2023ರಲ್ಲಿ ಭಾರತದ ಮಾರುಕಟ್ಟೆಗೆ ಬರಲಿರುವ ಬಹುನೀರಿಕ್ಷಿತ ಎಂಪಿವಿಗಳು: ಇನ್ನೋವಾದಿಂದ..

ಭಾರತೀಯ ಮಾರುಕಟ್ಟೆಯಲ್ಲಿ ಬಹುಪಯೋಗಿ ವಾಹನ (MPV) ವಿಭಾಗವು ಬಹಳಷ್ಟು ಜನಪ್ರಿಯವಾಗಿದೆ. ದೇಶ - ವಿದೇಶದ ಕಾರು ತಯಾರಕ ಕಂಪನಿಗಳು ಹಲವು ನವೀನ ವೈಶಿಷ್ಟ್ಯ ಹಾಗೂ ವಿನ್ಯಾಸದೊಂದಿಗೆ ಇಂತಹ ಕಾರುಗಳನ್ನು ರೆಡಿ ಮಾಡುತ್ತಿವೆ. ಹಾಗಾದರೆ, 2023ರ ಅಂತ್ಯದ ವೇಳೆಗೆ ದೇಶದಲ್ಲಿ ರಸ್ತೆಗಿಳಿಯಲಿರುವ ಮುಂಬರುವ ಎಂಪಿವಿಗಳು ಯಾವುದೆಂದು ಪರಿಶೀಲಿಸೋಣ.

ಇನ್ನೋವಾ ಕ್ರಿಸ್ಟಾ ಫೇಸ್ ಲಿಫ್ಟ್:
ಟೊಯೊಟಾ ಕಂಪನಿ ಹೊಸ ಇನ್ನೋವಾ ಹೈಕ್ರಾಸ್ ಅನ್ನು ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದಾಗ, ಇನ್ನೋವಾ ಕ್ರಿಸ್ಟಾ ಡೀಸೆಲ್ ಆವೃತ್ತಿಯನ್ನು ಹೈಕ್ರಾಸ್ ಜೊತೆಗೆ ಮಾರಾಟ ಮಾಡಲಾಗುತ್ತದೆ ಎಂದು ಹೇಳಿತ್ತು. ಇನ್ನೋವಾ ಕ್ರಿಸ್ಟಾ ಡೀಸೆಲ್‌ಗಾಗಿ ಬುಕಿಂಗ್‌ಗಳು ಜನವರಿ 2023ರಿಂದ ಪುನರಾರಂಭಗೊಳ್ಳುತ್ತಿದೆ. ಕ್ರಿಸ್ಟಾ ಡೀಸೆಲ್ ಆವೃತ್ತಿಯಲ್ಲಿ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳ ಜೊತೆಗೆ ಹೆಚ್ಚುವರಿ ಫೀಚರ್ಸ್ ಪಡೆಯುವ ನಿರೀಕ್ಷೆಯಿದೆ. ಹೊಸ BS6 - 2 ಮಾನದಂಡಗಳ ಪ್ರಕಾರ, ಕ್ರಿಸ್ಟಾ ನವೀಕರಿಸಿದ ಡೀಸೆಲ್ ಎಂಜಿನ್ ಅನ್ನು ಸಹ ಪಡೆಯಲಿದೆ.

2023ರಲ್ಲಿ ಭಾರತದಲ್ಲಿ ಮಾರುಕಟ್ಟೆಗೆ ಬರಲಿರುವ ಬಹುನೀರಿಕ್ಷಿತ ಎಂಪಿವಿಗಳು: ಇನ್ನೋವಾದಿಂದ..

ಟೊಯೊಟಾ ಇನ್ನೋವಾ ಕ್ರಿಸ್ಟಾದ ಎಂಜಿನ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ, ಈ ಕಾರು, 2.4-ಲೀಟರ್ D - 4D ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಅನ್ನು ಹೊಂದಿರಲಿದ್ದು, ಇದು 148 bhp ಗರಿಷ್ಠ ಪವರ್ ಮತ್ತು 343 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು. ಈ ಇನ್ನೋವಾ ಕ್ರಿಸ್ಟಾ ಡೀಸೆಲ್ ಆವೃತ್ತಿಯ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಆಯ್ಕೆಯೊಂದಿಗೆ ಮಾತ್ರ ಖರೀದಿಗೆ ಲಭ್ಯವಿದೆ.

