ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಕಿಯಾ ಈ ವರ್ಷದ ಆರಂಭದಲ್ಲಿ ಕಾರೆನ್ಸ್ ಎಂಪಿವಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುವ ತನ್ನ ವಿಭಾಗದಲ್ಲಿ ಇದು ಏಕೈಕ ಮಾದರಿಯಾಗಿತ್ತು. ಇದೀಗ ಕಿಯಾ ಇಂಡಿಯಾವು ಸೆಲ್ಟೋಸ್ ಎಸ್‍ಯುವಿಯ ಎಲ್ಲಾ ರೂಪಾಂತರಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಸೇರಿಸಲು ನವೀಕರಣವನ್ನು ನಡೆಸಿದೆ.

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಹೊಸ ಮಾದರಿಯನ್ನು ಪರಿಚಯಿಸುವ ಬದಲು, ಕಿಯಾ ಪ್ರಸ್ತುತ ಕಿಯಾ ಸೆಲ್ಟೋಸ್ ಎಸ್‌ಯುವಿಯೊಂದಿಗೆ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ಸೇರಿಸಿದೆ. ಇದರಿಂದ ಕಿಯಾ ಎಸ್‍ಯುವಿಯ ಬೇಸ್ ರೂಪಾಂತರ ಬೆಲೆಯನ್ನು ರೂ.30,000 ರಷ್ಟು ಹೆಚ್ಚಿಸಿದೆ. ಇದೀಗ ಕಿಯಾ ಸೆಲ್ಟೋಸ್ ಎಸ್‍ಯುವಿಯ ಆರಂಭಿಕ ಬೆಲೆಯು ರೂ.10.49 ಲಕ್ಷವಾಗಿದೆ. ಇದಕ್ಕೂ ಮೊದಲು, ಕಿಯಾ ಸೆಲ್ಟೋಸ್‌ನ ಉನ್ನತ-ಸ್ಪೆಕ್ HTX+, GTX(O), GTX+ ಮತ್ತು X-ಲೈನ್ ಟ್ರಿಮ್‌ಗಳಲ್ಲಿ ಮಾತ್ರ ಆರು ಏರ್‌ಬ್ಯಾಗ್‌ಗಳನ್ನು ನೀಡಿತು, ಆದರೆ ಈಗ ಇದನ್ನು HTE, HTK, HTK+ ಮತ್ತು HTX ಟ್ರಿಮ್‌ಗಳಲ್ಲಿಯೂ ನೀಡಲಾಗಿದೆ,

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಬಹಳ ಹಿಂದೆಯೇ, ಸೆಲ್ಟೋಸ್ ಅದರ ಮೂಲ ಟ್ರಿಮ್‌ಗಳಲ್ಲಿ ಎರಡು ಏರ್‌ಬ್ಯಾಗ್‌ಗಳೊಂದಿಗೆ ಮಾತ್ರ ಲಭ್ಯವಿತ್ತು, ಆದರೆ ಈ ಏಪ್ರಿಲ್‌ನಲ್ಲಿ ಅಪ್‌ಡೇಟ್‌ನೊಂದಿಗೆ ಸೆಲ್ಟೋಸ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ನಾಲ್ಕು ಏರ್‌ಬ್ಯಾಗ್‌ಗಳಿಗೆ ನವೀಕರಿಸಲಾಗಿದೆ. ಮತ್ತು ಈಗ ಆರು ಏರ್‌ಬ್ಯಾಗ್‌ಗಳೊಂದಿಗೆ, ಸೆಲ್ಟೋಸ್ ಸರ್ಕಾರದ ಕಡ್ಡಾಯ ಆರು-ಏರ್‌ಬ್ಯಾಗ್ ನಿಯಮವನ್ನು ಅನುಸರಿಸುತ್ತದೆ, ಅದು ಅಕ್ಟೋಬರ್ 1, 2022 ರಿಂದ ಜಾರಿಗೆ ಬರಲಿದೆ.

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

2020ರ ನವೆಂಬರ್ ತಿಂಗಳಿನಲ್ಲಿ ಸೆಲ್ಟೋಸ್ GNCAP ಮೂಲಕ ಪರೀಕ್ಷಿಸಿದಾಗ, 3-ಸ್ಟಾರ್ ಸುರಕ್ಷತಾ ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಪರೀಕ್ಷಿಸಲಾದ ಮೂಲ HTE ಟ್ರಿಮ್ ಕೇವಲ ಎರಡು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಆರು ಏರ್‌ಬ್ಯಾಗ್‌ಗಳು ಈಗ ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿರುವುದರಿಂದ ಮತ್ತೊಮ್ಮೆ ಪರೀಕ್ಷಿಸಿದರೆ ಅದರ ಸ್ಕೋರ್ ಅನ್ನು ಸುಧಾರಿಸಬಹುದು.

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಕಿಯಾ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಅಲ್ಲದೇ ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ. ಭಾರತದ ಗ್ರಾಹಕರು ಈ ಕಿಯಾ ಸೆಲ್ಟೋಸ್(Kia Seltos) ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ.

