ಭಾರತಕ್ಕೆ ಲಗ್ಗೆಯಿಟ್ಟ ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ಎರಡನೇ ಕಾರು!

ವಿಶ್ವದ ಅತ್ಯಂತ ದುಬಾರಿ ಕಾರು ಉತ್ಪಾದನಾ ಕಂಪನಿಗಳಲ್ಲಿ ಲ್ಯಾಂಬೋರ್ಗಿನಿ ಕೂಡಾ ಒಂದು. ಶ್ರೇಷ್ಠ ಕಾರು ಮಾದರಿಗಳ ಮೂಲಕ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಲ್ಯಾಂಬೋರ್ಗಿನಿ ಕುರಿತಾಗಿ ಮಾತನಾಡುವುದೇ ಒಂದು ಕ್ರೇಜ್ ಎಂದರೆ ತಪ್ಪಾಗುವುದಿಲ್ಲ. ಹಲವಾರು ಸೂಪರ್ ಕಾರು ಮಾದರಿಗಳ ಮೂಲಕ ಹೆಸರುವಾಸಿಯಾಗಿರುವ ಲ್ಯಾಂಬೋರ್ಗಿನಿಯ ಕಂಪನಿಯು ತನ್ನ ಅತೀ ವಿರಳವಾದ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ನ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡುವ ಮೂಲಕ ಸದ್ದು ಮಾಡುತ್ತಿದೆ.

ಭಾರತಕ್ಕೆ ಲಗ್ಗೆಯಿಟ್ಟ ಲ್ಯಾಂಬೋರ್ಗಿನಿ ಎರಡನೇ ಕಾರ್‌ ಮುಂಬೈನಲ್ಲಿ!

ವಿಶ್ವಾದ್ಯಂತ ಕೇವಲ 250 ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ಕಾರುಗಳನ್ನು ಮಾತ್ರ ಉತ್ಪಾದಿಸಲಾಗಿದ್ದು, 250 ಯುನಿಟ್‌ಗಳಲ್ಲಿ ಎರಡು ಮಾದರಿಗಳು ಭಾರತದಲ್ಲಿ ಮಾರಾಟಗೊಂಡಿವೆ. ಕಳೆದ ತಿಂಗಳು ಮೊದಲ ಯುನಿಟ್ ವಿತರಣೆ ಮಾಡಿದ್ದ ಕಂಪನಿಯು ಇದೀಗ ಎರಡನೇ ಯುನಿಟ್ ಅನ್ನು ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ ವಿತರಿಸಲಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟ ಲ್ಯಾಂಬೋರ್ಗಿನಿ ಎರಡನೇ ಕಾರ್‌ ಮುಂಬೈನಲ್ಲಿ!

ಹೊಸ ಕಾರಿನ ವಿತರಣೆ ಕುರಿತಾಗಿ ಮಾತನಾಡಿದ ಇಂಡಿಯಾ ವಿಭಾಗದ ಲ್ಯಾಂಬೋರ್ಗಿನಿ ಮುಖ್ಯಸ್ಥ ಶಾರದ್‌ ಅಗರ್ವಾಲ್‌ ಅವರು ಈ ಅವೆಂಟಡಾರ್‌ LP 780 - 4 , ಅವೆಂಟಡಾರ್‌ ಸರಣಿಯಲ್ಲೇ ತಯಾರಾದ ಅತ್ಯಂತ ಪವರ್‌ಫುಲ್‌ ಕಾರು ಮಾದರಿಯಾಗಿದೆ. ಕೇವಲ ಎರಡು ವಾರಗಳ ಸಮಯದಲ್ಲಿ ಲಿಮಿಟೆಡ್‌ ಎಡಿಷನ್‌ ನ ಎರಡನೇ ಕಾರನ್ನು ಭಾರತಕ್ಕೆ ತರುವಲ್ಲಿ ನಾವು ಯಶಸ್ವಿಯಾಗಿದ್ದು, ನಿಜಕ್ಕೂ ತುಂಬಾ ಸಂತೋಷವಾಗುತ್ತಿದೆ. ಲ್ಯಾಂಬೋರ್ಗಿನಿಯ v12 ಇಂಜಿನ್‌ ನ ಇತಿಹಾಸದಲ್ಲಿಯೇ ಇದು ಅತ್ಯಂತ ಪವರ್‌ಫುಲ್‌ ಆಗಿದ್ದು ಇದರ ಬಗ್ಗೆ ನಮ್ಮ ಭಾರತದ ಗ್ರಾಹಕರು ಯಾವ ರೀತಿಯಾಗಿ ಪ್ರತಿಕ್ರಿಯಿಸುತ್ತಾರೆ, ಹಾಗೂ ಈ ಕಾರ್‌ನ ಎಂಟ್ರಿಯೊಂದಿಗೆ ಭಾರತದಲ್ಲಿ ಅವೆಂಟಡಾರ್‌ನ ಮುಂದಿನ ಪ್ರಯಾಣ ಯಾವ ಮಟ್ಟದಲ್ಲಿ ಸಾಗುತ್ತದೆ ಎಂದು ಎದುರು ನೋಡುತ್ತಿದ್ದೆವೆ ಎಂದಿದ್ದಾರೆ.

