India
YouTube

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಕಿಯಾ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರು ಉತ್ಪನ್ನಗಳ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಸೊನೆಟ್ ಮಾದರಿಯನ್ನು ಸಿಎನ್‌ಜಿ ಆವೃತ್ತಿಯಲ್ಲೂ ಬಿಡುಗಡೆಯ ಸುಳಿವು ನೀಡಿದೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಹೆಚ್ಚುತ್ತಿರುವ ದುಬಾರಿ ಇಂಧನ ಪರಿಣಾಮ ಗ್ರಾಹಕರು ಪರ್ಯಾಯ ಇಂಧನಗಳ ಪ್ರೇರಿತ ವಾಹನಗಳ ಖರೀದಿಯತ್ತ ಆಸಕ್ತಿ ವಹಿಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ಬದಲಾಗಿ ಸಿಎನ್‌ಜಿ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು ಮಾದರಿಗಳತ್ತ ಮುಖ ಮಾಡುತ್ತಿದ್ದಾರೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ದೇಶಾದ್ಯಂತ ಸದ್ಯ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ಸೌಲಭ್ಯವಿಲ್ಲದಿರುವುದು ಮತ್ತು ಸಾಮಾನ್ಯ ಮಾದರಿಗಳಿಂತ ದುಪ್ಪಟ್ಟು ಬೆಲೆ ಹೊಂದಿರುವುದು ಇವಿ ವಾಹನಗಳನ್ನು ತುರ್ತಾಗಿ ಅಳವಡಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದು, ಇವಿ ವಾಹನಗಳಿಗೆ ಬದಲಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಿಂತಲೂ ಹೆಚ್ಚು ಮೈಲೇಜ್ ಖಾತ್ರಿಪಡಿಸುವ ಸಿಎನ್‌ಜಿ ಮಾದರಿಗಳತ್ತ ಮುಖಮಾಡುತ್ತಿದ್ದಾರೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಸದ್ಯ ಮಾರುಕಟ್ಟೆಯಲ್ಲಿ ಸಿಎನ್‌ಜಿ ಮಾದರಿಗಳ ಮಾರಾಟವು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಕಂಪನಿಗಳು ತಮ್ಮ ಪ್ರಮುಖ ಕಾರುಗಳಿಗೆ ಫ್ಯಾಕ್ಟರಿ ಫಿಟೆಡ್ ಸಿಎನ್‌ಜಿ ಕಿಟ್ ಅಳವಡಿಸುತ್ತಿವೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಪರ್ಯಾಯ ಇಂಧನ ವ್ಯವಸ್ಥೆಯಾಗಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) [Compressed natural gas] ವಾಹನಗಳನ್ನು ಬಳಕೆ ಮಾಡಲಾಗುತ್ತದೆ. ಇದು ವಾತಾವರಣಕ್ಕೆ ಹೊರಬಿಡುವ ಮಾಲಿನ್ಯದ ಪ್ರಮಾಣವೂ ಕಡಿಮೆಯಾಗಿದ್ದು, ಮಿತವ್ಯಯವೆನಿಸಿಕೊಂಡಿದೆ. ಹಾಗಿದ್ದರೂ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ ಹೋಲಿಸಿದಾಗ ಸಿಎನ್‌ಜಿ ಕಾರುಗಳ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಕಡಿಮೆಯಾಗಿರುತ್ತದೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಆದರೂ ಸಾಮಾನ್ಯ ಇಂಧನ ಚಾಲಿತ ಕಾರಿಗಿಂತಲೂ ಹೆಚ್ಚು ಮೈಲೇಜ್ ಪಡೆಯಲು ಸಿಎನ್‌ಜಿ ಕಾರುಗಳಿಂದ ಸಾಧ್ಯ. ಇವು ಸಾಮಾನ್ಯ ಡೀಸೆಲ್ ಮಾದರಿಗಿಂತಲೂ ಶೇ.30 ರಷ್ಟು ಮೈಲೇಜ್ ನೀಡಲಿದ್ದು, ಗ್ರಾಹಕರ ಬೇಡಿಕೆಯೆಂತೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಸಿಎನ್‌ಜಿ ಪೂರೈಕೆಯನ್ನು ವೇಗಗೊಳಿಸಲಾಗಿದೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಹೀಗಾಗಿ ಭವಿಷ್ಯದ ಮಾದರಿಗಳ ಮೇಲೆ ಗಮನಹರಿಸಿರುವ ಕಿಯಾ ಇಂಡಿಯಾ ಕಂಪನಿಯು ಸಹ ತನ್ನ ಪ್ರತಿಸ್ಪರ್ಧಿ ಮಾದರಿಗಳಿಗೆ ಪೂರಕವಾಗಿ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಸೊನೆಟ್ ಸಿಎನ್‌ಜಿ ಮಾದರಿಯ ಕಾರ್ಯಕ್ಷಮತೆ ಕುರಿತಂತೆ ಕಂಪನಿಯು ಇತ್ತೀಚೆಗೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಮಧ್ಯಮ ಕ್ರಯಾಂಕದ ಪೆಟ್ರೋಲ್ ಮ್ಯಾನುವಲ್ ಮಾದರಿಯನ್ನು ಆಧರಿಸಿ ಹೊಸ ಸಿಎನ್‌ಜಿ ಆವೃತ್ತಿಯು ಅಭಿವೃದ್ದಿಗೊಳ್ಳುತ್ತಿದ್ದು, ರೂ. 