ಬರೋಬ್ಬರಿ 63,000 'ಹೈಬ್ರಿಡ್ ರಾಂಗ್ಲರ್ 4xe' ಹಿಂಪಡೆಯುತ್ತಿರುವ ಜೀಪ್

2021 ಮತ್ತು 2023ರ ನಡುವೆ ತಯಾರಿಸಲಾದ ಪ್ಲಗ್-ಇನ್ ಹೈಬ್ರಿಡ್ ರಾಂಗ್ಲರ್ 4xeನ ಸುಮಾರು 63,000 ಯುನಿಟ್‌ಗಳನ್ನು ಹಿಂಪಡೆಯಲು 'ಜೀಪ್' ಕಂಪನಿ ತೀರ್ಮಾನ ಮಾಡಿದೆ. ಈ SUVಯಲ್ಲಿ 'ಕಮ್ಯುನಿಕೇಷನ್ ಲಾಸ್' ಎಂದು ಕರೆಯುವ ಕಾರಣದಿಂದಾಗಿ ಅನಿರೀಕ್ಷಿತವಾಗಿ ಎಂಜಿನ್ ಆಫ್ ಆಗುತ್ತಿರುವುದರಿಂದ ಕಂಪನಿಯು ಈ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿದೆ.

ಅಮೇರಿಕದ ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (NHTSA) ಮೂಲಕ ನಿಯೋಜಿಸಲಾದ ಕ್ಯಾಂಪೈನ್ ನಂಬರ್ 22V865000, ಹಿಂಪಡೆಯುವಿಕೆಯು ಸೆಪ್ಟೆಂಬರ್ 2, 2020 ಮತ್ತು ಆಗಸ್ಟ್ 17, 2022ರ ನಡುವೆ ತಯಾರಿಸಲಾದ 'ರಾಂಗ್ಲರ್ 4xeನ 62,909 ಯುನಿಟ್‌ಗಳನ್ನೂ ಒಳಗೊಂಡಿದೆ. ಈ SUV 'ಕಮ್ಯುನಿಕೇಷನ್ ಲಾಸ್'ನಿಂದ ಎಂಜಿನ್ ಸ್ಥಗಿತಗವಾಗುವ ಸ್ಥಿತಿ ಬರುತ್ತಿದೆ ಎಂದು ವರದಿಯಾಗಿದೆ. ಚಾಲನೆ ಮಾಡುವಾಗ ಪವರ್ ಲಾಸ್ ಉಂಟಾಗಿ ಅಪಘಾತವಾದರೆ ಹೆಚ್ಚಿನ ಅಪಾಯದ ಸ್ಥಿತಿಗೆ ಕಾರಣವಾಗಬಹುದು.

ಬರೋಬ್ಬರಿ 63,000 ಹೈಬ್ರಿಡ್ ರಾಂಗ್ಲರ್ 4xe ಹಿಂಪಡೆಯುತ್ತಿರುವ ಜೀಪ್

NHTSA ಪ್ರಕಟಿಸಿದ ದಾಖಲೆಗಳ ಪ್ರಕಾರ, 196 ವಾರಂಟಿ ಕ್ಲೈಮ್‌ಗಳು, 65 ಕ್ಷೇತ್ರ ವರದಿಗಳು, ಎರಡು ಅಪಘಾತಗಳು ಮತ್ತು ಒಂದು ಇಂಜುರಿ ಈ ಸಂಭಾವ್ಯ ದೋಷಕ್ಕೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಸಮಸ್ಯೆಯ ನಿಖರವಾದ ಕಾರಣವು ಅಸ್ಪಷ್ಟವಾಗಿ ಉಳಿದಿದ್ದರೂ, ಪರಿಹಾರವು ಅಗತ್ಯವಾಗಿ ಬೇಕಾಗಿರುವುದರಿಂದ ಕಂಪನಿಯು ಈ ತೀರ್ಮಾನ ಮಾಡಿದೆ ಎನ್ನಲಾಗಿದೆ. ತಯಾರಕರು, ಟ್ರಾನ್ಸ್ಮಿಷನ್ ಕಂಟ್ರೋಲ್ ಮಾಡ್ಯೂಲ್, ಹೈಬ್ರಿಡ್ ಕಂಟ್ರೋಲ್ ಪ್ರೊಸೆಸರ್ ಮತ್ತು ಆಕ್ಸಿಲಿರಿ ಹೈಬ್ರಿಡ್ ಕಂಟ್ರೋಲ್ ಪ್ರೊಸೆಸರ್‌ನಲ್ಲಿ ಕ್ಯಾಲಿಬರೇಶನ್ ಸಾಫ್ಟ್‌ವೇರ್ ನಲ್ಲಿ ನವೀಕರಿಸುವ ಕೆಲಸವನ್ನು ಮಾಡಬೇಕಾಗಿದೆ.

