ಭಾರೀ ಬೆಲೆಯ ಮರ್ಸಿಡಿಸ್ GLB ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ

ಹೊಸ ವರ್ಷ (2023) ಆರಂಭಕ್ಕೆ ತಿಂಗಳಷ್ಟೇ ಬಾಕಿ ಇದ್ದು, ಹಲವು ಕಾರು ತಯಾರಿಕಾ ಕಂಪನಿಗಳು ತಮ್ಮ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇದೀಗ ಜರ್ಮನಿ ಮೂಲದ 'ಮರ್ಸಿಡಿಸ್' ದುಬಾರಿ ಬೆಲೆಯ GLB ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ ಹೊಂದಿರುವ ಎಸ್‌ಯುವಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಹೊಸ ಐಷಾರಾಮಿ ಮರ್ಸಿಡಿಸ್ GLB ಎಸ್‌ಯುವಿ ಏಳು-ಆಸನಳನ್ನು ಹೊಂದಿದ್ದು, ದೇಶದಲ್ಲಿ 3 ಟ್ರಿಮ್ ಲೆವೆಲ್‌ನಲ್ಲಿ (ಒಂದು ಪೆಟ್ರೋಲ್ ಮತ್ತು 2 ಡೀಸೆಲ್‌ಗಳು) ಖರೀದಿಗೆ ಲಭ್ಯವಿದೆ. ಮರ್ಸಿಡಿಸ್ GLB 200 (ಪೆಟ್ರೋಲ್) ಬೆಲೆ 63.8 ಲಕ್ಷ ರೂ. ಗಳಾಗಿದ್ದು, ಎರಡು ಡೀಸೆಲ್ ಮಾದರಿಗಳಾದ GLB 220D ಮತ್ತು GLB 220D 4M ಕಮಾಂಡ್ ಬೆಲೆ ಕ್ರಮವಾಗಿ 66.8 ಲಕ್ಷ ಮತ್ತು 69.8 ಲಕ್ಷಗ ರೂಪಾಯಿ ಆಗಿದೆ(ಇವು ಆರಂಭಿಕ ಬೆಲೆಗಳಾಗಿದ್ದು, ಎಕ್ಸ್ ಶೋ ರೂಂ ಪ್ರಕಾರ ನಮೂದಿಸಲಾಗಿದೆ).

ಮರ್ಸಿಡಿಸ್ GLB 200, 1.3-ಲೀಟರ್ ಟರ್ಬೋಚಾರ್ಜ್ಡ್ ಇನ್‌ಲೈನ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, ಇದು 5,500 rpmನಲ್ಲಿ 161 bhp ಪವರ್ ಮತ್ತು 1,620 ಮತ್ತು 4,000 rpm ನಡುವೆ 250 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. GLB 200ರ ಎಂಜಿನ್ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮೆಟಿಕ್ ಟ್ರಾನ್ಸ್‌ಮಿಷನ್ ಮೂಲಕ ಮುಂಭಾಗದ ವೀಲ್‌ಗಳಿಗೆ ಪವರ್ ಅನ್ನು ವರ್ಗಾಯಿಸುತ್ತದೆ. ಈ ಹೊಸ ಎಸ್‌ಯುವಿ, ಕೇವಲ 9.1 ಸೆಕೆಂಡ್‌ಗಳಲ್ಲಿ 0-100km/h ತಲುಪುವ ಸಾಮರ್ಥ್ಯ ಹೊಂದಿದ್ದು, ಟಾಪ್ ಸ್ಪೀಡ್ 207km/h ಇದೆ.