10 ಲಕ್ಷದೊಳಗೆ ಬಿಡುಗಡೆಯಾಗಲಿರುವ ಹೊಸ ಕಾರು ಪ್ರತಿ ಕೆಜಿ ಸಿಎನ್‌ಜಿ ಕನಿಷ್ಠ 26 ಕಿ.ಮೀ ಮೈಲೇಜ್ ನೀಡಬಹುದಾಗಿದೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಇನ್ನು ಹೊಸ ಸೊನೆಟ್ ಕಾರು ಮಾದರಿಯು ಕಳೆದ ವಾರವಷ್ಟೇ 2022ರ ಮಾದರಿಯೊಂದಿಗೆ ಪ್ರಮುಖ ಸ್ಟ್ಯಾಂಡರ್ಡ್ ಫೀಚರ್ಸ್‌ಗಳೊಂದಿಗೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.69 ಲಕ್ಷ ಬೆಲೆ ಹೊಂದಿದೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಹಳೆಯ ಮಾದರಿಗಿಂತಲೂ ಹೊಸ ಆವೃತ್ತಿಯು ಈ ಬಾರಿ ರೂ. 30 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಇದರ ಜೊತೆಗೆ ಹೊಸ ಕಾರಿನಲ್ಲಿ ಹೊಸ ಬಣ್ಣಗಳ ಆಯ್ಕೆಯನ್ನು ಸಹ ವಿಸ್ತರಿಸಲಾಗಿದೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಇದರ ಹೊರತಾಗಿ ಹೊಸ ಮಾದರಿಯಲ್ಲಿ ಈ ಹಿಂದಿನ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲ. ನಿರಂತರವಾಗಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಸೊನೆಟ್ ಮಾದರಿಯನ್ನು ಅನ್ನು ನವೀಕರಿಸಿರುವ ಕಂಪನಿಯು ಸುರಕ್ಷತೆಯ ಮೇಲೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ನವೀಕರಣಗೊಂಡಿರುವ 2022ರ ಸೊನೆಟ್ ಮಾದರಿಯ ಬೆಸ್ ವೆರಿಯೆಂಟ್‌ನಲ್ಲಿ ಈ ಬಾರಿ ಸ್ಟ್ಯಾಂಡರ್ಡ್ ಆಗಿ ನಾಲ್ಕು ಏರ್‌ಬ್ಯಾಗ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ನೀಡಲಾಗಿದೆ. ಹಾಗೆಯೇ ವೈಟ್ ಸ್ಟಿಚ್ ಹೊಂದಿರುವ ಸೆಮಿ ಲೆದರ್ ಆಸನಗಳು ಒಳಾಂಗಣ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡಿದ್ದು, ಹಿಂಭಾಗದ ಸೀಟಿನಲ್ಲಿ ಮಡಿಕೆ ಮಾಡಬಹುದಾದ ನಾಬ್ ನೀಡಲಾಗಿದೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಇದರೊಂದಿಗೆ ಹೊಸ ಕಾರಿನಲ್ಲಿ ಟಾಪ್ ಎಂಡ್ ಮಾದರಿಯನ್ನು ಹೊರತುಪಡಿಸಿ ಇನ್ನುಳಿದ ಮಾದರಿಗಳಲ್ಲಿ ಟಿಪಿಎಂಎಸ್ ಮತ್ತು 4 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಕಂಪನಿಯು 6 ಏರ್‌ಬ್ಯಾಗ್‌ಗಳು, ಹೊಸ ಕಿಯಾ ಕನೆಕ್ಟ್ ಅಪ್ಲಿಕೇಶನ್, ಹೊಸ ಎಸ್ಒಎಸ್ ಮತ್ತು ಐಆರ್‌ವಿಎಂ ನಲ್ಲಿ ಕಿಯಾ ಕನೆಕ್ಟ್ ಬಟನ್ ನೀಡಲಾಗಿದೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಜೊತೆಗೆ ಈ ಹಿಂದೆ ಹೆಚ್‌ಟಿಎಕ್ಸ್ ಅಥವಾ ಮೇಲಿನ ರೂಪಾಂತರಗಳಲ್ಲಿ ಮಾತ್ರ ಲಭ್ಯವಿದ್ದ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಸೌಲಭ್ಯಗಳನ್ನು ಇದೀಗ ಮಿಡ್ ವೆರಿಯೆಂಟ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಕಿಯಾ ಸೊನೆಟ್ ಕಾರು ಮಾದರಿಯು ಒಟ್ಟು ಎರಡು ಪೆಟ್ರೋಲ್ ಎಂಜಿನ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಇದರ ಪೆಟ್ರೋಲ್ ಮಾದರಿಯು 1.0-ಲೀಟರ್ ಟರ್ಬೊ ಜಿಡಿಐ ಎಂಜಿನ್ ಹೊಂದಿದ್ದು ಅದು ಗರಿಷ್ಠ 120 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಗರಿಷ್ಠ 83 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 1.5-ಲೀಟರ್ ಸಿಆರ್‌ಡಿಐ ಎಂಜಿನ್ ಅನ್ನು ಪಡೆದಿದ್ದು, ಇದು 100 ಬಿಎಚ್‌ಪಿ ಮತ್ತು 115 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ.

Most Read Articles

Kannada
English summary
Kia sonet compact suv could get factory fitted cng variant soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X