Just In
- 38 min ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 1 hr ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 2 hrs ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 3 hrs ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
Don't Miss!
- News
ಡಿಕೆಶಿ ಯಾರ ಯಾರ ಸಿಡಿ ಮಾಡ್ತಿದ್ದಾರೋ .? ಇನ್ನು ಯಾವ ಸಿಡಿ,ಸಿನಿಮಾ,ಟ್ರೈಲರ್ ಇದೆ ಅವರನೇ ಕೇಳ್ಬೇಕು: ಅಶ್ವತ್ಥ ನಾರಾಯಣ್
- Movies
ಜನ್ನತ್ ಟು ಮನ್ನತ್: ಬಾಲಿವುಡ್ ಬಾದ್ ಶಾ ಶಾರುಖ್ ಬಳಿಯಿರುವ 6 ಐಷಾರಾಮಿ ಮನೆಗಳಿವು!
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳು...
ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ( Kia India) 2022ರ ನವೆಂಬರ್ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು 2022ರ ನವೆಂಬರ್ ತಿಂಗಳಿನಲ್ಲಿ 24,025 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. ಕಳೆದ ತಿಂಗಳು ಕಿಯಾ ಕಾರುಗಳು ಭರ್ಜರಿ ಮಾರಾಟವನ್ನು ಕಂಡಿದೆ.
ಭಾರತದಲ್ಲಿ ಮಾರುತಿ ಸುಜುಕಿಯಂತಹ ಕಾರುಗಳೊಂದಿಗೆ ಸ್ಪರ್ಧಿಸುವ ದೇಶದ ಪ್ರಮುಖ ವಾಹನ ತಯಾರಕರಲ್ಲಿ ಕಿಯಾ ಇಂಡಿಯಾ ಒಂದಾಗಿದೆ. ಕಿಯಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ಕಾರು ಉತ್ಪನ್ನಗಳ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದೆ. ಆದರೆ ಕಳೆದ ತಿಂಗಳು ಕೆಲವು ಕಿಯಾ ಕಾರುಗಳು ಉತ್ತಮ ಮಾರಾಟವನ್ನು ಕಂಡಿದೆ. ಕಳೆದ ತಿಂಗಳು (ನವೆಂಬರ್) ಅತಿ ಹೆಚ್ಚು ಮಾರಾಟವಾದ ಟಾಪ್-3 ಕಿಯಾ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕಿಯಾ ಸೆಲ್ಟೋಸ್
ಕಳೆದ ತಿಂಗಳಿನಲ್ಲಿ ಕಿಯಾ ಸೆಲ್ಟೋಸ್ ಮಾದರಿಯ 9,284 ಯುನಿಟ್ ಗಳನ್ನು ಮಾರಾಟಗೊಳಿಸಿತ್ತು. ಇನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಕಿಯಾ ಸೆಲ್ಟೋಸ್ ಮಾದರಿಯ 8,859 ಯುನಿಟ್ ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.5 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇತ್ತೀಚೆಗೆ, ಕಿಯಾ ಇಂಡಿಯಾ ಸೆಲ್ಟೋಸ್ ಲೈನ್ ಅಪ್ ಅನ್ನು ಹೊಸ ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಎಲ್ಲಾ ನಾಲ್ಕು ಚಕ್ರಗಳಲ್ಲಿ ಆರು ಏರ್‌ಬ್ಯಾಗ್‌ಗಳು ಮತ್ತು ಡಿಸ್ಕ್ ಬ್ರೇಕ್‌ಗಳೊಂದಿಗೆ ನವೀಕರಿಸಿದೆ.
ಕಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಕಿಯಾ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಭಾರತೀಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ. ಭಾರತದ ಗ್ರಾಹಕರು ಈ ಎಸ್‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ. ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ.
ಸೆಲ್ಟೋಸ್ ಯಶಸ್ಸು ದೇಶದಲ್ಲಿ ದಕ್ಷಿಣ ಕೊರಿಯಾದ ವಾಹನ ತಯಾರಕರಾದ ಕಿಯಾಗೆ ಅಡಿಪಾಯ ಹಾಕಿತು. ಪ್ರಸ್ತುತ ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಹಲವು ಎಂಜಿನ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ, ಇದರಲ್ಲಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಗಳಾಗಿವೆ. ಈ ಎಸ್‍ಯುವಿ ಮಾದರಿಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿಎಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಕಿಯಾ ಸೊನೆಟ್
2022ರ ನವೆಂಬರ್ ತಿಂಗಳಿನಲ್ಲಿ ಕಿಯಾ ಸೊನೆಟ್ ಕಾಂಪಾಕ್ಟ್ ಎಸ್‍ಯುವಿ ಮಾದರಿಯ 7,834 ಯುನಿಟ್ ಗಳೊಂದಿಗೆ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ, ಕಳೆದ ವರ್ಷ 4,719 ಯುನಿಟ್‌ಗಳಿಗೆ ಹೋಲಿಸಿದರೆ, ಆ ಮೂಲಕ 66 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಈ ಎಸ್‍ಯುವಿಯಲ್ಲಿ ಹೊಸ ಕಾಸ್ಮೆಟಿಕ್ ಮತ್ತು ಫೀಚರ್ ಅಪ್‌ಗ್ರೇಡ್‌ಗಳೊಂದಿಗೆ ಸೊನೆಟ್ ಎಕ್ಸ್-ಲೈನ್ ಅನ್ನು ಪರಿಚಯಿಸಿತು. ಈ ಹೊಸ ಟಾಪ್-ಸ್ಪೆಕ್ ಸೊನೆಟ್ ಎಕ್ಸ್-ಲೈನ್ ರೂಪಾಂತರವು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.
ಕಿಯಾ ಇಂಡಿಯಾ ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಸೊನೆಟ್(Sonet) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಸೆಲ್ಟೋಸ್, ಕಾರ್ನಿವಲ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ.
ಕಿಯಾ ಕಾರೆನ್ಸ್
ಈ ಕಿಯಾ ಕಾರೆನ್ಸ್ ಮಾದರಿಯು ದೇಶದ ಹೊಸ ಕಾರು ಖರೀದಿದಾರರಲ್ಲಿ ಜನಪ್ರಿಯ ಆಯ್ಕೆಯಾಗಿದೆ.ಕಂಪನಿಯು ಕಳೆದ ತಿಂಗಳು 6,360 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಈ ವರ್ಷದ ಫೆಬ್ರವರಿಯಲ್ಲಿ ವಾಹನವನ್ನು ಪರಿಚಯಿಸಲಾಯಿತು ಸದ್ಯ ಕಿಯಾ ಕಾರೆನ್ಸ್ ಎಂಪಿವಿ ಮಾದರಿಯು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿರುವ ಎಂಪಿವಿ ಕಾರು ಮಾದರಿಯಾಗಿದ್ದು, ಈ ಹೊಸ ಎಂಪಿವಿ ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.