ಎರಡು ಡೀಸೆಲ್ ಮಾದರಿಗಳಾದ GLB 220D ಮತ್ತು GLB 220D 4M - 2.0-ಲೀಟರ್ ಟರ್ಬೋಚಾರ್ಜ್ಡ್ ಫೋರ್-ಸಿಲಿಂಡರ್ ಎಂಜಿನ್‌ ಹೊಂದಿದ್ದು, 3,800rpmನಲ್ಲಿ 188 bhp ಪವರ್ ಮತ್ತು 1,600 ಮತ್ತು 2,400 rpm ನಡುವೆ 400Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 8-ಸ್ವೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌, GLB 220Dರ ಮುಂಭಾಗದ ವೀಲ್‌ಗಳಿಗೆ ಮತ್ತು GLB 220D 4Mರ ಎಲ್ಲಾ 4 ವೀಲ್‌ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. GLB 220D 4M, ಕೇವಲ 7.6 ಸೆಕೆಂಡುಗಳಲ್ಲಿ 0-100km/h ತಲುಪುವ ಸಾಮರ್ಥ್ಯ ಹೊಂದಿದ್ದು, ಟಾಪ್ ಸ್ಪೀಡ್ 217km/h ಇದೆ.

GLB ಎಸ್‌ಯುವಿಯ ಹೊರ ಹಾಗೂ ಒಳಭಾಗದ ವಿನ್ಯಾಸವು ತುಂಬಾ ಆಕರ್ಷಕವಾಗಿದೆ. 7-ಆಸನಗಳನ್ನು ಹೊಂದುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. GLB ಎಸ್‌ಯುವಿ, GLS ನಂತರ ಭಾರತದಲ್ಲಿ ಮರ್ಸಿಡಿಸ್‌ ಲಾಂಚ್ ಮಾಡಿದ ಎರಡನೇ ಏಳು ಸೀಟಿನ ಕಾರಾಗಿದೆ. ಮುಂಭಾಗದಲ್ಲಿ, ದೊಡ್ಡದಾದ ಮರ್ಸಿಡಿಸ್ ಬೇಡ್ ಹೊಂದಿರುವ ಗ್ರಿಲ್ ಅನ್ನು 2 ಸೆಟ್‌ಗಳ ಇಂಟಿಗ್ರೇಟೆಡ್ LED DRಗಳೊಂದಿಗೆ ಕೊಂಚ ಇನ್‌ಸೆಟ್ ಹೆಡ್‌ಲೈಟ್‌ಗಳಿಂದ ಎರಡೂ ಬದಿಗಳಲ್ಲಿ ಸುತ್ತುವರಿಯಲ್ಪಟ್ಟಿದೆ. ಮುಂಭಾಗದ ಬಂಪರ್‌ ದೊಡ್ಡದಾದ ಸೆಂಟ್ರಲ್ ಏರ್ ಡ್ರಮ್ ಅನ್ನು ಹೊಂದಿದೆ.

ಹೊಸ GLBಯು ಆಕರ್ಷಕವಾಗಿ ಕಾಣುವ ಅಲಾಯ್ ವೀಲ್‌ಗಳನ್ನು ಹೊಂದಿದೆ ಎಂದು ಹೇಳಬಹುದು. ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್‌ಗಳೊಂದಿಗೆ ಬಾಡಿ ಕಲರ್ಡ್ ORVMS ವೈಶಿಷ್ಟ್ಯವನ್ನು ಸಹ ಹೊಂದಿದೆ. ಈ ಕಾರಿನ ಹಿಂಭಾಗವು ಆಯತಾಕಾರದ LED ಕಾಂಬಿನೇಷನ್ ಲ್ಯಾಂಪ್‌ಗಳನ್ನು ಹೊಂದಿದ್ದು, ಮರ್ಸಿಡಿಸ್‌ನ GLB ಕಾರಿನ ಒಳಭಾಗದಲ್ಲಿ 3-ರೋನಲ್ಲಿ ಒಟ್ಟು 7 ಆಸನಗಳಿರುವ ವಿನ್ಯಾಸವನ್ನು ಹೊಂದಿದೆ. 3-ರೋ ಬಹುತೇಕ ಪ್ರಯಾಣದ ವೇಳೆ ಮಕ್ಕಳು ಕುಳಿತುಕೊಳ್ಳಲು ತುಂಬಾ ಉತ್ತಮವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