'ಜೀಪ್' ರಾಂಗ್ಲರ್ 4xe PHEV ಮಾಲೀಕರಿಗೆ ಜನವರಿ 12, 2023ರ ನಂತರ ಹಿಂಪಡೆಯುವಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ಕಂಪನಿಯು ಗ್ರಾಹಕರಿಗೆ ಹಿಂಪಡೆಯುವ ಸೂಚನೆಯನ್ನು ಮೇಲ್ ಮೂಲಕ ಕಳುಹಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಎಂಜಿನ್ ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಪಾವತಿಸಿದವರು ಮರುಪಾವತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕಂಪನಿ ಹೇಳಿದೆ. ಈ ಮಧ್ಯೆ, ಜೀಪ್ ಕಂಪನಿ ರಾಂಗ್ಲರ್ 4xeಗಳಿಗೆ ಸ್ಟಾಪ್-ಸೇಲ್ ಆದೇಶವನ್ನು ನೀಡಿರುವುದು ಸದ್ಯ ವರದಿಯಾಗಿದೆ.

ರಾಂಗ್ಲರ್ 4xeನ ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ ಎಲೆಕ್ಟ್ರಿಫೈಡ್ ಪವರ್‌ಟ್ರೇನ್ 2.0-ಲೀಟರ್ ಟರ್ಬೋಚಾರ್ಜ್ಡ್ ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿದೆ. ಒಂದನ್ನು ಎಂಜಿನ್‌ನ ಮುಂದೆ, ಎರಡನೆಯದನ್ನು ಗೇರ್‌ಬಾಕ್ಸ್‌ನ ಮುಂದಕ್ಕೆ ಜೋಡಿಸಲಾಗಿದೆ. 375 hp ಪವರ್ ಮತ್ತು 637 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಫೋರ್-ವೀಲ್ ಡ್ರೈವ್ ವೈಶಿಷ್ಟ್ಯಗಳನ್ನು ಹೊಂದಿದ್ದು, ಎಂಟು-ಸ್ವೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಮೂಲಕ ಎರದು ಆಕ್ಸಲ್‌ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಎಲೆಕ್ಟ್ರಿಕ್ ಮೋಟಾರ್‌ಗಳು ರೇರ್ ಬೆಂಚ್‌ನ ಕೆಳಗೆ ಇರುವ 400V, 17kWh ಬ್ಯಾಟರಿ ಪ್ಯಾಕ್‌ನಿಂದ ಪವರ್ ಪಡೆಯುತ್ತವೆ. ಬ್ಯಾಟರಿ ಪ್ಯಾಕ್ ಬೆಲ್ಟ್-ಇಂಟಿಗ್ರೇಟೆಡ್ ಸ್ಟಾರ್ಟರ್/ಜನರೇಟರ್‌ನಿಂದ ವೇಗವರ್ಧನೆಯ ಅಡಿ ಅಥವಾ ಮುಂಭಾಗದ ಎಡಭಾಗದಲ್ಲಿರುವ ಟ್ರಡಿಷನಲ್ ಚಾರ್ಜಿಂಗ್ ಪೋರ್ಟ್ ಮೂಲಕ ಪವರ್ ಮರುಪಡೆಯುತ್ತದೆ. ಈ ಜೀಪ್ ರಾಂಗ್ಲರ್ ಬೆಲೆ ರೂ.53.9 ಲಕ್ಷದಿಂದ ಆರಂಭಿಕ ಬೆಲೆ ಇದ್ದು, ರೂ.59.15 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ. ಜೀಪ್ ರಾಂಗ್ಲರ್ 2 ರೂಪಾಂತರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಜೀಪ್ ರಾಂಗ್ಲರ್ ಟಾಪ್ ವೆರಿಯಂಟ್ ಬೆಲೆ ರೂ.57.9 ಲಕ್ಷ ಇದೆ ಎಂದು ಹೇಳಬಹುದು.