ಕಿಯಾ ಕಾರ್ನೀವಲ್:
ಫೇಸ್‌ಲಿಫ್ಟೆಡ್ ಕಿಯಾ ಕಾರ್ನಿವಲ್ ಅನ್ನು 2021ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಯಿತು. ಆದರೆ, ಈ ಎಂಪಿವಿ ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಕುರಿತ ಮಾಹಿತಿಯನ್ನು ಕಾರು ತಯಾರಕರು ಇನ್ನೂ ಬಹಿರಂಗಪಡಿಸಿಲ್ಲ. ಇದು ಮುಂದಿನ ವರ್ಷ ದೇಶೀಯ ಗ್ರಾಹಕರ ಕೈಗೆ ಸಿಗುವ ನಿರೀಕ್ಷೆಯಿದೆ. ಈ ಕಾರಿನ ಅಳೆತೆ ಬಗ್ಗೆ ಹೇಳುವುದಾದರೆ, ಹೊಸ ಕಾರ್ನೀವಲ್ 5155 ಎಂಎಂ ಉದ್ದ, 1995 ಎಂಎಂ ಅಗಲ ಮತ್ತು 1775 ಎಂಎಂ ಎತ್ತರವನ್ನು ಹೊಂದಿದೆ.

ಜಾಗತಿಕವಾಗಿ ಕಾರ್ನಿವಲ್ ಕಾರು, 3.5L V6 MPi ಪೆಟ್ರೋಲ್, ಹೊಸ 2.2L ಸ್ಮಾರ್ಟ್ ಸ್ಟ್ರೀಮ್ ಮತ್ತು 3.5L GDi V6 ಸ್ಮಾರ್ಟ್ ಸ್ಟ್ರೀಮ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಭಾರತದಲ್ಲಿ, 2023ಕ್ಕೆ ಕಿಯಾ ಕಾರ್ನಿವಲ್ 200 bhp ಪವರ್ ಮತ್ತು 440 Nm ಟಾರ್ಕ್ ಉತ್ಪಾದಿಸುವ 2.2L ಡೀಸೆಲ್ ಮೋಟಾರ್‌ನೊಂದಿಗೆ ಲಭ್ಯವಾಗುವ ಸಾಧ್ಯತೆಯಿದೆ. 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಹೊಂದಿರಲಿದ್ದು, ಬ್ಲೈಂಡ್ ಸ್ಪಾಟ್ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್, ಸರೌಂಡ್ ವ್ಯೂ ಮಾನಿಟರ್ ಅನ್ನು ಪಡೆಯಲಿದೆ.

ಹುಂಡೈ ಸ್ಟಾರ್‌ಗೇಜರ್:
ಹ್ಯುಂಡೈ ಇತ್ತೀಚೆಗೆ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ತನ್ನ ಹೊಸ ಸ್ಟಾರ್‌ಗೇಜರ್ ಎಂವಿಪಿಯನ್ನು ಅನಾವರಣಗೊಳಿಸಿದೆ. ಸ್ಟಾರ್‌ಗೇಜರ್ ಅನ್ನು ಸ್ಥಳೀಯವಾಗಿ ಇಂಡೋನೇಷ್ಯಾದಲ್ಲಿ ಉತ್ಪಾದಿಸಲಾಗಿದ್ದು, ಇದು ಅಲ್ಲಿನ ಮಾರುಕಟ್ಟೆಯಲ್ಲಿ ಸುಜುಕಿ ಎರ್ಟಿಗಾ, ಎಕ್ಸ್‌ಎಲ್ 7, ಕಿಯಾ ಕ್ಯಾರೆನ್ಸ್, ಟೊಯೊಟಾ ಅವಾಂಜಾ ಮತ್ತು ವೆಲೋಜ್, ಮಿತ್ಸುಬಿಷಿ ಎಕ್ಸ್‌ಪಾಂಡರ್ ಮತ್ತು ಡೈಹಟ್ಸು ಕ್ಸೆನಿಯಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದು ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್‌ನಿಂದ ಸುತ್ತುವರೆದಿರುವ ಹೊಸ ಪ್ಯಾರಾಮೆಟ್ರಿಕ್ ಗ್ರಿಲ್‌ನೊಂದಿಗೆ ಬರುತ್ತಿದ್ದು, 15-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಸ್ ಹೊಂದಿದೆ.