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಮಾರಾಟದಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಇದಕ್ಕೆ ಉತ್ತಮ ಉದಾಹರಣೆ ಎಂದರೆ, ಇತ್ತೀಚೆಗೆ ರಸ್ತೆಗಳಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿ ಮಾದರಿ ಹೆಚ್ಚು ಕಾಣಸಿಗುತ್ತದೆ.

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಕಿಯಾ ಸೆಲ್ಟೊಸ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಮೂರು ಎಂಜಿನ್ ಆಯ್ಕೆಯೊಂದಿಗೆ ಒಟ್ಟು ಹಲವು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯಲ್ಲೂ ಕಂಪನಿಯು ಇದೀಗ ಆರು ಏರ್‌ಬ್ಯಾಗ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೊಲ್ ಸೌಲಭ್ಯಗಳನ್ನು ನೀಡಿದೆ.

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಈ 2022ರ ಸೆಲ್ಟೊಸ್ ಮಾದರಿಯ ಆಟೋಮ್ಯಾಟಿಕ್ ಮಾದರಿಗಳಲ್ಲೂ ಕಂಪನಿಯು ಪ್ಯಾಡಲ್ ಶಿಫ್ಟರ್ ಜೋಡಣೆ ಮಾಡಿದೆ. ಇದರ ಜೊತೆ ಹೆಚ್‌ಟಿಎಕ್ಸ್ ಡೀಸೆಲ್ ಮಾದರಿಯಲ್ಲೂ ಟೋಮ್ಯಾಟಿಕ್ ಪರಿಚಯಿಸಿದೆ. ಹಾಗೆಯೇ ಈ ಎಸ್‍ಯುವಿ ಬೆಸ್ ವೆರಿಯೆಂಟ್‌ನಲ್ಲಿ ಕಂಪನಿಯು ಹೊಸದಾಗಿ ವಿನ್ಯಾಸಗೊಳಿಸಲಾದ ಕಿಯಾ ಲೊಗೊ ಹೊಂದಿರುವ ವ್ಹೀಲ್ ಕವರ್, ಎಕ್ಸ್ ಲೈನ್ ಮಾದರಿಗಳಲ್ಲಿ ಕಂಪನಿಯು ಕಿಯಾ ಲೊಗೊ ಹೊಂದಿರುವ ಹೆಡ್‌ರೆಸ್ಟ್ ಸೇರಿದಂತೆ ಟಾಪ್ ಲೈನ್‌ಗಳಲ್ಲಿ ಆರು ಏರ್‌ಬ್ಯಾಗ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಈ ಎಸ್‍ಯುವಿಯ ಟಾಪ್ ಎಂಡ್ ಮಾದರಿಯಲ್ಲಿರುವ ಹೆಚ್‌ಟಿಎಕ್ಸ್ ಪ್ಲಸ್, ಜಿಟಿಎಕ್ಸ್‌(ಒ), ಜಿಟಿಎಕ್ಸ್ ಪ್ಲಸ್ ಮತ್ತು ಎಕ್ಸ್-ಲೈನ್ ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳಿದೆ. ಹೆಚ್‌ಟಿಎಕ್ಸ್ ಪ್ಲಸ್ ಡಿಸೇಲ್ ಮಾದರಿಗಳಲ್ಲಿ ಐಎಂಟಿ ಕ್ಲಚ್‌ಲೆಸ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಈ ಹೊಸ ಮಾದರಿಯು ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಕಿಯಾ ಸೆಲ್ಟೋಸ್ ಎಸ್‍ಯುವಿಯಲ್ಲಿ ಹಿಂದಿನಂತೆಯೇ ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ನೀಡಲಾಗಿದೆ.

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಇದರೊಂದಿಗೆ ಹೊಸ ಕಾರಿನಲ್ಲಿ ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದೆ. ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯವನ್ನು ಹೊಂದಿದೆ.

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಈ ಮೂಲಕ ಅತ್ಯುತ್ತಮ ಸ್ಟೀಲ್ ಬಳಕೆಯೊಂದಿಗೆ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಮತ್ತು ಸುರಕ್ಷಾ ಫೀಚರ್ಸ್‌‌ಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಎಸ್‍ಯುವಿಯಲ್ಲಿ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನನ್ನು ನೀಡಲಾಗಿದೆ.

ಸೆಲ್ಟೋಸ್‌ನ ಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಿದ ಕಿಯಾ

ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು,ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಸೌಲಭ್ಯವನ್ನು ಈ ಕಿಯಾ ಸೆಲ್ಟೋಸ್ ಎಸ್‍ಯುವಿಯಲ್ಲಿ ಲಭ್ಯವಿದೆ,

Most Read Articles

Kannada
English summary
Kia seltos suv all variants gets 6 airbags as standard safety update details
Story first published: Monday, August 1, 2022, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X