾರೆ. ಇನ್ನು ಎಂಜಿನ್‌ ಬಗ್ಗೆ ಹೇಳುವುದಾದರೆ, ಮಾಲೀಕರು ಹೊಸ ಏರ್ ಇನ್‌ಟೇಕ್, ನೇರ ಪೈಪ್ ಎಕ್ಸಾಸ್ಟ್ ಅನ್ನು ಸ್ಥಾಪಿಸಿದ್ದಾರೆ.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಹಳೆಯ ವಾಹನವಾಗಿರುವುದರಿಂದ ಇಂಧನ ಲೈನ್‌ಗಳನ್ನು ಮರುರೂಪಿಸಲಾಗಿದೆ. ಭವಿಷ್ಯದಲ್ಲಿ ಈ ವಾಹನದಲ್ಲಿ ಎಂಜಿನ್ ಸ್ವಾಪ್ ಮಾಡಲು ಅವರು ಯೋಜಿಸಿದ್ದಾರೆ. ಈ ಕಾರಿನಲ್ಲಿ ಮಾಡಿದ ಕೆಲಸವು ತುಂಬಾ ಅಚ್ಚುಕಟ್ಟಾಗಿ ಕಾಣಿಸದಿರಬಹುದು ಆದರೆ, ಡ್ರಿಫ್ಟ್ ಟ್ರಕ್ ಪರಿಕಲ್ಪನೆಯು ನಿಸ್ಸಂದೇಹವಾಗಿ ಅದ್ಬುತವಾಗಿದೆ.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಸಾಮಾನ್ಯವಾಗಿ ದೇಶದಲ್ಲಿ ಬಹುಪಾಲು ಮಾಡಿಫೈ ಕಾರುಗಳು ಕೇರದಲ್ಲಿ ಹೆಚ್ಚಾಗಿ ಕಾಣುತ್ತವೆ. ಇಲ್ಲಿನ ಜನರು ಹಳೆಯ ಮಾದರಿಗಳನ್ನು ಹೊಸ ವಿನ್ಯಾಸದೊಂದಿಗೆ ಮಾಡಿಫೈಗೊಳಿಸಿ ರೆಟ್ರೋ ಸ್ಟೈಲ್ ಅನ್ನು ನೀಡುತ್ತಾರೆ. ಅದೇ ಮಾದರಿಯಲ್ಲಿ ಓಮ್ನಿ ಕೂಡ ಮೂಡಿಬಂದಿದೆ. ಸದ್ಯ ಈ ಕಾರಿಗೆ ಹಲವರು ಫಿದಾ ಆಗಿದ್ದು, ವಿಡಿಯೋಗೆ ಲೈಕ್ಸ್, ಕಮೆಂಟ್ಸ್ ಹೆಚ್ಚಾಗತೊಡಗಿವೆ.

ಖಡಕ್ ಲುಕ್‌ನಲ್ಲಿ ಡ್ರಿಫ್ಟ್ ಟ್ರಕ್ ಆಗಿ ಮಾಡಿಫೈಗೊಂಡಿರುವ ಈ 2000 ಮಾಡಲ್ ಯಾವುದು ಗೊತ್ತಾ?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಒಂದು ಕಾಲದಲ್ಲಿ ಮಿಂಚಿ ಇದೀಗ ಮರೆಯಾಗುತ್ತಿರುವ ಕೆಲವು ಕಾರುಗಳನ್ನು ಮಾಡಿಫೈಗೊಳಿಸಿ ಪ್ರಸ್ತುತ ವಾಹನಗಳಂತೆ ಡಿಸೈನ್ ಮಾಡಲು ಭಾರೀ ಹಣ ಖರ್ಚಾಗುತ್ತದೆ. ಆದರೂ ಇಂತಹ ಕಾರುಗಳನ್ನು ಮೂಲೆ ಸೇರಲು ಬಿಡದೇ ಖಡಕ್ ಲುಕ್‌ನಲ್ಲಿ ಮಾಡಿಫೈಗೊಳಿಸಿರುವುದು ವಾಹನ ಪ್ರಿಯರಿಗೆ ಸಖತ್ ಖುಷಿ ನೀಡುತ್ತದೆ.

Most Read Articles

Kannada
English summary
Do you know what is this car modified into a drift truck
Story first published: Monday, October 3, 2022, 17:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X