ಇನ್ನು, ಜೀಪ್ ರೆನೆಗೇಡ್ 4xe ಮತ್ತು ಕಂಪಾಸ್ 4xe ಎರಡು ಮಾದರಿಗಳು ತನ್ನ ಆಕರ್ಷಕ ವೈಶಿಷ್ಟಗಳಿಂದ ಗ್ರಾಹರನ್ನು ಆಕರ್ಷಿಸುತ್ತಿದೆ. ಈ ಎರಡು ಕಾರು, 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹಿಂದಿನ ಆಕ್ಸಲ್ ನಡುವೆ ಇರುವ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ. ಇದು 11.4 kWh ಬ್ಯಾಟರಿಯಿಂದ ಚಾಲಿತವಾಗಲಿದ್ದು, ಚಾಲನೆ ಮಾಡುವಾಗ ಅಥವಾ ಮನೆಯಲ್ಲಿರುವ ಔಟ್ ಸೈಡ್ ಪವರ್ ಔಟ್‌ಲೆಟ್ ಮೂಲಕ ರೀಚಾರ್ಜ್ ಮಾಡಬಹುದು ಎಂದು ಹೇಳಬಹುದು.

ಈ ಎಂಜಿನ್ 130 bhp ಅಥವಾ 180 bhp ಪವರ್ ಔಟ್‌ಪುಟ್ ಅನ್ನು ನೀಡುತ್ತದೆ. ಜೊತೆಗೆ ಎಲೆಕ್ಟ್ರಿಕ್ ಮೋಟಾರ್‌ನಿಂದ ಉತ್ಪತ್ತಿಯಾಗುವ 60 bhp ಪವರ್ ಒಳಗೊಂಡಿರುತ್ತದೆ. ರೂಪಾಂತರವನ್ನು ಅವಲಂಬಿಸಿ ಒಟ್ಟು 190 bhp ಅಥವಾ 240 bhp ಪವರ್ ಉತ್ಪಾದಿಸಬಹುದು. ಟಾರ್ಕ್ ವಿಚಾರಕ್ಕೆ ಬಂದರೆ ಎಲೆಕ್ಟ್ರಿಕ್ ಮೋಟಾರ್ 250 Nm ಅನ್ನು ಉತ್ಪಾದಿಸುತ್ತದೆ. ಆದರೆ, ದಹನಕಾರಿ ಎಂಜಿನ್ 270 Nm ಅನ್ನು ಉತ್ಪಾದಿಸುತ್ತದೆ. ಅಲ್ಲದೆ, ಈ ಕಾರುಗಳು ಸುಮಾರು 7.5 ಸೆಕೆಂಡ್‌ಗಳಲ್ಲಿ 0 ರಿಂದ 100 kmph ಟಾಪ್ ಸ್ವೀಡ್ ಪಡೆದುಕೊಳ್ಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
Read more on ಜೀಪ್ jeep
English summary
Jeep recalling almost 63000 hybrid wrangler
Story first published: Saturday, December 10, 2022, 19:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X