ಭಾರತಕ್ಕೆ ಲಗ್ಗೆಯಿಟ್ಟ ಲ್ಯಾಂಬೋರ್ಗಿನಿ ಎರಡನೇ ಕಾರ್‌ ಮುಂಬೈನಲ್ಲಿ!

ಭಾರತದಲ್ಲಿ ವಿತರಣೆ ಮಾಡಲಾಗಿರುವ ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ಕಡು ಕಿತ್ತಳೆ ಬಣ್ಣದ ಕಾರಾಗಿದ್ದು ಈ ಬಣ್ಣವನ್ನು ಕಂಪನಿಯು ವಿಶೇಷವಾಗಿ ಅರಾನಿಕೋ ಬ್ರುಕಾಟಿಯೋ ಎಂದು ಹೆಸರಿಸಿದ್ದಾರೆ. ಇದೇ ಬಣ್ಣವು ಕಾರ್‌ನ ಮುಂಭಾಗದ ಸ್ಪಾಯ್ಲರ್ ಸೇರಿದಂತೆ ಬಹುತೇಕ ಎಲ್ಲಾ ಭಾಗಗಳಲ್ಲಿ ಬಳಕೆಯಾಗಿರುವುದು ಇದರ ಸೌಂದರ್ಯವನ್ನೂ ಇನ್ನೂ ಹೆಚ್ಚಿಸಿದೆ.

ಭಾರತಕ್ಕೆ ಲಗ್ಗೆಯಿಟ್ಟ ಲ್ಯಾಂಬೋರ್ಗಿನಿ ಎರಡನೇ ಕಾರ್‌ ಮುಂಬೈನಲ್ಲಿ!

ಇಷ್ಟು ಮಾತ್ರವಲ್ಲದೇ ಕಾರ್ ನ ಕಪ್ಪು ಬಣ್ಣದ ಇಂಟೀರಿಯರ್‌ನಲ್ಲಿ ಅಲ್ಲಲ್ಲಿ ಕಿತ್ತಳೆ ಬಣ್ಣವನ್ನು ಬಳಸಿದ್ದಾರೆ. ಕಪ್ಪು ಬಣ್ಣದ ಸೀಟ್‌ಗಳಲ್ಲಿ ಅಲ್ಲಲ್ಲಿ ಕಿತ್ತಳೆ ಬಣ್ಣದ ಶೇಡ್‌ ಬಳಸಿಕೊಂಡು ಎಂಬ್ರಾಯಿಡರಿ ಮಾಡಿರುವುದು ನಿಜಕ್ಕೂ ನೋಡುಗರ ಮನಸೂರೆಗೊಳ್ಳುವಲ್ಲಿ ಎರಡು ಮಾತಿಲ್ಲ.

ಭಾರತಕ್ಕೆ ಲಗ್ಗೆಯಿಟ್ಟ ಲ್ಯಾಂಬೋರ್ಗಿನಿ ಎರಡನೇ ಕಾರ್‌ ಮುಂಬೈನಲ್ಲಿ!

ಈ ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ V12, 6.5 ಲೀಟರ್‌ ನ ಲ್ಯಾಂಬೋರ್ಗಿನಿ ಎಂಜಿನ್‌ ಹೊಂದಿದ್ದು, 8500 ಆರ್‌ಪಿಎಂ ನಲ್ಲಿ ಬರೋಬ್ಬರಿ 769 ರಷ್ಟು ಬಿಹೆಚ್‌ಪಿ ಯೊಂದಿಗೆ 720 ನ್ಯೂಟನ್‌ ಮೀಟರ್‌ ಪವರನ್ನು ಉತ್ಪಾದಿಸುತ್ತದೆ.