GLB ಎಸ್‌ಯುವಿ ಮಲ್ಟಿ-ಲೇಯರ್ ಡ್ಯಾಶ್ ಎಲ್ಲಾ ಮರ್ಕ್ ಇಂಟೀರಿಯರ್ ಡಿಸೈನ್ ಹೈಲೈಟ್‌ಗಳನ್ನು ಒಳಗೊಂಡಿದ್ದು, ಟ್ವಿನ್ 10.25-ಇಂಚಿನ ಡಿಸ್ಪ್ಲೇಗಳು ಮತ್ತು ಇನ್ಫೋಟೈನ್‌ಮೆಂಟ್, ಟರ್ಬೈನ್ ಸ್ಟೈಲ್ ಏರ್ ವೆಂಟ್‌ಗಳು ಮತ್ತು ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್ ಇದೆ. ಇತರೆ ವೈಶಿಷ್ಟ್ಯಗಳೆಂದರೆ 7 ಏರ್‌ಬ್ಯಾಗ್‌ಗಳು, ಆಕ್ಟಿವ್ ಬ್ರೇಕ್ ಅಸಿಸ್ಟ್, ಮುಲ್ಟಿಪಲ್ USB-C ಚಾರ್ಜಿಂಗ್ ಪೋರ್ಟ್‌ಗಳು, ನಿಮ್ಮ ಸಾಧನಗಳಿಗೆ ವೈರ್‌ಲೆಸ್ ಚಾರ್ಜರ್, ದೊಡ್ಡದಾದ ಸನ್‌ರೂಫ್ ಸಹ ಇದ್ದು, ಬೂಟ್ ಸ್ಪೇಸ್ 130 ಲೀಟರ್‌ಗಳಷ್ಟು ಚಿಕ್ಕದಾಗಿದೆ. ಆದರೆ, 3-ರೋ ಆಸನಗಳನ್ನು ಮಡಚುವ ಮೂಲಕ 500 ಲೀಟರ್‌ಗಳಿಗೆ ವಿಸ್ತರಿಸಬಹುದು.

ಮರ್ಸಿಡಿಸ್ GLB ಅನ್ನು ಪ್ರಸ್ತುತ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ಈ ವಾಹನದ ಭಾರೀ ಬೆಲೆಗೆ ಕಾರಣವಾಗಿದೆ ಎಂದು ಹೇಳಬಹುದು. ಆದಾಗ್ಯೂ, ಹೊಸ GLB ಮಾರುಕಟ್ಟೆಯಿಂದ ಸರಿದಿರುವ GLC ಎಸ್‌ಯುವಿಯ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಜೊತೆಗೆ ಇದು ಹೊಸ ಮರ್ಸಿಡಿಸ್ GLB ಐಷಾರಾಮಿ ಕಾರು ಖರಿಸಿಸುವವರಿಗೆ ವಿಶೇಷವಾಗಿ 7 ಆಸನಗಳೊಂದಿಗೆ ಲಭ್ಯವಿರುವ ಆಕರ್ಷಕ ಕೊಡುಗೆ ಎಂದೇ ಹೇಳಬಹುದು. ಅಲ್ಲದೆ, ಮರ್ಸಿಡಿಸ್ ಇದೇ ವಿನ್ಯಾಸ ಹೊಂದಿರುವ ಮರ್ಸಿಡಿಸ್ EQB ಎಲೆಕ್ಟ್ರಿಕ್ ಎಸ್‌ಯುವಿಯನ್ನು ಸಹ ಬಿಡುಗಡೆ ಮಾಡಿದೆ.

Most Read Articles

Kannada
English summary
Heavily priced mercedes glb launched in the Indian market
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X