ಸ್ಟಾರ್‌ಗೇಜರ್ ಹ್ಯುಂಡೈನ ಬ್ಲೂಲಿಂಕ್-ಕನೆಕ್ಟ್ದ್ ಕಾರ್ ತಂತ್ರಜ್ಞಾನವನ್ನು ಹೊಂದಿದ್ದು, ಇದು ಕಾರು ಚಾಲಕನಿಗೆ ವಾಹನದ ಪ್ರಸ್ತುತ ಸ್ಥಿತಿಯನ್ನು ತಿಳಿಯಲು, ಎಂಜಿನ್ ಆನ್/ಆಫ್ ಮಾಡಲು, ಕ್ಯಾಬಿನ್ ಟೆಂಪರೇಚರ್ ಸರಿಹೊಂದಿಸಲು, ಬಾಗಿಲು ಲಾಕ್/ಅನ್‌ಲಾಕ್ ಮಾಡಲು, ಹಾರ್ನ್ ಮಾಡಲು, ಲೈಟ್ ಆನ್/ಆಫ್ ಮಾಡಲು ಸಹಾಯ ಮಾಡುತ್ತದೆ. ಈ ಕಾರು, 1.5-ಲೀಟರ್ 4-ಸಿಲಿಂಡರ್ ನ್ಯಾಚುರಲ್ -ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, ಇದು 115 bhp ಪವರ್ ಮತ್ತು 144 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನ್ಯುವಲ್ ಮತ್ತು IVT (ಇಂಟೆಲಿಜೆಂಟ್ ವೇರಿಯಬಲ್ ಟ್ರಾನ್ಸ್ಮಿಷನ್) ಆಯ್ಕೆಗಳನ್ನು ಒಳಗೊಂಡಿದೆ.

ಸಿಟ್ರೊಯೆನ್ C3 ಎಂಪಿವಿ:
ಭಾರತದ ರಸ್ತೆಗಳಲ್ಲಿ ಸಿಟ್ರೊಯೆನ್ C3 7-ಆಸನಗಳ ಎಂಪಿವಿ, ಇತ್ತೀಚೆಗೆ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡು ಬಂದಿತು. ಆದರೆ ಮುಂಭಾಗದ ಫಾಸಿಯಾ ಮತ್ತು ಹಿಂಭಾಗದ ವಿನ್ಯಾಸವು C3ಗೆ ಹೆಚ್ಚು- ಕಡಿಮೆ ಹೋಲುತ್ತದೆ. ಆದಾಗ್ಯೂ, ಈ ಎಂವಿಪಿ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ಗಿಂತ ಹೆಚ್ಚು ಉದ್ದವಾಗಿದ್ದು, ಹೆಚ್ಚುವರಿ ಆಸನಗಳನ್ನು ಸರಿಹೊಂದಿಸಲು ಸ್ವಲ್ಪ ದೊಡ್ಡದಾದ ವೀಲ್‌ಬೇಸ್ ಅನ್ನು ಸಹ ಪಡೆಯಬಹುದು. ಇದು 3-ರೋ ಕಾರು ಮಾರುತಿ ಸುಜುಕಿ ಎರ್ಟಿಗಾಗೆ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಯಾಗಬಹುದು ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
Most anticipated mpvs coming to india in 2023
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X