ಭಾರತಕ್ಕೆ ಲಗ್ಗೆಯಿಟ್ಟ ಲ್ಯಾಂಬೋರ್ಗಿನಿ ಎರಡನೇ ಕಾರ್‌ ಮುಂಬೈನಲ್ಲಿ!

ಇನ್ನು ಎಂದಿನಂತೆ 7 ಸ್ಪೀಡ್‌ ರೋಬೋಟೈಸ್ಡ್‌ ಮ್ಯಾನುವಲ್‌ ಗೇರ್‌ ಬಾಕ್ಸ್‌ ಈ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ಕಾರ್‌ನಿಂದ ಹೊರಬರುವ ಇಷ್ಟೊಂದು ಶಕ್ತಿಯನ್ನು ಸಮರ್ಥವಾಗಿ ನಿಭಾಯಿಸುತ್ತದೆ.

ಭಾರತಕ್ಕೆ ಲಗ್ಗೆಯಿಟ್ಟ ಲ್ಯಾಂಬೋರ್ಗಿನಿ ಎರಡನೇ ಕಾರ್‌ ಮುಂಬೈನಲ್ಲಿ!

ಕೇವಲ 2.9 ಸೆಕೆಂಡ್‌ಗಳಲ್ಲಿ 0-100 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯ ಮತ್ತು ಕೇವಲ 6 ಸೆಕೆಂಡ್‌ಗಳಲ್ಲಿ ಸುಮಾರು 200೦ ಕಿಮೀ ನಷ್ಟು ವೇಗವನ್ನು ತಲುಪುವ ಸಾಮರ್ಥ್ಯ ಈ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ಕಾರಿಗಿದೆ.

ಭಾರತಕ್ಕೆ ಲಗ್ಗೆಯಿಟ್ಟ ಲ್ಯಾಂಬೋರ್ಗಿನಿ ಎರಡನೇ ಕಾರ್‌ ಮುಂಬೈನಲ್ಲಿ!

ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ LP 780-4, ಗಂಟೆಗೆ ಸುಮಾರು 355 ಕಿಮೀ ವೇಗವನ್ನು ತಲುಪಿದ್ದು, ವೇಗವನ್ನು ಇಷ್ಟಪಡುವ ಲ್ಯಾಂಬೋರ್ಗಿನಿ ಫ್ಯಾನ್ಸ್‌ ಗೆ ಹೇಳಿ ಮಾಡಿಸಿರುವ ಕಾರ್‌ ಇದಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟ ಲ್ಯಾಂಬೋರ್ಗಿನಿ ಎರಡನೇ ಕಾರ್‌ ಮುಂಬೈನಲ್ಲಿ!

ವಿಶ್ವದಲ್ಲೇ ಇರುವಂತಹ ಅತೀ ವಿರಳ ಕಾರ್‌ಗಳಲ್ಲಿ ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ಒಂದಾಗಿದೆ. ಹಾಗಿದ್ದರೂ ಭಾರತಕ್ಕೆ ಎರಡು ಕಾರ್‌ಗಳು ಲಗ್ಗೆ ಇಟ್ಟಿದ್ದು, ಇದು ಭಾರತೀಯರಿಗೆ ಸೂಪರ್ ಕಾರ್‌ಗಳ ಮೇಲಿರುವ ಕ್ರೇಜ್ ತೋರಿಸುತ್ತದೆ. ಆದರೆ ಕಂಪನಿಯು ಹೊಸ ಕಾರಿನ ಬೆಲೆಯನ್ನು ಗುಪ್ತವಾಗಿಟ್ಟು, ಇದು ಇತರೆ ಸ್ಟ್ಯಾಂಡರ್ಡ್ ಲ್ಯಾಂಬೋರ್ಗಿನಿ ಕಾರುಗಳಿಂತಲೂ ತುಸು ದುಬಾರಿ ಎನ್ನಿಸಲಿದೆ.

Most Read Articles

Kannada
English summary
Lamborghini 2nd aventador ultimate roadster delivered in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X