ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ಬೇಸಿಗೆಯ ಬಿಸಿಲು ವಿಪರೀತವಾಗಿದ್ದು, ತಾಪಮಾನವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮುಂದಿನ ಕೆಲವು ತಿಂಗಳುಗಳ ಕಾಲ ತಮ್ಮ ಕಾರುಗಳನ್ನು ತೆರೆದ ಜಾಗದಲ್ಲಿ ಅಥವಾ ಸೂರ್ಯನ ಬಿಸಿಲಿನಲ್ಲಿ ನಿಲ್ಲಿಸುವ ಕಾರು ಚಾಲಕರು ಬಿಸಿಲ ಬೇಗೆಯನ್ನು ಅನುಭವಿಸಬೇಕಾಗುತ್ತದೆ.

ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ಸೂರ್ಯನ ಬಿಸಿಲಿನಲ್ಲಿ ಕಾರುಗಳನ್ನು ನಿಲ್ಲಿಸುವುದರಿಂದ ಕಾರು ತುಂಬಾ ಬಿಸಿಯಾಗುತ್ತದೆ. ಬೇಸಿಗೆಯಲ್ಲಿ ಕಾರನ್ನು ತಂಪಾಗಿಟ್ಟುಕೊಳ್ಳುವುದಕ್ಕೆ ಹಲವಾರು ವಿಧಾನಗಳಿವೆ. ಇವುಗಳಲ್ಲಿ 5 ಪ್ರಮುಖ ವಿಧಾನಗಳನ್ನು ಈ ಲೇಖನದಲ್ಲಿ ನೋಡೋಣ.

ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ಸನ್‌ಷೇಡ್

ಬೇಸಿಗೆಯಲ್ಲಿ ನಿಮ್ಮ ಕಾರನ್ನು ತಂಪಾಗಿರಿಸಲು, ಸನ್‌ಶೇಡ್‌ಗಳನ್ನು ಬಳಸುವುದು ಕ್ಯಾಬಿನ್‌ನೊಳಗಿನ ಶಾಖವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. ಸನ್ ಫಿಲ್ಮ್‌ಗಳನ್ನು ಈಗ ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ, ಆದರೆ ಹೆಚ್ಚಿನ ಸೂರ್ಯನ ಕಿರಣಗಳನ್ನು ಕ್ಯಾಬಿನ್‌ನೊಳಗೆ ತಲುಪದಂತೆ ತಡೆಯಲು ಸನ್‌ಶೇಡ್‌ಗಳು ಉತ್ತಮ ಮತ್ತು ಅಗ್ಗದ ಮಾರ್ಗವಾಗಿದೆ.

ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ಇದಲ್ಲದೆ, ಸನ್‌ಶೇಡ್‌ಗಳು ವಿವಿಧ ಗಾತ್ರಗಳು ಮತ್ತು ಆಕಾರಗಳಲ್ಲಿ ಲಭ್ಯವಿದೆ. ಅದರ ಜೊತೆಗೆ, ಈಗ ಮಾರುಕಟ್ಟೆಯಲ್ಲಿ ಕಿಟಕಿಗಳಿಗೆ ಹಿತಕರವಾಗಿ ಹೊಂದಿಕೊಳ್ಳುವ ಅನೇಕ ಸನ್‌ಶೇಡ್‌ಗಳು ಲಭ್ಯವಿದೆ. ಸೂರ್ಯನ ಬಿಸಿಲಿನಿಂದ ಬಹುತೇಕ ರಕ್ಷಣೆ ಪಡೆಯಬಹುದು.

ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ವಿಂಡೋಸ್ ತೆರೆದಿಟ್ಟುಕೊಳ್ಳುವುದು

ಕಿಟಕಿಗಳನ್ನು ಸ್ವಲ್ಪ ತೆರೆದಿಟ್ಟುಕೊಳ್ಳುವುದರಿಂದ ನೇರ ಸೂರ್ಯನ ಬೆಳಕಿನಲ್ಲಿ ತಡೆಯೊಡ್ಡಬಹುದು, ಹೀಗೆ ಮಾಡಿದಾಗ ಕ್ಯಾಬಿನ್ ಒಳಗಿನ ಪರಿಸ್ಥಿತಿಗಳು ಹೆಚ್ಚು ಸುಧಾರಿಸುತ್ತದೆ. ಏಕೆಂದರೆ ಕಾರಿನಲ್ಲಿ ಭಾಗಶಃ ತೆರೆದ ಕಿಟಕಿಗಳು ಅಡ್ಡ-ವಾತಾಯನಕ್ಕೆ ಸಹಾಯ ಮಾಡುತ್ತದೆ. ಅಲ್ಲದೇ ಹೆಚ್ಚು ಶಾಖವನ್ನು ತಡೆದು ಕ್ಯಾಬಿನ್ ಅನ್ನು ತಕ್ಕಮಟ್ಟಿಗೆ ತಂಪಿನಲ್ಲಿರಿಸುತ್ತದೆ.

ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ಸ್ವಲ್ಪ ತೆರೆದ ಕಿಟಿಕಿಯಿಂದ ಗಾಳಿಯೂ ಸಹ ಒಳಗೆ ಬರುವುದರಿಂದ ಹಬೆಯನ್ನು ಹೊರಹಾಕಲು ಪಾರಿಣಾಮಕಾರಿಯಾಗಿ ಸಹಕರಿಸುತ್ತದೆ. ಇದರಿಂದ ಒಳಗಿನ ಬಹುತೇಕ ಬಿಸಿಯನ್ನು ತಡೆಯಬಹುದಾಗಿದೆ. ಜೊತೆಗೆ ಕಾರಿನೊಳಗೆ ಶಾಖದಿಂದ ಹೊರಹೊಮ್ಮುವ ದುರ್ವಾಸನೆಯನ್ನು ಸಹ ಕಡಿಮೆಗೊಳಿಸಬಹುದು.

ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ಸ್ಟೀರಿಂಗ್ ವೀಲ್, ಡ್ಯಾಶ್‌ಬೋರ್ಡ್ ಅನ್ನು ಟವೆಲ್‌ನೊಂದಿಗೆ ಮುಚ್ಚಿ

ಸ್ಟೀರಿಂಗ್ ವೀಲ್ ಮತ್ತು ಡ್ಯಾಶ್‌ಬೋರ್ಡ್‌ನಂತಹ ಕಾರಿನ ವಿನೈಲ್ ಮತ್ತು ಚರ್ಮದ ಮೇಲ್ಮೈಗಳನ್ನು ಕವರ್ ಮಾಡುವುದು ಕ್ಯಾಬಿನ್ ತಾಪಮಾನವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಏಕೆಂದರೆ ವಿನೈಲ್ ಮತ್ತು ಚರ್ಮದ ಮೇಲ್ಮೈಗಳು ಶಾಖವನ್ನು ತ್ವರಿತವಾಗಿ ಹೀರಿಕೊಳ್ಳುವುದರಿಂದ ಕ್ಯಾಬಿನ್ ಒಳಗೆ ಹೆಚ್ಚು ಹೀಟ್‌ ಆಗಲು ಕಾರಣವಾಗುತ್ತವೆ.

ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ಇದಲ್ಲದೆ, ಬಿಳಿ ಟವೆಲ್ ಅನ್ನು ಬಳಸುವುದರಿಂದ ಇನ್ನೂ ಹೆಚ್ಚಿನ ಶಾಖವನ್ನು ತಡಿಯಬಹುದು. ಶಾಖವನ್ನು ಮತ್ತಷ್ಟು ಕಡಿಮೆ ಮಾಡಲು, ಆಸನಗಳನ್ನು ಮುಚ್ಚಲು ಬೆಡ್‌ಸ್ಪ್ರೆಡ್‌ಗಳನ್ನು ಸಹ ಬಳಸಬಹುದು. ಇದು ಕಾರಿನೊಳಗೆ ಸೂರ್ಯನ ಶಾಖದಿಂದ ಆಗುವ ಕಲರ್‌ ಡಿಮ್‌ನಂತಹ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ.

ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ಸೋಲಾರ್ ಫ್ಯಾನ್‌

ಬಿಸಿಲಿನಲ್ಲಿ ಸಿಲ್ಲಿಸಿರುವ ಕಾರಿನೊಳಗೆ ಹಸಿರುಮನೆ ಪರಿಣಾಮ (ಗ್ರೀನ್ ಹೌಸ್ ಎಫೆಕ್ಟ್) ಉಂಟಾಗುತ್ತದೆ. ಸೂರ್ಯನ ಬಿಸಿಲು ಕಾರಿನ ಕ್ಯಾಬಿನ್‌ನೊಳಗೆ ಪ್ರವೇಶಿಸುತ್ತದೆ. ಆದರೆ ಅದರಿಂದ ಹೊರಬರುವುದಿಲ್ಲ. ಇದರಿಂದ ಕ್ಯಾಬಿನ್‌ನೊಳಗಿನ ತಾಪಮಾನವು ಹೆಚ್ಚಾಗುತ್ತದೆ.

ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ಇದರ ಪರಿಹಾರಕ್ಕಾಗಿಯೇ ಈ ಸೌರ ಫ್ಯಾನ್‌ಗಳನ್ನು ಕಾರಿನ ಒಳಭಾಗದಿಂದ ಬಿಸಿ ಗಾಳಿಯನ್ನು ತೆಗೆದುಹಾಕಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸೋಲಾರ್ ಫ್ಯಾನ್‌ಗಳು ಕಾರಿನ ಕಿಟಕಿಗಳ ಮೇಲೆ ಬಿಗಿಯಾಗಿ ಹೊಂದಿಕೊಳ್ಳುತ್ತವೆ ಮತ್ತು ಕ್ಯಾಬಿನ್‌ನಿಂದ ಬಿಸಿ ಗಾಳಿಯನ್ನು ಪಂಪ್ ಮಾಡುತ್ತವೆ. ಅದರ ಜೊತೆಗೆ, ಉತ್ತಮ ಗುಣಮಟ್ಟದ ಸೌರಶಕ್ತಿ ಚಾಲಿತ ಫ್ಯಾನ್ ಅನ್ನು ಕೇವಲ 1,000 ರೂ.ಗೆ ಖರೀದಿಸಬಹುದು. ಬೇಸಿಗೆ ಕಾಲದಲ್ಲಿ ನಿಮ್ಮ ಕಾರನ್ನು ತಂಪಾಗಿರಿಸಲು ಇದು ಅತ್ಯುತ್ತಮ ಗ್ಯಾಜೆಟ್‌ಗಳಲ್ಲಿ ಒಂದಾಗಿದೆ.

ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ಎಲ್ಲಾ ವಿಂಡೋಸ್ ಮತ್ತು ಬಾಗಿಲುಗಳನ್ನು ತೆರೆಯಿರಿ

ನೀವು ಆಕಸ್ಮಿಕವಾಗಿ ಪಾರ್ಕ್ ಮಾಡಿದರೆ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ನಿಮ್ಮ ಕಾರನ್ನು ನಿಲ್ಲಿಸುವುದು ಅನಿವಾರ್ಯವಾದರೆ, ನೀವು ಮಾಡಬಹುದಾದ ಉತ್ತಮ ಕೆಲಸವೆಂದರೆ ಕಾರನ್ನು ಪ್ರವೇಶಿಸುವ ಮೊದಲು ಎಲ್ಲಾ ಬಾಗಿಲುಗಳು ಅಥವಾ ಕಿಟಕಿಗಳನ್ನು ತೆರೆಯುವುದು. ಹೀಗೆ ಮಾಡುವುದರಿಂದ ಕ್ಯಾಬಿನ್‌ನೊಳಗಿನ ಎಲ್ಲಾ ಬಿಸಿ ಗಾಳಿಯನ್ನು ಹೊರ ಹಾಕುತ್ತದೆ.

ಬೇಸಿಗೆಯಲ್ಲಿ ಕಾರುಗಳನ್ನು ತಂಪಾಗಿಡುವ ಐದು ಸರಳ ವಿಧಾನಗಳಿವು

ಬೇಸಿಗೆಯ ವಾತಾವರಣದಲ್ಲಿ ನಿಮ್ಮ ಕಾರನ್ನು ಹೆಚ್ಚು ಆತಿಥ್ಯಕಾರಿಯಾಗಿ ಮಾಡಲು ಮೇಲೆ ತಿಳಿಸಿದ ಸಲಹೆಗಳು ಉತ್ತಮ ಮಾರ್ಗವಾಗಿದೆ. ಇದರೊಂದಿಗೆ ನೆನಪಿಡಬೇಕಾದ ಮತ್ತೊಂದು ವಿಷಯವೆಂದರೆ ಮರದ ನೆರಳಿನಲ್ಲಿ ಕಾರನ್ನು ನಿಲುಗಡೆ ಮಾಡುವುದನ್ನು ಮರಿಯದಿರಿ, ಹೋದ ಜಾಗದಲ್ಲೆಲ್ಲಾ ಮರದ ನೆರಳನ್ನು ಹುಡುಕುವುದು ತುಸು ಕಷ್ಟವೇ ಆದರೂ ಹೀಗೆ ಮಾಡುವುದರಿಂದ ನಿಮ್ಮ ಕಾರಿನ ಕ್ಯಾಬಿನ್ ಒಳಗೆ ತಾಪಮಾನವನ್ನು ಗಮನಾರ್ಹವಾಗಿ ಸುಧಾರಿಸಬಹುದು.

Most Read Articles

Kannada
English summary
Here are five tips to keep your car cool in summer
Story first published: Tuesday, April 26, 2022, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X